ಕನ್ನಡ ಸುದ್ದಿ  /  Nation And-world  /  Uttarakhand Mountaineers Death: 10 Mountaineers Killed In Uttarakhand Avalanche

Uttarakhand Mountaineers: ಹಿಮಪಾತದಲ್ಲಿ ಸಿಲುಕಿ 10 ಪರ್ವತಾರೋಹಿಗಳ ಸಾವು, ಎಂಟು ಜನರ ರಕ್ಷಣೆ, 11 ಜನರಿಗಾಗಿ ಹುಡುಕಾಟ

ನೆಹರೂ ಪರ್ವತಾರೋಹಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ಈ ಪರ್ವತಾರೋಹಿಗಳ ರಕ್ಷಣೆಗೆ ಎರಡು ಚೀತಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತದೆ

Uttarakhand Mountaineers: ಹಿಮಪಾತದಲ್ಲಿ ಸಿಲುಕಿ 10 ಪರ್ವತಾರೋಹಿಗಳ ಸಾವು
Uttarakhand Mountaineers: ಹಿಮಪಾತದಲ್ಲಿ ಸಿಲುಕಿ 10 ಪರ್ವತಾರೋಹಿಗಳ ಸಾವು

ಉತ್ತರಾಖಂಡ: ಇಂದು ದ್ರೌಪದಿ ಶಿಖರದ ದಾಂಡ-2 ಪರ್ವತದಲ್ಲಿ ಹಿಮಪಾತಕ್ಕೆ ಸಿಲುಕಿದ್ದ 28 ಪರ್ವತಾರೋಹಿಗಳಲ್ಲಿ ಎಂಟು ಜನರ ರಕ್ಷಣೆ ಮಾಡಲಾಗಿದೆ. ಸುಮಾರು ಹತ್ತು ಜನರು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಉಳಿದ ಹನ್ನೊಂದು ಜನರ ಹುಡುಕಾಟ ಆರಂಭಿಸಲಾಗಿದೆ.

ಹಿಮಪಾತ ಸಂಭವಿಸುವ ಸಮಯದಲ್ಲಿ 170 ಕ್ಕೂ ಹೆಚ್ಚು ಪರ್ವತಾರೋಹಿಗಳು ತರಬೇತಿ ಪಡೆಯುತ್ತಿದ್ದರು. ಹಿಮಪಾತ ಸಂಭವಿಸಿದ ತಕ್ಷಣ ಡೆಹಡ್ರೂನ್‌ ಹೆಲಿಪ್ಯಾಡ್‌ನಿಂದ ಎಸ್‌ಡಿಆರ್‌ಎಫ್‌ ಪಡೆಯು ಆಗಮಿಸಿದ್ದು, ಹಿಮಪಾತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ವಾಯುಪಡೆ, ಐಟಿಬಿಪಿ ಕೂಡ ರಕ್ಷಣೆಯಲ್ಲಿ ತೊಡಗಿದೆ. ಹೀಗಿದ್ದರೂ, ಭೀಕರ ಹಿಮಪಾತವು ಇಲ್ಲಿಯವರೆಗೆ ಹತ್ತು ಜನರನ್ನು ಬಲಿ ಪಡೆದಿದ್ದು, ಹಿಮದಲ್ಲಿ ಸಿಲುಕಿರುವ ಇತರರ ಹುಡುಕಾಟ ನಡೆಸಲಾಗುತ್ತಿದೆ.

ನೆಹರೂ ಪರ್ವತಾರೋಹಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ಈ ಪರ್ವತಾರೋಹಿಗಳ ರಕ್ಷಣೆಗೆ ಎರಡು ಚೀತಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತದೆ ಎಂದು ಐಎಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡದ ದ್ರೌಪದಿಯ ದಾಂಡಾ - 2 ಪರ್ವತ ಶಿಖರದಲ್ಲಿ ಹಿಮಪಾತದ ನಂತರ 28 ಮಂದಿ ಸಿಲುಕಿರುವ ಶಂಕೆ ಇದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್‌ ಮಾಡಿದ್ದಾರೆ.

ಹಿಮಪಾತದಲ್ಲಿ ಉತ್ತರಕಾಶಿಯ ನೆಹರೂ ಪರ್ವತಾರೋಹಣ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವವರು ಸಿಕ್ಕಿಬಿದ್ದಿದ್ದು, ಅವರನ್ನು ರಕ್ಷಿಸಲು ಸದ್ಯಕ್ಕೆ ಕ್ಷಿಪ್ರ ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈ ಶಿಖರವು ಉತ್ತರಾಖಂಡದ ಗರ್ವಾಲ್ ಹಿಮಾಲಯದ ಗಂಗೋತ್ರಿ ಶ್ರೇಣಿಯಲ್ಲಿದೆ’’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಘಟನೆಯ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ ಐಎಎಫ್‌ಗೆ ಸೂಚನೆ ನೀಡಿದ್ದೇನೆ, ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಘಟನೆಯಲ್ಲಿ ಕೆಲವು ಪರ್ವತಾರೋಹಿಗಳು ಮೃತಪಟ್ಟಿರುವುದಕ್ಕೂ ರಕ್ಷಣಾ ಸಚಿವರು ಖೇದ ವ್ಯಕ್ತಪಡಿಸಿದ್ದಾರೆ. "ಉತ್ತರಕಾಶಿಯಲ್ಲಿ ನೆಹರು ಪರ್ವತಾರೋಹಣ ಸಂಸ್ಥೆ ನಡೆಸಿದ ಪರ್ವತಾರೋಹಣ ಯಾತ್ರೆಯ ಮೇಲೆ ಭೂಕುಸಿತದಿಂದ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳುʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇದೀಗ ಬದುಕಿ ಉಳಿದಿರಬಹುದಾದ ಇತರೆ ಪರ್ವತಾರೋಹಿಗಳಿಗಾಗಿ ರಕ್ಷಣಾ ಪಡೆಗಳು ತೀವ್ರ ಹುಡುಕಾಟ ನಡೆಸುತ್ತಿವೆ.

ವಿಭಾಗ