UGC updates: ಭಾರತದಲ್ಲಿ ಕ್ಯಾಂಪಸ್ ಸ್ಥಾಪನೆಗೆ ವಿದೇಶಿ ವಿವಿಗಳಿಗೂ ಬೇಕು ಯುಜಿಸಿ ಒಪ್ಪಿಗೆ; ಶುಲ್ಕ ಹಾಗೂ ಪ್ರವೇಶ ಪ್ರಕ್ರಿಯೆ ಹೇಗೆ?
UGC updates: ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಬೇಕಾದರೆ ವಿದೇಶಿ ವಿಶ್ವವಿದ್ಯಾಲಯಗಳೂ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಒಪ್ಪಿಗೆ ಪಡೆಯಬೇಕಾಗುತ್ತದೆ. ಆರಂಭಿಕ ಅನುಮೋದನೆ ಕೇವಲ 10 ವರ್ಷಕ್ಕೆ ಮಾತ್ರ ಸೀಮಿತವಾಗಿ ಇರಲಿದೆ ಎಂದು ಯುಜಿಸಿಯ ಮುಖ್ಯಸ್ಥ ಎಂ.ಜಗದೀಶ್ ಕುಮಾರ್ ಗುರುವಾರ ಹೇಳಿದರು.
ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಬೇಕಾದರೆ ವಿದೇಶಿ ವಿಶ್ವವಿದ್ಯಾಲಯಗಳೂ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಒಪ್ಪಿಗೆ ಪಡೆಯಬೇಕಾಗುತ್ತದೆ. ಆರಂಭಿಕ ಅನುಮೋದನೆ ಕೇವಲ 10 ವರ್ಷಕ್ಕೆ ಮಾತ್ರ ಸೀಮಿತವಾಗಿ ಇರಲಿದೆ ಎಂದು ಯುಜಿಸಿಯ ಮುಖ್ಯಸ್ಥ ಎಂ.ಜಗದೀಶ್ ಕುಮಾರ್ ಗುರುವಾರ ಹೇಳಿದರು.
ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸುವ ವಿದೇಶಿ ವಿಶ್ವವಿದ್ಯಾಲಯಗಳು ಪೂರ್ಣ ಕಾಲಿಕ ಪ್ರೋಗ್ರಾಂ ಅಥವಾ ಕೋರ್ಸ್‌ಗಳನ್ನು ಭೌತಿಕವಾಗಿ ನೀಡಬಹುದೇ ಹೊರತು ಆನ್‌ಲೈನ್ ಅಥವಾ ದೂರ ಶಿಕ್ಷಣ ವಿಧಾನದಲ್ಲಿ ಕೋರ್ಸ್‌ಗಳನ್ನು ಒದಗಿಸುವಂತೆ ಇಲ್ಲ ಎಂದು ಜಗದೀಶ್ ಕುಮಾರ್ ಸ್ಪಷ್ಟಪಡಿಸಿದರು.
ಈ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆ, ಶುಲ್ಕ ನಿಗದಿ ವಿಚಾರಗಳಲ್ಲಿ ಯುಜಿಸಿಯ ಹಸ್ತಕ್ಷೇಪ ಇರಲ್ಲ. ಅದನ್ನು ಆಯಾ ವಿಶ್ವವಿದ್ಯಾಲಯವೇ ನಿಗದಿ ಮಾಡಿಕೊಳ್ಳುವುದಕ್ಕೆ ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಲಾಗುತ್ತದೆ ಎಂದು ಜಗದೀಶ್ ಕುಮಾರ್ ವಿವರಿಸಿದರು.
ಅವರು ಗುರುವಾರ, ʻಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಸ್ಥಾಪನೆ ಮತ್ತು ಕಾರ್ಯಾಚರಣೆʼ ಕುರಿತ ಕರಡು ನಿಯಮ, ನಿಬಂಧನೆಗಳನ್ನು ಘೋಷಿಸಿದ ಬಳಿಕ ಈ ವಿಚಾರಗಳನ್ನು ಸ್ಪಷ್ಟಪಡಿಸಿದರು.
ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಮುಖ್ಯಕ್ಯಾಂಪಸ್‌ನಲ್ಲಿ ಕೊಡುವ ಅದೇ ಗುಣಮಟ್ಟದ ಶಿಕ್ಷಣವನ್ನು ಭಾರತದ ಕ್ಯಾಂಪಸ್‌ಗಳಲ್ಲೂ ಖಾತರಿಪಡಿಸಬೇಕು. ಇನ್ನು, ಈ ವಿವಿಗಳ ಫಂಡಿಂಗ್ ಮತ್ತು ನಿಧಿ ಸಂಗ್ರಹದ ವಿಚಾರಗಳೆಲ್ಲವೂ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ ಪ್ರಕಾರವೇ ನಡೆಯಲಿದೆ ಎಂದು ಜಗದೀಶ್ ಕುಮಾರ್ ಹೇಳಿದರು.
