Union budget 2023: ಮೆಡಿಟೆಕ್ ಸಂಶೋಧನಾ ಸಂಸ್ಥೆ ಸ್ಥಾಪನೆ; ಈ ಸಲದ ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ
Union budget 2023: ಕೇಂದ್ರ ಸರ್ಕಾರವು ಈ ಸಲದ ಮುಂಗಡಪತ್ರದಲ್ಲಿ ಮೆಡಿಟೆಕ್ ಸಂಶೋಧನಾ ಸಂಸ್ಥೆ ಸ್ಥಾಪಿಸುವ ವಿಚಾರವನ್ನು ಘೋಷಿಸುವ ಸಾಧ್ಯತೆ ಇದೆ. ಇದು ಫಾರ್ಮಾಸ್ಯುಟಿಕಲ್ ಕ್ಷೇತ್ರದಲ್ಲಿರುವಂತೆಯೇ ಮೆಡಿಕಲ್ ಉಪಕರಣಗಳ ಮೇಲೆ ಸಂಶೋಧನೆಗೆ ಮೀಸಲಾದ ಸಂಸ್ಥೆ ಎಂದು ವರದಿ ಹೇಳಿದೆ.
ಕೇಂದ್ರ ಸರ್ಕಾರವು ಈ ಸಲದ ಮುಂಗಡಪತ್ರದಲ್ಲಿ ಮೆಡಿಟೆಕ್ ಸಂಶೋಧನಾ ಸಂಸ್ಥೆ ಸ್ಥಾಪಿಸುವ ವಿಚಾರವನ್ನು ಘೋಷಿಸುವ ಸಾಧ್ಯತೆ ಇದೆ. ಇದು ಫಾರ್ಮಾಸ್ಯುಟಿಕಲ್ ಕ್ಷೇತ್ರದಲ್ಲಿರುವಂತೆಯೇ ಮೆಡಿಕಲ್ ಉಪಕರಣಗಳ ಮೇಲೆ ಸಂಶೋಧನೆಗೆ ಮೀಸಲಾದ ಸಂಸ್ಥೆ ಎಂದು ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಇಬ್ಬರು ಅಧಿಕಾರಿಗಳು ಹೇಳಿರುವುದಾಗಿ ಲೈವ್ ಮಿಂಟ್ ವರದಿ ಮಾಡಿದೆ.
ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಡಿವೈಸಸ್ ಎಜುಕೇಶನ್ ಆಂಡ್ ರೀಸರ್ಚ್ (NIMER) ಸ್ಥಾಪನೆಯ ಯೋಜನೆ ಸರ್ಕಾರದ ಚಿಂತನೆಯಲ್ಲಿದೆ.
ಭಾರತವು ತನ್ನ ಅಗತ್ಯಗಳಿಗಾಗಿ ಪ್ರತಿ ವರ್ಷ 63,000 ಕೋಟಿ ರೂಪಾಯಿ ಮೌಲ್ಯದ ಮೆಡಿಕಲ್ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಸಂಸ್ಥೆ ಸ್ಥಾಪನೆಯ ಮೂಲಕ ಭಾರತವನ್ನು ಈ ಕ್ಷೇತ್ರದಲ್ಲಿ ಚಾಂಪಿಯನ್ ಆಗಿ ಮಾಡುವುದು ಮತ್ತು ಗ್ಲೋಬಲ್ ಮೆಡಿಕಲ್ ಡಿವೈಸ್ ಇಂಡಸ್ಟ್ರಿಯಲ್ಲಿ ಭಾರತದ ಪಾಲನ್ನು ಈಗ ಇರುವ ಶೇಕಡ 10-12ರಿಂದ ಮೇಲಕ್ಕೇರಿಸುವುದು ಸರ್ಕಾರ ಉದ್ದೇಶ.
ಭಾರತದಲ್ಲಿ ಮೆಡಿಕಲ್ ಡಿವೈಸ್ ಸೆಕ್ಟರನ್ನು ಬಲಪಡಿಸುವುದಕ್ಕಾಗಿ ನಾವು ಒಂದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ಸ್ ಎಜುಕೇಶನ್ & ರೀಸರ್ಚ್ (NIPER) ಮಾದರಿಯಲ್ಲೇ NIMER ಸ್ಥಾಪಿಸಬೇಕು. ಇದನ್ನು ಈ ಸಲದ ಮುಂಗಡಪತ್ರದಲ್ಲಿ ಘೋಷಿಸಬೇಕು ಎಂಬ ಅಂಶವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳಿಬ್ಬರು ಹೇಳಿರುವುದಾಗಿ ವರದಿ ಹೇಳಿದೆ. ಕೇಂದ್ರ ಮುಂಗಡಪತ್ರವು ಫೆಬ್ರವರಿ 1ರಂದು ಮಂಡನೆಯಾಗಲಿದೆ.
