Union Budget 2023: ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಒಂದು ತುಲನಾತ್ಮಕ ನೋಟ
Union Budget 2023: ಕೇಂದ್ರ ಸರ್ಕಾರದ ಮುಂದಿನ ಹಣಕಾಸು ವರ್ಷದ ಬಜೆಟ್ ಮಂಡನೆಯಾಗಿದೆ. ಆದಾಯ ತೆರಿಗೆ ಪದ್ಧತಿಯನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಒಂದು ತುಲನಾತ್ಮಕ ನೋಟ ಇಲ್ಲಿದೆ.
Old vs new current income tax slabs: ಬಜೆಟ್‌ನ ವಿಷಯಕ್ಕೆ ಬಂದರೆ, ಸಂಬಳ ಪಡೆಯುವ ವರ್ಗವು ಎದುರುನೋಡುವ ಏಕೈಕ ವಿಷಯವೆಂದರೆ ಆದಾಯ ತೆರಿಗೆ ರಿಯಾಯಿತಿ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1 ಫೆಬ್ರವರಿರಂದು ಬಜೆಟ್ 2023 ಅನ್ನು ಮಂಡಿಸುವಾಗ ಮಧ್ಯಮ ವರ್ಗದವರಿಗೆ ಸ್ವಲ್ಪ ಪರಿಹಾರವನ್ನು ಒದಗಿಸಲು ಸ್ಲ್ಯಾಬ್‌ಗಳನ್ನು ಪರಿಷ್ಕರಿಸಿರುವುದಾಗಿ ಘೋಷಿಸಿದರು. "ಹೊಸ ಆಡಳಿತದ ವ್ಯಾಪ್ತಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ ರಿಯಾಯಿತಿಯನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಆದ್ದರಿಂದ ಅವರ ಒಟ್ಟು ಆದಾಯವು 7 ಲಕ್ಷ ರೂ.ವರೆಗೆ ಇದ್ದರೆ ಅವರು ತೆರಿಗೆಯನ್ನು ಪಾವತಿಸುವ ಅಗತ್ಯ ಇಲ್ಲ" ಎಂದು ಸೀತಾರಾಮನ್ ಹೇಳಿದರು.
ಹೊಸ ವೈಯಕ್ತಿಕ ಆದಾಯ ತೆರಿಗೆ ಆಡಳಿತದಲ್ಲಿ, ಸ್ಲ್ಯಾಬ್‌ಗಳ ಸಂಖ್ಯೆಯನ್ನು ಐದಕ್ಕೆ ಇಳಿಸಲಾಗುತ್ತಿದೆ ಎಂದು ಅವರು ಹೇಳಿದರು.
"ಸ್ಲ್ಯಾಬ್‌ಗಳ ಸಂಖ್ಯೆಯನ್ನು ಐದಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಆಡಳಿತದಲ್ಲಿ ತೆರಿಗೆ ರಚನೆಯನ್ನು ಬದಲಾಯಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದೇನೆ" ಎಂದು ಸೀತಾರಾಮನ್ ಹೇಳಿದರು.
ಪ್ರಸ್ತುತ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗಿನ ಒಟ್ಟು ಆದಾಯದ ಮೇಲೆ ಶೇ.5ರಷ್ಟು ತೆರಿಗೆ, 5 ಲಕ್ಷ ರೂಪಾಯಿಯಿಂದ 7.5 ಲಕ್ಷ ರೂಪಾಯಿವರೆಗೆ ಶೇ.10, 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಶೇ.15, 10 ಲಕ್ಷ ರೂಪಾಯಿಯಿಂದ 12.5 ಲಕ್ಷ ರೂಪಾಯಿವರೆಗೆ ಶೇ.20ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ. 12.5 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ ತನಕ ಶೇ 25 ಮತ್ತು 15 ಲಕ್ಷ ರೂಪಾಯಿಗೆ ಮೇಲೆ ಶೇ 30 ತೆರಿಗೆ ವಿಧಿಸಲಾಗುತ್ತಿದೆ.
Union Budget 2023: ಹಳೆಯ ಮತ್ತು ಹೊಸ ಆದಾಯ ತೆರಿಗೆ ಸ್ಲ್ಯಾಬ್ ತುಲನೆ
ಹೊಸ ಆದಾಯ ತೆರಿಗೆ ಸ್ಲ್ಯಾಬ್
1) ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ತನಕ ಇದ್ದರೆ ತೆರಿಗೆ ಇಲ್ಲ
2) ವಾರ್ಷಿಕ ಆದಾಯ 3 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿ ತನಕ ಇದ್ದರೆ ಶೇಕಡ 5 ತೆರಿಗೆ
3) ಆದಾಯವು 6 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿ ಒಳಗೆ ಇದ್ದರೆ ಶೇಕಡ 10 ತೆರಿಗೆ
4) ಆದಾಯವು 9 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ ತನಕ ಶೇಕಡ 15 ತೆರಿಗೆ
5) ಆದಾಯವು 12 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ ಇದ್ದರೆ ತೆರಿಗೆ ಶೇಕಡ 20
6) ವಾರ್ಷಿಕ ಆದಾಯವು 15 ಲಕ್ಷ ರೂಪಾಯಿ ಮೇಲಿದ್ದರೆ ತೆರಿಗೆ ಶೇಕಡ 30.
