ಕನ್ನಡ ಸುದ್ದಿ  /  Nation And-world  /  Up: Massive Fire Breaks Out In Firozabad; 6 People Charred To Death

UP Fire Accident: ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಸಜೀವ ದಹನ

ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಫಿರೋಜಾಬಾದ್​ನಲ್ಲಿ ಕಟ್ಟಡಕ್ಕೆ ಬೆಂಕಿ
ಫಿರೋಜಾಬಾದ್​ನಲ್ಲಿ ಕಟ್ಟಡಕ್ಕೆ ಬೆಂಕಿ

ಫಿರೋಜಾಬಾದ್ (ಉತ್ತರ ಪ್ರದೇಶ): ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಮೃತ ರಾಮನ್ ಕುಮಾರ್, ಎಲೆಕ್ಟ್ರಾನಿಕ್ಸ್ ಮತ್ತು ಆಭರಣ ಅಂಗಡಿಯ ಮಾಲೀಕನಾಗಿದ್ದು, ತನ್ನ ಒಂಬತ್ತು ಸದಸ್ಯರ ಕುಟುಂಬದೊಂದಿಗೆ ಅವಘಡ ಸಂಭವಿಸಿದ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಫಿರೋಜಾಬಾದ್ ಜಿಲ್ಲೆಯ ಜಸ್ರಾನಾ ಪ್ರದೇಶದ ಪಾಧಮ್ ಪಟ್ಟಣದಲ್ಲಿರುವ ಕಟ್ಟಡ ಇದಾಗಿದ್ದು, ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆಗ್ರಾ, ಇಟಾಹ್, ಮೈನ್‌ಪುರಿ ಮತ್ತು ಫಿರೋಜಾಬಾದ್‌ನಿಂದ 18 ಅಗ್ನಿಶಾಮಕ ವಾಹನಗಳು ಹಾಗೂ 12 ಠಾಣೆಗಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಯೋಗಿ ಆದಿತ್ಯನಾಥ್ ಸೂಚಿಸಿದ್ದು, ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಹೃದಯಾಘಾತಕ್ಕೊಳಗಾದ 58 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರಸ್ತೆ ಅಪಘಾತವಾಗಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ನೋಯ್ಡಾದ ಬಹ್ಲೋಲ್‌ಪುರದ ನಿವಾಸಿ ಭೂಪ್ ಸಿಂಗ್ ಎಂದು ಗುರುತಿಸಲಾಗಿದೆ. ಬುಲಂದ್‌ಶಹರ್‌ನ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಭೂಪ್ ಸಿಂಗ್​​ಗೆ ಹೃದಯಾಘಾತವಾಗಿದ್ದು, ಇವರ ಮಗ ಪ್ರದೀಪ್​ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಗ್ರೇಟರ್ ನೋಯ್ಡಾದಲ್ಲಿ ಹೆದ್ದಾರಿಯೊಂದರಲ್ಲಿ ಪಲ್ಟಿಯಾಗಿದೆ.

ಕಾರಿನಲ್ಲಿ ಭೂಪ್ ಸಿಂಗ್, ಪ್ರದೀಪ್​ ಜೊತೆಗೆ ಪ್ರದೀಪ್​ನ ಪತ್ನಿ ಹಾಗೂ ಅವರ ಒಂಬತ್ತು ವರ್ಷದ ಮಗಳಿದ್ದರು. ಘಟನೆಯಲ್ಲಿ ಭೂಪ್ ಸಿಂಗ್ ಮೃತಪಟ್ಟಿದ್ದು, ಪ್ರದೀಪ್​ನ ಪತ್ನಿ ಹಾಗೂ ಮಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಮನಿಸಬಹುದಾದ ಇತರೆ ಸುದ್ದಿ

ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್‌ ನಿಧನ, ಮುಖ್ಯಮಂತ್ರಿ ಸಂತಾಪ

ಯಕ್ಷಗಾನ ಲೋಕದ ಮಾಣಿಕ್ಯವೊಂದು ಕಳಚಿಕೊಂಡಿದೆ. ಖ್ಯಾತ ಯಕ್ಷಗಾನ ಮತ್ತು ತಾಳೆ ಮದ್ದಳೆ ಕಲಾವಿದರಾದ, ಮಾಜಿ ಶಾಸಕ ಕುಂಬ್ಳೆ ಸುಂದರರಾವ್‌ (88) ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳೂರಿನ ಪಂಪ್‌ವೆಲ್‌ನಲ್ಲಿ ಅವರು ವಾಸವಾಗಿದ್ದರು. ಅಂತ್ಯಸಂಸ್ಕಾರ ಇಂದು ನಡೆಯಲಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

IPL_Entry_Point