Union Budget 2025: ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಗಮನಿಸಬೇಕಾದ ವಿತ್ತೀಯ ಕೊರತೆ, ಸಾಲ ಪ್ರಮಾಣ ಇತ್ಯಾದಿಗಳ ಅಂಕಿ ನೋಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025: ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಗಮನಿಸಬೇಕಾದ ವಿತ್ತೀಯ ಕೊರತೆ, ಸಾಲ ಪ್ರಮಾಣ ಇತ್ಯಾದಿಗಳ ಅಂಕಿ ನೋಟ

Union Budget 2025: ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಗಮನಿಸಬೇಕಾದ ವಿತ್ತೀಯ ಕೊರತೆ, ಸಾಲ ಪ್ರಮಾಣ ಇತ್ಯಾದಿಗಳ ಅಂಕಿ ನೋಟ

Union Budget 2025: ಕೇಂದ್ರ ಬಜೆಟ್ 2025-26ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಜನವರಿ 31) ಸಂಸತ್ತಿನ ಬಜೆಟ್ ಅಧಿವೇಶನ ಶುರುವಾಗುತ್ತಿದೆ. ನಾಳೆ ಬಜೆಟ್ ಮಂಡನೆಯಾಗಲಿದೆ. ಈ ಹೊತ್ತಿನಲ್ಲಿ ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಗಮನಿಸಬೇಕಾದ ವಿತ್ತೀಯ ಕೊರತೆ, ಸಾಲ ಪ್ರಮಾಣ ಇತ್ಯಾದಿಗಳ ಅಂಕಿ ನೋಟಗಳ ಅವಲೋಕನ ಇಲ್ಲಿದೆ.

ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಗಮನಿಸಬೇಕಾದ ವಿತ್ತೀಯ ಕೊರತೆ, ಸಾಲ ಪ್ರಮಾಣ ಇತ್ಯಾದಿಗಳ ಅಂಕಿ ನೋಟ ಗಮನ ಸೆಳೆಯುವಂಥದ್ದು. (ಕಡತ ಚಿತ್ರ)
ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಗಮನಿಸಬೇಕಾದ ವಿತ್ತೀಯ ಕೊರತೆ, ಸಾಲ ಪ್ರಮಾಣ ಇತ್ಯಾದಿಗಳ ಅಂಕಿ ನೋಟ ಗಮನ ಸೆಳೆಯುವಂಥದ್ದು. (ಕಡತ ಚಿತ್ರ)

Union Budget 2025: ಮಧ್ಯಮ ವರ್ಗದ ಜನರು ಬಹಳ ಕಾತರರಿಂದ ತೆರಿಗೆ ವಿನಾಯಿತಿಗೆ ಕಾಯುತ್ತಿರುವಂತೆಯೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಸತತ 8ನೇ ಸಲ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್, ತನ್ನದೇ ಬಜೆಟ್ ಮಂಡನೆಯ ದಾಖಲೆ ಮುರಿಯಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಯನ್ನು ಲೆದರ್ ಬ್ರೀಫ್‌ಕೇಸ್‌ನಲ್ಲಿ ಸಂಸತ್‌ಗೆ ತರುತ್ತಿದ್ದ ಪರಿಪಾಠಕ್ಕೆ ಇತಿಶ್ರೀ ಹೇಳಿದರು. ದಶಕಗಳ ಹಿಂದೆ ಬಜೆಟ್ ದಾಖಲೆಗಳನ್ನು ಸಾಗಿಸುತ್ತಿದ್ದ ಬಹಿಖಾತಾ ಬಳಸಲು ಶುರುಮಾಡಿದೆ. ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿದ ಬಹುಖಾತಾ ಆಕರ್ಷಕವಾಗಿ ಗಮನಸೆಳೆದಿತ್ತು. ಮುಂದೆ 2021ರಲ್ಲಿ ಮೊದಲ ಬಾರಿಗೆ ಪೇಪರ್‌ಲೆಸ್ ಬಜೆಟ್ ಮಂಡಿಸಿದ ಕೀರ್ತಿಯೂ ಅವರದ್ದೇ. ಕಳೆದ ಮೂರು ವರ್ಷಗಳಿಂದ ಪೇಪರ್‌ಲೆಸ್ ಬಜೆಟ್ ಮಂಡನೆಯಾಗುತ್ತಿದೆ. ಕೇಂದ್ರ ಬಜೆಟ್ ಎಂಬುದು ಕೇಂದ್ರ ಸರ್ಕಾರ ಮಂಡಿಸುವ ಮುಂಬರುವ ವರ್ಷದ ಹಣಕಾಸು ಹೇಳಿಕೆಯಾಗಿರುವ ಕಾರಣ ಗಮನಿಸಬೇಕಾದ ವಿತ್ತೀಯ ಕೊರತೆ, ಬಂಡವಾಳ ವೆಚ್ಚ, ಸಾಲ ಪ್ರಮಾಣ ಇತ್ಯಾದಿ ಅಂಕಿನೋಟಗಳನ್ನು ಗಮನಿಸಬೇಕು.

