OYO Rules: ನೂತನ ನಿಯಮ ಜಾರಿಗೆ ತಂದ ಓಯೋ; ಮದುವೆಯಾಗದ ಪುರುಷ-ಮಹಿಳಾ ಜೋಡಿಗೆ ಇನ್ಮುಂದೆ ಪ್ರವೇಶವಿಲ್ಲ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Oyo Rules: ನೂತನ ನಿಯಮ ಜಾರಿಗೆ ತಂದ ಓಯೋ; ಮದುವೆಯಾಗದ ಪುರುಷ-ಮಹಿಳಾ ಜೋಡಿಗೆ ಇನ್ಮುಂದೆ ಪ್ರವೇಶವಿಲ್ಲ!

OYO Rules: ನೂತನ ನಿಯಮ ಜಾರಿಗೆ ತಂದ ಓಯೋ; ಮದುವೆಯಾಗದ ಪುರುಷ-ಮಹಿಳಾ ಜೋಡಿಗೆ ಇನ್ಮುಂದೆ ಪ್ರವೇಶವಿಲ್ಲ!

OYO Rooms Booking: ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿ ಓಯೋ 2025ರ ಜನವರಿ 5ರಂದು ನೂತನ ನಿಯಮವೊಂದನ್ನು ಜಾರಿಗೆ ತಂದಿದ್ದು, ಅವಿವಾಹಿತ ಜೋಡಿಗೆ ಪ್ರವೇಶ ನಿರ್ಬಂಧಿಸಿದೆ.

Oyo Rules: ನೂತನ ನಿಯಮ ಜಾರಿಗೆ ತಂದ ಓಯೋ; ಮದುವೆಯಾಗದ ಪುರುಷ-ಮಹಿಳಾ ಜೋಡಿಗೆ ಇನ್ಮುಂದೆ ಪ್ರವೇಶವಿಲ್ಲ!
Oyo Rules: ನೂತನ ನಿಯಮ ಜಾರಿಗೆ ತಂದ ಓಯೋ; ಮದುವೆಯಾಗದ ಪುರುಷ-ಮಹಿಳಾ ಜೋಡಿಗೆ ಇನ್ಮುಂದೆ ಪ್ರವೇಶವಿಲ್ಲ!

ನವದೆಹಲಿ: ಭಾರತದ ಪ್ರಮುಖ ಲಾಡ್ಜ್​ ಬುಕ್ಕಿಂಗ್ ಕಂಪನಿಯಾದ ಓಯೋ (OYO) ನೂತನ ನಿಯಮವೊಂದನ್ನು ಜಾರಿಗೆ ತಂದಿದೆ. ಇನ್ಮುಂದೆ ಮದುವೆಯಾಗದ ಜೋಡಿಗೆ (ಪುರುಷ-ಮಹಿಳಾ ಜೋಡಿ) ಈ ಹೋಟೆಲ್​ಗಳಲ್ಲಿ ಯಾವುದೇ ಪ್ರವೇಶ ಇರುವುದಿಲ್ಲ. ಹೊಸ ಚೆಕ್ ಇನ್ ನೀತಿಯನ್ನು ಪ್ರಾರಂಭಿಸಿರುವ ಓಯೋ ಕಂಪನಿ, ಪ್ರತಿ ವರ್ಷದಂತೆ ಈ ಬಾರಿಯೂ ಪರಿಣಾಮಕಾರಿ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ನೀವು ದಂಪತಿಯಾಗಿದ್ದರೆ, ಪುರಾವೆ ನೀಡುವುದು ಕಡ್ಡಾಯವಾಗಿದೆ. ಪ್ರಸ್ತುತ ಈ ನಿಯಮವು ಮೀರತ್‌ನಲ್ಲಿ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲಿ ಜಾರಿಗೆ ತರುವುದಾಗಿ ಓಯೋ ಕಂಪನಿ ತಿಳಿಸಿದೆ. ಮೀರತ್​ನಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಸೂಚನೆ ನೀಡಲಾಗಿದೆ.

