ಕೇಂದ್ರ ಬಜೆಟ್ 2024; ನಳಂದ ರಾಜ್‌ಗೀರ್, ವಿಷ್ಣುಪಾದ, ಮಹಾಬೋಧಿ ದೇಗುಲ ಕಾರಿಡಾರ್‌ ಅಭಿವೃದ್ಧಿಗೆ ಕ್ರಮ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2024; ನಳಂದ ರಾಜ್‌ಗೀರ್, ವಿಷ್ಣುಪಾದ, ಮಹಾಬೋಧಿ ದೇಗುಲ ಕಾರಿಡಾರ್‌ ಅಭಿವೃದ್ಧಿಗೆ ಕ್ರಮ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ

ಕೇಂದ್ರ ಬಜೆಟ್ 2024; ನಳಂದ ರಾಜ್‌ಗೀರ್, ವಿಷ್ಣುಪಾದ, ಮಹಾಬೋಧಿ ದೇಗುಲ ಕಾರಿಡಾರ್‌ ಅಭಿವೃದ್ಧಿಗೆ ಕ್ರಮ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ

ಕೇಂದ್ರ ಬಜೆಟ್ 2024; ನಳಂದ ರಾಜ್‌ಗೀರ್, ವಿಷ್ಣುಪಾದ, ಮಹಾಬೋಧಿ ದೇಗುಲ ಕಾರಿಡಾರ್‌ ಅಭಿವೃದ್ಧಿಗೆ ಕ್ರಮ ಪ್ರಕಟಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಬಜೆಟ್ ಭಾಷಣದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಉಪಕ್ರಮಗಳ ವಿವರ ನೀಡಿದರು.

ಕೇಂದ್ರ ಬಜೆಟ್ 2024; ನಳಂದ ರಾಜ್‌ಗೀರ್, ವಿಷ್ಣುಪಾದ, ಮಹಾಬೋಧಿ ದೇಗುಲ ಕಾರಿಡಾರ್‌ ಅಭಿವೃದ್ಧಿಗೆ ಕ್ರಮ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಕ್ರಮ ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿದ ಕೇಂದ್ರ ಸರ್ಕಾರ.
ಕೇಂದ್ರ ಬಜೆಟ್ 2024; ನಳಂದ ರಾಜ್‌ಗೀರ್, ವಿಷ್ಣುಪಾದ, ಮಹಾಬೋಧಿ ದೇಗುಲ ಕಾರಿಡಾರ್‌ ಅಭಿವೃದ್ಧಿಗೆ ಕ್ರಮ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಕ್ರಮ ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿದ ಕೇಂದ್ರ ಸರ್ಕಾರ.

ನವದೆಹಲಿ: ಕೇಂದ್ರ ಸರ್ಕಾರವು ಬಿಹಾರದ ನಳಂದ-ರಾಜ್‌ಗೀರ್ ಕಾರಿಡಾರ್ ಸೇರಿದಂತೆ ನಳಂದವನ್ನು ಪ್ರವಾಸಿ ತಾಣವಾಗಿ ಪ್ರಚಾರ ಮಾಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಕೇಂದ್ರ ಬಜೆಟ್ 2024 25 ಮಂಡಿಸುತ್ತ ಹೇಳಿದರು.

ಲೋಕಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಮಂಡಿಸಿದ ಅವರು, ನಳಂದಾ ವಿಶ್ವವಿದ್ಯಾನಿಲಯವನ್ನು ಅದರ ಪ್ರಾಚೀನ ವೈಭವಯುತವಾದ ಮಟ್ಟಕ್ಕೆ ಪುನರುಜ್ಜೀವನಗೊಳಿಸುವುದರ ಜೊತೆಗೆ ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಹೇಳಿದರು.

ಬಿಹಾರದ ನಳಂದಾ ಅವಶೇಷಗಳ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಒಂದು ತಿಂಗಳ ನಂತರ ಕೇಂದ್ರ ಸರಕಾರದ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.

ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರು, ಕಾಶಿ ವಿಶ್ವನಾಥ ದೇವಾಲಯಕ್ಕೆ ಅನುಗುಣವಾಗಿ ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯದ ಕಾರಿಡಾರ್‌ಗಳ ಅಭಿವೃದ್ಧಿಗೆ ಬೆಂಬಲ ನೀಡುವ ವಿಚಾರವನ್ನೂ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು.

