ಕೇಂದ್ರ ಬಜೆಟ್ ಮುಖ್ಯಾಂಶಗಳು: ಜಲ ಜೀವನ್ ಯೋಜನೆ ವಿಸ್ತರಣೆ, ಪ್ರವಾಸೋದ್ಯಮಕ್ಕೆ ಒತ್ತು, ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ
Union Budget 2025: 2025–26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಇದು ಅವರು ಮಂಡಿಸುತ್ತಿರುವ 8ನೇ ಬಜೆಟ್ ಆಗಿದ್ದು, ಇಂದಿನ ಬಜೆಟ್‌ನ ಮುಖ್ಯಾಂಶಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಲಿದೆ. ಕುಡಿಯುವ ನೀರು ಸೇರಿ ಯಾವೆಲ್ಲಾ ಕ್ಷೇತ್ರಗಳಿಗೆ ಪ್ರಾಮುಖ್ಯ ನೀಡಲಾಗಿದೆ ನೋಡಿ. (ವರದಿ: ಎಚ್. ಮಾರುತಿ)

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರುವರಿ 1) ಸಂಸತ್ತಿನಲ್ಲಿ 8ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯವಾಗಿ 10 ಆದ್ಯತಾ ವಲಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂದಿನ ಬಜೆಟ್‌ನಲ್ಲಿ ಕುಡಿಯುವ ನೀರು, ಪ್ರವಾಸಿ ತಾಣಗಳಿಗೆ ಉತ್ತೇಜನ, ನೈಮರ್ಲ್ಯಕ್ಕೆ ಒತ್ತು ನೀಡಿರುವುದು ಸೇರಿ ಯಾವೆಲ್ಲಾ ಪ್ರಮುಖ ವಿಚಾರಗಳ ಮೇಲೆ ಗಮನ ನೀಡಲಾಗಿದೆ ನೋಡಿ.
ಜಲ ಜೀವನ್ ಯೋಜನೆ ವಿಸ್ತರಣೆ
ಜಲ ಜೀವನ್ ಯೋಜನೆಯನ್ನು 2028ರವರೆಗೆ ವಿಸ್ತರಣೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಶೇ 100ರಷ್ಟು ಕುಡಿಯುವ ನೀರು ಪೂರೈಕೆ ಗುರಿ ಹೊಂದಲಾಗಿದೆ. ಶೇ 80ರಷ್ಟು ಗ್ರಾಮೀಣ ಭಾಗ ಹೊಂದಿರುವ ಭಾರತ, ಗ್ರಾಮೀಣ ಭಾಗದಲ್ಲಿ ನಲ್ಲಿ ನೀರು ಯೋಜನೆ.
ನಗರಾಭಿವೃದ್ಧಿಗೆ 1ಲಕ್ಷ ಕೋಟಿ ರೂ ವಿಶೇಷ ಅನುದಾನ. ವಿಕಸಿತ ಭಾರತಕ್ಕೆ ನ್ಯೂಕ್ಲಿಯರ್ ಎನರ್ಜಿ ಮಿಷನ್ ಯೋಜನೆ ಅನುಷ್ಠಾನ. 2047ರ ವೇಳೆಗೆ ಅಣು ವಿದ್ಯುತ್ ಉತ್ಪಾದನೆ ಹೆಚ್ಚಳ. ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ ಹೆಚ್ಚಳ. 2 ವರ್ಷಗಳಲ್ಲಿ 100 ಗಿಗಾ ವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ. ಸಣ್ಣ ರಿಯಾಕ್ಟರ್ ಸಂಶೋಧನೆಗೆ 20 ಸಾವಿರ ಕೋಟಿ ಅನುದಾನ.
