Union Budget 2025; ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಿ, ಮೋಹನ್ ದಾಸ್ ಪೈ ನೇರ ಮಾತು- ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025; ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಿ, ಮೋಹನ್ ದಾಸ್ ಪೈ ನೇರ ಮಾತು- ವಿಡಿಯೋ

Union Budget 2025; ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಿ, ಮೋಹನ್ ದಾಸ್ ಪೈ ನೇರ ಮಾತು- ವಿಡಿಯೋ

Union Budget 2025; ಕೇಂದ್ರ ಬಜೆಟ್ 2025 ಮಂಡನೆ ಫೆ 1 ರಂದು ನಡೆಯಲಿದೆ. ಉದ್ಯಮಿ ಮೋಹನ್ ದಾಸ್ ಪೈ ಅವರು ಕೇಂದ್ರ ಬಜೆಟ್ ನಿರೀಕ್ಷೆಗಳ ಬಗ್ಗೆ ಮಾತನಾಡಿದ್ದು, ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಿ ಎಂದು ನೇರವಾಗಿ ಹೇಳಿದ್ದು, ಅವರ ಸಂದರ್ಶನದ ವಿಡಿಯೋ ಮತ್ತು ವಿವರ ಇಲ್ಲಿದೆ.

ಕೇಂದ್ರ ಬಜೆಟ್ 2025: ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಬೇಕಾದ್ದು ಈಗಿನ ತುರ್ತು ಎಂದು ಉದ್ಯಮಿ ಮೋಹನ್ ದಾಸ್ ಪೈ ಕಳಕಳಿ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ 2025: ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಬೇಕಾದ್ದು ಈಗಿನ ತುರ್ತು ಎಂದು ಉದ್ಯಮಿ ಮೋಹನ್ ದಾಸ್ ಪೈ ಕಳಕಳಿ ವ್ಯಕ್ತಪಡಿಸಿದ್ದಾರೆ.

Union Budget 2025: ಕಳೆದ ಕೆಲವು ವರ್ಷಗಳಿಂದ ತೆರಿಗೆ ಹೊರೆಯನ್ನು ಹೊತ್ತಿರುವುದು ಮಧ್ಯಮ ವರ್ಗ. ಇದನ್ನು ನಿರ್ಲಕ್ಷಿಸುವಂತೆ ಇಲ್ಲ. ಇದೊಂದು ರೀತಿ ಟ್ಯಾಕ್ಸ್ ಟೆರರಿಸಂ ಎಂಬುದು ಬಹುಸಂಖ್ಯಾತ ಮಧ್ಯಮ ವರ್ಗದ ಜನರ ಭಾವನೆ. ಈ ಭಾವನೆಯಿಂದ ಅವರನ್ನು ಹೊರತರಬೇಕಾದ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಿ ಎಂದು ಇನ್ಫೋಸಿಸ್ ಸಂಸ್ಥೆ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್‌ ಪೈ ನೇರವಾಗಿ ಹೇಳಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ, ಹೆಚ್ಚುತ್ತಿರುವ ಇಎಂಐ ಕಂತುಗಳು, ಶಿಕ್ಷಣ ವೆಚ್ಚ ಹೆಚ್ಚಳ ಹೀಗೆ ಎಲ್ಲವೂ ಮಧ್ಯಮ ವರ್ಗ ಹೊರುತ್ತಿರುವ ಹೊರೆಯನ್ನು ಎತ್ತಿತೋರಿಸಿದೆ. ಭಾರತದ ಅರ್ಥ ವ್ಯವಸ್ಥೆ ಮತ್ತು ಹಣಕಾಸಿನ ಒಳನೋಟ ಹೊಂದಿರುವ ಟಿವಿ ಮೋಹನ್ ದಾಸ್ ಪೈ ಅವರು ಹಿಂದೂಸ್ತಾನ್‌ ಟೈಮ್ಸ್ ಕನ್ನಡದ ಸೋದರ ಸಂಸ್ಥೆ ಮಿಂಟ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಆದಾಯ ತೆರಿಗೆ ಜತೆಗೆ ಇತರೆ ಹೊರೆಗಳನ್ನ ಹೊತ್ತಿರುವ ಮಧ್ಯಮ ವರ್ಗ

ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಹೊರೆಯ ಬಗ್ಗೆ ಇನ್ಫೋಸಿಸ್ ಸಂಸ್ಥೆ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್‌ ಪೈ ಅವರು ಕಳವಳ ವ್ಯಕ್ತಪಡಿಸಿದರು, ಅದರಲ್ಲೂ ವಿಶೇಷವಾಗಿ ಸಾಲದ ಇಎಂಐಎಸ್ ಹೆಚ್ಚಾದಂತೆ, ಕಳೆದ ಮೂರು ವರ್ಷಗಳಲ್ಲಿ ಶಾಲಾ ಮತ್ತು ಕಾಲೇಜು ಶುಲ್ಕಗಳು 40-60ರಷ್ಟು ಏರಿಕೆಯಾಗಿದ್ದವು. ಆದರೆ ಆದಾಯವು ನಿಶ್ಚಲವಾಗಿದೆ ಎಂಬುದರ ಕಡೆಗೆ ಮೋಹನ್ ದಾಸ್ ಪೈ ಗಮನಸೆಳೆದರು.

ಮಧ್ಯಮ ವರ್ಗದ ಮೇಲೆ ಹೆಚ್ಚುತ್ತಿರುವ ಆರ್ಥಿಕ ಹೊರೆಗೆ ಹಲವಾರು ಅಂಶಗಳು ಕಾರಣವಾಗಿವೆ. ಮೊದಲನೆಯದಾಗಿ, ವಸತಿ ಸಾಲಗಳನ್ನು ನಿರ್ವಹಿಸುವ 1.2 ಕೋಟಿಗಿಂತಲೂ ಹೆಚ್ಚು ಜನರು ಮತ್ತು ವಿವಿಧ ಸಾಲಗಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಈ ಅವಧಿಯಲ್ಲಿ ಇಎಂಐ ಪ್ರಮಾಣ ನಾಟಕೀಯವೆನ್ನುವಂತೆ ಹೆಚ್ಚಳವಾಗಿದೆ. ಈ ಕಾರಣದಿಂದಾಗಿ, ಅವರ ಇಎಂಐ ಹೊರೆ ಕೂಡ ಗಮನಾರ್ಹವಾಗಿ ಏರಿಕೆಯಾಗಿದೆ. ಆದರೆ ಅವರ ಆದಾಯವು ಅದೇ ವೇಗವನ್ನು ಉಳಿಸಿಕೊಂಡಿಲ್ಲ. ಹಣದುಬ್ಬರದಿಂದ ಅವರ ಹೊರೆ ಕೂಡ ಹೆಚ್ಚುತ್ತಿದೆ ಎಂದು ಮೋಹನ್ ದಾಸ್ ಪೈ ವಿವರಿಸಿದ್ದಾರೆ.

ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಬೇಕಾದ್ದು ಈಗಿನ ಅಗತ್ಯ

ಕೇಂದ್ರ ಸರ್ಕಾರದ ಆದ್ಯತೆ ಬದಲಾಗಬೇಕು. ಸದ್ಯ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಬೇಕು. ಈ ವರ್ಗದ ಬದುಕಿನ ಗುಣಮಟ್ಟ ಸುಧಾರಿಸುವುದಕ್ಕಾಗಿ ಉತ್ತಮ ಬೆಂಬಲ ನೀಡುವುದಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ಮೋಹನ್ ದಾಸ್ ಪೈ ವಿವರಿಸಿದರು.

