ಬಜೆಟ್ ಭಾಷಣದ ಅರಂಭದಲ್ಲಿಯೇ ವಿತ್ತ ಸಚಿವರು ನೆನಪಿಸಿಕೊಂಡ ತೆಲುಗು ಮಹಾಕವಿ ಗುರಜಾಡ ಅಪ್ಪಾರಾವ್ ಯಾರು? ಅವರ ಕೊಡುಗೆಯೇನು? ಇಲ್ಲಿದೆ ವಿವರ
Gurajada Apparao Profile: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಮಂಡನೆ ವೇಳೆ ತೆಲುಗು ಕವಿ, ಸಮಾಜ ಸುಧಾರಕ ವೆಂಕಟ ಅಪ್ಪಾರಾವ್ ಗುರಜಾಡ ಅವರ 'ದೇಶಮಂಟೆ ಮಟ್ಟಿ ಕಾದು ಮನುಷಲು' ಎಂಬ ಸಾಲನ್ನು ನೆನಪಿಸಿಕೊಂಡಿದ್ದಾರೆ. ಹಾಗಾದರೆ ಯಾರಿವರು ಅಪ್ಪಾರಾವ್ ಗುರಜಾಡ, ಅವರ ಹಿನ್ನೆಲೆಯೇನು ನೋಡಿ, ಸಾಹಿತ್ಯ ಕ್ಷೇತ್ರ, ಸಮಾಜಕ್ಕೆ ಅವರ ಕೊಡುಗೆ ಏನು?

ಗುರಜಾಡ ವೆಂಕಟ ಅಪ್ಪರಾವ್ ತೆಲುಗಿನ ಖ್ಯಾತಿ ಕವಿ, ನಾಟಕಕಾರ, ಸಮಾಜ ಸುಧಾರಕ. ತನ್ನ ಕೃತಿಗಳಿಂದ ತೆಲುಗು ರಂಗಭೂಮಿಯಲ್ಲಿ ಖ್ಯಾತಿ ಪಡೆದ ವ್ಯಕ್ತಿ ಇವರಾಗಿದ್ದಾರೆ. 1862, ಸೆಪ್ಟೆಂಬರ್ 21ರಂದು ಇವರು ಆಗಿನ ಮದ್ರಾಸ್ ಪ್ರಾಂತ್ಯದಲ್ಲಿ ಜನಿಸಿದ್ದರು. 1892 ರಲ್ಲಿ ಇವರು ಬರೆದ ‘ಕನ್ಯಾಸುಲ್ಕಂ‘ ಎಂಬ ನಾಟಕ ತೆಲುಗು ಭಾಷೆಯ ಶ್ರೇಷ್ಠ ನಾಟಕವೆಂದು ಪರಿಗಣಿಸಲ್ಪಟ್ಟಿದೆ.
ಭಾರತೀಯ ರಂಗಭೂಮಿಯ ಪ್ರವರ್ತಕರಲ್ಲಿ ಒಬ್ಬರಾದ ಅಪ್ಪಾರಾವ್ ಕವಿಶೇಖರ ಮತ್ತು ಅಭ್ಯುದಯ ಕವಿತಾ ಪಿತಾಮಹುಡು ಎಂಬ ಬಿರುದುಗಳನ್ನು ಹೊಂದಿದ್ದಾರೆ. ‘ದೇಸಮುನು ಪ್ರೇಮಿಂಚುಮನ್ನಾ‘ ಎಂಬ ಪ್ರಸಿದ್ಧ ತೆಲುಗು ದೇಶಭಕ್ತಿ ಗೀತೆಯನ್ನು ಬರೆದವರು ಇವರಾಗಿದ್ದಾರೆ.
