Joe biden Dating Advice: 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಡೇಟಿಂಗ್‌ ಸಲಹೆ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌, ಏನಂದ್ರು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Joe Biden Dating Advice: 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಡೇಟಿಂಗ್‌ ಸಲಹೆ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌, ಏನಂದ್ರು?

Joe biden Dating Advice: 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಡೇಟಿಂಗ್‌ ಸಲಹೆ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌, ಏನಂದ್ರು?

Joe biden Dating Advice: ಕ್ಯಾಲಿಫೋರ್ನಿಯಾದ ಇರ್ವಿನ್‌ ವ್ಯಾಲಿ ಕಾಲೇಜಿನಲ್ಲಿ ಶುಕ್ರವಾರ "ಆಡಳಿತದ ನೀತಿಗಳು ಮತ್ತು ಹಣದುಬ್ಬರʼʼದ ಕುರಿತು ಜೋ ಬಿಡೆನ್‌ ಮಾತನಾಡಿದ್ದರು. ಮಾತು ಮುಗಿಸಿ ವೇದಿಕೆಯಿಂದ ಕೆಳಗೆ ಇಳಿದ ಅವರು ವಿದ್ಯಾರ್ಥಿಗಳ ಜತೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅವರು "ಡೇಟಿಂಗ್‌ʼʼ ಕುರಿತು ಮಾತನಾಡಿದ್ದಾರೆ.

<p>30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಡೇಟಿಂಗ್‌ ಸಲಹೆ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌</p>
30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಡೇಟಿಂಗ್‌ ಸಲಹೆ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌

Joe biden: ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌ ಅವರು ಯುವತಿಯೊಬ್ಬರಿಗೆ ನೀಡಿದ ಟಿಪ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಷ್ಟಕ್ಕೂ ಅಮೆರಿಕದ ಅಧ್ಯಕ್ಷರು ಆ ಯುವತಿಗೆ "30 ವರ್ಷದವರೆಗೆ ಡೇಟಿಂಗ್‌ ಮಾಡಬಹುದು, ತಪ್ಪೇನಿಲ್ಲʼʼ ಎಂದಿದ್ದಾರೆ.

ಕ್ಯಾಲಿಫೋರ್ನಿಯಾದ ಇರ್ವಿನ್‌ ವ್ಯಾಲಿ ಕಾಲೇಜಿನಲ್ಲಿ ಶುಕ್ರವಾರ "ಆಡಳಿತದ ನೀತಿಗಳು ಮತ್ತು ಹಣದುಬ್ಬರʼʼದ ಕುರಿತು ಜೋ ಬಿಡೆನ್‌ ಮಾತನಾಡಿದ್ದರು. ಮಾತು ಮುಗಿಸಿ ವೇದಿಕೆಯಿಂದ ಕೆಳಗೆ ಇಳಿದ ಅವರು ವಿದ್ಯಾರ್ಥಿಗಳ ಜತೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅವರು "ಡೇಟಿಂಗ್‌ʼʼ ಕುರಿತು ಮಾತನಾಡಿದ್ದಾರೆ.

ಅಮೆರಿಕದ ಅಧ್ಯಕ್ಷರಾದ ಜೋ ಬಿಡೆನ್‌ ಅವರು ಫೋಟೂಶೂಟ್‌ ಸಮಯದಲ್ಲಿ ವಿದ್ಯಾರ್ಥಿಗಳ ಜತೆ ಆತ್ಮೀಯವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತನ್ನ ಮುಂದಿದ್ದ ವಿದ್ಯಾರ್ಥನಿಗೆ ಆಪ್ತವಾಗಿ ನಗುಮುಖದಿಂದ ಪೋಸ್‌ ಕೊಟ್ಟು ಈ ಟಿಪ್ಸ್‌ ನೀಡಿದ್ದಾರೆ.

"ನಾನು ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಬಹಳ ಮುಖ್ಯವಾದ ವಿಷಯ ಹೇಳುತ್ತೇನೆ. 30 ವರ್ಷದವರೆಗೆ ಯಾವುದನ್ನೂ ಗಂಭೀರವಾಗಿ ಮಾಡದಿರಿʼʼ ಎಂದು ಅವರು ಹೇಳಿದ್ದಾರೆ. 79 ವರ್ಷ ವಯಸ್ಸಿನ ಅಮೆರಿಕದ ಅಧ್ಯಕ್ಷರು ಹೇಳಿದ ಈ ಮಾತು ಕೇಳಿ ಆ ಹುಡುಗಿ ಅಚ್ಚರಿಯಿಂದ ನೋಡಿದ್ದಾಳೆ. "ಆಯ್ತು, ನಿಮ್ಮ ಮಾತು ಗಮನದಲ್ಲಿಟ್ಟುಕೊಳ್ಳುವೆʼʼ ಎಂದು ಹೇಳಿದ್ದಾಳೆ.

ಈ ವಿಡಿಯೋ ಮಿಲಿಯನ್‌ಗಟ್ಟಲೆ ವ್ಯೂಸ್‌ ಪಡೆದುಕೊಂಡಿದೆ. "ಇದು ಶಿಸ್ತಿನ ಅಪ್ಪ, ತನ್ನ ಮಕ್ಕಳಿಗೆ ನೀಡಿದ ಸಲಹೆಯಂತೆ ಇದೆʼʼ ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ. ಇನ್ನು ಕೆಲವರು, "ಆ ಹುಡುಗಿಗೆ ಕಂಫರ್ಟ್‌ ಆಗಿಲ್ಲ, ಅವಳಿಗೆ ಮುಜಗರ ಆಗಿದೆʼʼ ಎಂದು ಇನ್ನು ಕೆಲವರು ಹೇಳಿದ್ದಾರೆ.

ಒಟ್ಟಾರೆ ಹಿರಿಯರೊಬ್ಬರು ಹೇಳಿದ ಸಲಹೆಯನ್ನು ಯುವಜನತೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೋ, ನೀವು ಟಿಪ್ಸ್‌ ನೀಡಿದರೂ, ನೀಡದೆ ಇದ್ದರೂ ನಾವು ಡೇಟಿಂಗ್‌ ಮಾಡೋದೇ ಎನ್ನುತ್ತಾರೋ ಗೊತ್ತಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿಯಂತೂ ಬಿಡೆನ್‌ ಟಿಪ್ಸ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.