ಕೇಂದ್ರ ಬಜೆಟ್ 2025: ಈ ಸಲದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2025: ಈ ಸಲದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳಿವು

ಕೇಂದ್ರ ಬಜೆಟ್ 2025: ಈ ಸಲದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳಿವು

Union Budget 2025 Expectations: ಕೇಂದ್ರ ಬಜೆಟ್ ಮಂಡನೆ ದಿನ ಸಮೀಪಿಸುತ್ತಿರುವಂತೆ, ಸಹಜವಾಗಿಯೇ ಆದಾಯ ತೆರಿಗೆ ಸಂಬಂಧಿಸಿದ ನೀತಿಗಳು, ಸಂಭಾವ್ಯ ಬದಲಾವಣೆಗಳ ಕುರಿತು ಜನಸಾಮಾನ್ಯರಿಗೆ ವಿಶೇಷವಾಗಿ ಮಧ್ಯಮವರ್ಗದ ಜನರ ನಡುವೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಈ ಸಲದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳ ವಿವರ ಇಲ್ಲಿದೆ.

ಕೇಂದ್ರ ಬಜೆಟ್ 2025: ಈ ಸಲದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳಿವು
ಕೇಂದ್ರ ಬಜೆಟ್ 2025: ಈ ಸಲದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳಿವು

Union Budget 2025 Expectations: ಕೇಂದ್ರ ಬಜೆಟ್ 2025ರ ಮಂಡನೆಗೆ ದಿನಗಣನೆ ಶುರುವಾಗಿದೆ. ಸಹಜವಾಗಿಯೇ, ಆದಾಯ ತೆರಿಗೆ ಸಂಬಂಧಿಸಿದ ನೀತಿಗಳು, ಸಂಭಾವ್ಯ ಬದಲಾವಣೆಗಳ ಕುರಿತು ಜನಸಾಮಾನ್ಯರಿಗೆ ವಿಶೇಷವಾಗಿ ಮಧ್ಯಮವರ್ಗದ ಜನರ ನಡುವೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ವೈಯಕ್ತಿಕ ಆದಾಯ ತೆರಿಗೆ, ಇವಿಗಳು ಮತ್ತು ಕ್ರಿಪ್ಟೋದಂತಹ ನಿರ್ದಿಷ್ಟ ತೆರಿಗೆ ಕ್ಷೇತ್ರಗಳು, ವಸತಿ ಯೋಜನೆಯ ಪ್ರಯೋಜನಗಳು, ಉಳಿತಾಯ ಪ್ರೋತ್ಸಾಹ ಮತ್ತು ಹೆಚ್ಚಿನವುಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಕೇಂದ್ರೀಕರಿಸುವ ಹಲವಾರು ಶಿಫಾರಸುಗಳನ್ನು ತಜ್ಞರು ನೀಡಿದ್ದಾರೆ. ಈ ಪ್ರಸ್ತಾವಿತ ಸುಧಾರಣೆಗಳು ತೆರಿಗೆದಾರರಿಗೆ ಪರಿಹಾರ ನೀಡುವ ಗುರಿಯನ್ನು ಹೊಂದಿವೆ. ಆದಾಗ್ಯೂ, ಮಧ್ಯಮ ವರ್ಗ ಬಯಸುವ 10 ಆದಾಯ ತೆರಿಗೆ ಬದಲಾವಣೆಗಳಿವು.

ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳು

1) ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ: ವೈಯಕ್ತಿಕ ಆದಾಯ ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರ ನೀಡಲು ತೆರಿಗೆ ಸ್ಲ್ಯಾಬ್‌ ಪರಿಷ್ಕರಿಸುವುದನ್ನು ಸರ್ಕಾರ ಪರಿಗಣಿಸಬೇಕು.

