ಮದುವೆ ಮನೆಯಲ್ಲಿ ವಧು ಮಾಡಿದ ಕುತಂತ್ರಕ್ಕೆ ಮೂರ್ಛೆ ತಪ್ಪಿದ್ದ ವರ, ಕುಟುಂಬಕ್ಕೆ ಕಾದಿತ್ತು ದಿಗ್ಭ್ರಮೆ; ಅಷ್ಟಕ್ಕೂ ನಡೆದಿದ್ದೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮದುವೆ ಮನೆಯಲ್ಲಿ ವಧು ಮಾಡಿದ ಕುತಂತ್ರಕ್ಕೆ ಮೂರ್ಛೆ ತಪ್ಪಿದ್ದ ವರ, ಕುಟುಂಬಕ್ಕೆ ಕಾದಿತ್ತು ದಿಗ್ಭ್ರಮೆ; ಅಷ್ಟಕ್ಕೂ ನಡೆದಿದ್ದೇನು?

ಮದುವೆ ಮನೆಯಲ್ಲಿ ವಧು ಮಾಡಿದ ಕುತಂತ್ರಕ್ಕೆ ಮೂರ್ಛೆ ತಪ್ಪಿದ್ದ ವರ, ಕುಟುಂಬಕ್ಕೆ ಕಾದಿತ್ತು ದಿಗ್ಭ್ರಮೆ; ಅಷ್ಟಕ್ಕೂ ನಡೆದಿದ್ದೇನು?

ಮದುವೆ ಮನೆ ಎಂದರೆ ಸಂಭ್ರಮ ತುಂಬಿರುತ್ತೆ, ಆದರೆ ಅಲ್ಲಿ ದಿಗ್ಭ್ರಮೆ ಹುಟ್ಟಿಸುವ ಘಟನೆ ನಡೆದಿತ್ತು. ವಧು ಮಾಡಿದ ಕುತಂತ್ರಕ್ಕೆ ವರ ಮೂರ್ಛೆ ತಪ್ಪಿದ್ದು ಮಾತ್ರವಲ್ಲ ಮನೆಯವರೆಲ್ಲ ಶಾಕ್‌ಗೆ ಒಳಗಾಗಿದ್ದರು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ, ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನು?

ಮದುವೆ ಮನೆಯಲ್ಲಿ ವಧು ಮಾಡಿದ ಕುತಂತ್ರಕ್ಕೆ ಮೂರ್ಛೆ ತಪ್ಪಿದ್ದ ವರ; ಅಷ್ಟಕ್ಕೂ ನಡೆದಿದ್ದೇನು?
ಮದುವೆ ಮನೆಯಲ್ಲಿ ವಧು ಮಾಡಿದ ಕುತಂತ್ರಕ್ಕೆ ಮೂರ್ಛೆ ತಪ್ಪಿದ್ದ ವರ; ಅಷ್ಟಕ್ಕೂ ನಡೆದಿದ್ದೇನು?

ಮದುವೆ ಮನೆ ಎಂದರೆ ಸಂಭ್ರಮ, ಸಡಗರ ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮದುವೆ ಮನೆಗಳಲ್ಲಿ ನಡೆಯುವ ಘಟನೆಗಳು ಹೀಗೂ ಆಗಲು ಸಾಧ್ಯವೇ ಎಂದು ಗಾಬರಿ ಹುಟ್ಟಿಸುತ್ತವೆ. ಇತ್ತೀಚಿಗೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದು ಇಂತಹ ಘಟನೆಗಳು ನಿಜ ಜೀವನದಲ್ಲೂ ನಡೆಯಲು ಸಾಧ್ಯವೇ ಎಂಬ ಭಾವನೆ ಮೂಡುವಂತೆ ಮಾಡಿದೆ.

ಏನಿದು ಘಟನೆ?

