ಅಮೆರಿಕದಲ್ಲಿ ಮತ್ತೊಂದು ವೈಮಾನಿಕ ದುರಂತ: ಶಾಪಿಂಗ್ ಮಾಲ್, ಮನೆಗಳಿಗೆ ಹಾನಿ; ಹಲವರು ಸಾವಿನ ಶಂಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದಲ್ಲಿ ಮತ್ತೊಂದು ವೈಮಾನಿಕ ದುರಂತ: ಶಾಪಿಂಗ್ ಮಾಲ್, ಮನೆಗಳಿಗೆ ಹಾನಿ; ಹಲವರು ಸಾವಿನ ಶಂಕೆ

ಅಮೆರಿಕದಲ್ಲಿ ಮತ್ತೊಂದು ವೈಮಾನಿಕ ದುರಂತ: ಶಾಪಿಂಗ್ ಮಾಲ್, ಮನೆಗಳಿಗೆ ಹಾನಿ; ಹಲವರು ಸಾವಿನ ಶಂಕೆ

ಅಮೆರಿಕದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನ ಅಪಘಾತ ಸಂಭವಿಸಿದೆ. ಶಾಪಿಂಗ್‌ ಮಾಲ್‌ ಬಳಿ ವಿಮಾನ ಪತನಗೊಂಡಿದ್ದು, ಹಲವು ಮನೆಗಳಿಗೆ ಬೆಂಕಿ ಬಿದ್ದಿದೆ ಎಂದು ವರದಿಯಾಗಿದೆ. ಘಟನೆಯಿಂದ ಹಲವರು ಸಾವನ್ನಪ್ಪಿರುವ ಶಂಕೆ ಇದೆ.

ಅಮೆರಿಕದಲ್ಲಿ ಮತ್ತೊಂದು ವೈಮಾನಿಕ ದುರಂತ: ಶಾಪಿಂಗ್ ಮಾಲ್-ಮನೆಗಳಿಗೆ ಹಾನಿ; ಹಲವರು ಸಾವಿನ ಶಂಕೆ
ಅಮೆರಿಕದಲ್ಲಿ ಮತ್ತೊಂದು ವೈಮಾನಿಕ ದುರಂತ: ಶಾಪಿಂಗ್ ಮಾಲ್-ಮನೆಗಳಿಗೆ ಹಾನಿ; ಹಲವರು ಸಾವಿನ ಶಂಕೆ (AP)

ಫಿಲಡೆಲ್ಫಿಯಾ (ಯುಎಸ್‌ಎ): ಅಮೆರಿಕದ ಫಿಲಡೆಲ್ಫಿಯಾದಲ್ಲಿ ಶನಿವಾರ (ಭಾರತೀಯ ಕಾಲಮಾನ) ಲಘು ವಿಮಾನ ಅಪಘಾತಕ್ಕೀಡಾಗಿದೆ. ವಾಷಿಂಗ್ಟನ್‌ ವಿಮಾನ ದುರಂತದ ನೆನಪು ಮಾಸುವ ಮುನ್ನವೇ ಯುಎಸ್‌ನಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಶಾಪಿಂಗ್‌ ಮಾಲ್‌ ಮೇಲೆ ವಿಮಾನ ಬಿದ್ದು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಶನಿವಾರ (ಫೆ.1) ಬೆಳಗಿನ ಜಾವ ಫಿಲಡೆಲ್ಫಿಯಾದ ಶಾಪಿಂಗ್ ಮಾಲ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಲವಾರು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಸಾವುನೋವು ಸಂಭವಿಸುವ ಸಾಧ್ಯತೆ ಇದೆ. ಕನಿಷ್ಠ ಇಬ್ಬರು ಪ್ರಯಾಣಿಕರನ್ನು ಹೊತ್ತ ವಿಮಾನವು ಶಾಪಿಂಗ್ ಮಾಲ್ ಬಳಿ ಅಪಘಾತಕ್ಕೀಡಾಗಿದ್ದು, ಸಾವುನೋವುಗಳು ಸಂಭವಿಸಿವೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಬಿಎನ್‌ಒ ನ್ಯೂಸ್ ತಿಳಿಸಿದೆ. ಆದರೆ, ಸಾವುನೋವುಗಳ ಬಗ್ಗೆ ಅಧಿಕೃತ ದೃಢೀಕರಣ ಇನ್ನಷ್ಟೇ ಸಿಗಬೇಕಿದೆ. ಫಿಲಾಡೆಲ್ಫಿಯಾ ತುರ್ತು ನಿರ್ವಹಣಾ ಕಚೇರಿಯು, ಅಪಘಾತ ಸಂಭವಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದೆ, ಆದರೆ ಹೆಚ್ಚುವರಿ ಯಾವುದೇ ವಿವರಗಳನ್ನು ನೀಡಿಲ್ಲ.

ಘಟನೆಯ ದೃಶ್ಯಗಳು

ಕನಿಷ್ಠ ಇಬ್ಬರು ಪ್ರಯಾಣಿಕರನ್ನು ಹೊತ್ತ ಲಘು ವಿಮಾನ ಅಪಘಾತಕ್ಕೀಡಾಗಿದ್ದು, ಈಶಾನ್ಯ ಫಿಲಡೆಲ್ಫಿಯಾದ ರೂಸ್ವೆಲ್ಟ್ ಮಾಲ್ ಬಳಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯನ್ನು ರಾಯಿಟರ್ಸ್‌ ಉಲ್ಲೇಖಿಸಿದೆ. ಕನಿಷ್ಠ ಒಂದು ಮನೆ ಮತ್ತು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಫಿಲಡೆಲ್ಫಿಯಾ ಇನ್ಕ್ವೈರರ್ ವರದಿ ಮಾಡಿದೆ. ಅಪಘಾತದ ಸಮಯದಲ್ಲಿ ಮಳೆ ಇದ್ದು, ಕಡಿಮೆ ಗೋಚರತೆ ಇತ್ತು.

ಇತ್ತೀಚೆಗಷ್ಟೇ 67 ಜನರು ಸಾವು

ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕನ್ ಏರ್ಲೈನ್ಸ್ ಜೆಟ್ ಮತ್ತು ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡುವೆ ಅಪಘಾತ ಸಂಭವಿಸಿದೆ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಇದು 2009ರ ನಂತರ ಯುಎಸ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತವಾಗಿದೆ. ಅಪಘಾತದಲ್ಲಿ 67 ಜನರು ಸಾವನ್ನಪ್ಪಿದ್ದಾರೆ.‌

ಫಿಲಡೆಲ್ಫಿಯಾ ಸಿಬಿಎಸ್ ಅಂಗಸಂಸ್ಥೆ ಪ್ರಸಾರ ಮಾಡಿದ ದೃಶ್ಯಗಳಲ್ಲಿ. ಅಪಘಾತದ ಸ್ಥಳದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸುತ್ತಿದೆ. ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿವೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ದೃಶ್ಯಗಳ ಪ್ರಕಾರ, ವಿಮಾನವು ಮನೆಗಳಿರುವ ಪ್ರದೇಶಕ್ಕೆ ಡಿಕ್ಕಿ ಹೊಡೆದಿದೆ ಎಂದು ತೋರಿಸಿದೆ.

ಅಪಘಾತದ ಸ್ಥಳವು ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ ಸುಮಾರು 4.8 ಕಿಲೋಮೀಟರ್ ದೂರದಲ್ಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.