ರಾಜ್ಯ ಸರ್ಕಾರದ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ. ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೀಸಲು. ರಾಜ್ಯಗಳ ಮೂಲಭೂತ ಸೌಕರ್ಯಕ್ಕೆ ಪ್ರತಿ ರಾಜ್ಯಕ್ಕೆ 1.50 ಲಕ್ಷ ಕೋಟಿ ಅನುದಾನ. ಹಡಗುಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ. 2033ಕ್ಕೆ ಮೇಡ್ ಇನ್ ಇಂಡಿಯಾ ರಿಯಾಕ್ಟರ್ ಹೊಂದುವ ಗುರಿ.
ಉಡಾನ್ ವಿಮಾನಯಾನ ಸೌಲಭ್ಯ
220 ಹೊಸ ಊರುಗಳಿಗೆ ಉಡಾನ್ ವಿಮಾನಯಾನ ಸೌಲಭ್ಯ. 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರನ್ನು ಹೆಚ್ಚಿಸುವ ಗುರಿ. ಉಡಾನ್ ಯೋಜನೆಯಿಂದ 1.5 ಕೋಟಿ ಮಧ್ಯಮ ವರ್ಗಗಳಿಗೆ ಅನುಕೂಲ. ಬಿಹಾರದಲ್ಲಿ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ನಿರ್ಮಾಣ.
ಬಿಹಾರದ ಪಶ್ಚಿಮ ಕೋಸಿ ಯೋಜನೆಗೆ ಅನುದಾನ. ಗಣಿ ವಲಯದಲ್ಲಿ ಹಲವು ಬದಲಾವಣೆ. ಹಡಗು ನಿರ್ಮಾಣ ಘಟಕಗಳ ಅಭಿವೃದ್ದಿ. ಮಿಥಿಲಾಂಚದಲ್ಲಿ ಕೋಶಿ ಕಾಲುವೆ ನಿರ್ಮಾಣ ಯೋಜನೆ ಘೋಷಣೆ. 50 ಪ್ರವಾಸಿ ಕೇಂದ್ರಗಳ ಅಭಿವೃದ್ದಿಗೆ ಯೋಜನೆ. ಖಾಸಗಿ ವಲಯಕ್ಕೆ ಪಿಎಂ ಗತಿಶಕ್ತಿ ಯೋಜನೆ.
ಭಾರತ್ ಟ್ರೇಡ್ ನೆಟ್ವರ್ಕ್ ಮೂಲಕ ಹಣಕಾಸು ಕ್ಷೇತ್ರದಲ್ಲಿ ನೆರವು. ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶಿ ಉತ್ಪನ್ನಗಳ ಮಾರಾಟದಲ್ಲಿ ತೊಡಗುವವರಿಗೆ ಈ ಯೋಜನೆ ಮೂಲಕ ಸಹಕಾರ.
ಜೀನ್ ಬ್ಯಾಂಕ್ ಸ್ಥಾಪನೆಗೆ ಒತ್ತು. ಆ ಮೂಲಕ ಅನುವಂಶೀಯ ಕಾಯಿಲೆಗಳ ಸಂಶೋಧನೆ ಸಾಧ್ಯ. ಐಐಟಿ, ಐಐಎಸ್ಸಿಯಲ್ಲಿ ಹೆಚ್ಚುವರಿ ಸಂಶೋಧನೆಗೆ ಅನುದಾನ. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ.