ಕೇಂದ್ರ ಬಜೆಟ್ 2025: ವಿತ್ತೀಯ ಕೊರತೆ, ಸಾಲ ಪ್ರಮಾಣ ಇತ್ಯಾದಿಗಳ ಅಂಕಿ ನೋಟ

1) ವಿತ್ತೀಯ ಕೊರತೆ: ಪ್ರಸಕ್ತ ಹಣಕಾಸು (ಏಪ್ರಿಲ್ 2024 ರಿಂದ ಮಾರ್ಚ್ 2025 ಅಥವಾ ಎಫ್‌ವೈ'25) ಗಾಗಿ ಸರ್ಕಾರದ ಖರ್ಚು ಮತ್ತು ಆದಾಯದ ನಡುವಿನ ವ್ಯತ್ಯಾಸದ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇಕಡಾ 4.9 ಎಂದು ಅಂದಾಜಿಸಲಾಗಿದೆ. ಹಣಕಾಸಿನ ಬಲವರ್ಧನೆ ಮಾರ್ಗಸೂಚಿಯ ಪ್ರಕಾರ, ಕೊರತೆಯನ್ನು ಹಣಕಾಸು ವರ್ಷ 2025-26 ರಲ್ಲಿ ಜಿಡಿಪಿಯ ಶೇಕಡಾ 4.5 ಕ್ಕೆ ಇಳಿಸಬೇಕು. ಹಣಕಾಸು ವರ್ಷ 2025-26 ಬಜೆಟ್‌ನಲ್ಲಿ ಕೊರತೆ ಸಂಖ್ಯೆಯ ಕಡೆಗೆ ಮಾರುಕಟ್ಟೆಗಳ ಗಮನ ಹೆಚ್ಚಾಗಿರುತ್ತದೆ.

2) ಬಂಡವಾಳ ವೆಚ್ಚ (ಕ್ಯಾಪಿಟಲ್ ಎಕ್ಸ್‌ಪೆಂಡಿಚರ್‌): ಪ್ರಸಕ್ತ ಹಣಕಾಸು ವರ್ಷಕ್ಕೆ ಸರ್ಕಾರದ ಯೋಜಿತ ಬಂಡವಾಳ ವೆಚ್ಚ 11.1 ಲಕ್ಷ ಕೋಟಿ ರೂಪಾಯಿ. ಆದಾಗ್ಯೂ, ಲೋಕಸಭೆ ಚುನಾವಣೇ ಕಾರಣ ಮೊದಲ ನಾಲ್ಕು ತಿಂಗಳು ಸರ್ಕಾರವು ಬಂಡವಾಳ ವೆಚ್ಚವನ್ನು ನಿಧಾನಗೊಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಇದು ಇಳಿಕೆಯಾಗುಬಹುದು ಎಂಬ ನಿರೀಕ್ಷೆ ಇದೆ. ಮುಂದಿನ ಹಣಕಾಸು ವರ್ಷ (2025-26) ಬಂಡವಾಳ ವೆಚ್ಚದ ಪ್ರಮಾಣ ಇದೇ ರೀತಿ ಮುಂದುವರಿಯ ಸಾಧ್ಯತೆ ಇದೆ.

