ಕನ್ನಡ ಸುದ್ದಿ  /  Nation And-world  /  Union Government Approach On Chinese Presence In Indan Land Is Dangerous Says Rahul Gandhi

Rahul Gandhi: ಚೀನಾ ನಮ್ಮ ನೆಲ ಕಬಳಿಸಿರುವ ಸತ್ಯವನ್ನು ನಿರಾಕರಿಸುತ್ತಿರುವ ಕೇಂದ್ರದ ನಡೆ ಅಪಾಯಕಾರಿ: ರಾಹುಲ್‌ ಕಿಡಿ!

ಲಡಾಖ್‌ನಲ್ಲಿ ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವು, ಚೀನಾದ ವಶದಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹಲ್‌ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ ಎಂದು ರಾಹುಲ್‌ ಗುಡುಗಿದ್ದಾರೆ.

ರಾಹುಲ್‌ ಗಾಂಧಿ ಪತ್ರಿಕಾಗೋಷ್ಠಿ
ರಾಹುಲ್‌ ಗಾಂಧಿ ಪತ್ರಿಕಾಗೋಷ್ಠಿ (ANI)

ಶ್ರೀನಗರ: ಲಡಾಖ್‌ನಲ್ಲಿ ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವು, ಚೀನಾದ ವಶದಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹಲ್‌ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ ಎಂದು ರಾಹುಲ್‌ ಗುಡುಗಿದ್ದಾರೆ.

ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, "ಚೀನೀಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಅಪಾಯಕಾರಿ. ಈದು ಇನ್ನೂ ಹೆಚ್ಚು ಆಕ್ರಮಣಕಾರಿ ಯೋಜನೆಗಳನ್ನು ರೂಪಿಸಲು ಚೀನಿಯರನ್ನು ಪ್ರರೇಪಿಸುತ್ತದೆ.." ಎಂದು ಎಚ್ಚರಿಕೆ ನೀಡಿದರು.

"ಚೀನಿಯರೊಂದಿಗೆ ವ್ಯವಹರಿಸುವ ಮಾರ್ಗವೆಂದರೆ ಅವರೊಂದಿಗೆ ದೃಢವಾಗಿ ವ್ಯವಹರಿಸುವುದು ಮತ್ತು ಅವರು ನಮ್ಮ ನೆಲವನ್ನು ಕಬಳಿಸಿರುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸುವುದು.." ಎಂದು ರಾಹುಲ್‌ ಗಾಂಧಿ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಲಡಾಖ್‌ನ ಗಲ್ವಾನ್‌ನಲ್ಲಿ 2021ರಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ಸಂಭವಿಸಿತು. ಇದಾದ ಬಳಿಕ ಚೀನಿಯರು ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಕಬಳಿಸಿದರು. ಆದರೆ ಕೇಂದ್ರ ಸರ್ಕಾರ ಒಂದಿಂಚು ಭೂಮಿಯನ್ನೂ ನಾವು ಕಳೆದುಕೊಂಡಿಲ್ಲ ಎಂಧು ಹೇಳುತ್ತಿರುವುದು ದೇಶಕ್ಕೆ ಮಾಡುವ ದ್ರೋಹ ಎಂದು ರಾಹುಲ್‌ ಗಾಂಧಿ ಕಿಡಿಕಾರಿದರು.