ಪ್ರವಾಸೋದ್ಯಮಕ್ಕೆ ಒತ್ತು
ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 50 ಪ್ರವಾಸಿ ತಾಣಗಳ ಉತ್ತೇಜನ. ಹೋಟೆಲ್ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಕ್ಕೆ ಒತ್ತು. ಮುದ್ರಾ ಯೋಜನೆ ಮೂಲಕವೂ ಪ್ರವಾಸಿ ತಾಣಗಳ ಅಭಿವೃದ್ಧಿ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲು. ಕೆವೈಸಿ ನಿಯಮಗಳ ಸರಳೀಕರಣ. ಪೋಸ್ಟ್ ಬ್ಯಾಂಕ್ ಸೇವೆಗಳ ವಿಸ್ತರಣೆ. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ. ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ. ಸ್ವಸಹಾಯ ಸಂಘಗಳಿಗೆ ಗ್ರಾಮೀಣ ಕ್ರೆಡಿಟ್ ಕಾರ್ಡ್. ವಿಮೆ ವಲಯದಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶ. ವಿಮೆಯಲ್ಲಿ ಎಫ್‌ಡಿಐ ಶೇ 74ರಿಂದ ಶೇ 100ಕ್ಕೆ ಏರಿಕೆ.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲು. 20,000 ಕೋಟಿ ರೂ.ನಲ್ಲಿ ಪರಮಾಣು ಶಕ್ತಿ ಮಿಷನ್ ರಚನೆ. ಗ್ರಾಮೀಣ ಭಾಗದಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್. ಆಹಾರ ಭದ್ರತೆ ಅನುದಾನದಲ್ಲೂ ಹೆಚ್ಚಳ. ಪಿಂಚಣಿ ವಾಪಸಾತಿ ಮತ್ತಷ್ಟು ಸರಳ. ಹಣಕಾಸೇತರ ಹೂಡಿಕೆಗಳ ಸರಳೀಕರಣಕ್ಕೆ ಉನ್ನತ ಮಟ್ಟದ ಸಮೀತಿ ನೇಮಕ. ದೇಶದ ಬೆಳವಣಿಗೆಗಾಗಿ ರಫ್ತನ್ನು ಉತ್ತೇಜಿಸಲು ರಫ್ತು ಉತ್ತೇಜನ ಮಿಷನ್ ಸ್ಥಾಪನೆ.
100ಕ್ಕೂ ಹೆಚ್ಚು ಆರ್ಥಿಕ ಅಪರಾಧಗಳ ನಿರಪರಾಧಗಳ ನಿರಪರಾಧಿಕರಣ. ಸ್ವಸಹಾಯ ಸಂಘಗಳಿಗೆ ಗ್ರಾಮೀಣ ಕ್ರೆಡಿಟ್ ಸ್ಕೋರ್ ಮಾರ್ಗಸೂಚಿ. ಲಘು ಮತ್ತು ದೀರ್ಘಕಾಲಿಕ ನಿಯಂತ್ರಣ ನೀತಿಗಳ ಸುಧಾರಣೆ. ಶೀಘ್ರವೇ ಜನ್ ವಿಶ್ವಾಸ್ 2.0 ಬಿಲ್. ಖಾಸಗಿ ವಲಯದೊಂದಿಗೆ ಸಹಕಾರ; ಚರ್ಮ ಕೈಗಾರಿಕೆ ಯೋಜನೆಯಡಿ 22 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿ
2047 ರ ವೇಳೆಗೆ 100 GW ಪರಮಾಣು ಶಕ್ತಿ ಸಾಮರ್ಥ್ಯವನ್ನು ಹೊಂದುವ ಗುರಿ; ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಉತ್ತೇಜನೆ; ಸುಧಾರಣೆಗಳನ್ನು ಮುಂದುವರಿಸಲು ರಾಜ್ಯಗಳಿಗೆ GSDP ಯ 0.5 ಪ್ರತಿ ಶತದಷ್ಟು ಸಾಲಕ್ಕೆ ಅನುಮತಿ; ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಸಾಲ ನೀಡಲು ತೀರ್ಮಾನ; ಸರ್ಕಾರವು 120 ಗಮ್ಯಸ್ಥಾನಗಳನ್ನು ಸಂಪರ್ಕಿಸಲು ಪರಿಷ್ಕೃತ ಉಡಾನ್ ಯೋಜನೆ ಜಾರಿ, ಇದು ಮುಂದಿನ 4 ಕೋಟಿ ಹೆಚ್ಚುವರಿ ಪ್ರಯಾಣಿಕರಿಗೆ ಸಹಾಯ.
