Share Market Today: ಕೇಂದ್ರ ಬಜೆಟ್ ದಿನ ನೀರಸ ವಹಿವಾಟಿನೊಂದಿಗೆ ಷೇರುಪೇಟೆ ಆರಂಭ; ಸೆನ್ಸೆಕ್ಸ್ 100, ನಿಫ್ಟಿ 50 ಅಂಕಗಳ ಕುಸಿತ
ಬಹು ನಿರೀಕಿತ ಕೇಂದ್ರ ಬಜೆಟ್ ದಿನವೇ ಮುಂಬೈ ಷೇರುಪೇಟೆಯ ನಷ್ಟದೊಂದಿಗೆ ಆರಂಭವಾಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 100 ಹಾಗೂ ನಿಫ್ಟಿ 50 ಅಂಕಗಳ ಕುಸಿತ ಕಂಡಿದೆ. ಯಾವೆಲ್ಲಾ ಕಂಪನಿಗಳ ಷೇರುಗಳ ಮೇಲೆ ಪರಿಣಾಮ ಬೀರಿದೆ ಅನ್ನೋದರ ವಿವರ ಇಲ್ಲಿದೆ.
ಮುಂಬೈನ ಷೇರುಪೇಟೆಯಲ್ಲಿ ಬಹು ನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆಯ ದಿನವೇ ನೀರಸದೊಂದಿಗೆ ದಿನದ ವಹಿವಾಟು ಆರಂಭವಾಗಿದೆ. ಸೆನ್ಸೆಕ್ಸ್ 100 ಹಾಗೂ ನಿಫ್ಟಿ 50 ಅಂಕಗಳ ನಷ್ಟವನ್ನು ಅನುಭವಿಸಿತ್ತು. ಆರಂಭದಲ್ಲಿ ನಷ್ಟದೊಂದಿಗೆ ಮಾರುಕಟ್ಟೆ ಆರಂಭವಾದರೂ ಗೂಳಿಯ ಓಟ ಮುಂದುವರಿಯಿತು. ಅನಿಶ್ಚಿತತೆಯ ನಡುವೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 160 ಹಾಗೂ ನಿಫ್ಟಿ 30 ಅಂಕಗಳ ಜಿಗಿತ ಕಂಡಿತು. ಪ್ರಮುಖ ಕಂಪನಿಗಳಾದ ಜೆಕೆ ಸಿಮೆಂಟ್, ಎಲ್‌ಐಸಿ, ಐಆರ್‌ಸಿಟಿಸಿ, ಎಂಆರ್‌ಎಫ್, ಅದಾನಿ ಗ್ರೀನ್, ಟೈಟಾನ್, ಟಿಸಿಎಸ್ ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್ ಎಸ್‌ಬಿಐ ಷೇರುಗಳು ಲಾಭದಲ್ಲಿದ್ದವು. ವಿಪ್ರೋ, ಭಾರ್ತಿ ಏರ್ಟೆಲ್, ಟಾಟಾ ಪವರ್ ಪೇಟಿಎಂ, ಏಷಿಯನ್ ಪೇಂಟ್ಸ್, ಬಜಾಜ್ ಫೈನಾನ್ಸ್ ಕಂಪನಿಗಳ ಷೇರುಗಳು ನಷ್ಟದಲ್ಲಿ ಸಾಗಿವೆ.
ಕೇಂದ್ರ ಬಜೆಟ್ ಆರಂಭಕ್ಕೂ ಮುನ್ನವೇ ಭಾರತೀಯ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಜೆನೋಲ್ಸ್ ಇಂಜಿನಿಯರಿಂಗ್ ಷೇರುಗಳು ಇಂದು (ಮಂಗಳವಾರ) ಬಲವಾದ ಖರೀದಿಯನ್ನು ಕಂಡವು. ಜೆನ್ಸೋಲ್ ಇಂಜಿನಿಯರಿಂಗ್ ಷೇರಿನ ಬೆಲೆಯು ಎನ್‌ಎಸ್‌ಇಯಲ್ಲಿ 984.90 ರೂಪಾಯಿಯಂತೆ ಮೇಲ್ಮುಖದೊಂದಿಗೆ ಪ್ರಾರಂಭವಾಯಿತು. ಪ್ರತಿಯೊಂದು ಷೇರು 985.15 ರ ಇಂಟ್ರಾಡೇ ಗರಿಷ್ಠವನ್ನು ಮುಟ್ಟಿತು. ಆ ಮೂಲಕ ಶೇಕಡಾ 5 ರಷ್ಟು ಏರಿಕೆಯನ್ನು ಕಂಡಿತು.
ಇಂದಿನ (ಜುಲೈ 23, ಮಂಗಳವಾರ) ವಹಿವಾಟಿನಲ್ಲಿ ಷೇರುಪೇಟೆಯಲ್ಲಿ ಏರಿಳಿತದಲ್ಲೇ ಸಾಗುತ್ತಿದೆ.