1897ರಲ್ಲಿ ಕನ್ಯಾಸುಲ್ಕಂ ನಾಟಕ ಪ್ರಕಟಗೊಂಡಿತು. ಇದನ್ನು ಮಹಾರಾಜ ಆನಂದ ಗಜಪತಿಗೆ ಸಮರ್ಪಿಸಲಾಗಿದೆ. ಅಪ್ಪರಾವ್ ಅವರು ತಮ್ಮ ಸಹೋದರ ಶ್ಯಾಮಲ ರಾವ್ ಅವರೊಂದಿಗೆ ಸೇರಿ ಹಲವಾರು ಇಂಗ್ಲಿಷ್ ಕವಿತೆಗಳನ್ನು ಬರೆದ್ದಿದ್ದರು. ‘ಇಂಡಿಯನ್ ಲೀಷರ್ ಅವರ್‘ ಅವರ ಆತ್ಮಕಥೆ ಸಾರಂಗಧಾರ ಕೂಡ ಪ್ರಕಟಗೊಂಡಿದೆ. ಕಲ್ಕತ್ತಾ ಮೂಲದ ‘ರೀಸ್ ಮತ್ತು ರ್ಯೋಟ್‘ ನ ಸಂಪಾದಕ ಸಂಭು ಚಂದ್ರ ಮುಖರ್ಜಿ ಅದನ್ನು ತಮ್ಮ ನಿಯತಕಾಲಿಕದಲ್ಲಿ ಮರು ಪ್ರಕಟಿಸಿದ್ದರು. ‘ಇಂಡಿಯನ್ ಲೀಷರ್ ಅವರ್‘ನ ಸಂಪಾದಕ ಗುಂಡುಕುರ್ತಿ ವೆಂಕಟ ರಾಮಣಯ್ಯ, ಆ ಸಮಯದಲ್ಲಿ ಅಪ್ಪರಾವ್ ಅವರನ್ನು ಬಹಳ ಪ್ರೋತ್ಸಾಹಿಸಿದರು. 1891 ರಲ್ಲಿ ಅಪ್ಪಾರಾವ್ ವಿಜಯನಗರದ ಮಹಾರಾಜರಿಗೆ ಶಿಲಾಶಾಸನಕಾರ ಹುದ್ದೆಗೆ ನೇಮಕಗೊಂಡರು.
ಅಪ್ಪರಾವ್ ಬಾಲ್ಯದ ಜೀವನ, ಶಿಕ್ಷಣ
ಅಪ್ಪರಾವ್ ಅವರು ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿಯ ಬಳಿಯ ರಾಯವರಂ ಗ್ರಾಮದಲ್ಲಿ ತಮ್ಮ ಮಾವನ ಮನೆಯಲ್ಲಿ ನಿಯೋಗಿ ಬ್ರಾಹ್ಮಣ ಜಾತಿಯಲ್ಲಿ ಜನಿಸಿದರು. ವೆಂಕಟ ರಾಮ ದಾಸು ಮತ್ತು ಕೌಸಲ್ಯಮ್ಮ ಇವರ ತಂದೆ–ತಾಯಿ. ಇವರ ಜೀವನ ಬಹುಪಾಲನ್ನು ವಿಜಯನಗರ ಸುತ್ತಮುತ್ತ ಕಳಿಂಗ ರಾಜ್ಯದಲ್ಲಿ ಕಳೆದಿದ್ದಾರೆ. 1882ರಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿ, 1884 ರಲ್ಲಿ ಎಫ್.ಎ. ಪಡೆದರು. ಶೀಘ್ರದಲ್ಲೇ ಅಂದರೆ 1884ರಲ್ಲಿ ಎಂ.ಆರ್. ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ 25 ರೂ. ಸಂಬಳದೊಂದಿಗೆ ಕೆಲಸ ಆರಂಭಿಸಿದರು.
1888ರಲ್ಲಿ ವಿಶಾಖಪಟ್ಟಣದಲ್ಲಿ ಸ್ವಯಂಸೇವಾ ದಳದ ಸದಸ್ಯರಾದರು. ಅವರು ಎಫ್.ಎ. ಮತ್ತು ಬಿ.ಎ. ತರಗತಿಗಳಲ್ಲಿ ಇಂಗ್ಲಿಷ್ ವ್ಯಾಕರಣ, ಸಂಸ್ಕೃತ ಸಾಹಿತ್ಯ, ಅನುವಾದ, ಗ್ರೀಕ್ ಮತ್ತು ರೋಮನ್ ಇತಿಹಾಸಗಳು ಸೇರಿದಂತೆ ಹಲವಾರು ವಿಷಯಗಳನ್ನು ಕಲಿಸಿದರು.
