ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2ನೇ ಅವಧಿ ಸೋಮವಾರ ಶುರು, 40 ವರ್ಷದಲ್ಲಿ ಮೊದಲ ಬಾರಿ ಒಳಾಂಗಣದಲ್ಲಿ ಪ್ರಮಾಣವಚನ, ಏನೇನು ಕಾರ್ಯಕ್ರಮ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2ನೇ ಅವಧಿ ಸೋಮವಾರ ಶುರು, 40 ವರ್ಷದಲ್ಲಿ ಮೊದಲ ಬಾರಿ ಒಳಾಂಗಣದಲ್ಲಿ ಪ್ರಮಾಣವಚನ, ಏನೇನು ಕಾರ್ಯಕ್ರಮ

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2ನೇ ಅವಧಿ ಸೋಮವಾರ ಶುರು, 40 ವರ್ಷದಲ್ಲಿ ಮೊದಲ ಬಾರಿ ಒಳಾಂಗಣದಲ್ಲಿ ಪ್ರಮಾಣವಚನ, ಏನೇನು ಕಾರ್ಯಕ್ರಮ

Donald Trump Inauguration: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತ ಸೋಮವಾರ ಶುರುವಾಗಲಿದೆ. 40 ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಳಾಂಗಣದಲ್ಲಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ನೆರವೇರಲಿದೆ. ಏನೇನು ಕಾರ್ಯಕ್ರಮ ಎಂಬಿತ್ಯಾದಿ ವಿವರ ಇಲ್ಲಿದೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2ನೇ ಅವಧಿ ಸೋಮವಾರ ಶುರುವಾಗಲಿದ್ದು, 40 ವರ್ಷದಲ್ಲಿ ಮೊದಲ ಬಾರಿ ಒಳಾಂಗಣದಲ್ಲಿ ಪ್ರಮಾಣವಚನ ನಡೆಯಲಿದೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2ನೇ ಅವಧಿ ಸೋಮವಾರ ಶುರುವಾಗಲಿದ್ದು, 40 ವರ್ಷದಲ್ಲಿ ಮೊದಲ ಬಾರಿ ಒಳಾಂಗಣದಲ್ಲಿ ಪ್ರಮಾಣವಚನ ನಡೆಯಲಿದೆ. (REUTERS)

Donald Trump Inauguration: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತ ಸೋಮವಾರದಿಂದ ಶುರುವಾಗಲಿದೆ. ವಿಶೇಷ ಎಂದರೆ 40 ವರ್ಷದಲ್ಲಿ ಇದೇ ಮೊದಲ ಸಲ ಅಧ್ಯಕ್ಷರ ಪ್ರಮಾಣವಚನ ಸಮಾರಂಭ ಒಳಾಂಗಣದಲ್ಲಿ ನಡೆಯಲಿದೆ. ಡೊನಾಲ್ಡ್ ಟ್ರಂಪ್‌ ಅವರ ಪ್ರಮಾಣವಚನ ಒಳಾಂಗಣದಲ್ಲಿ ನಡೆಯಲಿದೆ ಎಂದು ಸ್ವತಃ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಅಂದರೆ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರು. ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಆಡಳಿತ ಕೊನೆಗೊಳ್ಳುತ್ತಿದ್ದು, ಸೋಮವಾರದಿಂದ ಟ್ರಂಪ್ 2ನೇ ಅವಧಿ ಸೋಮವಾರ ಶುರುವಾಗಲಿದೆ. ಒಂದಷ್ಟು ಆಡಳಿತ ಬದಲಾವಣೆಗಳನ್ನೂ ನಿರೀಕ್ಷಿಸಲಾಗುತ್ತಿದೆ.

ಟ್ರಂಪ್ 2ನೇ ಅವಧಿ ಸೋಮವಾರ ಶುರು

ಎರಡನೇ ಬಾರಿಗೆ ಶ್ವೇತಭವನವನ್ನು ಪ್ರವೇಶಿಸಲಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹವಾಮಾನ ವೈಪರೀತ್ಯದ ಕಾರಣ ಜನವರಿ 20 ರಂದು ಯುಎಸ್ ಕ್ಯಾಪಿಟಲ್ ರೊಟುಂಡಾದಲ್ಲಿ ಉದ್ಘಾಟನಾ ಸಮಾರಂಭದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಸ್ಥಳ ಬದಲಾವಣೆಯ ಹೊರತಾಗಿಯೂ, ಉದ್ಘಾಟನಾ ಸಮಾರಂಭವು ಐತಿಹಾಸಿಕ ಮತ್ತು ಸ್ಮರಣೀಯವಾಗಿರುತ್ತದೆ. ಕ್ಯಾಪಿಟಲ್ ಒನ್ ಅರೆನಾದಲ್ಲಿ ನೇರ ವೀಕ್ಷಣೆ ಸೇರಿದಂತೆ ಅಧ್ಯಕ್ಷೀಯ ಮೆರವಣಿಗೆ ಮತ್ತು ಇತರ ಚಟುವಟಿಕೆಗಳು ಯೋಜಿಸಿದಂತೆ ಮುಂದುವರಿಯಲಿದೆ ಎಂದು ಟ್ರಂಪ್ ಭರವಸೆ ನೀಡಿದರು.