"ನಾನು ತೆರಿಗೆ ಭಯೋತ್ಪಾದನೆ (ಟ್ಯಾಕ್ಸ್ ಟೆರರಿಸಂ) ಎಂದು ಯಾವುದನ್ನು ಕರೆಯುತ್ತಿದ್ದೇನೋ, ಆ ತೆರಿಗೆ ಭಯೋತ್ಪಾದನೆ ಬಗ್ಗೆ ಮಧ್ಯಮ ವರ್ಗ ಆಕ್ರೋಶಗೊಂಡಿದೆ. ಅವರು ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಗುರುತಿಸಿದ್ದೇನೆ. ತೆರಿಗೆ ಸ್ಲ್ಯಾಬ್‌ಗಳ ಬಗ್ಗೆ ಮರುಚಿಂತನೆ ನಡೆಸಬೇಕಾದ ಹೊತ್ತು ಇದು. ಪಿ ಚಿದಂಬರಂ ಅವರು ಮೂರು ಸ್ಲ್ಯಾಬ್‌ಗಳ ತೆರಿಗೆ ವ್ಯವಸ್ಥೆ ಪರಿಚಯಿಸಿದರು. ಈಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ತೆರಿಗೆ ವ್ಯವಸ್ಥೆಯನ್ನು ಏಳು ಸ್ಲ್ಯಾಬ್‌ಗಳಿಗೆ ಇದನ್ನು ವಿಸ್ತರಿಸಿದ್ದಾರೆ. ಇದಾದ ಬಳಿಕ ನಾವು ಈಗಿರುವ ಪಾಪ್‌ಕಾರ್ನ್‌ ತೆರಿಗೆ ವ್ಯವಸ್ಥೆಯೊಳಗೆ ಬಂದಿದ್ದೇವೆ. ಮೂರು ರೀತಿಯ ಪಾಪ್‌ಕಾರ್ನ್‌ಗಳ ಮೇಲೆ ಭಿನ್ನ ರೀತಿಯಲ್ಲಿ ತೆರಿಗೆ ವಿಧಿಸುವ ಪದ್ಧತಿ ಎಂದು ಮೋಹನ್ ದಾಸ್ ಪೈ ವಿವರಿಸಿದರು.

ಇದು ಯಾಕೆ ಎಂಬುದನ್ನು ವಿವರಿಸುವುದಕ್ಕೆ ಹಣಕಾಸು ಸಚಿವರು ಹೆಚ್ಚು ಸಮಯ ಕಳೆದರು. ಇದು ಅಸಂಬದ್ಧ ತೆರಿಗೆ ವ್ಯವಸ್ಥೆ. ತೆರಿಗೆ ಅಧಿಕಾರಿಗಳನ್ನು ನಿಭಾಯಿಸುವುದೇ ದೊಡ್ಡ ಸವಾಲಿನ ವಿಷಯ. ಇದಕ್ಕೆ ಪೂರಕವಾಗಿ ವೈದ್ಯಕೀಯ ವಿಮೆಯ ಮೇಲೆ ಜಿಎಸ್‌ಟಿ ಹೊರೆ. ಇದನ್ನು ಕಡಿಮೆ ಮಾಡುವುದು ಸರಳ ಕಾರ್ಯ. ಆದಾಗ್ಯೂ, ಅದನ್ನು ಮಾಡದೇ ಕಳೆದ 10-12 ವರ್ಷದಿಂದ ಮಧ್ಯಮ ವರ್ಗದ ಮೇಲೆ ತೆರಿಗೆ ಹೊರೆ ಹೊರಿಸುತ್ತಲೇ ಇದ್ದಾರೆ ಎಂದು ಅವರು ವಿವರಿಸಿದರು.