ಹಣದುಬ್ಬರ ಪ್ರಮಾಣವನ್ನು ಗಮನಿಸಿಕೊಂಡು, ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಳ ಮಾಡಬೇಕು. ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ 4 ಲಕ್ಷ ರೂಪಾಯಿಗೆ ಏರಿಸಬೇಕಾದುದು ಇಂದಿನ ಅಗತ್ಯ ಎಂದು ಟ್ಯಾಕ್ಸ್‌2ವಿನ್‌ ಸಿಇಒ ಅಭಿಷೇಕ್‌ ಸೋನಿ ಅಭಿಪ್ರಾಯಪಟ್ಟಿದ್ದಾರೆ.

ವಾರ್ಷಿಕ 15 ಲಕ್ಷ ರೂಪಾಯಿ ಆದಾಯ ಇರುವವರ ತೆರಿಗೆ ದರವನ್ನು ಕಡಿಮೆ ಮಾಡಬೇಕು. ಇದು ಈ ವರ್ಗದವರ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕ್ಲಿಯರ್ ಟ್ಯಾಕ್ಸ್‌ನ ತೆರಿಗೆ ತಜ್ಞ ಶೆಫಾಲಿ ಮುದ್ರಾ ಹೇಳಿದ್ದಾರೆ.

2) ಗೃಹ ಸಾಲ ಪ್ರಯೋಜನಗಳು: ಹೊಸ ತೆರಿಗೆ ವ್ಯವಸ್ಥೆಯಲ್ಲಿ ಗೃಹ ಸಾಲ ಪ್ರಯೋಜನಗಳು ಲಭ್ಯವಾಗುವಂತೆ ಮಾಡಬೇಕು. ಹಳೆ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ದರ ಕಡಿಮೆಯಾಗಿದ್ದರೂ, ಗೃಹ ಸಾಲ ಪ್ರಯೋಜನ ನೀಡಿವುದರಿಂದ ಹೊಸ ಮನೆ ಖರೀದಿದಾರರಿಗೆ ಹಲವು ಅನುಕೂಲವಾಗಲಿದೆ.

3) ಮನೆ ಮಾಲೀಕರಿಗೆ ಪ್ರೋತ್ಸಾಹ ಧನ: ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 24 (ಬಿ) ಪ್ರಕಾರ ವಸತಿ ಸಾಲಗಳ ಮೇಲಿನ ಹೆಚ್ಚಿನ ಬಡ್ಡಿ ಕಡಿತ ಮಿತಿಗಳ ಪ್ರಯೋಜನವನ್ನು ಮನೆ ಖರೀದಿದಾರರು ಪಡೆಯಬಹುದು. ಕನಿಷ್ಠ ಒಂದು ಮನೆಯ ಸಾಲಕ್ಕೆ ಪಾವತಿಸಿದ ಪೂರ್ಣ ಬಡ್ಡಿಗೆ ಅಥವಾ ಪ್ರಸ್ತುತ ಮಿತಿಯನ್ನು ಈಗ ಇರುವ 2 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿಗೆ ಏರಿಸಬೇಕು ಎಂದು ದಿವಾನ್ ಪಿಎನ್ ಛೋಪ್ರಾ ಆಂಡ್ ಕಂಪನಿಯ ಮ್ಯಾನೇಜಿಂಗ್ ಪಾರ್ಟ್ನರ್ ಧ್ರುವ ಛೋಪ್ರಾ ಹೇಳಿದ್ದಾರೆ.

4) ಹೆಚ್ಚಿನ ಎನ್‌ಪಿಎಸ್‌ ಕಡಿತ: ಹೆಚ್ಚುವರಿ ಎನ್‌ಪಿಎಸ್ ಕಡಿತದ ಮಿತಿಯನ್ನು ಈಗ ಇರುವಂತಹ 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು. ಅಲ್ಲದೆ, ವಿತ್‌ಡ್ರಾ ಮಾಡಿದ ಹಣ ಪೂರ್ಣವಾಗಿ ತೆರಿಗೆ ಮುಕ್ತವಾಗಿರಬೇಕು.