ತೆರಿಗೆ ಸ್ಲ್ಯಾಬ್ | ಹಳೆಯ ತೆರಿಗೆ ವ್ಯವಸ್ಥೆ | ಹೊಸ ತೆರಿಗೆ ವ್ಯವಸ್ಥೆ |
0-3 ಲಕ್ಷ ರೂಪಾಯಿ | ಇಲ್ಲ | ಇಲ್ಲ |
3-6 ಲಕ್ಷ ರೂಪಾಯಿ | 5% | ಇಲ್ಲ (ಆದಾಯ ತೆರಿಗೆ ರಿಯಾಯಿತಿ ಆದಾಯದ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ) |
6-9 ಲಕ್ಷ ರೂಪಾಯಿ | 10% | 10% |
9-12 ಲಕ್ಷ ರೂಪಾಯಿ | 15% | 15% |
12-15 ಲಕ್ಷ ರೂಪಾಯಿ | 20% | 20% |
15 ಲಕ್ಷ ರೂಪಾಯಿ ಮೇಲ್ಪಟ್ಟು | 30% | 30% |
ಹಳೆಯ ತೆರಿಗೆ ಸ್ಲ್ಯಾಬ್
1) 2.5 ಲಕ್ಷ ರೂಪಾಯಿವರೆಗಿನ ಆದಾಯವು ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಪಡೆದಿದೆ.
2) 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಹಳೆಯ ತೆರಿಗೆ ಪದ್ಧತಿ ಪ್ರಕಾರ ಶೇಕಡ 5 ತೆರಿಗೆ
3) 5 ಲಕ್ಷ ರೂಪಾಯಿಯಿಂದ 7.5 ಲಕ್ಷ ರೂಪಾಯಿವರೆಗಿನ ವೈಯಕ್ತಿಕ ಆದಾಯಕ್ಕೆ ಹಳೆಯ ತೆರಿಗೆ ಪ್ರಕಾರ ಶೇಕಡ 15 ತೆರಿಗೆ
4) 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಹಳೆಯ ಪದ್ಧತಿಯಲ್ಲಿ ಶೇಕಡ 20 ತೆರಿಗೆ
5) ಹಳೆಯ ತೆರಿಗೆ ಆಡಳಿತದಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ವೈಯಕ್ತಿಕ ಆದಾಯಕ್ಕೆ ಶೇಕಡ 30 ತೆರಿಗೆ
ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು 2014 ರಿಂದ ಪರಿಷ್ಕರಣೆ ಆಗಿಲ್ಲ. ಮೂಲ ವೈಯಕ್ತಿಕ ತೆರಿಗೆ ವಿನಾಯಿತಿ ಮಿತಿಯನ್ನು ಕೊನೆಯದಾಗಿ 2014 ರಲ್ಲಿ ಪರಿಷ್ಕರಿಸಲಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ರ ಬಜೆಟ್ ಅನ್ನು ಪ್ರಸ್ತುತಪಡಿಸುವಾಗ ಹೊಸ ಆದಾಯ ತೆರಿಗೆ ಆಡಳಿತವನ್ನು ಪರಿಚಯಿಸಿದರು. ಆದಾಗ್ಯೂ, ಹೊಸ ತೆರಿಗೆ ಪದ್ಧತಿಯಿ ತೆರಿಗೆದಾರರಿಗೆ ಐಚ್ಛಿಕವಾಗಿರುತ್ತದೆ.
ತೆರಿಗೆ ಸ್ಲ್ಯಾಬ್ | ಹಳೆಯ ತೆರಿಗೆ ವ್ಯವಸ್ಥೆ | 2020ರ ನಂತರದ ಹೊಸ ತೆರಿಗೆ ವ್ಯವಸ್ಥೆ |
2,5 ಲಕ್ಷ ರೂಪಾಯಿಗಿಂತ ಕಡಿಮೆ | ಯಾವುದೇ ತೆರಿಗೆ ಇಲ್ಲ | ಯಾವುದೇ ತೆರಿಗೆ ಇಲ್ಲ |
2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ | 5% ತೆರಿಗೆ | 5% ತೆರಿಗೆ |
5 ಲಕ್ಷ ರೂಪಾಯಿಯಿಂದ 7.5 ಲಕ್ಷ ರೂಪಾಯಿ | 15% ತೆರಿಗೆ | 10% ತೆರಿಗೆ |
7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ | 20% ತೆರಿಗೆ | 15% ತೆರಿಗೆ |
10 ಲಕ್ಷ ರೂಪಾಯಿಯಿಂದ 12.5 ಲಕ್ಷ ರೂಪಾಯಿ | 30% ತೆರಿಗೆ | 20% ತೆರಿಗೆ |
12.5 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ | 25% ತೆರಿಗೆ | |
15 ಲಕ್ಷ ರೂಪಾಯಿಗಿಂತ ಮೇಲ್ಪಟ್ಟು | 30% ತೆರಿಗೆ |