ಕೇಂದ್ರ ಬಜೆಟ್ 2024; ಹಳೆ ತೆರಿಗೆ ವ್ಯವಸ್ಥೆ ಸುದ್ದಿಇಲ್ಲ, ಹೊಸತೆರಿಗೆ ಸ್ಲ್ಯಾಬ್ ಬದಲಾವಣೆ, ಸ್ಯಾಂಡರ್ಡ್ ಡಿಡಕ್ಷನ್ 75000 ರೂಪಾಯಿಗೆ ಏರಿಕೆ
ಕೇಂದ್ರ ಬಜೆಟ್ 2024; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವಿನಾಯಿತಿ ಕ್ರಮಗಳನ್ನು ಪ್ರಕಟಿಸಿದರು. ಹಳೆ ತೆರಿಗೆ ವ್ಯವಸ್ಥೆ ಸುದ್ದಿ ಇಲ್ಲ. ವಿಶೇಷವಾಗಿ ಹೊಸ ತೆರಿಗೆ ಸ್ಲ್ಯಾಬ್ ಬದಲಾವಣೆ, ಸ್ಯಾಂಡರ್ಡ್ ಡಿಡಕ್ಷನ್ 75 ಸಾವಿರ ರೂ ಏರಿಕೆ ವಿಚಾರ ಹೇಳಿದರು. ಅದರ ವಿವರ ಹೀಗಿದೆ.
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಸಂಬಂಧಿಸಿ ಮಹತ್ವದ ತೆರಿಗೆ ವಿನಾಯಿತಿ ಘೋಷಣೆಗಳನ್ನು ಪ್ರಕಟಿಸಿದರು. ಲೋಕಸಭೆಯಲ್ಲಿ ಇಂದು (ಜುಲೈ 23) ಕೇಂದ್ರ ಬಜೆಟ್ 2024 25 (Union Budget 2024 25)ರಲ್ಲಿ ಆದಾಯ ತೆರಿಗೆಯ ಹೊಸ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದರು. ವಿಶೇಷವಾಗಿ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ ಮಾಡಿದರಲ್ಲದೆ, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಪರಿಷ್ಕರಣೆಯನ್ನು ಪ್ರಕಟಿಸಿದರು.
ಹೊಸ ಆದಾಯ ತೆರಿಗೆದಾರರಿಗೆ ಶುಭ ಸುದ್ದಿ
- ಸ್ಟಾಂಡರ್ಡ್ ಡಿಡಕ್ಷನ್ 50,000 ರಿಂದ 75,000 ರೂಪಾಯಿಗೆ ಏರಿಕೆ
- ಪಿಂಚಣಿದಾರರಿಗೆ ಫ್ಯಾಮಿಲಿ ಪೆನ್ಶನ್ ಮಿತಿ 15,000 ರಿಂದ 25,000 ರೂಪಾಯಿಗೆ ಏರಿಕೆ
ಇದನ್ನೂ ಓದಿ| ಕೇಂದ್ರ ಬಜೆಟ್ 2024; ಆದಾಯ ತೆರಿಗೆ ರಿಟರ್ನ್ಸ್ ರೀ ಅಸೆಸ್ಮೆಂಟ್ ಅವಧಿ ಇಳಿಕೆ, 5 ಮತ್ತೊಂದು ವರ್ಷ ಅಷ್ಟೆ
ಪರಿಷ್ಕೃತ ಆದಾಯ ತೆರಿಗೆ ತೆರಿಗೆ ಸ್ಲ್ಯಾಬ್
3 ಲಕ್ಷ ರೂಪಾಯಿ - ತೆರಿಗೆ ಇಲ್ಲ
7 ಲಕ್ಷ ರೂಪಾಯ 5%
7 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ 10%
10 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ 15 %
12 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ 20 %
15 ಲಕ್ಷ ರೂಪಾಯಿ ಮೇಲ್ಪಟ್ಟು 30%
ಹೊಸ ಆಡಳಿತವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಈ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ ಕಾರಣ 17,500 ರೂಪಾಯಿ ಉಳಿತಾಯವಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
1961 ರ ಆದಾಯ ತೆರಿಗೆ ಕಾಯಿದೆಯ ಸಮಗ್ರ ಪರಿಶೀಲನೆ ಮಾಡಲಾಗುತ್ತದೆ. ಅದನ್ನು ಸುಲಭವಾಗಿ ಓದಲು ಮತ್ತು ಅರ್ಥಮಾಡಿಕೊಳ್ಳಲು ಅನುವಾಗುವಂತೆ ಪರಿಷ್ಕರಿಸಲಾಗುತ್ತದೆ. ಅದೇ ರೀತಿ, ಅನಿಶ್ಚಿತತೆ ಮತ್ತು ದಾವೆಗಳ ಸಂಭಾವ್ಯತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನಿರ್ಮಲಾ ಸೀತಾರಾಮನ್ ಅವರು ವರ್ಷಗಳಲ್ಲಿ ತೆಗೆದುಕೊಂಡ ಕ್ರಮಗಳಿಗೆ ಅನುಗುಣವಾಗಿ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಆಡಳಿತವನ್ನು ಸರಳಗೊಳಿಸುವ ಕ್ರಮಗಳನ್ನು ಭರವಸೆ ನೀಡಿದರು.
ತೆರಿಗೆ ರಚನೆಗಳು ಮತ್ತು ನಿಯಮಗಳನ್ನು ಸರಳಗೊಳಿಸುವ ಬಗ್ಗೆ ಸರ್ಕಾರದ ಗಮನ ಹರಿಸಲಿದೆ.. 2023-24 ರ ಹಣಕಾಸು ವರ್ಷದಲ್ಲಿ ಮೂರನೇ ಎರಡರಷ್ಟು ವೈಯಕ್ತಿಕ ತೆರಿಗೆ ಪಾವತಿದಾರರು ಹೊಸ ತೆರಿಗೆ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ವಿವಾದದಿಂದ ವಿಶ್ವಾಸಕ್ಕೆ ಯೋಜನೆ 3.0
ನಿರ್ಮಲಾ ಸೀತಾರಾಮನ್ ಅವರು 2024 ಕ್ಕೆ ವಿವಾದದಿಂದ ವಿಶ್ವಾಸಕ್ಕೆ ಯೋಜನೆ 3.0 ಅನ್ನು ಘೋಷಿಸಿದರು. ಉದ್ಯೋಗಿಗಳ ಮೂಲ ವೇತನಕ್ಕೆ ಉದ್ಯೋಗದಾತರ ಕೊಡುಗೆಯ ಮೇಲಿನ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಕಡಿತವನ್ನು ಶೇಕಡಾ 10 ರಿಂದ 14 ಕ್ಕೆ ಏರಿಸಲಾಗಿದೆ. ಹೊಸ ಆಡಳಿತದಲ್ಲಿ ಇದು ಸಾರ್ವಜನಿಕ ವಲಯದ ಕಂಪನಿಗಳು, ಖಾಸಗಿ ವಲಯಕ್ಕೆ ಅನ್ವಯಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತು ಬಜೆಟ್ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)
ವಿಭಾಗ