ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್‌; ಇದರಿಂದ ಏನು ಲಾಭ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್‌; ಇದರಿಂದ ಏನು ಲಾಭ?

ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್‌; ಇದರಿಂದ ಏನು ಲಾಭ?

Hyderabad Bengaluru Industrial corridor: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ವಿವಿಧ ಕೈಗಾರಿಕಾ ಕಾರಿಡಾರ್‌ಗಳ ಉಲ್ಲೇಖದ ಸಂದರ್ಭದಲ್ಲಿ ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು.

ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಪ್ರಸ್ತಾಪ
ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಪ್ರಸ್ತಾಪ

Hyderabad Bengaluru Industrial corridor: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ವಿವಿಧ ಕೈಗಾರಿಕಾ ಕಾರಿಡಾರ್‌ಗಳ ಉಲ್ಲೇಖದ ಸಂದರ್ಭದಲ್ಲಿ ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಸುಮಾರು 26 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಯೋಜನೆಗಳನ್ನೂ ಆರಂಭಿಸುವುದಾಗಿ ತಿಳಿಸಿದ್ದಾರೆ.

ಏನಿದು ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌?

ಇದು ಕರ್ನಾಟಕ ಮತ್ತು ಆಂಧ್ರಪ್ರದೇಶವೆಂಬ ಎರಡು ಪ್ರಮುಖ ರಾಜ್ಯಗಳ ನಡುವೆ ನಿರ್ಮಿಸಲು ಉದ್ದೇಶಿಸಲಾಗಿರುವ ಮೆಗಾ ಇಂಡಸ್ಟ್ರಿಯಲ್‌ ಹಬ್‌. ಇದು ಆಂಧ್ರ ಪ್ರದೇಶದ ಕುರ್ನೂಲ್‌ ಜಿಲ್ಲೆಯಿಂದ ಆರಂಭವಾಗಿ ಬೆಂಗಳೂರಿನವರೆಗೆ ಇರಲಿದೆ. ನ್ಯಾಷನಲ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್‌ (ಎನ್‌ಐಸಿಡಿಐಟಿ) ವತಿಯಿಂದ ನಡೆಯುವ ಬೃಹತ್‌ ಯೋಜನೆಯಾಗಿದೆ.

ನಿರ್ಮಲಾ ಸೀತಾರಾಮನ್‌ ಅವರು ತನ್ನ ಬಜೆಟ್‌ ಭಾಷಣದಲ್ಲಿ ವಿಶಾಖಪಟ್ಟಣ ಚೆನ್ನೈ ಕೈಗಾರಿಕಾ ಕಾರಿಡಾರ್‌, ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದಾರೆ.

ಕೈಗಾರಿಕಾ ಕಾರಿಡಾರ್‌ಗಳಿಂದ ಏನು ಲಾಭ?

ಕೈಗಾರಿಕಾ ಕಾರಿಡಾರ್‌ಗಳಿಂದ ಕೈಗಾರಿಕಾ ಉತ್ಪಾದನೆಯೊಂದಿಗೆ ಉದ್ಯೋಗಾವಕಾಶವೂ ಹೆಚ್ಚಳವಾಗಿದೆ. ಇಂತಹ ಕಾರಿಡಾರ್‌ಗಳು ಹಲವು ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಯೋಜನಗಳನ್ನು ಹೊಂದಿದೆ. ಹೆದ್ದಾರಿಗಳು, ರೈಲ್ವೆ, ವಿಮಾನನಿಲ್ದಾಣಗಳು ಮತ್ತು ಬಂದರುಗಳಿಗೆ ಅತ್ಯುತ್ತಮ ಯೋಜಿತ ಕಾರಿಡಾರ್‌ಗಳು ಇವಾಗಿರಲಿವೆ. ಇದರಿಂದ ಜನರು ಮತ್ತು ಸರಕುಗಳ ಸಾಗಾಟ ಸುಲಭವಾಗುತ್ತದೆ. ನಿರ್ದಿಷ್ಟ ಸ್ಥಳಗಳಲ್ಲಿ ಕೈಗರಿಕಾ ಕ್ಲಸ್ಟರ್‌ಗಳ ಸ್ಥಾಪನೆಗೆ ನೆರವಾಗಲಿದೆ. ಇಂತಹ ಕೈಗಾರಿಕೆಗಳಿಗೆ ಪೂರಕವಾದ ಲಾಜಿಸ್ಟಿಕ್‌ ವ್ಯವಸ್ಥೆಯೂ ಇರಲಿದೆ. ಉದ್ಯೋಗ ಮತ್ತು ಹೂಡಿಕೆ ಹೆಚ್ಚಳಕ್ಕೂ ನೆರವಾಗಲಿದೆ.

ಕೇಂದ್ರ ಸರಕಾರವು ನ್ಯಾಷನಲ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಪ್ರೋಗ್ರಾಂನಡಿ ನಿರ್ಮಿಸುತ್ತಿರುವ 11 ಕಾರಿಡಾರ್‌ಗಳು (ಈ ಹಿಂದೆ ಸರಕಾರ ನೀಡಿದ ಮಾಹಿತಿಯಂತೆ)

  1. ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್ (DMIC)
  2. ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ (CBIC)
  3. ಅಮೃತಸರ ಕೋಲ್ಕತ್ತಾ ಇಂಡಸ್ಟ್ರಿಯಲ್ ಕಾರಿಡಾರ್ (AKIC)
  4. ಈಸ್ಟ್ ಕೋಸ್ಟ್ ಇಂಡಸ್ಟ್ರಿಯಲ್ ಕಾರಿಡಾರ್ (ECIC)
  5. ವೈಜಾಗ್ ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ (VCIC)
  6. ಬೆಂಗಳೂರು ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ (BIMIC)
  7. ಕೊಯಮತ್ತೂರು ಮೂಲಕ ಕೊಯಮತ್ತೂರು CBMIC)
  8. ಹೈದರಾಬಾದ್ ನಾಗ್ಪುರ ಇಂಡಸ್ಟ್ರಿಯಲ್ ಕಾರಿಡಾರ್ (HNIC)
  9. ಹೈದರಾಬಾದ್ ವಾರಂಗಲ್ ಕೈಗಾರಿಕಾ ಕಾರಿಡಾರ್ (HWIC)
  10. ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ (HBIC)
  11. ಒಡಿಶಾ ಆರ್ಥಿಕ ಕಾರಿಡಾರ್ (OEC)
  12. ದೆಹಲಿ ನಾಗ್ಪುರ ಕೈಗಾರಿಕಾ ಕಾರಿಡಾರ್ (DNIC)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.