ಕೇಂದ್ರ ಬಜೆಟ್ 2025 ಮಂಡನೆ ಇಂದು, ಎಲ್ಲಿ, ಎಷ್ಟು ಗಂಟೆಗೆ ನೇರ ಪ್ರಸಾರ ಶುರು, ಲೈವ್ ಅಪ್ಡೇಟ್ಸ್ ನೋಡುವುದೆಲ್ಲಿ - ಇಲ್ಲಿದೆ ವಿವರ
Budget 2025 Time: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ 1 ) ಲೋಕಸಭೆಯಲ್ಲಿ ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರ ಮುಂಬರುವ ಹಣಕಾಸು ವರ್ಷದ ಹೇಳಿಕೆಯಾಗಿ ಕೇಂದ್ರ ಬಜೆಟ್ 2025-26 ಮಂಡನೆಯಾಗಲಿದೆ. ಎಷ್ಟು ಗಂಟೆಗೆ ನೇರ ಪ್ರಸಾರ ಶುರು, ಲೈವ್ ಅಪ್ಡೇಟ್ಸ್ ನೋಡುವುದೆಲ್ಲಿ ಎಂಬಿತ್ಯಾದಿ ವಿವರ ಇಲ್ಲಿದೆ.

Budget 2025 Time: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಶನಿವಾರದಂದು ಸತತ ಎಂಟನೇ ಬಜೆಟ್ (ಕೇಂದ್ರ ಬಜೆಟ್ 2025) ಅನ್ನು ಸಂಸತ್‌ನಲ್ಲಿ ಮಂಡಿಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಕೂಡ ಹೌದು. ಮೊದಲ ಎರಡು ಅವಧಿಗೆ ಬಿಜೆಪಿ ಬಹುಮತದ ಸರ್ಕಾರ ಇತ್ತು. ಈ ಬಾರಿ ಕೂಡ ಕೇಂದ್ರ ಬಜೆಟ್ 2025-26 ಅನ್ನು ಪೇಪರ್ ಲೆಸ್ ಬಜೆಟ್ ಆಗಿ ಮಂಡಿಸಲಾಗುತ್ತಿದೆ.
ಏನಿದು ಕೇಂದ್ರ ಬಜೆಟ್ 2025-26
ಕೇಂದ್ರ ಬಜೆಟ್ 2025-26 ಎಂಬುದು ಭಾರತ ಸರ್ಕಾರ ಮುಂಬರುವ ವರ್ಷಕ್ಕೆ ಸಂಬಂಧಿಸಿ ನೀಡುವ ಹಣಕಾಸು ಹೇಳಿಕೆ. ಮುಂಬುರುವ ಹಣಕಾಸು ವರ್ಷ ಎಂದರೆ 2025ರ ಏಪ್ರಿಲ್ 1 ರಿಂದ 2026ರ ಮಾರ್ಚ್ 31ರ ತನಕ ಅವಧಿ. ಈ ಅವಧಿಯಲ್ಲಿ ಫೆಡರಲ್ ಸರ್ಕಾರದ ಪ್ರಸ್ತಾವಿತ ವೆಚ್ಚಗಳು ಮತ್ತು ಆದಾಯಗಳನ್ನು ಅಂದಾಜು ಲೆಕ್ಕ ಹಾಕಿ ಕೇಂದ್ರ ಬಜೆಟ್‌ನಲ್ಲಿ ಸಂಸತ್‌ನಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಅದಕ್ಕೆ ಸಿದ್ಧಪಡಿಸುವ ಕಡತವೇ ಕೇಂದ್ರ ಬಜೆಟ್ 2025.
ಕೇಂದ್ರ ಸರ್ಕಾರ 2019 ರಿಂದ ಕೇಂದ್ರ ಬಜೆಟ್‌ನಲ್ಲಿ ಸರ್ಕಾರದ ಹಣಕಾಸಿನ, ಖರ್ಚು, ಆದಾಯ ಮತ್ತು ಆರ್ಥಿಕ ನೀತಿಗಳನ್ನು ಸೇರಿಸುತ್ತ ಬಂದಿದೆ. ಹೀಗಾಗಿ ಇದನ್ನು ಬಹಿ ಖಾತಾ ಎಂದೂ ಕರೆಯಲಾಗುತ್ತದೆ.
ಕೇಂದ್ರ ಬಜೆಟ್ 2025 ಮಂಡನೆ ಎಷ್ಟು ಗಂಟೆಗೆ, ಎಲ್ಲಿ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ 1) ಸಂಸತ್‌ನಲ್ಲಿ ಕೇಂದ್ರ ಬಜೆಟ್ 2025-26 ಮಂಡಿಸುತ್ತಾರೆ. ಲೋಕಸಭೆಯಲ್ಲಿ ಪೂರ್ವಾಹ್ನ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣ ಶುರುಮಾಡಲಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ನೇರ ಪ್ರಸಾರ, ಲೈವ್ ಅಪ್ಡೇಟ್ ಗಮನಿಸುವುದೆಲ್ಲಿ
- ಕೇಂದ್ರ ಸರ್ಕಾರದ ಅಧಿಕೃ ಸುದ್ದಿ ವಾಹಿನಿ ದೂರದರ್ಶನ, ಸಂಸತ್‌ನ ಅಧಿಕೃತ ಸುದ್ದಿವಾಹಿನಿ ಸಂಸದ್ ಟಿವಿ ಚಾನೆಲ್‌ಗಳ ಮೂಲಕ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡುವ ಬಜೆಟ್ ಭಾಷಣದ ನೇರ ಪ್ರಸಾರ ವೀಕ್ಷಿಸಬಹುದು.
- ಕೇಂದ್ರ ಸರ್ಕಾರದ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳ ಮೂಲಕವೂ ಇದು ನೇರ ಪ್ರಸಾರವಾಗುತ್ತದೆ.
- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಲೈವ್ ಅಪ್ಡೇಟ್ಸ್ ಪಡೆದುಕೊಳ್ಳಲು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಕೇಂದ್ರ ಬಜೆಟ್ 2025ರ ಲೈವ್ ಅಪ್ಡೇಟ್ಸ್ ಗಮನಿಸಬಹುದು.
- ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಸುದ್ದಿ, ಫೋಟೋ ಗ್ಯಾಲರಿ, ವೆಬ್‌ಸ್ಟೋರಿ ಮತ್ತು ವಿಡಿಯೋಗಳು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಕೇಂದ್ರ ಬಜೆಟ್ 2025 ಪುಟದಲ್ಲಿ ಒಂದೆಡೆಯೇ ಲಭ್ಯ ಇವೆ.
- ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಕೇಂದ್ರ ಬಜೆಟ್ 2025ರ ಭಾಷಣದ ನೇರ ಪ್ರಸಾರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲೂ ನೀವು ವೀಕ್ಷಿಸಬಹುದು.

ವಿಭಾಗ