Indian Railways: ರೈಲ್ವೆ ವಲಯಕ್ಕೆ ಬಜೆಟ್‌ನಲ್ಲಿ ಅನುದಾನ ಭಾರೀ ಪ್ರಮಾಣದ ಏರಿಕೆ ಇಲ್ಲ, ಹಿಂದಿನ ವರ್ಷದಂತೆಯೇ 2.65 ಲಕ್ಷ ಕೋಟಿ ರೂ. ನಿಗದಿ
Indian Railways: ಕೇಂದ್ರ ಸರ್ಕಾರ ಮಂಡಿಸಿದ ಈ ಸಾಲಿನ ಆಯವ್ಯಯದಲ್ಲಿ ಭಾರತೀಯ ರೈಲ್ವೆಗೂ ಅನುದಾನ ದೊರೆತಿದೆ. ಹಿಂದಿನ ಆರ್ಥಿಕ ವರ್ಷಕ್ಕಿಂತ ಕೊಂಚ ಹೆಚ್ಚಳವನ್ನು ಮಾಡಲಾಗಿದೆ.

Indian Railways: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಭಾರೀ ಪ್ರಮಾಣದಲ್ಲಿ ಅನುದಾನ ಏರಿಕೆಯೇನೂ ಆಗಿಲ್ಲ. ಅದರೆ ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೆ ವಲಯಕ್ಕೆ ಮೀಸಲಿಟ್ಟಿದ್ದ 2.65 ಲಕ್ಷ ಕೋಟಿ ರೂ. ಮೊತ್ತವನ್ನೇ ನಿಗದಿಪಡಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆ ಪ್ರಮಾಣ ಅತ್ಯಲ್ಪ. ಹಿಂದಿನ ವರ್ಷದಲ್ಲಿ ಘೋಷಿಸಲಾಗಿದ್ದ ಕೆಲವು ರೈಲ್ವೆ ಯೋಜನೆಗಳಿಗೆ ಈ ಬಾರಿಯೂ ಅನುದಾನವನ್ನು ಮೀಸಲಿಡಲಾಗಿದೆ. ವಂದೇ ಭಾರತ್ ಸಹಿತ ಹಲವು ರೈಲುಗಳ ಸೇವೆ ವಿಸ್ತರಣೆ, ಪ್ರಮುಖ ರೈಲು ಮಾರ್ಗಗಳ ಜಾರಿಗೆ ಹಿಂದಿನಂತೆಯೇ ಒತ್ತು ನೀಡಲಾಗಿದೆ. ರೈಲ್ವೆ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್‌ನಲ್ಲೂ ನೀಡಲಾಗಿದೆ.
ರೈಲ್ವೆ ಇಲಾಖೆಗೆ ಕಳೆದ ಸಾಲಿನಲ್ಲಿ ರೂ2.62 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಜೆಟ್‌ನಲ್ಲಿ ರೂ. 2.65 ಲಕ್ಷ ಕೋಟಿ ನೀಡಲಾಗಿದೆ. ಈ ಪೈಕಿ ಪ್ರಯಾಣಿಕರ ಸವಲತ್ತುಗಳಿಗಾಗಿ ರೂ. 12 ಸಾವಿರ ಕೋಟಿ, ಸುರಕ್ಷತೆ ವ್ಯವಸ್ಥೆಗಳಿಗಾಗಿ ರೂ.1,16,500 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ಇದಕ್ಕಾಗಿ ರೂ.1,14,000 ಕೋಟಿ ನೀಡಲಾಗಿತ್ತು. ಈ ಬಾರಿ ಬಜೆಟ್ 3 ಲಕ್ಷ ಕೋಟಿ ರೂ. ಗೆ ಏರಿಕೆಯಾಗಬಹುದು ಎನ್ನುವ ನಿರೀಕ್ಷೆ ಇತ್ತಾದರೂ ಭಾರೀ ಏರಿಕೆಯೇನೂ ಕಂಡಿಲ್ಲ.
ರೈಲ್ವೆ ಸುರಕ್ಷತೆಗೆ ಕವಚ್ 4ಓ ಯೋಜನೆ ಜಾರಿಗೊಳಿಸಿದೆ. ಈ ಬಗ್ಗೆ ಪ್ರಯೋಗ ನಡೆಸಲಾಗಿದೆ. ಕವಚ್ ದೇಶಿಯ ತಂತ್ರಜ್ಷಾನ ಆಧಾರಿತವಾಗಿದೆ ಮತ್ತು ಪರೀಕ್ಷೆ ಯಶಸ್ವಿಯಾಗಿದೆ. ಸುಮಾರು 10,000 ರೇಲ್ವೆ ಇಂಜಿನಗಳಿಗೆ ಕವಚ್ ಅಳವಡಿಸಲಾಗುವುದು. ಈ ಕಾರ್ಯ ಪ್ರಗತಿಯಲ್ಲಿದೆ. ದೆಹಲಿ - ಮುಂಬೈ ಮತ್ತು ದೆಹಲಿ-ಕೋಲ್ಕತ್ತಾ ಮಾರ್ಗದಲ್ಲಿ ಡಿಸೆಂಬರ್ 2025 ರಲ್ಲಿ ಕವಚ್ ಅಳವಡಿಕೆ ಮುಗಿಯಲಿದೆ ಎನ್ನುವ ನಿರೀಕ್ಷೆಯನ್ನು ಹೊಂದಲಾಗಿದೆ.
