Union Budget: ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರು; ಸಂಸತ್ ಅಧಿವೇಶನದ ಪ್ರಮುಖ ದಿನಾಂಕ ಮತ್ತು ಇತರೆ ವಿವರ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget: ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರು; ಸಂಸತ್ ಅಧಿವೇಶನದ ಪ್ರಮುಖ ದಿನಾಂಕ ಮತ್ತು ಇತರೆ ವಿವರ ಹೀಗಿದೆ

Union Budget: ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರು; ಸಂಸತ್ ಅಧಿವೇಶನದ ಪ್ರಮುಖ ದಿನಾಂಕ ಮತ್ತು ಇತರೆ ವಿವರ ಹೀಗಿದೆ

Union Budget Session 2025: ಬಹಳ ದಿನಗಳಿಂದ ನಿರೀಕ್ಷಿಸುತ್ತಿರುವ ಕೇಂದ್ರ ಬಜೆಟ್ ಅಧಿವೇಶನಕ್ಕೆ ದಿನಗಣನೆ ಶುರುವಾಗಿದೆ. ಕೇಂದ್ರ ಬಜೆಟ್‌ 2025ರ ಮಂಡನೆ ದಿನಾಂಕವೂ ಸೇರಿ ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.

ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರುವಾಗಲಿದ್ದು, ಫೆಬ್ರವರಿ 1ಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ.
ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರುವಾಗಲಿದ್ದು, ಫೆಬ್ರವರಿ 1ಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ.

Union Budget Session 2025: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದೆ. ಹೌದು, ಕೇಂದ್ರ ಬಜೆಟ್‌ 2025ಕ್ಕೆ ದಿನಗಣನೆ ಶುರುವಾಗಿದೆ. ಸಂಸತ್ತಿನ ಈ ಸಲದ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರುವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು (ಶನಿವಾರ ) ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025- 26 ಅನ್ನು ಮಂಡಿಸಲಿದ್ದಾರೆ. ಇದಕ್ಕೂ ಮೊದಲು ಜನವರಿ 31ಕ್ಕೆ ಆರ್ಥಿಕ ಸಮೀಕ್ಷೆ ಪ್ರಕಟವಾಗಲಿದೆ.

ಕೇಂದ್ರ ಬಜೆಟ್‌ 2025: ಜನವರಿ 31ರಿಂದ ಏಪ್ರಿಲ್ 4ರ ಸಂಸತ್‌ನ ಬಜೆಟ್‌ ಅಧಿವೇಶನ

ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಿಂದ ಏಪ್ರಿಲ್ 4ರ ತನಕ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈ ಮಾಹಿತಿ ಪ್ರಕಾರ, ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ರಂದು ಪ್ರಾರಂಭವಾಗಿ ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಅಧಿವೇಶನದ ಎರಡನೇ ಭಾಗವು ಮಾರ್ಚ್ 10 ರಂದು ಪ್ರಾರಂಭವಾಗಿ ಏಪ್ರಿಲ್ 4 ರಂದು ಮುಕ್ತಾಯಗೊಳ್ಳಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮ ತಜ್ಞರೊಂದಿಗೆ ಮಧ್ಯಸ್ಥಗಾರರ ಜತೆಗಿನ ಸಮಾಲೋಚನೆಯನ್ನು ಮುಕ್ತಾಯಗೊಳಿಸಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ ಎಂಟನೇ ಕೇಂದ್ರ ಬಜೆಟ್ ಕೂಡ ಹೌದು.

18ನೇ ಲೋಕಸಭೆಯ ನಾಲ್ಕನೇ ಅಧಿವೇಶನ; ಕೇಂದ್ರ ಬಜೆಟ್ 2025ರ ಪ್ರಮುಖ ದಿನಾಂಕಗಳು

ಹದಿನೆಂಟನೇ ಲೋಕಸಭೆಯ ನಾಲ್ಕನೇ ಅಧಿವೇಶನಕ್ಕೆ ದಿನಗಣನೆ ಶುರುವಾಗಿದೆ. ಲೋಕಸಭೆ ಸದಸ್ಯರಿಗೆ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಕೇಂದ್ರ ಬಜೆಟ್ 2025ರ ಅಧಿವೇಶನವು ಜನವರಿ 31ರಂದು ಶುರುವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ಜನವರಿ 31ರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಶುರುವಾಗಲಿದೆ. ಅರ್ಧ ಗಂಟೆಯಲ್ಲಿ ರಾಷ್ಟ್ರಪತಿ ಭಾಷಣ ಪೂರ್ಣಗೊಂಡ ಬಳಿಕ, ಕಲಾಪಗಳು ನಡೆಯಲಿವೆ. ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಜನವರಿ 31 ರಿಂದ ಏಪ್ರಿಲ್ 4 ರ ತನಕ ರಜಾದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 1 ಗಂಟೆ ತನಕ, ಅಪರಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ತನಕ ನಡೆಯಲಿದೆ.

ಜನವರಿ 31 ರಂದು ರಾಷ್ಟ್ರಪತಿಯವರ ಭಾಷಣ ಮುಗಿದ ಬಳಿಕ, ಸಂಸತ್ತಿನಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಹಣಕಾಸು ಸಲಹೆಗಾರರು ಮತ್ತು ಅವರ ತಂಡ ಈ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸುತ್ತದೆ. ಈ ವರದಿಯು ದೇಶದ ಪ್ರಸಕ್ತ ಹಣಕಾಸು ಸ್ಥಿತಿಗತಿಯನ್ನು ಚಿತ್ರಣವನ್ನು ಕೊಡುತ್ತದೆ. ಅಲ್ಲದೆ, 2025-26ರ ಕೇಂದ್ರ ಬಜೆಟ್‌ನ ಫೋಕಸ್‌ ಯಾವ ಕಡೆಗೆ ಇರುತ್ತದೆ ಎಂಬ ಸುಳಿವನ್ನು ನೀಡುತ್ತದೆ.

ಕೇಂದ್ರ ಬಜೆಟ್‌ 2025ರ ಬಗ್ಗೆ ಈಗಾಗಲೇ ವ್ಯಾಪಕ ನಿರೀಕ್ಷೆಗಳು ಹುಟ್ಟಿಕೊಂಡಿವೆ. ರಾಷ್ಟ್ರದ ಮಧ್ಯಮ ವರ್ಗದ ಜನರು ಆದಾಯ ತೆರಿಗೆ ಕಡಿತವನ್ನು ನಿರೀಕ್ಷಿಸುತ್ತಿದ್ದಾರೆ. ಉದ್ಯಮಿಗಳು ಜಿಎಸ್‌ಟಿ ಕಡಿತವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗೆ ಹಲವು ನಿರೀಕ್ಷೆಗಳ ಕೇಂದ್ರ ಬಜೆಟ್‌ ಮಂಡನಗೆ ದಿನಗಣನೆ ಶುರುವಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.