Budget 2025: ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಒತ್ತು; ದೇಸಿ ಆಟಿಕೆಗೆ ಜಾಗತಿಕ ಬಲ, ಕೌಶಲ್ಯವೃದ್ದಿಗೆ 5 ರಾಷ್ಟ್ರೀಯ ತರಬೇತಿ ಕೇಂದ್ರ
Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಆಯವ್ಯಯದಲ್ಲಿ ಮೇಕ್ ಇಂಡಿಯಾವನ್ನು ಇನ್ನಷ್ಟು ವಿಸ್ತರಿಸಲು ಒತ್ತನ್ನು ನೀಡಿದ್ದಾರೆ.

ಭಾರತದ ಶಕ್ತಿಯಾಗಿರುವ ದೇಸಿ ಕಲೆಗೆ ಬಜೆಟ್‌ನಲ್ಲಿ ಒತ್ತು ದೊರೆತಿದೆ.
Union Budget 2025: ಒಂದು ದಶಕದಿಂದಲೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡುತ್ತಾ ಬಂದಿರುವ ಭಾರತ ಸರ್ಕಾರ ಈ ಬಾರಿಯ ಬಜೆಟ್‌ನಲ್ಲೂ ಇದಕ್ಕೆ ಇನ್ನಷ್ಟು ಒತ್ತು ನೀಡಿದಂತೆ ಕಾಣುತ್ತಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಉತ್ಪಾದನೆಯ ಜತೆ ಜತೆಯಲ್ಲಿಯೇ ಭಾರತದಲ್ಲಿರುವ ಕೌಶಲ್ಯ ಆಧರಿತ ವೃತ್ತಿಗಳಲ್ಲಿ ತೊಡಗಿರುವವರಿಗೆ ಜಾಗತಿಕ ಮಟ್ಟದ ತರಬೇತಿ ನೀಡಲು 5 ರಾಷ್ಟ್ರೀಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿಯೂ ತಮ್ಮ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ್ದಾರೆ. ಅಲ್ಲದೇ ಭಾರತದಲ್ಲಿಯೇ ತಯಾರಾಗುವ ಚನ್ನಪಟ್ಟಣದ ಬೊಂಬೆ ಮಾದರಿಯ ಎಲ್ಲಾ ದೇಸಿ ಆಟಿಕೆಗಳ ಉತ್ಪಾದನೆ, ಮಾರಾಟ ವ್ಯವಸ್ಥೆ ಬಲಪಡಿಸುವ, ಇದಕ್ಕೆ ಜಾಗತಿಕ ಮಾನ್ಯತೆ ಕಲ್ಪಿಸುವೆಡೆಗೂ ಗಮನ ನೀಡಲಾಗುತ್ತದೆ.
ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮೇಕ್ ಇನ್ ಇಂಡಿಯಾ ಹಾಗೂ ಕೌಶಲ್ಯ ವೃದ್ದಿಯ ಅಂಶಗಳು ಹೀಗಿವೆ.
- ಭಾರತದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಉತ್ಪಾದನೆಯಾಗುವ ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ನಿರ್ಮಿಸಿ, ನಾವು ಭಾರತವನ್ನು ಆಟಿಕೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಯೋಜನೆ ಹೊಂದಿದ್ದೇವೆ. ಯೋಜನೆಯಡಿ ಆಟಿಕೆ ಸಮೂಹಗಳ ಅಭಿವೃದ್ಧಿ, ಕೌಶಲ್ಯಗಳು ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತೇಜಿಸಲು ಗಮನ ಹರಿಸುತ್ತೇವೆ. ಉತ್ತಮ ಗುಣಮಟ್ಟದ, ಅನನ್ಯ, ನವೀನ ಮತ್ತು ಸಮರ್ಥನೀಯ ಆಟಿಕೆಗಳಿ 'ಮೇಡ್ ಇನ್ ಇಂಡಿಯಾ' ಬ್ರ್ಯಾಂಡ್ ಆಗಿ ಹೊರ ಹೊಮ್ಮಲು ಸಹಕಾರಿಯಾಗಲಿದೆ.