2025 ಭಾರತೀಯ ರೇಲ್ವೆಯ ವಿದ್ಯುದೀಕರಣ ಶತಮಾನೋತ್ಸವ ವರ್ಷವೆಂದು ಬಣ್ಣಿಸಿ, ಶೇ.100 ಎಲೆಕ್ಟ್ರಿಕ್ ಮುಗಿಸಲಾಗುವುದು. 2025-26ರಲ್ಲಿ ನಾನ್ ಎಸಿ ಅಮೃತ್ ಭಾರತ್ ರೈಲು ಪ್ರಾರಂಭಿಸಲಾಗುವುದು, ಪ್ರಾರಂಭದಲ್ಲಿ 100 ಅಮೃತ್ ಭಾರತ್ ರೈಲ್ವೆ ತಯಾರಿಸಲಾಗುತ್ತಿದೆ. ಅಹ್ಲಾದಕರ ಪ್ರಯಾಣ ವ್ಯವಸ್ಥೆ ಅಮೃತ್ ಭಾರತ್ ರೈಲ್ವೆಯಲ್ಲಿ ದೊರಕಲಿದೆ. ಮುಂದಿನ 4 ವರ್ಷಗಳಲ್ಲಿ 1300ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಅಭವೃದ್ದಿ ಪಡಿಸಲಾಗುವುದು. ವಂದೇ ಭಾರತ್ ಸ್ಲೀಪರ್ ಕೋಚ್ ಪರೀಕಾರ್ಥವಾಗಿ ಚಲನೆಯಲ್ಲಿದೆ. ವಂದೇ ಭಾರತ್ ಸ್ಲೀಪರ್ ಟ್ರೇನ್ 2025-26 ಮತ್ತು 2026-27ರಲ್ಲಿ ಸಿದ್ದಪಡಿಸಿ ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ. ಇವು ದೂರದ ಪ್ರಯಾಣಕ್ಕೆ ಅನುಕೂಲವಾಗಲಿದೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಬುಲೆಟ್ ರೈಲು ಯೋಜನೆ ಜಾರಿ, ಮೆಟ್ರೋ ರೈಲುಗಳ ಉನ್ನತೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಈ ಬಾರಿ ಸಲ್ಲಿಸಲಾಗಿತ್ತು. ಅಲ್ಲದೇ ಉತ್ತರ ಭಾರತದ ಪ್ರಮುಖ ರಾಜ್ಯಗಳು, ದಕ್ಷಿಣ ಕರ್ನಾಟಕದ ರಾಜ್ಯಗಳಿಂದಲೂ ರೈಲ್ವೆ ಯೋಜನೆಗಳ ಉನ್ನತೀಕರಣಕ್ಕೆ ಹೆಚ್ಚಿನ ಅನುದಾನದ ಬೇಡಿಕೆ ಇತ್ತು. ಇದರೊಟ್ಟಿಗೆ ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರದಿಂದಲೂ ರೈಲ್ವೆ ವಲಯದ ಪ್ರಗತಿಗೆ ಕೋರಿಕೆ ಸಲ್ಲಿಸಲಾಗಿತ್ತು. ಬಜೆಟ್ ಹಂಚಿಕೆಯಾಗಿದ್ದು. ಹಲವಾರು ಯೋಜನೆಗಳ ಪಟ್ಟಿಯಂತೆ ಅನುದಾನವನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತದೆ ಎನ್ನುವುದು ರೈಲ್ವೆ ಅಧಿಕಾರಿಗಳ ವಿವರಣೆ.
ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಶನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭಾರತೀಯ ಮಧ್ಯಮ ವರ್ಗದವರ ಅಶೋತ್ತರಗಳಿಗೆ ಸ್ಪಂದಿಸುವ ಬಜೆಟ್, ಭಾರತೀಯ ಆರ್ಥಿಕತೆಗೆ ಆದ್ಯತೆ ನೀಡಿದ ಬಜೆಟ್. ಪ್ರಧಾನ ಮಂತ್ರಿಗಳ ವಿಕಸಿತ್ ಭಾರತ್ ಕನಸನ್ನು ಸಾಕಾರ ಮಾಡುವ ಬಜೆಟ್. ಕರ್ನಾಟಕವೂ ಸೇರಿ ಹಲವಾರು ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ ಎನ್ನುವುದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವವಿ. ಸೋಮಣ್ಣಅವರ ಅಭಿಪ್ರಾಯ.