5) ಟೈರ್‌ 2 ನಗರಗಳಿಗೆ ಎಚ್‌ಆರ್‌ಎ: ಹೆಚ್ಚಿನ ವೆಚ್ಚದ ನಗರ ಕೇಂದ್ರಗಳಲ್ಲಿ ವಾಸಿಸುವ ತೆರಿಗೆದಾರರಿಗೆ ಸಮನಾದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು, 50 ಪ್ರತಿಶತದಷ್ಟು ಎಚ್‌ಆರ್‌ಎ ವಿನಾಯಿತಿ ವಿಭಾಗವನ್ನು ಹೈದರಾಬಾದ್, ಪುಣೆ ಮತ್ತು ಬೆಂಗಳೂರಿನಂತಹ ನಗರಗಳಿಗೆ ವಿಸ್ತರಿಸಬೇಕು ಎಂದು ಅಭಿಷೇಕ್‌ ಸೋನಿ ಶಿಫಾರಸು ಮಾಡುತ್ತಾರೆ.

6) ಸೆಕ್ಷನ್‌‌ 80ಡಿ ಸುಧಾರಣೆ: ಹೆಚ್ಚುತ್ತಿರುವ ಆರೋಗ್ಯದ ಕಳವಳಗಳನ್ನು ಗಮನಿಸಿದ ಶೆಫಾಲಿ ಮುಂಡ್ರಾ, ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆ ಕಡಿತ ಮಿತಿಗಳನ್ನು ವ್ಯಕ್ತಿಗಳಿಗೆ ಈಗ ಇರುವಂತಹ 25,000 ರೂಪಾಯಿಯಿಂದ 50,000 ರೂಪಾಯಿಗೆ ಹಾಗೂ ಹಿರಿಯ ನಾಗರಿಕರಿಗೆ 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಏರಿಸಬೇಕು ಎಂದು ಹೇಳಿದ್ದಾರೆ.

7) ಪಿಂಚಣಿ ನಿಧಿಯ ಬಡ್ಡಿ ಮೇಲೆ ತೆರಿಗೆ ಬೇಡ: ತೆರಿಗೆದಾರರ ಹಣದ ಹರಿವನ್ನು ಸುಧಾರಿಸುವುದಕ್ಕಾಗಿ ಅವರು ಹಿಂಪಡೆಯುವ ಹಣ 2.5 ಲಕ್ಷ ರೂಪಾಯಿಗೆ ಮೀರಿದ ಬಡ್ಡಿಯ ಮೇಲೆ ತೆರಿಗೆ ಕಡಿತ ಬೇಡ ಎಂದು ಅಭಿಷೇಕ್ ಸೋನಿ ಹೇಳಿದ್ದಾರೆ.