ಈ ತಿಂಗಳ ಕೊನೆಗೆ ʻಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಸ್ಥಾಪನೆ ಮತ್ತು ಕಾರ್ಯಾಚರಣೆʼ ಕುರಿತ ಅಂತಿಮ ನಿಯಮ ಮಾರ್ಗಸೂಚಿ ಪ್ರಕಟವಾಗಲಿದೆ. ಸಂಬಂಧಪಟ್ಟ ಪಾಲುದಾರರ ಸಲಹೆ ಸೂಚನೆಗಳನ್ನು ಪರಿಗಣಿಸಿ, ಪರಿಶೀಲಿಸಿ ಅಗತ್ಯ ಇದ್ದರೆ ಪರಿಷ್ಕರಿಸಿ ಅಂತಿಮ ನಿಯಮ ಪ್ರಕಟಿಸಲಾಗುತ್ತದೆ. ವಿದೇಶಿ ವಿವಿಗಳಿಗೆ ಸಂಬಂಧಿಸಿದ ಕ್ಯಾಂಪಸ್ ಅನುಮತಿಯನ್ನು ಒಂಬತ್ತನೇ ವರ್ಷ ಪರಿಶೀಲಿಸಿ ಮಾನದಂಡಗಳಿಗೆ ಅನುಗುಣವಾಗಿದ್ದರೆ ನವೀಕರಿಸಲಾಗುತ್ತದೆ ಎಂದು ಜಗದೀಶ್ ಕುಮಾರ್ ವಿವರಿಸಿದರು.
ಗಮನಿಸಬಹುದಾದ ವಿಚಾರಗಳು
New Year 2023 Lucky Zodiacs: ಹೊಸ ವರ್ಷದ ಅದೃಷ್ಟವಂತರು ಈ ರಾಶಿಯವರು!; ಲಕ್ಷ್ಮೀನಾರಾಯಣ ಯೋಗದ ಅನುಕೂಲವೂ ಇವರದ್ದು!
New Year 2023 Lucky Zodiacs: ಜ್ಯೋತಿಷ್ಯದಲ್ಲಿ ಲಕ್ಷ್ಮೀ ನಾರಾಯಣ ಯೋಗವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಯೋಗದ ಪರಿಣಾಮವಾಗಿ, 2023 ರ ಆರಂಭವು ಕೆಲವು ರಾಶಿಚಕ್ರದವರಿಗೆ ಉತ್ತಮವಾಗಿರುತ್ತದೆ. ಯಾವ ರಾಶಿಚಕ್ರದವರಿಗೆ ಉತ್ತಮ ಸಮಯ? ಯಾರು ಆ ಅದೃಷ್ಟಶಾಲಿಗಳು? ಇಲ್ಲಿದೆ ವಿವರ ಕ್ಲಿಕ್ ಮಾಡಿ.
How to read Upanishads Part 2: ಉಪನಿಷತ್ತುಗಳನ್ನು ಓದುವ ಆ ʻಮನೋಧರ್ಮʼ ಹೇಗಿರಬೇಕು?
How to read Upanishads Part 2: ಸಾಮಾನ್ಯವಾಗಿ ಉಪನಿಷತ್ತುಗಳಲ್ಲಿ ಅಂತರ್ಗತವಾಗಿರುವ "ಗಹನತತ್ತ್ವಗಳು ತರ್ಕಕ್ಕೆ ನಿಲುಕುವುದಿಲ್ಲ. ಎಂಬುದನ್ನು ಓದುಗರು ಮೊದಲಾಗಿ ಗಮನಿಸಬೇಕಾಗುತ್ತದೆ. ಅವು ವಾದ-ವಿವಾರ, ಚರ್ಚೆ-ಭಾಷಣಗಳಿಗೆ ಸೀಮಿತವಾದವುಗಳಲ್ಲ. ಆ ಗಹನತತ್ವಗಳಿಗೆ "ಅನುಭವ ಪ್ರಮಾಣ, ಹಾಗಾಗಿ ಅವುಗಳನ್ನು ಅನುಭವಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.
How to read Upanishads Part 1: ಉಪನಿಷತ್ತುಗಳು ಬೋಧಿಸುವ ಮುಖ್ಯ ವಸ್ತು-ವಿಷಯ ಯಾವುದು?
How to read Upanishads: ಉಪನಿಷತ್ತುಗಳು ಮನೋರಂಜಕ ಕಥೆ, ಕಾದಂಬರಿ, ಕಾವ್ಯ, ನಾಟಕಗಳಂತಲ್ಲ. ಹಾಗಂತ ಅವುಗಳಲ್ಲಿ ಕಥೆ, ಸಂವಾದ, ರೂಪಕ, ದೃಷ್ಟಾಂತ, ಇತ್ಯಾದಿಗಳು ಇಲ್ಲ ಎಂದರ್ಥವಲ್ಲ. ಅವೆಲ್ಲವೂ ಅದರಲ್ಲಿವೆ. ಉಪನಿಷತ್ಕಾರರು ಅವುಗಳನ್ನು ಸಂದರ್ಭ- ಸನ್ನಿವೇಶಕ್ಕನುಸಾರವಾಗಿ, ವಸ್ತು-ವಿಷಯದ ಸ್ಪಷ್ಟಿಕರಣಕ್ಕಾಗಿ ಅಲ್ಲಲ್ಲಿ ಯಥೋಚಿತವಾಗಿ ಬಳಸಿಕೊಂಡಿದ್ದಾರೆ. ಆದರೆ ....? ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.