ಮದುವೆ ಮುಗಿಸಿ ನವ ವಧು ಮನೆಗೆ ತುಂಬಿದಾಗ ಆ ಮನೆಯಲ್ಲಿ ಸಂತೋಷದ ಹೊಳೆ ಹರಿಯುತ್ತದೆ. ಆದರೆ ಈ ಮನೆಯಲ್ಲಿ ಸಂತೋಷದ ಬದಲು ಬಿರುಗಾಳಿ ಎದ್ದಿತ್ತು. ಅದಕ್ಕೆ ಕಾರಣ ಮನೆ ತುಂಬಿದ್ದ ವಧು.

ಮದುವೆಯಾದ ಎರಡನೇ ರಾತ್ರಿ ವಧು ಹೂಡಿದ್ದ ತಂತ್ರ ಮದುವೆಯ ಮನೆಯ ಸಂಭ್ರಮವನ್ನೇ ತಲೆ ಕೆಳಗು ಮಾಡಿತ್ತು. ವಧು ಮಾಡಿದ ಕುತಂತ್ರಕ್ಕೆ ವರ ಮೂರ್ಛೆ ತಪ್ಪಿ ಬಿದಿದ್ದ, ಮಾತ್ರವಲ್ಲ ಮನೆಯವರೆಲ್ಲಾ ದಿಗ್ಭ್ರಮೆಗೆ ಒಳಗಾಗಿದ್ದರು.

ಮದುವೆಯಾದ ಮೂರನೇ ದಿನ ಬೆಳಿಗ್ಗೆ ವಧು–ವರರು ಕೋಣೆ ಬಿಟ್ಟು ಹೊರಗೆ ಬಾರದೇ ಇರುವುದನ್ನು ಕಂಡು ಗಾಬರಿಯಾದ ಮನೆಯವರು ಕೋಣೆ ಪ್ರವೇಶಿಸಿ ನೋಡಿದರೆ ಮೂರ್ಛೆ ಬಿದ್ದ ವರ ಕಾಣಿಸಿದ್ದ ಹೊರತು ವಧುವಿನ ಸುಳಿವೂ ಅಲ್ಲಿರಲಿಲ್ಲ. ಆದರೆ ಆ ಕ್ಷಣಕ್ಕೆ ಯಾರಿಗೂ ಆಕೆಯ ಮೇಲೆ ಅನುಮಾನ ಮೂಡಿರಲಿಲ್ಲ. ನಿಧಾನಕ್ಕೆ ಎಲ್ಲಾ ಕಡೆ ಆಕೆಗಾಗಿ ಹುಡುಕಾಟ ನಡೆಸಲಾಗಿತ್ತು, ಆದರೆ ಆಕೆ ನಾಪತ್ತೆಯಾಗಿದ್ದಳು.

ವಧು ಮಾತ್ರ ನಾಪತ್ತೆಯಾಗಿದ್ದಲ್ಲ, ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ನಗದು ಚಿನ್ನಾಭರಣವೂ ವಧುವಿನ ಜೊತೆಗೆ ನಾಪತ್ತೆಯಾಗಿದ್ದವು. ಆಗ ಮದುಮಗಳು ಕುತಂತ್ರ ಮಾಡಿ ಮನೆಯಿಂದ ಎಲ್ಲಾ ವಸ್ತುಗಳೊಂದಿಗೆ ಓಡಿ ಹೋಗಿದ್ದು ಮನೆಯವರ ಗಮನಕ್ಕೆ ಬರುತ್ತದೆ.

ವರನ ಮನೆಯವರು ಪೊಲೀಸರಿಗೆ ದೂರು ನೀಡುತ್ತಾರೆ. ಆಕೆ ಓಡಿಹೋಗಲು ಸಹಾಯ ಮಾಡಿದ್ದಕ್ಕಾಗಿ ಇಬ್ಬರು ಸಂಬಂಧಿಕರ ಮೇಲೆಯೂ ಅನುಮಾನ ವ್ಯಕ್ತಪಡಿಸಿ ಅವರ ಮೇಲೂ ದೂರು ನೀಡುತ್ತಾರೆ. ಆದರೆ ವಧುವಿನ ಸುಳಿವು ಸಿಗುವುದಿಲ್ಲ.