- ನಮ್ಮ ಸರ್ಕಾರವು ರಾಷ್ಟ್ರೀಯ ಉತ್ಪಾದನಾ ಮಿಷನ್ ಅನ್ನು ಸ್ಥಾಪಿಸುತ್ತದೆ. ಇದಕ್ಕೆ ಅಗತ್ಯ ಆರ್ಥಿಕ ಬೆಂಬಲ ಒದಗಿಸುವ ಮೂಲಕ "ಮೇಕ್ ಇನ್ ಇಂಡಿಯಾ" ಅನ್ನು ಹೆಚ್ಚಿಸಿ ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳು ನೀತಿ ಬೆಂಬಲ, ಕಾರ್ಯಗತಗೊಳಿಸುವ ಮಾರ್ಗಸೂಚಿಗಳು, ಆಡಳಿತ ಮತ್ತು ಮೇಲ್ವಿಚಾರಣಾ ಚೌಕಟ್ಟನ್ನು ಕೂಡ ರೂಪಿಸಲಿದೆ. ಇದಕ್ಕಾಗಿ ಕೇಂದ್ರ ಸಚಿವಾಲಯಗಳಿ ಮತ್ತು ಆಯಾ ರಾಜ್ಯಗಳ ಕೈಗಾರಿಕಾ ಸಚಿವರ ಸಹಕಾರವನ್ನು ಪಡೆಯುತ್ತೇವೆ.
- ಜುಲೈ 2024 ರ ಬಜೆಟ್‌ನಲ್ಲಿ ಘೋಷಿಸಲಾದ ಉಪಕ್ರಮದ ಮೇಲೆ ಐದು ಜಾಗತಿಕ ಪರಿಣತಿಯೊಂದಿಗೆ ಕೌಶಲ್ಯಕ್ಕಾಗಿ ರಾಷ್ಟ್ರೀಯ ಉತ್ಕೃಷ್ಟ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ "ಮೇಕ್ ಫಾರ್ ಇಂಡಿಯಾ" ಗೆ ಅಗತ್ಯವಿರುವ ಕೌಶಲ್ಯಗಳೊಂದಿಗೆ ನಮ್ಮ ಯುವಕರನ್ನು ಸಜ್ಜುಗೊಳಿಸಲು ಪಾಲುದಾರಿಕೆಗಳನ್ನು ಇನ್ನಷ್ಟು ಉತ್ತೇಜಿಸಲಾಗುವುದು. ಇದರ ಉದ್ದೇಶ ಭಾರತದ ಕೌಶಲ್ಯವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವುದು. ಮೇಕ್ ಫಾರ್ ಇಂಡಿಯಾ ಭಾಗವು ಮುಂದೆ ಮೇಕ್ ಫಾರ್ ದಿ ವರ್ಲ್ಡ್ ಉತ್ಪಾದನೆ ಭಾಗವಾಗಿ ಉನ್ನತೀಕರಿಸುವುದೇ ಆಗಿದೆ. ಐದು ಕೌಶಲ್ಯ ವೃದ್ದಿ ಉತ್ಕೃಷ್ಟ ತರಬೇತಿ ಕೇಂದ್ರಗಳು ಸೂಕ್ತ ಪಠ್ಯಕ್ರಮವನ್ನು ಒಳಗೊಂಡಿರಲಿವೆ. ಪ್ರತ್ಯೇಕ ವಿನ್ಯಾಸ, ತರಬೇತುದಾರರಿಗೆ ನಿಯಮಿತ ತರಬೇತಿ, ಕೌಶಲ್ಯ ಪ್ರಮಾಣೀಕರಣ ಚೌಕಟ್ಟು ಮತ್ತು ನಿಗದಿತ ಅವಧಿಯೊಳಗಿನ ಪರಾಮರ್ಶೆಗಳ ಮೂಲಕ ಕೌಶಲ್ಯವೃದ್ದಿ ಕೇಂದ್ರಗಳನ್ನು ಕಾಲಕಾಲಕ್ಕೆ ಉನ್ನಕರಿಸುವುದು ಸೇರಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.