ಭಾರತದಲ್ಲಿ ಅತ್ಯಂತ ಜನಪ್ರಿಯ ಲಾಡ್ಜ್ ಬುಕ್ಕಿಂಗ್ ಕಂಪನಿ ಒಂದಾಗಿದೆ ಓಯೋ. ಅತ್ಯಂತ ಗುಣಮಟ್ಟತೆ, ಕಡಿಮೆ ದರದ ಸೇವೆಗಳನ್ನು ನೀಡುತ್ತಿರುವ ಓಯೋ, ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಜಾಲವನ್ನು ವಿಸ್ತರಿಸಿದೆ. ಮದುವೆಯಾಗವರಿಗೆ ಹೋಟೆಲ್ ಚೆಕ್​​ ಇನ್​ಗೆ ಅವಕಾಶ ನೀಡುತ್ತಿದ್ದ ಕಾರಣ ಗ್ರಾಹಕರಿಗೆ ಫೇವರಿಟ್ ಎನಿಸಿತ್ತು. ಹೀಗಾಗಿ ಬಹುಬೇಗನೇ ಜನಪ್ರಿಯವೂ ಪಡೆದಿತ್ತು. ಆದರೀಗ ಅವಿವಾಹಿತ ಜೋಡಿಗೆ ನಿರ್ಬಂಧ ವಿಧಿಸಿದೆ. ಓಯೋ ಸಂಸ್ಥೆಯು ಪ್ರಮುಖ ನಗರಗಳ ನಿವಾಸಿಗಳಿಂದ ಪ್ರತಿಕ್ರಿಯೆ ಪಡೆದಿತ್ತು. ಈ ವೇಳೆ ಮದುವೆಯಾಗದ ಜೋಡಿಗಳಿಗೆ ಚೆಕ್ ಇನ್ ನೀಡಬಾರದೆಂಬ ಒತ್ತಾಯ ಹೆಚ್ಚಾಗಿ ಕೇಳಿ ಬಂದಿತ್ತು. ಅಲ್ಲದೆ, ಇದಕ್ಕೆ ಸಂಬಂಧಿಸಿ ದೂರುಗಳನ್ನು ಸ್ವೀಕರಿಸಿತ್ತು. ಅದರಂತೆ ನೂತನ ನಿಯಮ ಜಾರಿ ಮಾಡಿದೆ.

ಪ್ರೂಫ್ ಇದ್ದರಷ್ಟೇ ಒಳಗೆ ಎಂಟ್ರಿ

ನೂತನ ನಿಯಮ ಹೇಳುವುದೇನೆಂದರೆ, ಹೋಟೆಲ್​ ಬುಕ್ ಮಾಡಿಕೊಳ್ಳುವ ಮತ್ತು ಹೋಟೆಲ್​ಗೆ ಬರುವ ಜೋಡಿ, ತಮಗೆ ಸಂಬಂಧಿಸಿದ ದಾಖಲೆಯೊಂದನ್ನು ತರಬೇಕು. ಅಂದರೆ ಪ್ರೂಫ್. ಒಂದು ವೇಳೆ ಹೋಟೆಲ್​​ಗೆ ಬರುವ ಜೋಡಿಗೆ ಸಂಬಂಧಿಸಿ ಯಾವುದೇ ಪುರಾವೆ ಇಲ್ಲದಿದ್ದರೆ ಅನುಮತಿ ನೀಡಲಾಗುವುದಿಲ್ಲ. ಪ್ರಸ್ತುತ ಮೀರತ್​​ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ನಿಯಮ ವಿಸ್ತರಿಸುತ್ತೇವೆ. ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವುದು ನಮ್ಮ ಮೊದಲ ಜವಾಬ್ದಾರಿಯಾಗಿದೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ನಾವು ಎಂದಿಗೂ ಬದ್ಧ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಹೇಳಿದ್ದಾರೆ.

ಗ್ರಾಹಕರಿಗೆ ಸುರಕ್ಷಿತ ಅನುಭವ ನೀಡುವುದು ಮೊದಲ ಆದ್ಯತೆ

ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಕಾನೂನು ನಿಯಮ ಪಾಲನೆ, ಸಾರ್ವಜನಿಕರ ದೂರುಗಳನ್ನು ಆಲಿಸುವ ಮತ್ತು ಅದನ್ನು ಕಾರ್ಯರೂಪಕ್ಕೆ ಜಾರಿಗೆ ತರುವ ಕೆಲಸ ಮಾಡುತ್ತೇವೆ. ಕುಟುಂಬವೇ ಬರಲಿ, ಒಬ್ಬರೇ ಬರಲಿ, ಬಿಸಿನೆಸ್ ಮ್ಯಾನ್ ಬರಲಿ, ಧಾರ್ಮಿಕ ವ್ಯಕ್ತಿಯೇ ಬರಲಿ.. ಒಟ್ಟಾರೆ ಗ್ರಾಹಕರಿಗೆ ಸುರಕ್ಷಿತ ಅನುಭವ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ತಮ್ಮ ಬ್ರಾಂಡ್ ಅನ್ನು ಉಳಿಸಿಕೊಳ್ಳಲು ಈ ನಿಯಮ ಮತ್ತಷ್ಟು ನೆರವಾಗಲಿದೆ ಎಂದು ಪವಾಸ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ. ಗ್ರಾಹಕರ ಸುರಕ್ಷಿತ ಅನುಭವಕ್ಕೆ ಸಂಬಂಧಿಸಿ ಮತ್ತಷ್ಟು ನಿಯಮಗಳನ್ನು ತರಲು ಓಯೋ ಮುಂದಾಗಿದೆ ಎಂದೂ ಹೇಳಲಾಗಿದೆ.

 

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.