ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೃಷ್ಣ ಜನ್ಮಭೂಮಿಯ ಮಥುರಾ ದೇವಸ್ಥಾನ ಕೆಡವಿದ್ದು ಔರಂಗಜೇಬ್‌; ಆರ್‌ಟಿಐ ಪ್ರಶ್ನೆಗೆ ಪುರಾತತ್ತ್ವ ಇಲಾಖೆ ಉತ್ತರ

ಕೃಷ್ಣ ಜನ್ಮಭೂಮಿಯ ಮಥುರಾ ದೇವಸ್ಥಾನ ಕೆಡವಿದ್ದು ಔರಂಗಜೇಬ್‌; ಆರ್‌ಟಿಐ ಪ್ರಶ್ನೆಗೆ ಪುರಾತತ್ತ್ವ ಇಲಾಖೆ ಉತ್ತರ

ಔರಂಗಜೇಬ್ ಕೃಷ್ಣ ಜನ್ಮಭೂಮಿಯ ದೇವಸ್ಥಾನವನ್ನು ಕೆಡವಿದ್ದ, ಮಥುರಾದಲ್ಲಿ ಎಎಸ್‌ಐ ದೊಡ್ಡ ಬಹಿರಂಗಪಡಿಸಿದೆ ಉತ್ತರ ಪ್ರದೇಶದ ಮೈನ್‌ಪುರಿಯ ಅಜಯ್‌ ಪ್ರತಾಪ್‌ ಸಿಂಗ್‌ ಅವರು ಕೇಶವದೇವ್‌ ದೇಗುಲ ಕೆಡವಿದ ಬಗ್ಗೆ ಮಾಹಿತಿ ಕೋರಿ ಆರ್‌ಟಿಐ ಸಲ್ಲಿಸಿದ್ದರು. ಇದು ಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿದೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದಲ್ಲಿರುವ ಕೃಷ್ಣ ಜನ್ಮಭೂಮಿ ಮಥುರಾ ದೇವಸ್ಥಾನ ಕೆಡವಿದ್ದು ಔರಂಗಜೇಬ್‌ ಎಂಬುದಕ್ಕೆ ಸಂಬಂಧಿಸಿ ಪುರಾತತ್ತ್ವ ಇಲಾಖೆ ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ. (ಸಾಂಕೇತಿಕ ಚಿತ್ರ)
ಉತ್ತರ ಪ್ರದೇಶದಲ್ಲಿರುವ ಕೃಷ್ಣ ಜನ್ಮಭೂಮಿ ಮಥುರಾ ದೇವಸ್ಥಾನ ಕೆಡವಿದ್ದು ಔರಂಗಜೇಬ್‌ ಎಂಬುದಕ್ಕೆ ಸಂಬಂಧಿಸಿ ಪುರಾತತ್ತ್ವ ಇಲಾಖೆ ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ. (ಸಾಂಕೇತಿಕ ಚಿತ್ರ) (Live Hindustan)

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ದೇವಸ್ಥಾನದ ಕುರುಹುಗಳು ಕಂಡುಬಂದಿರುವುದು, ಅಲ್ಲಿನ ದಕ್ಷಿಣ ನೆಲಮಾಳಿಗೆಯಲ್ಲಿ ನಿತ್ಯಪೂಜೆಗೆ ಸ್ಥಳೀಯ ನ್ಯಾಯಾಲಯ ಅನುಕೂಲ ಮಾಡಿಕೊಟ್ಟ ಸುದ್ದಿ ಚರ್ಚೆಯಲ್ಲಿದೆ. ಹೀಗಿರುವಾಗಲೇ, ಶ್ರೀಕೃಷ್ಣ ಜನ್ಮಭೂಮಿ ಮಥುರಾದ ದೇವಸ್ಥಾನಕ್ಕೆ ಸಂಬಂಧಿಸಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಮಥುರಾದಲ್ಲಿರುವ ಕೃಷ್ಣನ ಜನ್ಮಸ್ಥಳಕ್ಕೆ ಸಂಬಂಧಿಸಿ ಆರ್‌ಟಿಐಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಮೊಘಲ್ ದೊರೆ ಔರಂಗಜೇಬ್ ಮಸೀದಿಗೆ ದಾರಿ ಮಾಡಿಕೊಡಲು ಸಂಕೀರ್ಣದಲ್ಲಿರುವ ಹಿಂದೂ ದೇವಾಲಯವನ್ನು ಕೆಡವಿದ್ದಾನೆ ಎಂದು ಬಹಿರಂಗಪಡಿಸಿದೆ.

ಆದಾಗ್ಯೂ, ಆರ್‌ಟಿಐ ಉತ್ತರದಲ್ಲಿ ನಿರ್ದಿಷ್ಟವಾಗಿ 'ಕೃಷ್ಣ ಜನ್ಮಭೂಮಿ' ಎಂದು ಉಲ್ಲೇಖಿಸಲಾಗಿಲ್ಲ. ಆದರೆ ಕೇಶವದೇವ ದೇವಸ್ಥಾನವನ್ನು ಉಲ್ಲೇಖಿಸಲಾಗಿದೆ. ಶಾಹಿ ಈದ್ಗಾ ತೆರವಿಗೆ ನಡೆಯುತ್ತಿರುವ ಕಾನೂನು ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಆರ್‌ಟಿಐ ಪ್ರತಿಕ್ರಿಯೆ ಮಹತ್ವ ಪಡೆಯಬಹುದು ಎಂದು ಹೇಳಲಾಗುತ್ತಿದೆ.