"ನಾನು ಇತ್ತೀಚೆಗೆ ಕೆಲವು ಮಾಜಿ ಸೈನಿಕರನ್ನು ಭೇಟಿ ಮಾಡಿದ್ದೇನೆ. ಭಾರತೀಯ ಭೂಪ್ರದೇಶವನ್ನು ಚೀನೀಯರು ವಶಪಡಿಸಿಕೊಂಡಿರುವುದನ್ನು ಈ ಮಾಜಿ ಸೈನಿಕರ ನಿಯೋಗ ದೃಢಪಡಿಸಿದೆ. ಅಲ್ಲದೇ ಭಾರತೀಯ ಸೇನೆಯ ಹಲವು ಗಸ್ತು ಕೇಂದ್ರಗಳನ್ನೂ ಚೀನಿ ಸೈನಿಕರು ವಶಪಡಿಸಿಕೊಂಡಿರುವುದನ್ನು ಮಾಜಿ ಸೈನಿಕರ ನಿಯೋಗ ನನಗೆ ತಿಳಿಸಿದೆ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ನಾನು ಈ ಕುರಿತು ಪದೇ ಪದೇ ಹೇಳುತ್ತಲೇ ಇದ್ದೇನೆ. ಆದರೆ ಕೇಂದ್ರ ಸರ್ಕಾರ ಈ ಕುರಿತು ದೇಶಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ, ಜನರ ದಾರಿ ತಪ್ಪಿಸುತ್ತಿದೆ. ಕೇಂದ್ರದ ಈ ನಡೆ ಅತ್ಯಂತ ಅಪಾಯಕಾರಿಯಾಗಿದ್ದು, ಮತ್ತಷ್ಟು ಒಳನುಗ್ಗಲು ಚೀನಿಯರನ್ನು ಪ್ರೋತ್ಸಾಹಿಸುತ್ತಿದೆ ಎಂದು ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಇತ್ತೀಚಿಗೆ ದೆಹಲಿಯಲ್ಲಿ ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಅವರೊಂದಿಗಿನ ಸಂವಾದದಲ್ಲೂ, ರಾಹುಲ್‌ ಗಾಂಧಿ ಅವರು ಭಾರತ-ಚೀನಾ ಗಡಿ ವಿವಾದವನ್ನು ಪ್ರಸ್ತಾಪಿಸಿದ್ದರು. ನಾವು ನಿಮ್ಮ ಭೌಗೋಳಿಕತೆಯನ್ನು ಬದಲಾಯಿಸಬಲ್ಲೆವು ಎಂದು ಚೀನಿಯರು ನಮಗೆ ಸಂದೇಶ ಕಳುಹಿಸುತ್ತಿದ್ದು, ನಾವು ಲಡಾಖ್‌ ಮತ್ತು ಅರುಣಾಚಲ ಪ್ರದೇಶಕ್ಕೆ ನುಗ್ಗಬಲ್ಲೆವು ಎಂದು ನೇರ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದರು.

ಆದರೆ ಈ ಕುರಿತು ರಾಹುಲ್‌ ಗಾಂಧಿ ಅವರ ಅಭಿಪ್ರಾಯವನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿರುವ ಬಿಜೆಪಿ, " ರಾಹುಲ್‌ ಗಾಂಧಿ ಶಾಶ್ವತವಾಗಿ ಗೊಂದಲಕ್ಕೊಳಗಾಗಿದ್ದಾರೆ" ಎಂದು ಲೇವಡಿ ಮಾಡಿದೆ. "ತಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ರೀತಿಯಲ್ಲಿಯೇ, ಭಾರತವು ಚೀನಾದ ಮುಂದೆ ಶರಣಾಗಬೇಕು ಎಂಬ ಅವರ ಉದ್ದೇಶ ಇದರಿಂದ ಸ್ಪಷ್ಟವಾಗಿದೆ.." ಎಂದು ಬಿಜೆಪಿ ಹರಿಹಾಯ್ದಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.‌ ಜೈಶಂಕರ್‌, ವಾಸ್ತವವಾಗಿ ಚೀನಿಯರು ನಮ್ಮ ನೆಲ ಕಬಳಿಸಿದ್ದು 1962ರಲ್ಲಿ. ಆಗ ಜವಾಹರಲಾಲ್‌ ನೆಹರೂ ಅವರು ದೇಶದ ಪ್ರಧಾನಮಂತ್ರಿಯಾಗಿದ್ದರು ಎಂದು ರಾಹುಲ್‌ ಗಾಂಧಿ ವಿರುದ್ಧ ಗುಡುಗಿದ್ದಾರೆ.

ರಾಹುಲ್‌ ಗಾಂಧಿ ಗಡಿ ವಿವಾದಕ್ಕೆ ಸಂಬಂಧಿಸಿದ್ದಂತೆ ಕೆಲವೊಮ್ಮೆ ಸುಳ್ಳು ಹೇಳುತ್ತಾರೆ. ಅಲ್ಲದೇ ಈ ಸುಳ್ಳನ್ನು ಹರಡುವ ಮೂಲಕ ಅವರು ದೇಶದ ಭದ್ರತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಜೈಶಂಕರ್‌ ಪರೋಕ್ಷವಾಗಿ ಗಂಭೀರ ಆರೋಪ ಮಾಡಿದ್ದಾರೆ.

IPL_Entry_Point

ವಿಭಾಗ