Budget 2024: ಕೇಂದ್ರ ಬಜೆಟ್‌ನಲ್ಲಿ ಯುವ ಸಮುದಾಯದ ಕೌಶಲ್ಯ, ಉದ್ಯೋಗಕ್ಕೂ ಅದ್ಯತೆ; ಕರ್ನಾಟಕ ಮಾದರಿಯ ಯುವನಿಧಿಗೆ ಒತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024: ಕೇಂದ್ರ ಬಜೆಟ್‌ನಲ್ಲಿ ಯುವ ಸಮುದಾಯದ ಕೌಶಲ್ಯ, ಉದ್ಯೋಗಕ್ಕೂ ಅದ್ಯತೆ; ಕರ್ನಾಟಕ ಮಾದರಿಯ ಯುವನಿಧಿಗೆ ಒತ್ತು

Budget 2024: ಕೇಂದ್ರ ಬಜೆಟ್‌ನಲ್ಲಿ ಯುವ ಸಮುದಾಯದ ಕೌಶಲ್ಯ, ಉದ್ಯೋಗಕ್ಕೂ ಅದ್ಯತೆ; ಕರ್ನಾಟಕ ಮಾದರಿಯ ಯುವನಿಧಿಗೆ ಒತ್ತು

Youth Budget ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಆಯವ್ಯಯದಲ್ಲಿ ಯುವ ಸಮುದಾಯ, ಉದ್ಯೋಗ, ಕೌಶಲ್ಯಕ್ಕೆ ಒತ್ತು ನೀಡಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ನಲ್ಲಿ ಪದವೀಧರರಿಗೂ ಕಾರ್ಯಕ್ರಮಗಳಿವೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ನಲ್ಲಿ ಪದವೀಧರರಿಗೂ ಕಾರ್ಯಕ್ರಮಗಳಿವೆ.

ದೆಹಲಿ: ಕರ್ನಾಟಕದಲ್ಲಿ ಯುವನಿಧಿ ಮೂಲಕ ಪದವೀಧರರಿಗೆ ಆರ್ಥಿಕ ನೆರವು ನೀಡಿದ ಮಾದರಿಯಲ್ಲಿಯೇ ಒಂದು ತಿಂಗಳ ವೇತನ ನೀಡುವುದು, ಕೌಶಲ್ಯವೃದ್ದಿಗೆ ಒತ್ತು, ಹೆಚ್ಚು ಉದ್ಯೋಗ ಸೃಜಿಸಿ ಯುವಕರಿಗೆ ಅವಕಾಶ ಮಾಡಿಕೊಡುವ ಹಲವು ಅಂಶಗಳನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ 2024-25ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದಾರೆ. ಯುವ ಸಮುದಾಯದ ಶಿಕ್ಷಣದ ಅವಕಾಶಗಳ ಜತೆಯಲ್ಲಿಯೇ ಅವರಿಗೆ ಕೌಶಲ್ಯ ತರಬೇತಿ ನೀಡಲು ಆರ್ಥಿಕ ನೆರವು, ಉದ್ಯೋಗ ಪಡೆಯಲು ಬೇಕಾದ ಹಲವಾರು ಸುಧಾರಣಾ ಕ್ರಮಗಳನ್ನು ಘೋಷಿಸಿದ್ದಾರೆ. ಇದಕ್ಕಾಗಿ 60 ಸಾವಿರ ಕೋಟಿ ರೂ,ಗಳನ್ನು ವಿನಿಯೋಗಿಸುವುದಾಗಿಯೂ ಹೇಳಿದ್ದಾರೆ.

ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಮಾಸಿಕ 1 ಪಿಎಫ್ ಕೊಡುಗೆ ನೀಡುವ ಮೂಲಕ ಸರ್ಕಾರ ಪ್ರೋತ್ಸಾಹ ನೀಡಲಿದೆ ಭಾರತದಲ್ಲಿರುವ ಶೇ. 30 ರಷ್ಟು ಯುವಕ ಯುವತಿಯರು, ಪದವೀಧರರನ್ನು ಗುರಿಯಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ.

ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿರುವ ಮೊದಲ ಬಾರಿಗೆ ಉದ್ಯೋಗಿಗಳಿಗೆ 3 ಕಂತುಗಳಲ್ಲಿ ಒಂದು ತಿಂಗಳ ವೇತನವನ್ನು ನೇರವಾಗಿ ವರ್ಗಾಯಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಲಿದೆ. ಇದು 15,000 ರೂ.ಗಳವರೆಗೆ ಇರುತ್ತದೆ. ಅರ್ಹತಾ ಮಿತಿ ತಿಂಗಳಿಗೆ 1 ಲಕ್ಷ ರೂ. ಈ ಯೋಜನೆಯಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ. ಹೊಸದಾಗಿ ಕಾರ್ಯಪಡೆಗೆ (ಇಪಿಎಫ್ಒ) ಪ್ರವೇಶಿಸುವ ಎಲ್ಲಾ ವ್ಯಕ್ತಿಗಳಿಗೆ ಅನ್ವಯಿಸುತ್ತದೆ . ವೇತನ/ಸಂಬಳ ತಿಂಗಳಿಗೆ 1 ಲಕ್ಷ ರೂಗಿಂತ ಕಡಿಮೆ ಇರುವವರು ಇದಕ್ಕೆ ಅರ್ಹರು. ಉದ್ಯೋಗಿಗೆ ಸಬ್ಸಿಡಿಯನ್ನು ಮೂರು ಕಂತುಗಳಲ್ಲಿ ಪಾವತಿಸಲಾಗುತ್ತದೆ. ಉದ್ಯೋಗಿ ಕಡ್ಡಾಯ ಆನ್‌ಲೈನ್ ಹಣಕಾಸು ಸಾಕ್ಷರತಾ ಕೋರ್ಸ್ ಗೆ ಒಳಗಾಗಬೇಕು. ಎರಡನೇ ಕಂತು ಕ್ಲೈಮ್ ಮಾಡುವ ಮೊದಲು. ಉದ್ಯೋಗವು ಮೊದಲನೆಯದಾಗಿದ್ದರೆ ಉದ್ಯೋಗದಾತರಿಂದ ಸಬ್ಸಿಡಿಯನ್ನು ಮರುಪಾವತಿಸಲಾಗುತ್ತದೆ. ಯೋಜನೆಯು 2 ವರ್ಷಗಳವರೆಗೆ ಇರುತ್ತದೆ.

ಕೌಶಲ್ಯ ಕಾರ್ಯಕ್ರಮ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣ ಯೋಜನೆಯಡಿ 1000 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಹಬ್ ನಲ್ಲಿ ಮೇಲ್ದರ್ಜೆಗೇರಿಸಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಹೊಸ ಕೇಂದ್ರ ಪ್ರಾಯೋಜಿತ ಯೋಜನೆ ಇದಾಗಿದರಲಿದೆ.

ಕೌಶಲ್ಯದ ಫಲಿತಾಂಶ ಮತ್ತು ಗುಣಮಟ್ಟದ ಮೇಲೆ ಕೇಂದ್ರೀಕರಿಸಿ ಕೋರ್ಸ್‌ ವಿಷಯ ಮತ್ತು ವಿನ್ಯಾಸವು ಉದ್ಯಮದ ಅಗತ್ಯಗಳಿಗೆ ಹೊಂದಿಕೆಯಾಗುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಐದು ವರ್ಷಗಳಲ್ಲಿ ಒಟ್ಟು ವೆಚ್ಚ 60 ಸಾವಿರ ಕೋಟಿ ರೂ,ಭಾರತ ಸರ್ಕಾರದಿಂದ 30,000 ಕೋಟಿ ರೂ, ರಾಜ್ಯ ಸರ್ಕಾರಗಳಿಂದ 20,000 ಕೋಟಿ ರೂ ಹಾಗೂ ಉದ್ಯಮ ವಲಯದಿಂದ 10,000 ಕೋಟಿ (ಸಿಎಸ್ಆರ್ ನಿಧಿ ಸೇರಿದಂತೆ) ಬಳಕೆ ಮಾಡಲಾಗುತ್ತದೆ.

200 ಹಬ್‌ ಗಳು ಮತ್ತು 800 ಸ್ಪೋಕ್ ಐಟಿಐಗಳು-ಉದ್ಯಮದ ಸಹಯೋಗದೊಂದಿಗೆ ಅಸ್ತಿತ್ವದಲ್ಲಿರುವ ಕೋರ್ಸ್ ಮರು-ವಿನ್ಯಾಸ ಮತ್ತು ವಿಮರ್ಶೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಎಲ್ಲಾ 1000 ಐಟಿಐಗಳಲ್ಲಿ 1 ರಿಂದ 2 ವರ್ಷದ ಕೋರ್ಸ್‌ ಹಬ್ ಐಟಿಐಗಳಲ್ಲಿ ಅಲ್ಪಾವಧಿಯ ವಿಶೇಷ ಕೋರ್ಸ್. ಅಲ್ಲದೇ ತರಬೇತುದಾರರ ತರಬೇತಿಗಾಗಿ 5 ರಾಷ್ಟ್ರೀಯ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಳ ಮಾಡಲಾಗುತ್ತದೆ.

500 ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ತಿಂಗಳಿಗೆ 5000 ರೂ.ಗಳ ಇಂಟರ್ನ್ಶಿಪ್ ಭತ್ಯೆ ಮತ್ತು 6000 ರೂ.ಗಳ ಒಂದು ಬಾರಿಯ ಸಹಾಯದೊಂದಿಗೆ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದೆ ಎನ್ನುವುದು ನಿರ್ಮಲಾ ಸೀತಾರಾಮನ್‌ ಅವರು ಘೋಷಿಸಿದ ಪ್ರಮುಖ ಅಂಶಗಳು.

 

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.