ಶಿವಲಿಂಗದ ಬಳಿಯೇ ಕೈ ತೊಳೆದ ಯುಪಿ ಸಚಿವ; ಬಿಜೆಪಿ ಬ್ರಾಹ್ಮಣರು ಏನ್ ಮಾಡಿದ್ರೂ ಸರಿ ಎಂದ ವಿರೋಧ ಪಕ್ಷಗಳು VIDEO
Viral Video: ವೈರಲ್ ಆದ ವಿಡಿಯೋದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡಿರಲಾಗುತ್ತದೆ. ಅರ್ಚಕರೊಬ್ಬರಿಗೆ ಸನ್ನೆ ಮಾಡಿ ಕೈ ತೊಳೆಯಲು ನೀರು ಕೊಡುವಂತೆ ಸಚಿವ ಸತೀಶ್ ಶರ್ಮಾ ಸೂಚಿಸುತ್ತಾರೆ. ಅವರು ಬಿಂದಿಗೆಯಲ್ಲಿ ನೀರು ಕೊಡುತ್ತಿದ್ದಂತೆಯೇ ಶಿವಲಿಂಗವನ್ನು ಇರಿಸಿದ್ದ ನೀರಿನ ಕುಂಡದೊಳಗೇ ಸತೀಶ್ ಶರ್ಮಾ ಕೈ ತೊಳೆಯುವುದು ಕಂಡು ಬರುತ್ತದೆ.

ಉತ್ತರ ಪ್ರದೇಶ: ಬಾರಾಬಂಕಿಯ ರಾಂಪುರದಲ್ಲಿರುವ ಐತಿಹಾಸಿಕ ಲೋಧೇಶ್ವರ ಮಹಾದೇವ ದೇವಸ್ಥಾನದ ಶಿವಲಿಂಗದ ಬಳಿ ಉತ್ತರ ಪ್ರದೇಶದ ಆಹಾರ ಮತ್ತು ಸರಬರಾಜು ರಾಜ್ಯ ಸಚಿವ ಸತೀಶ್ ಶರ್ಮಾ ಅವರು ಕೈತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮಾತ್ರವಲ್ಲ, ಟೀಕೆಗಳ ಸುರಿಮಳೆಯೇ ಹರಿದು ಬಂದಿದೆ.
ಟ್ರೆಂಡಿಂಗ್ ಸುದ್ದಿ
ಆಗಸ್ಟ್ 27 ರಂದು ನಡೆದ ಘಟನೆ ಇದಾಗಿದ್ದು, ಇದೀಗ ವೈರಲ್ ಆಗಿದೆ. ರಾಮನಗರ ತಹಸಿಲ್‌ನ ಹೆತ್ಮಾಪುರ್ ಗ್ರಾಮದಲ್ಲಿ ಪ್ರವಾಹ ಪೀಡಿತ ವ್ಯಕ್ತಿಗಳಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಸತೀಶ್ ಶರ್ಮಾ ಮತ್ತು ಸಚಿವ ಜಿತಿನ್ ಪ್ರಸಾದ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಾಂಪುರದಲ್ಲಿರುವ ಪುರಾತನ ದೇವಾಲಯದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ್ದರು
ವೈರಲ್ ಆದ ವಿಡಿಯೋದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡಿರಲಾಗುತ್ತದೆ. ಅರ್ಚಕರೊಬ್ಬರಿಗೆ ಸನ್ನೆ ಮಾಡಿ ಕೈ ತೊಳೆಯಲು ನೀರು ಕೊಡುವಂತೆ ಸಚಿವ ಸತೀಶ್ ಶರ್ಮಾ ಸೂಚಿಸುತ್ತಾರೆ. ಅವರು ಬಿಂದಿಗೆಯಲ್ಲಿ ನೀರು ಕೊಡುತ್ತಿದ್ದಂತೆಯೇ ಶಿವಲಿಂಗವನ್ನು ಇರಿಸಿದ್ದ ನೀರಿನ ಕುಂಡದೊಳಗೇ ಸತೀಶ್ ಶರ್ಮಾ ಕೈ ತೊಳೆಯುವುದು ಕಂಡು ಬರುತ್ತದೆ.
ಶಿವಲಿಂಗಕ್ಕೆ ಅಗೌರವ ತೋರಿದ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಪಕ್ಷದ ನಾಯಕರು ಬಿಜೆಪಿ ಮತ್ತು ಸಚಿವ ಶರ್ಮಾ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. "ಬಾಬಾ ಭೋಲೆನಾಥರ ಶಿವಲಿಂಗದ ಅರ್ಘ್ಯದಲ್ಲಿ ಕೈತೊಳೆಯುತ್ತಿರುವ ಈ ಬಿಜೆಪಿ ಸಚಿವ ಸತೀಶ್ ಶರ್ಮಾರು ಪಾಪಿ, ಅಧರ್ಮಿ. ಇದು ಸನಾತನ ಧರ್ಮದ ಭೋಲೆನಾಥನಿಗೆ ಮಾಡಿದ ಅವಮಾನ. ಯೋಗಿ ಆದಿತ್ಯನಾಥರ ಸರ್ಕಾರ ಅವರನ್ನು ಸಂಪುಟದಿಂದ ಕೈಬಿಡುವುದೇ" ಎಂದು ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್ ಟ್ವೀಟ್ ಮಾಡಿದ್ದಾರೆ.
"ಆದಿತ್ಯನಾಥ್ ಸರ್ಕಾರದಲ್ಲಿ, ರಾಜ್ಯ ಸಚಿವ ಮತ್ತು ಬ್ರಾಹ್ಮಣ ನಾಯಕ ಸತೀಶ್ ಶರ್ಮಾ ಶಿವಲಿಂಗದ ಮೇಲೆ ಕೈ ತೊಳೆದಿದ್ದಾರೆ. ಅವರು ಬಿಜೆಪಿಯಲ್ಲಿದ್ದರೆ ಏನ್ ಮಾಡಿದ್ರೂ ಸರಿ. ಎಲ್ಲವನ್ನೂ ಸಮರ್ಥಿಸಿಕೊಳ್ತಾರೆ. ನಾಳೆ ಅವರು ಶಿವಲಿಂಗದ ಮೇಲೆ ಉಗುಳಿದರೂ ಇದನ್ನ ಸಂಪ್ರದಾಯ ಎಂದು ಘೋಷಿಸುತ್ತಾರೆ" ಎಂದು ಆರ್‌ಎಲ್‌ಡಿ ನಾಯಕ ಪ್ರಶಾಂತ್ ಕನೋಜಿಯಾ ಹೇಳಿದ್ದಾರೆ.