Union Budget 2025: ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಲಿದೆ ಭಾರತೀಯ ಅಂಚೆ, ಬಜೆಟ್‌ 2025ರಲ್ಲಿ ಮಹತ್ವದ ಘೋಷಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025: ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಲಿದೆ ಭಾರತೀಯ ಅಂಚೆ, ಬಜೆಟ್‌ 2025ರಲ್ಲಿ ಮಹತ್ವದ ಘೋಷಣೆ

Union Budget 2025: ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಲಿದೆ ಭಾರತೀಯ ಅಂಚೆ, ಬಜೆಟ್‌ 2025ರಲ್ಲಿ ಮಹತ್ವದ ಘೋಷಣೆ

Union Budget 2025: ಭಾರತದ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದಾದ ಭಾರತೀಯ ಅಂಚೆ (India Post)ಗೆ ಕಾಯಕಲ್ಪ ಕೊಡುವಂತಹ ಮಹತ್ವದ ಘೋಷಣೆಯನ್ನು ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಇಂಡಿಯಾ ಪೋಸ್ಟ್‌ ಅನ್ನು ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

Union Budget 2025: ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಲಿದೆ ಭಾರತೀಯ ಅಂಚೆ
Union Budget 2025: ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಲಿದೆ ಭಾರತೀಯ ಅಂಚೆ

Union Budget 2025: ಭಾರತದ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದಾದ ಭಾರತೀಯ ಅಂಚೆ (India Post)ಗೆ ಕಾಯಕಲ್ಪ ಕೊಡುವಂತಹ ಮಹತ್ವದ ಘೋಷಣೆಯನ್ನು ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ತನ್ನ ಬಜೆಟ್‌ ಭಾಷಣದಲ್ಲಿ ಇಂಡಿಯಾ ಪೋಸ್ಟ್‌ ಕುರಿತಾದ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಇಂಡಿಯಾ ಪೋಸ್ಟ್‌ (ಭಾರತೀಯ ಅಂಚೆ ಇಲಾಖೆ) ಅನ್ನು ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈಗಿನ ಮೊಬೈಲ್‌, ಎಸ್‌ಎಂಎಸ್‌, ಇಂಟರ್‌ನೆಟ್‌, ಸೋಷಿಯಲ್‌ ಮೀಡಿಯಾ ಯುಗದಲ್ಲಿ ಪತ್ರ ಬರೆಯುವವರು ಕಡಿಮೆಯಾಗುತ್ತಿದ್ದಾರೆ. ಇದರಿಂದ ಇಂಡಿಯಾ ಪೋಸ್ಟ್‌ನ ಕೆಲಸಗಳು ಕಡಿಮೆಯಾಗುತ್ತಿವೆ. ಇದೇ ಸಮಯದಲ್ಲಿ ಇಂಡಿಯಾ ಪೋಸ್ಟ್‌ ಅನ್ನು ಬೃಹತ್‌ ಲಾಜಿಸ್ಟಿಕ್ಸ್‌ ಸಂಸ್ಥೆಯಾಗಿಸುವ ಸೂಚನೆಯನ್ನು ಬಜೆಟ್‌ನಲ್ಲಿ ನೀಡಿರುವುದು ಆಶಾದಾಯಕವಾಗಿದೆ.

1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು 2.4 ಲಕ್ಷ ಡಾಕ್ ಸೇವಕರ ವಿಸ್ತಾರವಾದ ಜಾಲವನ್ನು ಬಳಸಿಕೊಂಡು ಇಂಡಿಯಾ ಪೋಸ್ಟ್‌ ಅನ್ನು ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿಸುವುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಗ್ರಾಮೀಣ ಆರ್ಥಿಕತೆಗೆ ಪೂರಕವಾಗಿರುವಂತೆ ಇಂಡಿಯಾ ಪೋಸ್ಟ್‌ ಅನ್ನು ಮರುಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹೊಸ ಉದ್ಯಮಿಗಳು, ಮಹಿಳೆಯರು, ಸ್ವಸಹಾಯ ಗುಂಪುಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ), ದೊಡ್ಡ ವ್ಯಾಪಾರ ಸಂಸ್ಥೆಗಳ ಹೆಚ್ಚುತ್ತಿರುವ ಬೇಡಿಕೆಗಳನ್ನು ಪರಿಹರಿಸುವ ಗುರಿಯನ್ನು ಇಂಡಿಯಾ ಪೋಸ್ಟ್‌ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಇಂಡಿಯಾ ಪೋಸ್ಟ್‌ ಅನ್ನು ಮರು ಸ್ಥಾಪಿಸುವುದು ಮಾತ್ರವಲ್ಲದೆ ಸಹಕಾರಿ ವಲಯವನ್ನು ಬಲಪಡಿಸುವ ಕ್ರಮಗಳನ್ನೂ ಘೋಷಿಸಿದ್ದಾರೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ)ಕ್ಕೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಘೋಷಿಸಿದ್ದಾರೆ. ಎನ್‌ಸಿಡಿಸಿ ಸಾಲ ನೀಡುವ ಕಾರ್ಯಾಚರಣೆಯನ್ನು ಹೆಚ್ಚಿಸಲು ಸರಕಾರ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ. ಈ ಕ್ರಮವು ಸಹಕಾರಿ ಪರಿಸರ ವ್ಯವಸ್ಥೆಯೊಳಗೆ ಹಣಕಾಸಿನ ನೆರವು ಹೆಚ್ಚಿಸುವ ನಿರೀಕ್ಷೆಯಿದೆ.

ಇಂಡಿಯಾ ಪೋಸ್ಟ್‌ನಂತಹ ಅಸ್ತಿತ್ವದಲ್ಲಿರುವ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸಲು ಈ ಕ್ರಮಗಳು ನೆರವಾಗಲಿವೆ. ಗ್ರಾಮೀಣ ಮೂಲಸೌಕರ್ಯ ಮತ್ತು ಆರ್ಥಿಕತೆಗೆ ಇದು ಪ್ರಯೋಜನಕಾರಿ. ಇದು ಅಂಚೆ ಇಲಾಖೆಗೆ ಪುನರ್‌ಜನ್ಮ ನೀಡುವ ಸೂಚನೆ ಇದೆ.

Whats_app_banner

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.