1908 ರಲ್ಲಿ ಮದ್ರಾಸ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ
1911 ರಲ್ಲಿ, ಅವರನ್ನು ಮದ್ರಾಸ್ ವಿಶ್ವವಿದ್ಯಾಲಯವು ಅಧ್ಯಯನ ಮಂಡಳಿಗೆ ನೇಮಿಸಿತು. ಅದೇ ವರ್ಷ, ಗುರಜಾಡ ಮತ್ತು ಅವರ ಸ್ನೇಹಿತರು ಮಾತನಾಡುವ ಉಪಭಾಷೆಗಳ ಬಳಕೆಯನ್ನು ಉತ್ತೇಜಿಸಲು ಆಂಧ್ರ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಮುಂದಿನ ವರ್ಷ, ಅವರನ್ನು ಕಲ್ಕತ್ತಾದಲ್ಲಿ ನಡೆದ ಬಂಗೀಯ ಸಾಹಿತ್ಯ ಪರಿಷತ್ತಿನ (ಬಂಗಾಳ ಸಾಹಿತ್ಯ ಸಂಘ) ಸಭೆಗೆ ಹಾಜರಾಗಲು ಆಹ್ವಾನಿಸಲಾಯಿತು.
ಕನ್ಯಾಶುಲ್ಕಂ ನಾಟಕ ಬಗ್ಗೆ
ಕನ್ಯಾಶುಲ್ಕಂ 19ನೇ ಶತಮಾನದಲ್ಲಿ ಭಾರತದ ಆಂಧ್ರ ಪ್ರದೇಶದ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬಗಳಲ್ಲಿ ವಿಧವೆಯರ ಶೋಚನೀಯ ಸ್ಥಿತಿಯ ಕುರಿತಾಗಿದೆ. ಈ ನಾಟಕವು ಆ ಕಾಲಕ್ಕೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸುವ ಹೆಚ್ಚು ಚಿಂತನಶೀಲ ಸಾಮಾಜಿಕ ನಾಟಕವಾಗಿದೆ. ಗುರಜಾಡ ಅಪ್ಪಾರಾವ್ ಅವರು ಭಾರತೀಯ ಸಮಾಜದಲ್ಲಿನ ದ್ವಂದ್ವ ಮಾನದಂಡಗಳು, ಬೂಟಾಟಿಕೆ ಮತ್ತು ಸಾಮಾಜಿಕ ಅಸಮಾನತೆಗಳ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು.
ತೆಲುಗು ಸಾಹಿತ್ಯ ಇತಿಹಾಸದಲ್ಲಿ ಮೊದಲ ಬಾರಿಗೆ, ವೇಶ್ಯೆಯೊಬ್ಬಳಿಗೆ ತುಂಬಾ ಸಕಾರಾತ್ಮಕ ಚಿತ್ರಣವನ್ನು ನೀಡಿದ್ದು ಅಪ್ಪಾರಾವ್ ಅವರು. ಇವರು ನಾಟಕ ಹಾಗೂ ತಮ್ಮ ಕೃತಿಗಳ ಮೂಲಕ ಸಮಾಜ ಬದಲಾವಣೆಯನ್ನು ಪ್ರೇರೇಪಿಸುತ್ತಿದ್ದರು.
ಇವರು 50ಕ್ಕೂ ಹೆಚ್ಚು ಕವನ, ನಾಟಕ, ಕೃತಿಗಳನ್ನು ಬರೆಯುವ ಮೂಲಕ ತೆಲುಗು ಸಾಹಿತ್ಯ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
'ಚಂಡ ಶಾಸನಡು' ಸಿನಿಮಾದಲ್ಲಿಯೂ ಇದೆ ಈ ಹಾಡು

ವಿಭಾಗ