Budget 2025: ಉಡಾನ್‌ ಯೋಜನೆಯಡಿ ಭಾರತದ ಹೊಸ 120 ಸ್ಥಳಗಳಿಗೆ ಸಂಪರ್ಕ, 4 ಕೋಟಿ ವಿಮಾನ ಯಾನ ಪ್ರಯಾಣಿಕರಿಗೆ ಉಪಯೋಗದ ಗುರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2025: ಉಡಾನ್‌ ಯೋಜನೆಯಡಿ ಭಾರತದ ಹೊಸ 120 ಸ್ಥಳಗಳಿಗೆ ಸಂಪರ್ಕ, 4 ಕೋಟಿ ವಿಮಾನ ಯಾನ ಪ್ರಯಾಣಿಕರಿಗೆ ಉಪಯೋಗದ ಗುರಿ

Budget 2025: ಉಡಾನ್‌ ಯೋಜನೆಯಡಿ ಭಾರತದ ಹೊಸ 120 ಸ್ಥಳಗಳಿಗೆ ಸಂಪರ್ಕ, 4 ಕೋಟಿ ವಿಮಾನ ಯಾನ ಪ್ರಯಾಣಿಕರಿಗೆ ಉಪಯೋಗದ ಗುರಿ

Union Budget 2025: ಭಾರತದಲ್ಲಿ ವಿಮಾನ ಸಂಪರ್ಕ ಜಾಲ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಬಾರಿಯ ಆಯವ್ಯಯದಲ್ಲಿ ಹಲವು ಕ್ರಮಗಳನ್ನು ಪ್ರಕಟಿಸಿದೆ.

ಈ ಬಾರಿ ಬಜೆಟ್‌ನಲ್ಲಿ ಉಡಾನ್‌ ಯೋಜನೆಗೆ ಒತ್ತು ನೀಡಲಾಗಿದೆ.
ಈ ಬಾರಿ ಬಜೆಟ್‌ನಲ್ಲಿ ಉಡಾನ್‌ ಯೋಜನೆಗೆ ಒತ್ತು ನೀಡಲಾಗಿದೆ.

Union Budget 2025: ಕೇಂದ್ರ ಸರ್ಕಾರವು ಭಾರತದಲ್ಲಿನ ವಿಮಾನ ಯಾನ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಂಪರ್ಕ ಜಾಲವನ್ನು ಬಲಪಡಿಸುವ ಭಾಗವಾಗಿ ಉಡಾನ್‌ ಯೋಜನೆಗೆ ಇನ್ನಷ್ಟು ಶಕ್ತಿ ತುಂಬುವುದಾಗಿ ಹೇಳಿದೆ. ಉಡಾನ್‌( ಉಡೇ ದೇಶ್‌ ಕ ಆಮ್‌ ನಾಗರೀಕ್‌) ಅಡಿ ಸಾಮಾನ್ಯ ನಾಗರೀಕರು ವಿಮಾನ ಯಾನ ಬಳಸಿಕೊಳ್ಳಬೇಕು ಎಂದು ಕೆಲ ವರ್ಷದ ಹಿಂದೆ ಘೋಷಿಸಿ ಜಾರಿಗೊಳಿಸಿರುವ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡುವ ಘೋಷಣೆಯನ್ನು ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಮಾಡಲಾಗಿದೆ. ಅಂದರೆ ಭಾರತದ ಸುಮಾರು ಹೊಸ 120 ಸ್ಥಳಗಳಿಗೆ ವಿಮಾನ ಯಾನವನ್ನು ಉಡಾನ್‌ ಅಡಿ ಕಲ್ಪಿಸಿಕೊಡುವ ಗುರಿಯನ್ನು ಮುಂದಿನ ಹತ್ತು ವರ್ಷಕ್ಕೆ ಹಾಕಿಕೊಳ್ಳಲಾಗಿದೆ. ಇದರಡಿ ಇನ್ನೂ ಹೆಚ್ಚುವರಿ 4 ಕೋಟಿ ಪ್ರಯಾಣಿಕರು ವಿಮಾನಯಾನ ಸೇವೆಯನ್ನು ಪಡೆದುಕೊಳ್ಳುವ ಅಂಶವನ್ನು ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಂಸತ್ತಿನಲ್ಲಿ ಶನಿವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಭಾರತದಲ್ಲಿನ ವಿಮಾನ ಯಾನ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ. ಉಡಾನ್‌ ಯೋಜನೆಯಡಿಯಲ್ಲಿ,ಈಗಾಗಲೇ 88 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ 619 ಮಾರ್ಗಗಳನ್ನು ಇದುವರೆಗೆ ಕಾರ್ಯಗತಗೊಳಿಸಲಾಗಿದೆ. ಇನ್ನೂ 120 ಸ್ಥಳಗಳನ್ನು ಸಂಪರ್ಕಿಸಲು ಸರ್ಕಾರವು ಮಾರ್ಪಡಿಸಿದ ಉಡಾನ್ ಯೋಜನೆಯನ್ನು ಪ್ರಾರಂಭಿಸಲಿದೆ.ಮಾರ್ಪಡಿಸಿದ ಯೋಜನೆಯು ಮುಂದಿನ 10 ವರ್ಷಗಳಲ್ಲಿ ಸುಮಾರು ನಾಲ್ಕು ಕೋಟಿ ಹೆಚ್ಚುವರಿ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದಾರೆ.

