UGC NET Phase II exam: ಯುಜಿಸಿ ನೆಟ್ ಹಂತ 2 ಪರೀಕ್ಷೆಯ ನಗರ ಸೂಚನೆ ಮಾಹಿತಿ ಪ್ರಕಟ, ಪರಿಶೀಲನೆ ಮಾಡುವುದು ಹೇಗೆ?
ಯುಜಿಸಿ ನೆಟ್ ಡಿಸೆಂಬರ್ 2022ರ ಫೇಸ್ 2 ಪರೀಕ್ಷೆಯ ನಗರ ಇಂಟಿಮೇಷನ್ ಸ್ಲಿಪ್ ಪ್ರಕಟಗೊಂಡಿದೆ. ಇದನ್ನು ugcnet.nta.nic.in ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಬಹುದು.
ರಾಷ್ಟ್ರೀಯ ಪರೀಕ್ಷಾ ಆಯೋಗವು (ಎನ್‌ಟಿಎ) ಯುಜಿಸಿ ನೆಟ್ ಡಿಸೆಂಬರ್ 2022ರ ಫೇಸ್ 2 ಪರೀಕ್ಷೆಯ ನಗರ ಇಂಟಿಮೇಷನ್ ಸ್ಲಿಪ್ ಪ್ರಕಟಿಸಿದೆ. ಅಭ್ಯರ್ಥಿಗಳು ugcnet.nta.nic.in ವೆಬ್‌ಸೈಟ್‌ನಲ್ಲಿ ಪರೀಕ್ಷೆ ನಡೆಯಲಿರುವ ನಗರ ಮಾಹಿತಿಯ ಇಂಟಿಮೇಷನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಇಂಟಿಮೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಯುಜಿಸಿ ನೆಟ್ ಡಿಸೆಂಬರ್ 2022ರ ಫೇಸ್ 2 ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಆಯೋಗವು ಫೆಬ್ರವರಿ 28, ಮಾರ್ಚ್ 1 ಮತ್ತು ಮಾರ್ಚ್ 2ರಂದು ನಡೆಸಲಿದೆ.
ಯುಜಿಸಿ ನೆಟ್ ಡಿಸೆಂಬರ್ 2022ರ ಫೇಸ್ 2 ಪರೀಕ್ಷೆಯ ನಗರ ಇಂಟಿಮೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ನೇರ ಲಿಂಕ್ ಇಲ್ಲಿದೆ.
UGC NET exam city intimation slip: ಯುಜಿಸಿ ನೆಟ್ ಡಿಸೆಂಬರ್ 2022ರ ಫೇಸ್ 2 ಪರೀಕ್ಷೆಯ ನಗರ ಇಂಟಿಮೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
- ಮೊದಲಿಗೆ ugcnet.nta.nic.in ವೆಬ್‌ಸೈಟ್‌ಗೆ ಭೇಟಿ ನೀಡಿ
- ಮುಖಪುಟದಲ್ಲಿ ಅಡ್ವಾನ್ಸಡ್ ಸಿಟಿ ಇಂಟಿಮೇಷನ್ ಸ್ಲಿಪ್ ಎಂಬ ಲಿಂಕ್ ಕಾಣಿಸುತ್ತದೆ
- ಅಲ್ಲಿ ಲಾಗಿನ್ ವಿವರ ನಮೂದಿಸಿ
- ಅಂದರೆ, ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ
- ಪರದೆಯಲ್ಲಿ ಸಿಟಿ ಇಂಟಿಮೇಷನ್ ಸ್ಲಿಪ್ ಕಾಣಿಸುತ್ತದೆ.
- ಡೌನ್‌ಲೋಡ್ ಮಾಡಿಕೊಳ್ಳಿ, ಭವಿಷ್ಯದ ಅವಶ್ಯಕತೆಗಾಗಿ ಪ್ರಿಂಟೌಟ್ ತೆಗೆದುಕೊಳ್ಳಬಹುದು.
ಅರ್ಜಿ ಆಹ್ವಾನ
ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಯಡಿ ಕೊಡಗು ಜಿಲ್ಲಾ ಆಯುಷ್ ಇಲಾಖೆಯಲ್ಲಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕಮ್ಯುನಿಟಿ ಹೆಲ್ತ್ ಆಫಿಸರ್(ಸಿಎಚ್ಒ) 02 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬಿಎಎಂಎಸ್, ಬಿಯುಎಂಎಸ್, ಎಎಚ್ಎಂಎಸ್ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಯ ಮೀಸಲಾತಿ (ಪ್ರವರ್ಗ) ಪ.ಜಾ-01, ಸಾ.ಅ.01. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕಮ್ಯುನಿಟಿ ಹೆಲ್ತ್ ಆಫಿಸರ್(ಸಿಎಚ್ಒ) ಹುದ್ದೆಗಳನ್ನು ಒಂದು ವರ್ಷದವರಗೆ ಅಥವಾ ಸದರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಖಾಯಂ ವೈದ್ಯಾಧಿಕಾರಿಗಳ ಹುದ್ದೆಗಳು ಭರ್ತಿಯಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ.
ತಮ್ಮ ಸಂಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ನಿಗಧಿಪಡಿಸಿದ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ, 24 ಕೊನೆಯ ದಿನವಾಗಿದೆ. ನೇರ ಸಂದರ್ಶನಕ್ಕೆ ದಿನಾಂಕವನ್ನು ನಂತರ ತಿಳಿಸಲಾಗುವುದು.
ಅರ್ಜಿಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳು, ಜಿಲ್ಲಾ ಆಯುಷ್ ಕಚೇರಿ, ಮಹದೇವಪೇಟೆ, ಮಡಿಕೇರಿ, ಪಿನ್-571201, ಕೊಡಗು ಜಿಲ್ಲೆ ಇಲ್ಲಿ ಸಲ್ಲಿಸಬಹುದು ಎಂದು ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಕ್ಯಾಂಪಸ್ ಸ್ಥಾಪನೆಗೆ ವಿದೇಶಿ ವಿವಿಗಳಿಗೂ ಬೇಕು ಯುಜಿಸಿ ಒಪ್ಪಿಗೆ; ಶುಲ್ಕ ಹಾಗೂ ಪ್ರವೇಶ ಪ್ರಕ್ರಿಯೆ ಹೇಗೆ?
ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಬೇಕಾದರೆ ವಿದೇಶಿ ವಿಶ್ವವಿದ್ಯಾಲಯಗಳೂ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಒಪ್ಪಿಗೆ ಪಡೆಯಬೇಕಾಗುತ್ತದೆ. ಆರಂಭಿಕ ಅನುಮೋದನೆ ಕೇವಲ 10 ವರ್ಷಕ್ಕೆ ಮಾತ್ರ ಸೀಮಿತವಾಗಿ ಇರಲಿದೆ ಎಂದು ಯುಜಿಸಿಯ ಮುಖ್ಯಸ್ಥ ಎಂ.ಜಗದೀಶ್ ಕುಮಾರ್ ಇತ್ತೀಚೆಗೆ ಹೇಳಿದ್ದಾರೆ. ಈ ಕುರಿತ ವರದಿ ಇಲ್ಲಿದೆ.