Budget 2024: ಮೇಲ್ಛಾವಣಿಯಲ್ಲೇ ಸೌರವಿದ್ಯುತ್ ಉತ್ಪಾದಿಸಿ, 300 ಯೂನಿಟ್ ಉಚಿತ ಪಡೆಯಿರಿ; ಕರ್ನಾಟಕದ ಯೋಜನೆಗೆ ಕೇಂದ್ರದ ಹೊಸ ರೂಪ ಹೀಗಿದೆ
ಸೌರವಿದ್ಯುತ್ ಉತ್ಪಾದನೆ ಹಾಗೂ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದಿಸುವ ಚಟುವಟಿಕೆಗೆ ಒತ್ತು ನೀಡಿದೆ.

ದೆಹಲಿ: ಈಗಾಗಲೇ ಕರ್ನಾಟಕದಲ್ಲಿ ಜಾರಿಯಲ್ಲಿರುವ ಸೌರವಿದ್ಯುತ್ ಉತ್ಪಾದನೆ ಹಾಗೂ ಬಳಕೆಯ ಯೋಜನೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ವಿಸ್ತರಣೆ ಮಾಡಿದೆ. ಕರ್ನಾಟಕದಲ್ಲಿ ಸೌರವಿದ್ಯುತ್ ಉತ್ಪಾದನೆ ಮಾಡುವುದನ್ನು ಖರೀದಿಸುವ ಜತೆಗೆ ಸಾಮಾನ್ಯ ವಿದ್ಯುತ್ ಬಿಲ್‌ನಲ್ಲಿ ಮಾಸಿಕ 50 ರೂ. ಪಡೆಯುವ ಯೋಜನೆ ಕರ್ನಾಟಕದಲ್ಲಿತ್ತು. ಕೇಂದ್ರ ಸರ್ಕಾರ ಈಗ ಸೌರವಿದ್ಯುತ್ ಉತ್ಪಾದನೆ ಹಾಗೂ ಬಳಕೆ ಪ್ರೋತ್ಸಾಹಿಸಲು ಈ ಬಾರಿಯ ಬಜೆಟ್‌ನಲ್ಲಿ ಯೋಜನೆ ಪ್ರಕಟಿಸಿದೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಕೇಂದ್ರದ ಉದ್ದೇಶಿತ ಮೇಲ್ಛಾವಣಿ ಸೌರವಿದ್ಯುತ್ ಯೋಜನೆಯಡಿ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಮೇಲ್ಛಾವಣಿ ಸೌರ ವಿದ್ಯುತ್ ಮತ್ತು ಉಚಿತ ವಿದ್ಯುತ್ ಯೋಜನೆ ರಾಮ ಮಂದಿರ ಸಮಾರಂಭದ ನಂತರ ಕೈಗೊಂಡ ಪ್ರಧಾನಿ ಮೋದಿ ಅವರ ಮೊದಲ ನಿರ್ಧಾರವಾಗಿದೆ. ಸಮಾರಂಭದ ಒಂದು ದಿನದ ನಂತರ ಜನವರಿ 22 ರಂದು ಈ ಯೋಜನೆಯನ್ನು ಅವರು ಘೋಷಿಸಿದ್ದರು. ಅದನ್ನು ಈಗ ಬಜೆಟ್ ಮೂಲಕ ಅಧಿಕೃತಗೊಳಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
- ಈ ಯೋಜನೆಯು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ಅಡಿಯಲ್ಲಿ ಬರಲಿದೆ. ತಮ್ಮ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಲು ಅವಕಾಶ ನೀಡುವ ಮೂಲಕ ಸುಮಾರು ಒಂದು ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡಲಿದೆ.
- ಈ ಯೋಜನೆಯು ಈ ಕುಟುಂಬಗಳಿಗೆ ವಾರ್ಷಿಕವಾಗಿ 15,000 ರಿಂದ 18,000 ರೂ.ಗಳವರೆಗೆ ಉಳಿಸಲು ಸಹಾಯ ಮಾಡಲಿದೆ ಎನ್ನುವ ಅಂದಾಜು ಹೊಂದಲಾಗಿದೆ. ಎಂದು ಸೀತಾರಾಮನ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
- ಸರ್ಕಾರಿ ಸ್ವಾಮ್ಯದ ಗ್ರಾಮೀಣ ವಿದ್ಯುದ್ದೀಕರಣ ನಿಗಮ (ಆರ್ ಇಸಿ) ಲಿಮಿಟೆಡ್ ಈ ಯೋಜನೆಯ ನಿಯೋಜಿತ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು. ರಾಜ್ಯ ಸರ್ಕಾರಗಳು, ವಿದ್ಯುತ್ ಕಂಪೆನಿಗಳು ಹಾಗೂ ವಿದ್ಯುತ್ ಉತ್ಪಾದಕ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲಿದೆ.
ಇದನ್ನೂ ಓದಿರಿ: Ondu Sarala Prema Kathe: ಸೂಫಿ ಶೈಲಿಯಲ್ಲಿ ಮೂಡಿಬಂತು ಒಂದು ಸರಳ ಪ್ರೇಮ ಕಥೆ ಚಿತ್ರದ ಹಾಡು; ಮೋಹಕತಾರೆಯಿಂದ ಬಿಡುಗಡೆ - ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಮೇಲ್ಛಾವಣಿಯ ಸೌರ ಘಟನ ಸ್ಥಾಪನೆ ಮೂಲಕ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ. ಸೌರವಿದ್ಯುತ್ ಹೆಚ್ಚವು ಬಳಸಿ ಕಲ್ಲಿದ್ದಲು, ಜಲ ಆಧರಿತ ವಿದ್ಯುತ್ ಉತ್ಪಾದನೆ ತಗ್ಗಿಸುವ ಉದ್ದೇಶವನ್ನು ಹೊಂದಲಾಗಿದೆ.
- ಮೇಲ್ಛಾವಣಿ ಸ್ಥಾಪನೆಯ ಅಡಿಯಲ್ಲಿ, ಸೌರ ದ್ಯುತಿವಿದ್ಯುಜ್ಜನಕ (ಪಿವಿ) ಫಲಕಗಳನ್ನು ಕಟ್ಟಡ, ಮನೆ ಅಥವಾ ವಸತಿ ಆಸ್ತಿಯ ಮೇಲೆ ಅಳವಡಿಸಲಾಗುತ್ತದೆ. ಇದರಿಂದ ಯಾರೂ ಸೌರ ವಿದ್ಯುತ್ ಉತ್ಪಾದಿಸುತ್ತಾರೆ, ಬಳಕೆ ಮಾಡುತ್ತಾರೆ ಎನ್ನುವುದು ತಿಳಿಯಲಿದೆ. ಇದು ಇತರರಿಗೂ ಪ್ರೇರಣೆ ನೀಡಲಿದೆ.
- ಈ ಹಿಂದೆ ಇಂತಹದ್ದೇ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ. ಇಲ್ಲಿಯೂ ಸೌರವಿದ್ಯುತ್ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಈಗ ಗೃಹಜ್ಯೋತಿ ಯೋಜನೆ ಜಾರಿಗೊಂಡು ಉಚಿತ ವಿದ್ಯುತ್ ನೀಡುವುದರಿಂದ ಸೌರವಿದ್ಯುತ್ ಉತ್ಪಾದನೆಗೆ ನೀಡುತ್ತಿದ್ದ ಪ್ರೋತ್ಸಾಹಧನ ನಿಲ್ಲಿಸಲಾಗಿದೆ.