ಪ್ರಾದೇಶಿಕ ಸಂಪರ್ಕ ಯೋಜನೆಯು ಹೆಲಿಪ್ಯಾಡ್‌ಗಳು ಮತ್ತು ಗುಡ್ಡಗಾಡು ಮಹತ್ವಾಕಾಂಕ್ಷೆಯ ಮತ್ತು ಈಶಾನ್ಯ ಪ್ರಾದೇಶಿಕ ಜಿಲ್ಲೆಗಳಲ್ಲಿ ಸಣ್ಣ ವಿಮಾನ ನಿಲ್ದಾಣಗಳನ್ನು ಸಹ ಉಡಾನ್‌ ಯೋಜನೆ ಬೆಂಬಲಿಸಲಿದೆ ಎಂದು ಅವರು ಹೇಳಿದರು.

2016 ರಲ್ಲಿ ಪ್ರಾರಂಭವಾದ ಉಡಾನ್ ಯೋಜನೆಯು 1.4 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡಿದೆ. ಯೋಜನೆಯಡಿಯಲ್ಲಿ, ಎರಡು ವಾಟರ್ ಏರೋಡ್ರೋಮ್‌ಗಳು ಮತ್ತು 13 ಹೆಲಿಪೋರ್ಟ್‌ಗಳು ಸೇರಿದಂತೆ 88 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ 619 ಮಾರ್ಗಗಳನ್ನು ಇದುವರೆಗೆ ಕಾರ್ಯಗತಗೊಳಿಸಲಾಗಿದೆ.ಮಂಡಿಸಿದ ಆರ್ಥಿಕ ಸಮೀಕ್ಷೆ 2024-25, ಉಡಾನ್ ಯೋಜನೆಯಡಿಯಲ್ಲಿ ಹೊಸ ವಿಮಾನ ನಿಲ್ದಾಣಗಳು ಮತ್ತು ಸುಧಾರಿತ ಪ್ರಾದೇಶಿಕ ಸಂಪರ್ಕವು ವಾಯು ಸಂಪರ್ಕವನ್ನು ಗಣನೀಯವಾಗಿ ಸುಧಾರಿಸಿದೆ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಪ್ರಗತಿ ವರದಿಯಲ್ಲೂ ಉಲ್ಲೇಖಿಸಿದ್ದರು.

ಉಡಾನ್ ಯೋಜನೆಯ ಮೂಲಕ ಭಾರತದ ನಾನಾ ಭಾಗಗಳಲ್ಲಿ 71 ಏರ್​ಪೋರ್ಟ್, 13 ಹೆಲಿಪೋರ್ಟ್ ಮತ್ತು 2 ವಾಟರ್ ಏರೋಡ್ರೋಮ್ ಸೇರಿ ಒಟ್ಟು 86 ಏರೋಡ್ರೋಮ್​ಗಳನ್ನು ನಿರ್ಮಿಸಿ ಕಾರ್ಯಾಚರಿಸಲಾಗುತ್ತಿದೆ. 2.8 ಲಕ್ಷ ಫ್ಲೈಟ್​ಗಳು ಸಂಚರಿಸಿವೆ. 1.44 ಕೋಟಿ ಜನರು ಪ್ರಯಾಣಿಸಿದ್ದಾರೆ. 2014ರಲ್ಲಿ ಭಾರತದಲ್ಲಿ ಕಾರ್ಯಾಚರಣೆಯಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 74 ಇತ್ತು. 2024ರಲ್ಲಿ ಏರ್​ಪೋರ್ಟ್​ಗಳ ಸಂಖ್ಯೆ 157ಕ್ಕೆ ಏರಿದೆ. 2047ರಷ್ಟರಲ್ಲಿ ಈ ಸಂಖ್ಯೆಯನ್ನು 350-400ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಉಡಾನ್ ಸ್ಕೀಮ್ ಅನ್ನು ಹತ್ತು ವರ್ಷ ವಿಸ್ತರಿಸಲಾಗಿದೆ. ಅಂದರೆ, 2036ರವರೆಗೂ ಉಡಾನ್ ಸ್ಕೀಮ್ ಜಾರಿಯಲ್ಲಿರಲಿದೆ. ಇದಕ್ಕೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಒತ್ತು ನೀಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.