ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ, ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ ಮೇ 24ಕ್ಕೆ, ಮೇನ್ಸ್ ಆಗಸ್ಟ್ 21ಕ್ಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ, ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ ಮೇ 24ಕ್ಕೆ, ಮೇನ್ಸ್ ಆಗಸ್ಟ್ 21ಕ್ಕೆ

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ, ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ ಮೇ 24ಕ್ಕೆ, ಮೇನ್ಸ್ ಆಗಸ್ಟ್ 21ಕ್ಕೆ

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್‌ (ಯುಪಿಎಸ್‌ಸಿ) ತನ್ನ 2026ನೇ ಸಾಲಿನ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಂತೆ, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ 2026ರ ಮೇ 24 ರಂದು ನಡೆಯಲಿದೆ. ಉಳಿದ ವಿವರ, ವೇಳಾಪಟ್ಟಿಯ ಪಿಡಿಎಫ್ ಡೌನ್‌ಲೋಡ್ ಲಿಂಕ್‌ ಕೂಡ ಇಲ್ಲಿದೆ.

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ (ಸಾಂಕೇತಿಕ ಚಿತ್ರ)
ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ (ಸಾಂಕೇತಿಕ ಚಿತ್ರ)

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026: ಕೇಂದ್ರೀಯ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ತನ್ನ 2026ನೇ ಸಾಲಿನ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಂತೆ, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಪ್ರಿಲಿಮ್ಸ್ (ಯುಪಿಎಸ್‌ಸಿ ಸಿಎಸ್‌ಇ ಪ್ರಿಲಿಮ್ಸ್ ) 2026ರ ಮೇ 24 ರಂದು ನಡೆಯಲಿದೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಮೇನ್ಸ್ (ಯುಪಿಎಸ್‌ಸಿ ಸಿಎಸ್‌ಇ ಮೇನ್ಸ್) 2026ರ ಆಗಸ್ಟ್ 21 ರಂದು ನಡೆಯಲಿದೆ. ಯುಪಿಎಸ್‌ಸಿ ಸಿಎಸ್‌ಇ 2026ಕ್ಕೆ ಸಂಬಂಧಿಸಿದ ಅಧಿಸೂಚನೆಯು 2026ರ ಜನವರಿ 14ರಂದು ಪ್ರಕಟವಾಗಲಿದೆ. ಫೆಬ್ರವರಿ 3ರ ತನಕ ಅರ್ಜಿ ಸಲ್ಲಿಸುವುದಕ್ಕೆ ಕಾಲಾವಕಾಶ ಇರಲಿದೆ.

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಬಿಡುಗಡೆ

ಕೇಂದ್ರೀಯ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ತನ್ನ 2026ನೇ ಸಾಲಿನ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಪ್ರತಿ ಪರೀಕ್ಷೆಗಳ ವಿವರ ಅದರಲ್ಲಿ ನೀಡಿದೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ, ರಕ್ಷಣಾ ಸಚಿವಾಲಯವೂ ಸೇರಿ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳ ವೇಳಾಪಟ್ಟಿ, ಅಂತಿಮಗೊಳಿಸಿದ ದಿನಾಂಕವನ್ನೂ ವೇಳಾಪಟ್ಟಿಯಲ್ಲಿ ನಮೂದಿಸಿದೆ.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ/ ನೇವಲ್ ಅಕಾಡೆಮಿ ಮತ್ತು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (ಯುಪಿಎಸ್‌ಸಿ ಎನ್‌ಡಿಎ/ಎನ್‌ಎ, ಸಿಡಿಎಸ್‌ 1) ಪರೀಕ್ಷೆ 2026ರ ಏಪ್ರಿಲ್ 12 ರಂದು ನಡೆಯಲಿದೆ.

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026 ಪಿಡಿಎಫ್ ಡೈರೆಕ್ಟ್ ಡೌನ್‌ಲೋಡ್ ಲಿಂಕ್‌

ಯುಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ 2026ರ ದಿನಾಂಕಗಳು ಸಮಯ, ಸಂದರ್ಭಕ್ಕೆ ಅನುಗುಣವಾಗಿ ಪರಿಷ್ಕರಣೆಗೆ ಒಳಗಾಗುವ ಸಾಧ್ಯತೆಯೂ ಇದೆ. ಉಳಿದಂತೆ ಈ ವೇಳಾಪಟ್ಟಿಯಲ್ಲಿ ಬದಲಾವಣೆ ಇರಲಾರದು ಎಂದು ಕೇಂದ್ರೀಯ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ವೇಳಾಪಟ್ಟಿಯಲ್ಲೇ ತಿಳಿಸಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.