ಮಥುರಾ ದೇವಾಲಯ ಕೆಡವಿದ್ದಕ್ಕೆ 1920ರ ಗಜೆಟ್‌ ದಾಖಲೆಗಳ ಆಧಾರ

ಉತ್ತರ ಪ್ರದೇಶದ ಮೈನ್‌ಪುರಿಯ ಅಜಯ್‌ ಪ್ರತಾಪ್‌ ಸಿಂಗ್‌ ಅವರು ಕೇಶವದೇವ್‌ ದೇಗುಲ ಕೆಡವಿದ ಬಗ್ಗೆ ಮಾಹಿತಿ ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಈ ದೇವಾಲಯವು ಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿದೆ ಎಂದು ಹೇಳಲಾಗಿದೆ. ಆರ್‌ಟಿಐ ಅರ್ಜಿಗೆ ಎಎಸ್‌ಐ ಆಗ್ರಾ ಸರ್ಕಲ್‌ನ ಅಧಿಕಾರಿ ಉತ್ತರ ನೀಡಿದ್ದಾರೆ. ವಿವಾದಿತ ಸ್ಥಳದಲ್ಲಿದ್ದ ಕೇಶವದೇವ ದೇವಾಲಯವನ್ನು ಮೊಘಲ್ ದೊರೆ ಕೆಡವಿದ್ದು ಇತಿಹಾಸದ ದಾಖಲೆಗಳ ಪ್ರಕಾರ ದೃಢಪಟ್ಟಿದೆ ಎಂಬ ಅಂಶ ಉತ್ತರದಲ್ಲಿದೆ.

ಕೃಷ್ಣ ಜನ್ಮಭೂಮಿಯ 1920 ಗೆಜೆಟ್‌ನ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಎಎಸ್‌ಐ ಮಥುರಾ ಈ ಮಾಹಿತಿಯನ್ನು ನೀಡಿದ್ದಾರೆ. ‘ಈ ಹಿಂದೆ ಕೇಶವದೇವನ ಮಂದಿರವಿದ್ದ ನಾಝುಲ್‌ನ ವಶದಲ್ಲಿರದ ಕತ್ರಾ ದಿಬ್ಬದ ಕೆಲವು ಭಾಗಗಳನ್ನು ಕೆಡವಿ ಔರಂಗಜೇಬನ ಮಸೀದಿಗೆ ಬಳಸಲಾಯಿತು...’ ಎಂಬ ಗೆಜೆಟ್‌ನ ಆಯ್ದ ಭಾಗಗಳೂ ಇದರಲ್ಲಿ ಸೇರಿದ್ದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪುರಾತತ್ತ್ವ ಇಲಾಖೆಯ ಆರ್‌ಟಿಐ ಉತ್ತರ ಏಕೆ ಮುಖ್ಯ

ದೇವಾಲಯ ಕೆಡವಿದ್ದಕ್ಕೆ ಸಂಬಂಧಿಸಿ ಮಸೀದಿಯ ವಿರುದ್ಧದ ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಪ್ರಮುಖ ಸಾಕ್ಷ್ಯವನ್ನು ಪ್ರಸ್ತುತಪಡಿಸುವುದಾಗಿ ಹೇಳುತ್ತಾರೆ.

ದೇವಸ್ಥಾನವನ್ನು ಕೆಡವಿದ ಬಳಿಕ ಅಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಇದೀಗ ಆರ್‌ಟಿಐಗೆ ಪ್ರತಿಕ್ರಿಯೆಯಾಗಿ ಎಎಸ್ಐ ನೀಡಿರುವ ಮಾಹಿತಿ ಕೂಡ ಇದಕ್ಕೆ ಪೂರಕವಾಗಿಯೇ ಇದೆ.

'ಐತಿಹಾಸಿಕ ಪುರಾವೆಗಳ ಆಧಾರದ ಮೇಲೆ, ಔರಂಗಜೇಬ್ 1670 ಸಿಇಯಲ್ಲಿ ಮಥುರಾದ ಕೇಶವದೇವ ದೇವಾಲಯವನ್ನು ಕೆಡವಲು ಆದೇಶವನ್ನು ನೀಡಿದ್ದರು ಎಂದು ನಾವು ನಮ್ಮ ಅರ್ಜಿಯಲ್ಲಿ ಹೇಳಿದ್ದೇವೆ' ಎಂದು ಅವರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

ಶಾಹಿ ಈದ್ಗಾ ಮಸೀದಿ ಪ್ರಕರಣದ ವಿಚಾರಣೆ ಫೆಬ್ರವರಿ 22 ರಂದು ನಡೆಯಲಿದೆ. ಈ ಮುಂದಿನ ವಿಚಾರಣೆಯ ಸಮಯದಲ್ಲಿ ನಾವು ಎಎಸ್‌ಐ ಅವರ ಉತ್ತರವನ್ನು ಹೈಕೋರ್ಟ್‌ನಲ್ಲಿ ಪ್ರಸ್ತುತಪಡಿಸುತ್ತೇವೆ. ಇದರಿಂದ ಶಾಹಿ ಈದ್ಗಾ ಮಸೀದಿಯ ಸರ್ವೇ ನಡೆಸಬೇಕು ಎಂಬ ನಮ್ಮ ಬೇಡಿಕೆಗೆ ಬಲ ಬರಲಿದೆ ಎಂದು ಅವರ ವಿವರಿಸಿದ್ದಾಗಿ ವರದಿ ಹೇಳಿದೆ.

ಶಾಹಿ ಈದ್ಗಾ ಮಸೀದಿಯ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಈ ನಿಷೇಧವು ಏಪ್ರಿಲ್ ಮಧ್ಯದವರೆಗೆ ಜಾರಿಯಲ್ಲಿರುತ್ತದೆ.

ಟಿ20 ವರ್ಲ್ಡ್‌ಕಪ್ 2024