ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆ; ಬಿಜೆಪಿ ಟೀಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆ; ಬಿಜೆಪಿ ಟೀಕೆ

ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆ; ಬಿಜೆಪಿ ಟೀಕೆ

Union Budget 2025 Session: ಸಂಸತ್‌ನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಬಗ್ಗೆ ಸೋನಿಯಾ ಗಾಂಧಿ ಅವರು ಪ್ರತಿಕ್ರಿಯಿಸುತ್ತ ‘ಪೂರ್ ಥಿಂಗ್‌’ ಎಂದು ಪ್ರತಿಕ್ರಿಯಿಸಿದ್ದರು. ಇದು ಟೀಕೆಗೆ ಒಳಗಾಗಿದ್ದು, ಬಿಜೆಪಿ ನಾಯಕರು ಕಟುವಾಗಿ ಟೀಕಿಸಿ, ಖಂಡಿಸಿದರು.

ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿ ಖಂಡಿಸಿದ್ದಾರೆ.
ಕೇಂದ್ರ ಬಜೆಟ್ ಅಧಿವೇಶನ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿ ಖಂಡಿಸಿದ್ದಾರೆ.

Union Budget 2025 Session: ಸಂಸತ್ತಿನ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗಿದೆ. ಮೊದಲ ದಿನವಾದ ಶುಕ್ರವಾರ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದರು. ಸರ್ಕಾರದ ಸಾಧನೆಗಳ ಬಗ್ಗೆ ಸುದೀರ್ಘ ಬಾಷಣ ಮಾಡಿದ ಅವರು, ಸರ್ಕಾರ ಜಾರಿಗೊಳಿಸಿದ ವಿವಿಧ ಉಪಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಯವರ ಭಾಷಣ ಮುಗಿದ ಬಳಿಕ ಹೊರ ಬಂದ ಕಾಂಗ್ರೆಸ್ ನಾಯಕರನ್ನು ವಿಶೇಷವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಮಾಧ್ಯಮ ಪ್ರತಿನಿಧಿಗಳು, ರಾಷ್ಡ್ರಪತಿ ಭಾಷಣದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ಪೂರ್‌ ಥಿಂಗ್ ಎಂದು ಪ್ರತಿಕ್ರಿಯಿಸಿದರು. ರಾಹುಲ್ ಗಾಂಧಿ ನೋ ಕಾಮೆಂಟ್ಸ್ ಎಂದು ಹೇಳಿದರು. ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿ ಖಂಡಿಸಿದರು.

ರಾಷ್ಟ್ರಪತಿ ಭಾಷಣಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯೆ ಹೀಗಿತ್ತು

ಸಂಸತ್‌ನ ಜಂಟಿ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಭಾಷಣಮಾಡಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಭಾಷಣ ಓದಿ ಮುಗಿಸುವ ಹೊತ್ತಿಗೆ ಅವರು ಸುಸ್ತಾಗಿದ್ದರು. ಅವರಿಗೆ ಮಾತನಾಡುವುದೇ ಕಷ್ಟವಾಗಿತ್ತು. ಪೂರ್ ಥಿಂಗ್ ಎಂದು ಪ್ರತಿಕ್ರಿಯಿಸಿದ್ದರು. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಬೋರಿಂಗ್ ಮತ್ತು ನೋ ಕಾಮೆಂಟ್ಸ್ ಎಂದು ಹೇಳಿದ್ದರು. ಇಲ್ಲಿದೆ ಆ ಪ್ರತಿಕ್ರಿಯೆಯ ವಿಡಿಯೋ.

ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆಗೆ ಬಿಜೆಪಿ ಖಂಡನೆ

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಸೋನಿಯಾ ಗಾಂಧಿ ‘ಪೂರ್‌ ಥಿಂಗ್‌’ ಪ್ರತಿಕ್ರಿಯೆಯನ್ನು ಖಂಡಿಸಿದ್ದು, "ನಾನು ಮತ್ತು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನೂ ‘ಪೂರ್‌ ಥಿಂಗ್‌’ ಪದ ಬಳಕೆಯನ್ನು ಖಂಡಿಸುತ್ತೇವೆ. ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿರುದ್ಧ ಪದ ಬಳಕೆ ಅವರ ಪಕ್ಷದ ಬಡವರ ವಿರೋಧಿ, ಬುಡಕಟ್ಟು ಜನರ ವಿರೋಧಿ ನಿಲುವನ್ನು ತೋರಿಸುತ್ತದೆ. ಸೋನಿಯಾ ಗಾಂಧಿ ಅವರು ಈ ಕೂಡಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಬುಡಕಟ್ಟು ಜನರ ಕ್ಷಮಾಪಣೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್; ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದು, ಉತ್ತರ ಪ್ರದೇಶದ ಮಹಾಕುಂಭದಲ್ಲಿ ಬುಧವಾರ ನಡೆದ ಕಾಲ್ತುಳಿತದ ಬಗ್ಗೆ ಸಂತಾಪ ಸೂಚಿಸಿದರು. "ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಐತಿಹಾಸಿಕ ಮಹಾ ಕುಂಭ ನಡೆಯುತ್ತಿದೆ. ಇದು ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಸಾಮಾಜಿಕ ಜಾಗೃತಿಗಳ ಹಬ್ಬವಾಗಿದೆ. ಪವಿತ್ರ ಹಬ್ಬದಲ್ಲಿ ಮೌನಿ ಅಮಾವಾಸ್ಯೆ ಮತ್ತು ಬುಧವಾರ ಸಂಭವಿಸಿದ ದುರಂತದ ಬಗ್ಗೆ ಸಂತಾಪವಿದೆ. ಗಾಯಗೊಂಡವರ ತ್ವರಿತ ಚೇತರಿಕೆಗಾಗಿ ಪ್ರಾರ್ಥಿಸುವುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ಮಟ್ಟದ ಸ್ಪರ್ಧೆಯನ್ನು ಇತರೆ ದೇಶಗಳೊಂದಿಗೆ ತನ್ನನ್ನೂ ಗುರುತಿಸಿಕೊಂಡು ಮುನ್ನಡೆಯುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೂಡ ಸಾಧನೆ ವಿಶೇಷವಾಗಿದ್ದು, ಮಾನವ ಸಹಿತ ಗಗನಯಾನವನ್ನು ಭಾರತ ಕೈಗೊಳ್ಳುವ ದಿನ ದೂರ ಇಲ್ಲ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಅಧಿವೇಶನದಲ್ಲಿ ಮಾತನಾಡುವುದಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನ್‌ಖಡ್‌, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮರಮಾಡಿಕೊಂಡರು. ಇದರೊಂದಿಗೆ ಕೇಂದ್ರ ಬಜೆಟ್ ಅಧಿವೇಶನಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ನಾಳೆ (ಫೆ1) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.