ಕೇಂದ್ರ ಬಜೆಟ್ 2024 25; ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ

"ಪ್ರವಾಸೋದ್ಯಮ ಯಾವಾಗಲೂ ನಮ್ಮ ನಾಗರಿಕತೆಯ ಭಾಗವಾಗಿದೆ. ಭಾರತವನ್ನು ಜಾಗತಿಕ ಪ್ರವಾಸಿ ತಾಣವಾಗಿ ಇರಿಸುವಲ್ಲಿ ನಮ್ಮ ಪ್ರಯತ್ನಗಳು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಹೂಡಿಕೆಗಳನ್ನು ಉತ್ತೇಜಿಸುತ್ತದೆ ಮತ್ತು ಇತರ ಕ್ಷೇತ್ರಗಳಿಗೆ ಆರ್ಥಿಕ ಅವಕಾಶಗಳನ್ನು ತೆರೆಯುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ವಿಷ್ಣುಪಾದ ಟೆಂಪಲ್ ಕಾರಿಡಾರ್ ಮತ್ತು ಮಹಾಬೋಧಿ ಟೆಂಪಲ್ ಕಾರಿಡಾರ್‌ನ ಸಮಗ್ರ ಅಭಿವೃದ್ಧಿಯನ್ನು ಘೋಷಿಸಿದ ಹಣಕಾಸು ಸಚಿವರು ಅವುಗಳನ್ನು ಯಶಸ್ವಿ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್‌ನ ಮಾದರಿಯಲ್ಲಿ ವಿಶ್ವ ದರ್ಜೆಯ ಯಾತ್ರಿಗಳು ಮತ್ತು ಪ್ರವಾಸಿ ತಾಣಗಳಾಗಿ ಪರಿವರ್ತಿಸಲಾಗುವುದುಎಂದು ಹೇಳಿದರು.

ಹಿಂದೂಗಳು, ಬೌದ್ಧರು ಮತ್ತು ಜೈನರಿಗೆ ಬಿಹಾರದ ಪ್ರಾಮುಖ್ಯತೆಯ ಧಾರ್ಮಿಕ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್‌ಗೀರ್‌ಗಾಗಿ ಸಮಗ್ರ ಅಭಿವೃದ್ಧಿ ಉಪಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

"ರಾಜಗೀರ್ ಹಿಂದೂಗಳು, ಬೌದ್ಧರು ಮತ್ತು ಜೈನರಿಗೆ ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಜೈನ ದೇವಾಲಯದ ಸಂಕೀರ್ಣದಲ್ಲಿರುವ 20 ನೇ ತೀರ್ಥಂಕರ ಮುನಿಸುವ್ರತ ದೇವಾಲಯವು ಪ್ರಾಚೀನವಾಗಿದೆ. ಸಪ್ತಋಷಿಗಳು ಅಥವಾ 7 ಬೆಚ್ಚಗಿನ ನೀರಿನ ಬ್ರಹ್ಮಕುಂಡವಿದ್ದು, ಪವಿತ್ರ ದೇಗುಲವೆಂದು ಪರಿಗಣಿಸಲ್ಪಟ್ಟಿದೆ ಎಂದು ಸಚಿವರು ಹೇಳಿದರು.

ಒಡಿಶಾದ ರಮಣೀಯ ಸೌಂದರ್ಯ, ದೇವಾಲಯಗಳು, ಸ್ಮಾರಕಗಳು, ಕರಕುಶಲತೆ, ವನ್ಯಜೀವಿ ಅಭಯಾರಣ್ಯಗಳು, ನೈಸರ್ಗಿಕ ಭೂದೃಶ್ಯಗಳು ಮತ್ತು ಪ್ರಾಚೀನ ಕಡಲತೀರಗಳ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್, ರಾಜ್ಯವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಒಡಿಶಾದ ಅಭಿವೃದ್ಧಿಗೂ ನಮ್ಮ ಸರ್ಕಾರ ನೆರವು ನೀಡಲಿದೆ ಎಂದರು.

ಕಳೆದ ತಿಂಗಳು ಬಿಹಾರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ

ಕಳೆದ ತಿಂಗಳು ಬಿಹಾರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಳಂದದ ಅವಶೇಷಗಳ ಸ್ಥಳಕ್ಕೆ ಸಮೀಪದಲ್ಲಿರುವ ನಳಂದಾ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿದ್ದರು.

“ಪುಸ್ತಕಗಳು ಬೆಂಕಿಯ ಜ್ವಾಲೆಯಲ್ಲಿ ಸುಡಬಹುದು, ಆದರೆ ಬೆಂಕಿಯ ಜ್ವಾಲೆಯು ಜ್ಞಾನವನ್ನು ನಾಶಮಾಡುವುದಿಲ್ಲ ಎಂಬ ಸತ್ಯದ ಘೋಷಣೆಯೇ ನಳಂದ. ನಳಂದವು ಒಂದು ಗುರುತು, ಗೌರವ ಮತ್ತು ಹೆಮ್ಮೆಯಾಗಿದೆ" ಎಂದು ನರೇಂದ್ರ ಮೋದಿ ಹೇಳಿದ್ದರು.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ತಾಜಾ ವಿದ್ಯಮಾನ ಮತ್ತು ಬಜೆಟ್‌ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.