ಈ ಹಿಂದೆ, ರೊನಾಲ್ಡ್ ರೇಗನ್ ಅವರು 1985ರಲ್ಲಿ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವಾಗ ಕಾರ್ಯಕ್ರಮ ಒಳಾಂಗಣದಲ್ಲಿ ನಡೆದಿತ್ತು. ಅಂದು ಹವಮಾನ ವೈಪರೀತ್ಯ ಇದ್ದ ಕಾರಣ ಆ ರೀತಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಡೊನಾಲ್ಡ್ ಟ್ರಂಪ್ ಪ್ರಮಾಣವಚನ; ಏನೇನು ಕಾರ್ಯಕ್ರಮ

ಪ್ರಮಾಣ ವಚನ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡ ಡೊನಾಲ್ಡ್‌ ಟ್ರಂಪ್, "ಈ ಐತಿಹಾಸಿಕ ಕಾರ್ಯಕ್ರಮದ ನೇರ ವೀಕ್ಷಣೆಗಾಗಿ ಮತ್ತು ಅಧ್ಯಕ್ಷೀಯ ಪರೇಡ್ ಅನ್ನು ಆಯೋಜಿಸಲು ನಾವು ಸೋಮವಾರ ಕ್ಯಾಪಿಟಲ್ ಒನ್ ಅರೆನಾವನ್ನು ತೆರೆಯುತ್ತೇವೆ. ನನ್ನ ಪ್ರಮಾಣ ವಚನದ ನಂತರ ನಾನು ಕ್ಯಾಪಿಟಲ್ ಒನ್‌ನಲ್ಲಿ ಜನರೊಂದಿಗೆ ಬೆರೆಯುತ್ತೇನೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಕ್ಯಾಪಿಟಲ್ ಒನ್ ಅರೆನಾದಲ್ಲಿ ವಿಕ್ಟರಿ ರ‍್ಯಾಲಿ (ಮಧ್ಯಾಹ್ನ 1 ಗಂಟೆಗೆ ಬಾಗಿಲು ತೆರೆಯಲಿದೆ. ದಯವಿಟ್ಟು ಬೇಗ ಬನ್ನಿ!) ಮತ್ತು ಸೋಮವಾರ ಸಂಜೆ ಎಲ್ಲಾ ಮೂರು ಉದ್ಘಾಟನಾ ಬಾಲ್‌ಗಳು ಸೇರಿದಂತೆ ಇತರ ಘಟನೆಗಳು ಒಂದೇ ಆಗಿರುತ್ತವೆ" ಎಂದು ಹೇಳಿಕೊಂಡಿದ್ದಾರೆ.

2025ರ ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು 2017 ರಿಂದ 2021, ಜನವರಿ 20, 2017, ಜನವರಿ 20, 2021 ರವರೆಗೆ 45 ನೇ ಯುಎಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

40 ವರ್ಷದಲ್ಲಿ ಮೊದಲ ಬಾರಿ ಒಳಾಂಗಣದಲ್ಲಿ ಪ್ರಮಾಣವಚನ; ಕ್ಯಾಪಿಟಲ್ ರೊಟುಂಡಾ ಹೇಗಿದೆ

ಯುಎಸ್‌ ಕ್ಯಾಪಿಟಲ್‌ನ ಮಧ್ಯಭಾಗದಲ್ಲಿರುವ ರೊಟುಂಡಾ ದೊಡ್ಡದಾದ, ಗುಮ್ಮಟದ, ವೃತ್ತಾಕಾರದ ಹಾಲ್‌. ಇದು ನೇರವಾಗಿ ರೋಟುಂಡಾ ಕ್ಯಾಪಿಟಲ್ ಗುಮ್ಮಟದ ಅಡಿಯಲ್ಲಿದೆ. ಇದನ್ನು ಸಾಮಾನ್ಯವಾಗಿ ಕಾಂಗ್ರೆಸ್ ಸಮಾರಂಭಗಳು ಮತ್ತು ಆಚರಣೆಗಳಿಗೆ ಬಳಸಲಾಗುತ್ತದೆ ಎಂದು ಸಿಎನ್‌ಬಿಸಿ ನ್ಯೂಸ್ ವರದಿ ಮಾಡಿದೆ. ಎಪಿ ವರದಿಯ ಪ್ರಕಾರ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ನ್ಯಾಷನಲ್ ಮಾಲ್‌ಗೆ ಪರ್ಯಾಯವಾಗಿ ರೋಟುಂಡಾವನ್ನು ಪ್ರಮಾಣವಚನ ಸಮಾರಂಭಕ್ಕೆ ಬಳಸಲಾಗುತ್ತದೆ.

ಜನವರಿ 20 ಬೇಗ ಬರ್ತಾ ಇಲ್ಲ. ಆದಾಗ್ಯೂ, ನಮ್ಮ ದೇಶದ ಜನರನ್ನು ರಕ್ಷಿಸುವುದು ನನ್ನ ಹೊಣೆಗಾರಿಕೆ. ನಾವು ಅಧಿಕಾರ ಸ್ವೀಕರಿಸುವ ಮೊದಲು ಪ್ರಮಾಣ ವಚನ ಸ್ವೀಕಾರದ ಬಗ್ಗೆ ಯೋಚಿಸಬೇಕು. ವಾಷಿಂಗ್ಟನ್‌ ಡಿಸಿಯ ಹವಾಮಾನ ಮುನ್ಸೂಚನೆ ನೋಡಿದರೆ ಪ್ರತಿಕೂಲ ಹವಾಮಾನದ ಸುಳಿವು ಸಿಕ್ಕಿದೆ ಎಂದು ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್ ಪ್ಲಾಟ್‌ಫಾರಂನಲ್ಲಿ ಹೇಳಿಕೊಂಡಿರುವುದಾಗಿ ಎಎನ್‌ಐ ವರದಿ ಮಾಡಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.