ಈ ಪ್ರಕರಣ ಬದೌನ್ ಜಿಲ್ಲೆಯ ಅಲಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಂಡಿ ಫಾಜಿಲ್ ನಾಗ್ಲಾ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ವ್ಯಕ್ತಿಯೊಬ್ಬರು ಮೇ 19 ರಂದು ಸಿವಿಲ್ ಲೈನ್ಸ್ ಕೊತ್ವಾಲಿ ಪ್ರದೇಶದ ಶೇಖುಪುರದ ಮಧ್ಯವರ್ತಿಯ ಮೂಲಕ 1.5 ಲಕ್ಷ ರೂ.ಗೆ ಬಿಹಾರದ ಹುಡುಗಿಯೊಂದಿಗೆ ತನ್ನ ಮಗನ ಮದುವೆಯನ್ನು ನಿಶ್ಚಯಿಸಿದ್ದರು. ಮೊದಲ ರಾತ್ರಿ ವಧು ಮನೆಯಲ್ಲೇ ಇದ್ದಳು. ಆದರೆ ಎರಡನೇ ರಾತ್ರಿ ಮನೆಯಲ್ಲಿಟ್ಟಿದ್ದ 10,000 ರೂಪಾಯಿ ನಗದು, ಒಂದು ಜೊತೆ ಚಿನ್ನದ ಕಿವಿಯೋಲೆ, ಮಂಗಳಸೂತ್ರ, ಬೆಳ್ಳಿಯ ಕಾಲ್ಗೆಜ್ಜೆ ಮತ್ತು ದುಬಾರಿ ಮದುವೆ ಬಟ್ಟೆಗಳನ್ನು ತೆಗೆದುಕೊಂಡು ಓಡಿಹೋಗಿದ್ದಳು.

ವರನಿಗೆ ಮಾದಕ ವಸ್ತು ನೀಡಿ ಪ್ರಜ್ಞೆ ತಪ್ಪಿಸಿದ್ದ ವಧು

ಕುಟುಂಬ ಸದಸ್ಯರು ಹೇಳುವ ಪ್ರಕಾರ, ವಧು ತನ್ನ ಪತಿಗೆ ಮಾದಕ ವಸ್ತು ನೀಡಿದ್ದರಿಂದ ಆತ ಪ್ರಜ್ಞೆ ತಪ್ಪಿದ್ದ. ಆದರೆ ಮದುವೆಯ ಆಯಾಸದಿಂದಾಗಿ ಕುಟುಂಬದ ಉಳಿದವರು ಗಾಢ ನಿದ್ರೆಯಲ್ಲಿದ್ದರು. ಇದರ ಲಾಭ ಪಡೆದುಕೊಂಡ ವಧು ಸದ್ದಿಲ್ಲದೆ ಮನೆಯಿಂದ ಹೊರಟುಹೋದಳು. ಬೆಳಿಗ್ಗೆ ಅವಳು ಕಾಣೆಯಾಗಿರುವುದನ್ನು ಕುಟುಂಬ ಸದಸ್ಯರು ಕಂಡುಕೊಂಡಾಗ, ಅವರು ಆಘಾತಕ್ಕೊಳಗಾಗಿದ್ದಾರೆ.

ಸಿನಿಮಾಗಳಲ್ಲಷ್ಟೇ ಇಂತಹ ಘಟನೆಗಳನ್ನು ನೋಡಿದ್ದ ಅವರು ನಿಜ ಜೀವನದಲ್ಲೂ ತಮ್ಮ ಮನೆಯಲ್ಲೂ ಆಗಿರುವುದು ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಇದೀಗ ವಧುವಿನ ಹುಡುಕಾಟದಲ್ಲಿ ಪೊಲೀಸರು ಹಾಗೂ ವರನ ಮನೆಯವರು ನಿರತರಾಗಿದ್ದಾರೆ. ಈ ಕಿಲಾಡಿ ವಧು ಎಲ್ಲಿದ್ದಾಳೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.