3) ಸಾಲದ ಮಾರ್ಗಸೂಚಿ: ಹಣಕಾಸು ಮಂತ್ರಿ, ತನ್ನ 2024-25ರ ಬಜೆಟ್ ಭಾಷಣದಲ್ಲಿ, 2026-27ರ ನಂತರ ಹಣಕಾಸಿನ ನೀತಿಯ ಪ್ರಯತ್ನವು ಹಣಕಾಸಿನ ಕೊರತೆಯನ್ನು ಕೇಂದ್ರ ಸರ್ಕಾರದ ಸಾಲದ ಹೊರೆ ಇಳಿಕೆಯ ಹಾದಿಯಲ್ಲಿದೆ ಎಂದು ಹೇಳಿದ್ದು, ಶೇಕಡಾವಾರು ಜಿಡಿಪಿಗೆ ಹೊಂದುವಂತೆ ಹಣಕಾಸಿನ ಕೊರತೆಯನ್ನು ಕಾಪಾಡಿಕೊಳ್ಳುವುದರ ಕಡೆಗೆ ಗಮನಹರಿಸಲಾಗುವುದು ಎಂದಿದ್ದರು. ಕೇಂದ್ರ ಸರ್ಕಾರದ ಸಾಲದಿಂದ ಜಿಡಿಪಿ 60 ಪ್ರತಿಶತದಷ್ಟು ಗುರಿಯತ್ತ ಸಾಗುವುದನ್ನು ನೋಡಿದಾಗ ಮಾರುಕಟ್ಟೆಗಳು ಹಣಕಾಸು ವರ್ಷ 2026-27ರಲ್ಲಿ ಸಾಲ ಬಲವರ್ಧನೆ ಮಾರ್ಗಸೂಚಿಯನ್ನು ಸೂಕ್ಷ್ಮವಾಗಿ ಬಿಂಬಿಸುತ್ತವೆ. ಸರ್ಕಾರದ ಸಾಮಾನ್ಯ ಸಾಲದಿಂದ ಜಿಡಿಪಿ ಅನುಪಾತವು 2024 ರಲ್ಲಿ ಶೇಕಡಾ 85 ರಷ್ಟಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಸಾಲವು ಶೇಕಡಾ 57 ರಷ್ಟಿದೆ.

4) ಸಾಲ ಪ್ರಮಾಣ: ಕೇಂದ್ರ ಸರ್ಕಾರವು ಮಂಡಿಸಿದ 2024-25ರ ಕೇಂದ್ರ ಬಜೆಟ್‌ನ ಒಟ್ಟು ಸಾಲವು 14.01 ಲಕ್ಷ ಕೋಟಿ ರೂಪಾಯಿ ಇತ್ತು. ತನ್ನ ವಿತ್ತೀಯ ಕೊರತೆಯನ್ನು ನಿರ್ವಹಿಸುವುದಕ್ಕಾಗಿ ಕೇಂದ್ರ ಸರ್ಕಾರವು ಮಾರುಕಟ್ಟೆಯಿಂದ ಸಾಲ ಪಡೆದು ಅಗತ್ಯಗಳನ್ನು ಪೂರೈಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಡಿವಿಡೆಂಡ್ 2025ರಲ್ಲಿ 2.11 ಲಕ್ಷ ಕೋಟಿ ಇದ್ದದ್ದು, ಹಣಕಾಸು ವರ್ಷ 2026ಕ್ಕೆ ಕಡಿಮೆ ಇರುವ ಕಾರಣ ಈ ಸಾಲದ ಪ್ರಮಾಣದ ಮೇಲೆ ಮಾರುಕಟ್ಟೆ ಗಮನ ನೆಟ್ಟಿದೆ.

5) ತೆರಿಗೆ ಆದಾಯ: 2024-25ರ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿರುವ ಒಟ್ಟು ತೆರಿಗೆ ಆದಾಯ 38.40 ಲಕ್ಷ ಕೋಟಿ ರೂ. ಇದು ನೇರ ತೆರಿಗೆಗಳಿಂದ (ವೈಯಕ್ತಿಕ ಆದಾಯ ತೆರಿಗೆ ಕಾರ್ಪೊರೇಟ್ ತೆರಿಗೆ) ಬರುತ್ತದೆ ಎಂದು ಅಂದಾಜಿಸಲಾದ 22.07 ಲಕ್ಷ ಕೋಟಿ ರೂ. ಮತ್ತು ಪರೋಕ್ಷ ತೆರಿಗೆಗಳಿಂದ 16.33 ಲಕ್ಷ ಕೋಟಿ ರೂಪಾಯಿಯನ್ನು ಒಳಗೊಂಡಿದೆ.