ಉತ್ತಮವಾಗಿ ಅಭಿವೃದ್ಧಿ ಹೊಂದಿದ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ನವೀನ ಮತ್ತು ಉನ್ನತ ತಂತ್ರಜ್ಞಾನದ ವೈದ್ಯಕೀಯ ಸಾಧನಗಳು ಹೊರಹೊಮ್ಮುತ್ತವೆ. ನವೀನ ಮತ್ತು ಉನ್ನತ ತಂತ್ರಜ್ಞಾನ ಹೊರಹೊಮ್ಮಬೇಕಾದರೆ ಸ್ವಲ್ಪ ಹೆಚ್ಚು ಕಾಲಾವಕಾಶ ಮತ್ತು ಹೆಚ್ಚು ಬಂಡವಾಳಬೇಕಾಗುತ್ತದೆ. ಭಾರತದ ವೈದ್ಯಕೀಯ ಉಪಕರಣಗಳ ಉದ್ಯಮವು 11 ಶತಕೋಟಿ ಡಾಲರ್ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. 2030ರ ವೇಳೆಗೆ ಇದು $50 ಶತಕೋಟಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ವಿಶ್ವದ ಜಾಗತಿಕ ವೈದ್ಯಕೀಯ ಉಪಕರಣಗಳ ಮಾರುಕಟ್ಟೆಯಲ್ಲಿ ಅಗ್ರ 20ರಲ್ಲಿ ಭಾರತವು ಸ್ಥಾನ ಪಡೆದುಕೊಂಡಿದೆ. ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಏಷ್ಯಾದಲ್ಲಿ ಭಾರತವೇ ನಾಲ್ಕನೇ ದೊಡ್ಡ ಪಾಲುದಾರ ರಾಷ್ಟ್ರವಾಗಿದೆ.
ಕೋವಿಡ್ ಸಂಕಷ್ಟ ಮತ್ತು ನಂತರದ ಅವಧಿಯಲ್ಲಿ ಸರ್ಕಾರವು, ಸ್ಥಳೀಯವಾಗಿ ಬಳಸಬಹುದಾದ ಮತ್ತು ಇತರ ಅಳವಡಿಸಬಹುದಾದ ಸುಧಾರಿತ ವೈದ್ಯಕೀಯ ಸಾಧನಗಳನ್ನು ಉತ್ಪಾದಿಸುವಂತೆ ಅನೇಕ ತಯಾರಕರನ್ನು ಪ್ರೋತ್ಸಾಹಿಸಿತು.
“ಇಲಾಖೆಯು ಮೆಡ್‌ಟೆಕ್ ವಲಯದಲ್ಲಿನ ಆವಿಷ್ಕಾರಗಳ ಮೇಲೆ ನಿಗಾ ಇರಿಸಿದೆ. ಬಜೆಟ್‌ನಲ್ಲಿ ಮೆಡ್‌ಟೆಕ್ ಕ್ಷೇತ್ರ ಮತ್ತು NIMER ನಂತಹ ಸಂಸ್ಥೆಗಳಿಗೆ ಕೆಲವು ಪ್ರಸ್ತಾವನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ವಿಶ್ವಕ್ಕೆ ವೈದ್ಯಕೀಯ ಉಪಕರಣಗಳ ಪರಿಸರ ವ್ಯವಸ್ಥೆಯಲ್ಲಿ ಭಾರತದ ಗೋಚರತೆಯನ್ನು ಬಲಪಡಿಸಲು ಮತ್ತು ಭಾರತದ ಮೆಡ್‌ಟೆಕ್ ವಲಯಕ್ಕೆ ಬ್ರ್ಯಾಂಡ್ ಗುರುತನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ” ಎಂದು ಎರಡನೇ ಅಧಿಕಾರಿ ಹೇಳಿದರು. ಫಾರ್ಮಾಸ್ಯುಟಿಕಲ್ಸ್ ವಿಭಾಗದ ವಕ್ತಾರರಿಗೆ ಕಳುಹಿಸಲಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ವರದಿ ಹೇಳಿದೆ.
ಗಮನಾರ್ಹ ಸುದ್ದಿಗಳು
SDPI in Karnataka: ಕರ್ನಾಟಕದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಚಿಂತನೆ ಎನ್ನುತ್ತಿವೆ ವರದಿಗಳು
SDPI in Karnataka: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ರಾಜಕೀಯ ಘಟಕವೇ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
Ediga-Billava Yatra: ಸಮುದಾಯದ ಹಿತಕ್ಕಾಗಿ ಈ ಪಾದಯಾತ್ರೆ; ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದ ಡಾ. ಪ್ರಣವಾನಂದ ಸ್ವಾಮೀಜಿ
Ediga-Billava Yatra: ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava Yatra) ಶುರುವಾಗಿದೆ. ಇದಕ್ಕೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