8) ಕ್ಯಾಪಿಟಲ್ ಗೇನ್ಸ್‌ ತೆರಿಗೆ: ಹೂಡಿಕೆಯ ಲಾಭದ ಮೇಲಿನ ತೆರಿಗೆಗಳ ಬಗ್ಗೆ 2024 ರ ಬಜೆಟ್‌ನಿಂದ ಕೆಲವು ಬದಲಾವಣೆಗಳಿಗೆ ಮತ್ತೊಂದು ನೋಟ ಬೇಕು ಎಂದು ಬಿಡಿಒ ಇಂಡಿಯಾದ ತೆರಿಗೆ ತಜ್ಞ ನಿರಂಜನ್ ಗೋವಿಂಡೇಕರ್ ಭಾವಿಸಿದ್ದಾರೆ. ಅಂತಾರಾಷ್ಟ್ರೀಯ ಮತ್ತು ಭಾರತೀಯ ಷೇರುಗಳಿಗೆ ಸಮನಾಗಿ ಚಿಕಿತ್ಸೆ ನೀಡುವುದು ಅಥವಾ ವಿವಿಧ ರೀತಿಯ ಚಿನ್ನದ ಹೂಡಿಕೆಗಳಿಗೆ ಸ್ಥಿರವಾಗಿ ತೆರಿಗೆ ವಿಧಿಸುವುದು ಮುಂತಾದ ಅದೇ ರೀತಿಯಲ್ಲಿ ಇದೇ ರೀತಿಯ ಹೂಡಿಕೆಗಳಿಗೆ ತೆರಿಗೆ ವಿಧಿಸಬೇಕು ಎಂದು ಅವರು ಸೂಚಿಸುತ್ತಾರೆ. ಷೇರುಗಳ ಲಾಭದ ಮೇಲಿನ ತೆರಿಗೆಗಳು ಹೆಚ್ಚಿರುವುದರಿಂದ (ಅಲ್ಪಾವಧಿ ಲಾಭಕ್ಕೆ 15 ಪ್ರತಿಶತದಿಂದ 20 ಪ್ರತಿಶತ ಮತ್ತು ದೀರ್ಘಾವಧಿಗೆ10 ಪ್ರತಿಶತದಿಂದ 12.5 ಪ್ರತಿಶತ), ಷೇರುಗಳನ್ನು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ವಿಧಿಸುವ ತೆರಿಗೆಯನ್ನು (ಎಸ್‌ಟಿಟಿ) ತೆಗೆದುಹಾಕಬೇಕು ಎಂದು ಅವರು ಹೇಳುತ್ತಾರೆ.

9) ಹಿರಿಯ ನಾಗರಿಕರಿಗೆ ಮೂಲ ವಿನಾಯಿತಿ ಹೆಚ್ಚಳ: ಹಿರಿಯ ನಾಗರಿಕರ ಖರ್ಚು ವೆಚ್ಚಗಳನ್ನು ಅವರ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಹಣಕಾಸಿನ ಒತ್ತಡದಿಂದ ಅವರನ್ನು ನಿರಾಳರನ್ನಾಗಿಸಲು ಮೂಲ ವಿನಾಯಿತಿ ಹೆಚ್ಚಿಸಬೇಕು ಎಂದು ಅಭಿಷೇಕ್ ಸೋನಿ ಹೇಳುತ್ತಾರೆ.

10) ಸೆಕ್ಷನ್ 80 ಸಿ ಮಿತಿ ಹೆಚ್ಚಳ ಮಾಡಬೇಕು: ಆದಾಯ ತೆರಿಗೆಯ ಸೆಕ್ಷನ್ 80 ಸಿ ಪ್ರಕಾರ ಸದ್ಯ 1.5 ಲಕ್ಷ ರೂಪಾಯಿ ವಿನಾಯಿತಿ ಇದೆ. ಈ ಮಿತಿ 2014 ರಿಂದ ಪರಿಷ್ಕರಣೆಯಾಗಿಲ್ಲ. ಇದು ತೆರಿಗೆ ಉಳಿತಾಯ ಎಫ್‌ಡಿಎಸ್, ಪಿಪಿಎಫ್, ಮುಂತಾದ ಹಣಕಾಸು ಸಾಧನಗಳಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಮುಖ್ಯ ಮತ್ತು ಹೆಚ್ಚು ಅಗತ್ಯ.

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ಬಯಸುವ 10 ಆದಾಯ ತೆರಿಗೆ ಬದಲಾವಣೆಗಳ ಪೈಕಿ ಎಷ್ಟು ಈಡೇರಲಿದೆ ಎಂಬ ಕುತೂಹಲ ಸದ್ಯ ಇರುವಂಥದ್ದು.

ಗಮನಿಸಿ: ಇದು ಪರಿಣತರ ಮತ್ತು ಜನರ ಅಭಿಪ್ರಾಯಗಳೇ ಹೊರತು, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್‌ತಾಣದ ಅಭಿಪ್ರಾಯವಲ್ಲ. ಮಾಹಿತಿ ದೃಷ್ಟಿಯಿಂದ ಇದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.