ಕನ್ನಡ ಸುದ್ದಿ  /  Nation And-world  /  Up Student Dies After Rape, Accused Tells Cops He Took Energy Boosting Pill

Unnao Student Rape: ಐಎಎಸ್ ಅಧಿಕಾರಿಯಾಗಬೇಕೆಂದಿದ್ದ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿ ಸಾವು

ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ನಡೆದಿದೆ.

ಐಎಎಸ್ ಅಧಿಕಾರಿಯಾಗಬೇಕೆಂದಿದ್ದ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿ ಸಾವು
ಐಎಎಸ್ ಅಧಿಕಾರಿಯಾಗಬೇಕೆಂದಿದ್ದ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿ ಸಾವು

ಉನ್ನಾವೊ (ಉತ್ತರ ಪ್ರದೇಶ): ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ನಡೆದಿದೆ.

ಅತ್ಯಾಚಾರ ಎಸಗಿದ ರಾಜ್ ಗೌತಮ್ ಎಂಬ 25 ವರ್ಷದ ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಮನೆಗೆ ನುಗ್ಗಿದ ಆರೋಪಿ ಆಕೆ ಮೇಲೆ ಎಗರಿದ್ದಾನೆ. ಕೃತ್ಯ ಎಸಗುವ ಮುನ್ನ ಲೈಂಗಿಕ ಶಕ್ತಿ ಹೆಚ್ಚಿಸುವ ಎರಡು ಮಾತ್ರೆಗಳನ್ನು ಸೇವಿಸಿದ್ದಾಗಿಯೂ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ತೀರಾ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಂತ್ರಸ್ತೆ ಬಿದ್ದಿರುವುದನ್ನು ಕಂಡ ಆಕೆಯ ಸಹೋದರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅತ್ಯಾಚಾರ, ಅತಿಯಾದ ರಕ್ತಸ್ರಾವ ಮತ್ತು ಆಘಾತದಿಂದ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ.

ಆಕೆಯ ಖಾಸಗಿ ಭಾಗಗಳಿಂದ ರಕ್ತಸ್ರಾವ ಪ್ರಾರಂಭವಾದ ತಕ್ಷಣವೇ ಆರೋಪಿ ರಾಜ್ ಗೌತಮ್ ಸ್ಥಳದಿಂದ ಪರಾರಿಯಾಗಿದ್ದನು. ಆರೋಪಿ ಮತ್ತು ಹುಡುಗಿಯ ನಡುವೆ ಚಾಟಿಂಗ್​ ನಡೆದಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಚಾಟಿಂಗ್​ನಲ್ಲಿ ಆರೋಪಿಯು ಹುಟುಗಿಯ ಮನೆಗೆ ಬರುವುದಾಗಿ ಹೇಳಿದ್ದು, ಇದಕ್ಕೆ ಆಕೆ ನಿರಾಕರಿಸಿದ್ದಳು.

ತಮ್ಮ ಮಗಳು ಅಧ್ಯಯನದತ್ತ ಗಮನಹರಿಸಿದ್ದಳು. ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದಳು. ಆಕೆಯ ಓದಿಗಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್​ನಿಂದ ಸಾಲ ಪಡೆದಿದ್ದವು ಎಂದು ಸಂತ್ರಸ್ತೆಯ ಪೋಷಕರು ಹೇಳಿದ್ದಾರೆ.

ಗಂಡನ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ..!

ಗಂಡನ ಎದುರೇ 45 ವರ್ಷದ ಮಹಿಳೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದಿದೆ. ರಾತ್ರಿ ದಂಪತಿ ಮಲಗಲು ತಯಾರಿ ನಡೆಸುತ್ತಿದ್ದಾಗ ನಾಲ್ವರು ದರೋಡೆ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಿದ್ದರು. ಹೆಚ್ಚಿನ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ದಂಪತಿಗೆ ಬೆದರಿಕೆ ಹಾಕಿದ್ದಾರೆ. ಆದರೆ ಅವರ ಬಳಿ ಬೆಳ್ಳಿ ಆಭರಣಗಳನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ.

ದರೋಡೆಕೋರರಿಗೆ ಬೇರೆ ಏನೂ ಸಿಗದಿದ್ದಾಗ, ಪತಿಯ ಮುಂದೆಯೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕೃತ್ಯ ಎಸಗಿದ ನಾಲ್ವರ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಿದ್ದಾರೆ

IPL_Entry_Point