6) ಜಿಎಸ್‌ಟಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 2024-25ರಲ್ಲಿ ಶೇಕಡ 11 ಹೆಚ್ಚಳದೊಂದಿಗೆ 10.62 ಲಕ್ಷ ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಳೆದ ಮೂರು ತಿಂಗಳಲ್ಲಿ ಆದಾಯದ ಬೆಳವಣಿಗೆ ನಿಧಾನವಾಗಿದ್ದರಿಂದ ಹಣಕಾಸು ವರ್ಷ 2025-26ರ ಜಿಎಸ್‌ಟಿ ಆದಾಯ ಪ್ರಕ್ಷೇಪಗಳ ಮೇಲೆ ಮಾರುಕಟ್ಟೆಯ ಗಮನ ಕೇಂದ್ರೀಕರಿಸಿದೆ.

7) ನಾಮಮಾತ್ರ ಜಿಡಿಪಿ: ಪ್ರಸಕ್ತ ಹಣಕಾಸು ವರ್ಷ (2024-25) ಭಾರತದ ನಾಮಮಾತ್ರ ಜಿಡಿಪಿ ಬೆಳವಣಿಗೆ (ರಿಯಲ್ ಜಿಡಿಪಿ ಪ್ಲಸ್ ಹಣದುಬ್ಬರ) ಶೇಕಡಾ 10.5 ಎಂದು ಅಂದಾಜಿಸಲಾಗಿದೆ, ಆದರೆ, ಎನ್‌ಎಸ್‌ಒ ಅಂದಾಜಿಸಿದ ನೈಜ ಜಿಡಿಪಿ ಬೆಳವಣಿಗೆ ಶೇಕಡಾ 6.4 ಆಗಿದೆ. ಹಣಕಾಸು ವರ್ಷ 2025-26ರ ನಾಮಮಾತ್ರ ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಗಳು ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರ ಪಥದ ಬಗ್ಗೆ ಒಂದು ಕಲ್ಪನೆಯನ್ನು ನೀಡಲಿದೆ.

8) ಸರ್ಕಾರಕ್ಕೆ ಸಿಗುವ ಡಿವಿಡೆಂಡ್‌: ಆರ್‌ಬಿಐ ಮತ್ತು ಹಣಕಾಸು ಸಂಸ್ಥೆಗಳಿಂದ 2.33 ಲಕ್ಷ ಕೋಟಿ ಮತ್ತು ಸಿಪಿಎಸ್‌ಎಸ್‌ನಿಂದ 56,260 ಕೋಟಿ ರೂಪಾಯಿಯನ್ನು ಪ್ರಸಕ್ತ ವರ್ಷದ ಲಾಭಾಂಶ (ಡಿವಿಡೆಂಡ್‌) ಆಗಿ ಲಭ್ಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ಈ ಎರಡು ಪ್ರಮುಖ ತೆರಿಗೆಯೇತರ ಆದಾಯ ಪ್ರಮಾಣಗಳು ಮುಂದಿನ ವರ್ಷಕ್ಕೆ ಎಷ್ಟು ಎಂಬುದು ಕೂಡ ಕುತೂಹಲದ ವಿಚಾರ.

9) ಹೂಡಿಕೆ ಹಿಂಪಡೆತ ಮತ್ತು ಆಸ್ತಿ ನಗದೀಕರಣ: ವಿವಿಧ ಬಂಡವಾಳ ರಶೀದಿಗಳು ಅಂದರೆ, ಇದರಲ್ಲಿ ಹೂಡಿಕೆ ಮತ್ತು ಆಸ್ತಿ ನಗದೀಕರಣದಿಂದ ಬರುವ ಆದಾಯವು ಪ್ರಸಕ್ತ ಹಣಕಾಸು ವರ್ಷ (2024-25) 50,000 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಇದು ಮುಂದಿನ ವರ್ಷಕ್ಕೆ (2025-26) ಎಷ್ಟು ಎಂಬುದು ಕೂಡ ಗಮನಸೆಳೆಯುವಂಥದ್ದು.

10) ಪ್ರಮುಖ ಯೋಜನೆಗಳಿಗೆ ಅನುದಾನ: ಕೇಂದ್ರ ಸರ್ಕಾರಬಜೆಟ್‌ನಲ್ಲಿ ಪ್ರಮುಖ ಯೋಜನೆಗಳಾದ ನರೇಗಾ, ಪಿಎಂ ಕಿಸಾನ್ ಸೇರಿ ವಿವಿಧ ಪ್ರಮುಖ ಯೋಜನೆಗಳಿಗೆ ಎಷ್ಟು ಅನುದಾನ ಮೀಸಲಿಡಲಿದೆ ಎಂಬುದು ಕೂಡ ಕುತೂಹಲ ಕೆರಳಿಸುವಂಥದ್ದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.