ಕನ್ನಡ ಸುದ್ದಿ  /  Nation And-world  /  Upsc Epfo Recruitment 2023: Know How To Apply For 577 Posts On Upsconline.nic.in

UPSC EPFO Recruitment 2023: ಯುಪಿಎಸ್‌ಸಿ ಇಪಿಎಫ್‌ಒ ಹುದ್ದೆಗಳ ನೇಮಕ, 577 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿರುವ (ಇಪಿಎಫ್‌ಒ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

UPSC EPFO Recruitment 2023: Know how to apply for 577 posts on upsconline.nic.in
UPSC EPFO Recruitment 2023: Know how to apply for 577 posts on upsconline.nic.in

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿರುವ (ಇಪಿಎಫ್‌ಒ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್‌ ಪ್ರಾವಿಡೆಂಟ್‌ ಕಮಿಷನರ್‌ ಮತ್ತು ಎನ್‌ಫೋರ್ಸ್‌ಮೆಂಟ್‌ ಆಫೀಸರ್‌/ಅಕೌಂಟ್ಸ್‌ ಆಫೀಸರ್‌ ಹುದ್ದೆಗಳನ್ನು ಯುಪಿಎಸ್‌ಸಿ ಮೂಲಕ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್‌ 17 ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಒಟ್ಟು 577 ಎನ್‌ಪೋರ್ಸ್‌ಮೆಂಟ್‌ ಅಧಿಕಾರಿ, ಅಕೌಂಟ್ಸ್ ಅಧಿಕಾರಿ ಮತ್ತು ಸಹಾಯಕ ಭವಿಷ್ಯ ನಿಧಿ ಆಯುಕ್ತರ ಹುದ್ದೆಗಳಿವೆ. ನಿನ್ನೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇವುಗಳಲ್ಲಿ 418 ಎನ್‌ಪೋರ್ಸ್‌ಮೆಂಟ್‌ ಅಧಿಕಾರಿ/ಖಾತೆ ಅಧಿಕಾರಿ ಹುದ್ದೆಗಳಾಗಿವೆ. 159 ಹುದ್ದೆಗಳು ಅಸಿಸ್ಟೆಂಟ್‌ ಪ್ರಾವಿಡೆಂಟ್‌ ಕಮಿಷನರ್‌ ಹುದ್ದೆಗಳಾಗಿವೆ.

ವಯೋಮಿತಿ ಎಷ್ಟು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿವಿಧ ಕೆಟಗರಿಯ ಅಭ್ಯರ್ಥಿಗಳಿಗೆ ಸರಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ

25 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.

ವೇತನ ಎಷ್ಟು?

ಇದು ಉನ್ನತ ಆಫೀಸರ್‌ ಹುದ್ದೆಗಳಾಗಿರುವುದರಿಂದ ಕೈತುಂಬಾ ವೇತನ ಇರಲಿದೆ. ಎನ್‌ಫೋರ್ಸ್‌ಮೆಂಟ್ ಆಫೀಸರ್/ಅಕೌಂಟ್ಸ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದವರಿಗೆ ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಲೆವೆಲ್-08 ವೇತನ ಶ್ರೇಣಿ ಇರಲಿದೆ. ಸಹಾಯಕ ಭವಿಷ್ಯ ನಿಧಿ ಕಮಿಷನರ್ ಅಧಿಕಾರಿಗಳಿಗೆ ಇದೇ ಏಳನೇ ವೇತನ ಆಯೋಗದನ್ವಯ ಲೆವೆಲ್‌ 10 ಪೇ ಮೆಟ್ರಿಕ್ಸ್‌ ಅನ್ವಯ ವೇತನ ಶ್ರೇಣಿ ಇರಲಿದೆ.

ಅರ್ಜಿ ಸಲ್ಲಿಕೆ ಹೇಗೆ?

  • ಆಸಕ್ತ ಅರ್ಹ ಅಭ್ಯರ್ಥಿಗಳು ಮೊದಲು upsconline.nic.in ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮುಖಪುಟದಲ್ಲಿ “One-time registration (OTR) for examinations of UPSC and online application” ಎಂಬ ಲಿಂಕ್‌ ಇರುತ್ತದೆ. ಅದನ್ನು ಕ್ಲಿಕ್‌ ಮಾಡಿ.
  • ಕಾಣಿಸುವ ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿ
  • ಅರ್ಜಿ ಶುಲ್ಕ ಪಾವತಿಸಿ
  • ಅರ್ಜಿ ಸಲ್ಲಿಸಿ ಮತ್ತು ಭರ್ತಿ ಮಾಡಿದ ಅರ್ಜಿಯ ಪ್ರತಿಯೊಂದನ್ನು ಪ್ರಿಂಟೌಟ್‌ ತೆಗೆದುಕೊಳ್ಳಿ

ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸಲು ನೇರ ಲಿಂಕ್‌ ಇಲ್ಲಿದೆ

ಹೆಚ್ಚಿನ ಪಿಂಚಣಿ ಒದಗಿಸುವ ಇಪಿಎಸ್‌; ಹೊಸ ನಿಯಮ ಹೇಳುವುದೇನು?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯು, ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ಹೊಸ ಮಾರ್ಗಸೂಚಿಗಳನ್ನು ಹೊರತಂದಿದೆ. ಇಪಿಎಫ್‌ಒನ ಹೊಸ ಕಾರ್ಯವಿಧಾನವನ್ನು ಅನುಸರಿಸುವಲ್ಲಿ ಅವರು ವಿಫಲವಾದರೆ, ಕಡಿಮೆ ಪಿಂಚಣಿ ಪಡೆಯಬಹುದು. ಇಪಿಎಸ್ ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವುದಕ್ಕೆ ಇದೇ ಮಾರ್ಚ್ 3 ಕೊನೆ ದಿನ.

ಇಪಿಎಫ್‌ಒ, ನಿವೃತ್ತಿ ನಿಧಿ ಸಂಸ್ಥೆಯು ಹೊಸ ವಿಧಾನವನ್ನು ಪರಿಚಯಿಸಿದ್ದು, ಚಂದಾದಾರರು ಮತ್ತು ಅವರ ಉದ್ಯೋಗದಾತರು ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಜಂಟಿಯಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point