Budget 2024 memes: ಬಜೆಟ್‌ ಮಂಡನೆ ಆರಂಭವಾಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ಭಯಂಕರ ಮೀಮ್ಸ್‌ ಹಾವಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024 Memes: ಬಜೆಟ್‌ ಮಂಡನೆ ಆರಂಭವಾಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ಭಯಂಕರ ಮೀಮ್ಸ್‌ ಹಾವಳಿ

Budget 2024 memes: ಬಜೆಟ್‌ ಮಂಡನೆ ಆರಂಭವಾಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ಭಯಂಕರ ಮೀಮ್ಸ್‌ ಹಾವಳಿ

Union Budget 2024 memes: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ 2024 ಅನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯ ಬಜೆಟ್‌ ಮೀಮ್ಸ್‌ಗಳನ್ನು ಹರಿಯಬಿಟ್ಟಿದ್ದಾರೆ.

Budget 2024 memes: ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ಭಯಂಕರ ಮೀಮ್ಸ್‌ ಹಾವಳಿ
Budget 2024 memes: ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ಭಯಂಕರ ಮೀಮ್ಸ್‌ ಹಾವಳಿ

ಲೋಕಸಭೆಯಲ್ಲಿ ಬಜೆಟ್‌ ಭಾಷಣ ಆರಂಭವಾಗಿದೆ. ಇದಕ್ಕೂ ಮೊದಲು ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿಯಾಗಿದ್ದರು. ಈ ಸಮಯದಲ್ಲಿ ರಾಷ್ಟ್ರಪತಿಯವರು ಮೊಸರು ಮತ್ತು ಸಕ್ಕರೆ ನೀಡಿ ಶುಭಹಾರೈಸಿದರು. ಇದೀಗ ಬಜೆಟ್‌ ಕಲಾಪ ಆರಂಭಗೊಂಡಿದೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲೂ ನೆಟ್ಟಿಗರು ಜನಸಾಮಾನ್ಯರ ಬಜೆಟ್‌ ಗೋಳುಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

ಗೂಗಲ್‌ ಟ್ರೆಂಡ್ಸ್‌ನಲ್ಲಿ ಬಜೆಟ್‌

ಇಂದು ಗೂಗಲ್‌ನಲ್ಲೂ ಬಜೆಟ್‌ ಟ್ರೆಂಡ್‌ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದಲೇ ಗೂಗಲ್‌ ಟ್ರೆಂಡ್ಸ್‌ನಲ್ಲಿ ಬಜೆಟ್‌ ಹುಡುಕಾಟ ಹೆಚ್ಚಾಗಿತ್ತು. ಇಂದು ಎಲ್ಲರೂ ಬಜೆಟ್‌ ಸಮಯ ಯಾವುದು? ಬಜೆಟ್‌ ಭಾಷಣ ಲೈವ್‌ ಎಲ್ಲಿದೆ? ಬಜೆಟ್‌ ಹೈಲೈಟ್ಸ್‌ ಏನು ಎಂದೆಲ್ಲ ಹುಡುಕುತ್ತಿದ್ದಾರೆ. ಇಂದು ಭಾರತದಲ್ಲಿ ಬಜೆಟ್‌ ಟ್ರೆಂಡ್‌ ಆಗಿದೆ.

ಬಜೆಟ್‌ ಮೀಮ್ಸ್‌ಗಳು

ಸೋಷಿಯಲ್‌ ಮೀಡಿಯಾದಲ್ಲಿ ಇಂದು ಎಲ್ಲರೂ ಆರ್ಥಿಕ ತಜ್ಞರಂತೆ ಮಾತನಾಡುತ್ತಿದ್ದಾರೆ. 

ನಿರೀಕ್ಷೆಯಂತೆ ಮಧ್ಯಮ ವರ್ಗದವರ ಬಜೆಟ್‌ ಕುರಿತಾದ ಮೀಮ್ಸ್‌ ಆರಂಭವಾಗಿದೆ.

ಈ ಬಜೆಟ್‌ನಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಇದು ಏಳನೇಯ ಬಜೆಟ್‌. ಈ ಬಜೆಟ್‌ ಮೂಲಕ ಮೊರಾರ್ಜಿ ದೇಸಾಯಿವರ ಅತ್ಯಧಿಕ ಬಜೆಟ್‌ ಭಾಷಣವನ್ನು ಅಳಿಸಿದ್ದಾರೆ. ಇದು ಮೋದಿ ಸರಕಾರದ 13ನೇ ಬಜೆಟ್‌. 2024ರಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಸತತವಾಗಿ ಹಲವು ಬಜೆಟ್‌ ಮಂಡಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಮಂಡಿಸುತ್ತಿರುವ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್ ಅನ್ನು ತರ್ಕಬದ್ಧಗೊಳಿಸಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಸೆಕ್ಷನ್ 80 ಸಿ ಕಡಿತದ ಮಿತಿಯನ್ನು ಹೆಚ್ಚಿಸುವ ಮತ್ತು ಹೊಸ ತೆರಿಗೆ ಆಡಳಿತದ ಅಡಿಯಲ್ಲಿ ಮನೆ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಹೆಚ್ಚಿನ ತೆರಿಗೆ ಪ್ರಯೋಜನಗಳು ದೊರಕಬಹುದೆಂಬ ನಿರೀಕ್ಷೆಯೂ ಇದೆ.

ಬಜೆಟ್‌ ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

ಬಜೆಟ್‌ ಪ್ರಸೆಂಟೇಷನ್‌ ಆರಂಭವಾದ ತಕ್ಷಣ ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. 2024-25ನೇ ಸಾಲಿನ ಕೇಂದ್ರ ಬಜೆಟ್‌ನ ಸಂಪೂರ್‌ಣ ವಿವರ ಪಡೆಯಲು ಮತ್ತು ಬಜೆಟ್‌ನ ಪಿಡಿಎಫ್‌ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹಣಕಾಸು ಸಚಿವಾಲಯ ಮತ್ತು ಭಾರತ ಸರಕಾರದ ಬಜೆಟ್‌ ಪೋರ್ಟಲ್‌ಗೆ ಭೇಟಿ ನೀಡಿ. ವೆಬ್‌ಸೈಟ್‌ ಲಿಂಕ್‌: Indiabudget.gov.in ಇಲ್ಲಿ ಇರುವ ಬಜೆಟ್‌ 2024 ವಿಭಾಗಕ್ಕೆ ಭೇಟಿ ನೀಡಿ. ಇಲ್ಲಿ ಪಿಡಿಎಫ್‌ ಡೌನ್‌ಲೋಡ್‌ ಆಯ್ಕಯನ್ನು ಕ್ಲಿಕ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.