ಮೋಹನ್ ದಾಸ್ ಪೈ ಸಂದರ್ಶನದ 6 ಪ್ರಮುಖ ಅಂಶಗಳು

1) ಆದಾಯ ತೆರಿಗೆ ದರಗಳ ಸಂಕೀರ್ಣತೆ: ತೆರಿಗೆ ಸ್ಲ್ಯಾಬ್‌ಗಳ ಕಾರಣ ಹೆಚ್ಚುತ್ತಿರುವ ಸಂಕೀರ್ಣತೆಯ ಬಗ್ಗೆ ಮೋಹನ್ ದಾಸ್ ಪೈ ಟೀಕಿಸಿದರು. ತೆರಿಗೆ ಸ್ಲ್ಯಾಬ್‌ಗಳ ಸಂಖ್ಯೆ ಹೇಗೆ ಗಮನಾರ್ಹವಾಗಿ ಹೆಚ್ಚಾಗಿದೆ, ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಗೊಂದಲಮಯ ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟವಾಗುವಂತೆ ಮಾಡಿದೆ ಎಂಬುದನ್ನು ಅವರು ವಿವರಿಸಿದರು.

2) ತೆರಿಗೆ ಹೊರೆ ಇಳಿಸಿ: ಮಧ್ಯಮ ವರ್ಗಕ್ಕೆ ತೆರಿಗೆ ಹೊರೆ ಇಳಿಸಬೇಕು. ಅವರಿಗೆ ಹೆಚ್ಚುವರಿ ತೆರಿಗೆಯಿಂದ ವಿನಾಯಿತಿ ಒದಗಿಸಬೇಕು.

3) ಪಾಪ್‌ಕಾರ್ನ್ ಟ್ಯಾಕ್ಸ್‌: ಮೋಹನ್ ದಾಸ್ ಪೈ ಅವರು ಸರ್ಕಾರದ ಗಮನವು ಈಗಿನ ಅಗತ್ಯದ ಕಡೆಗೆ ಹೋಗದೇ, ಇತಿಹಾಸ ಕಡೆಗೆ ಇರುವುದರ ಬಗ್ಗೆ ವಿವರಿಸುವುದಕ್ಕಾಗಿ ಪಾಪ್‌ಕಾರ್ನ್ ಟ್ಯಾಕ್ಸ್‌ ಉದಾಹರಣೆ ಬಳಸಿದರು.

4) ಟ್ಯಾಕ್ಸ್ ಟೆರರಿಸಂ: ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆಯನ್ನು ಮೋಹನ್ ದಾಸ್ ಪೈ ಅವರು “ಟ್ಯಾಕ್ಸ್‌ ಟೆರರಿಸಂ” ಎಂದು ಬಣ್ಣಿಸಿದರು.

5) ಇಎಂಐ ಹೊರೆ ಹೆಚ್ಚಳ: ಹೆಚ್ಚಿನ ಬಡ್ಡಿದರದ ಕಾರಣ ಸಾಲ ಮರುಪಾವತಿಯ ಹೊರೆಯೂ ಹೆಚ್ಚಳವಾಗಿದೆ. ಇದು ಖರ್ಚು ಮಾಡಬಹುದಾದ ಹಣದ ಮೇಲೆ ಒತ್ತಡವನ್ನು ಉಂಟುಮಾಡಿದೆ.

6) ಶಿಕ್ಷಣ ವೆಚ್ಚ: ಶಾಲಾ ಶುಲ್ಕದಿಂದ ಉನ್ನತ ಶಿಕ್ಷಣದವರೆಗೆ ಹೆಚ್ಚುತ್ತಿರುವ ಶಿಕ್ಷಣದ ವೆಚ್ಚವು ಮಧ್ಯಮ ವರ್ಗದ ಕುಟುಂಬಗಳಿಗೆ ಅತಿದೊಡ್ಡ ಆರ್ಥಿಕ ಹೊರೆಯಾಗಿದೆ.

ಮೋಹನ್‌ ದಾಸ್ ಪೈ ಅವರ ಸಂದರ್ಶನ - ವಿಡಿಯೋ

ಕೇಂದ್ರ ಬಜೆಟ್ 2025 -26 ಫೆಬ್ರವರಿ 1 ರಂದು ಸಂಸತ್‌ನಲ್ಲಿ ಮಂಡನೆಯಾಗಲಿದೆ. ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.