Modi-Yogi Sisters: ಒಂದೇ ಫ್ರೇಮ್​ನಲ್ಲಿ ನೋಡಿ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಸಹೋದರಿಯರನ್ನು; ಹೀಗಾಯ್ತು ಅವರ ಭೇಟಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi-yogi Sisters: ಒಂದೇ ಫ್ರೇಮ್​ನಲ್ಲಿ ನೋಡಿ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಸಹೋದರಿಯರನ್ನು; ಹೀಗಾಯ್ತು ಅವರ ಭೇಟಿ

Modi-Yogi Sisters: ಒಂದೇ ಫ್ರೇಮ್​ನಲ್ಲಿ ನೋಡಿ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಸಹೋದರಿಯರನ್ನು; ಹೀಗಾಯ್ತು ಅವರ ಭೇಟಿ

Vasantiben-Shashi Devi: ಪರಸ್ಪರ ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿದೇವಿ ಅವರು ಒಬ್ಬರನ್ನೊಬ್ಬರು ತಬ್ಬಿಕೊಂಡು ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಸಹೋದರಿಯರ ಭೇಟಿ
ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಸಹೋದರಿಯರ ಭೇಟಿ

ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿದೇವಿ ಅವರು ಪರಸ್ಪರ ಭೇಟಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಉತ್ತರಾಖಂಡದ ನೀಲಕಂಠ ಧಾಮಕ್ಕೆ ತೀರ್ಥಯಾತ್ರೆಗೆ ಬಂದ ಸಂದರ್ಭದಲ್ಲಿ ವಸಂತಿಬೆನ್ ಮತ್ತು ಶಶಿದೇವಿ ಭೇಟಿಯಾಗಿದ್ದಾರೆ. ಕೊಠಾರಿಯ ದೇವಸ್ಥಾನವೊಂದರ ಬಳಿ ಇವರು ಒಬ್ಬರನ್ನೊಬ್ಬರು ತಬ್ಬಿಕೊಂಡು ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

ನ್ಯೂಸ್ 18 ವರದಿಯ ಪ್ರಕಾರ, ಪ್ರಧಾನಿ ಮೋದಿಯವರ ಕಿರಿಯ ಸಹೋದರಿ ವಸಂತಿಬೆನ್ ಅವರು ಋಷಿಕೇಶಕ್ಕೆ ಖಾಸಗಿ ಭೇಟಿಯಲ್ಲಿದ್ದರು, ಅಲ್ಲಿ ಅವರು ದಯಾನಂದ ಆಶ್ರಮದಲ್ಲಿ ತಂಗಿದ್ದರು. ಅವರ ಪತಿ ಹಂಸ್ಮುಖ್ ಮತ್ತು ಕೆಲವು ಸಂಬಂಧಿಕರು ಜೊತೆಗಿದ್ದರು. ಪ್ರಧಾನಿ ಮೋದಿಯವರ ಸಹೋದರಿ ಮತ್ತು ಅವರ ಕುಟುಂಬ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಭುವನೇಶ್ವರಿ ದೇವಸ್ಥಾನಕ್ಕೆ ತೆರಳಿದ್ದು, ಹಿಂದಿರುಗುವಾಗ ಶಶಿದೇವಿ ಅವರನ್ನು ಭೇಟಿಯಾದರು.

ಈ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿರುವ ಬಿಜೆಪಿ ನಾಯಕ ಅಜಯ್ ನಂದಾ "ಪ್ರಧಾನಿ ಮೋದಿ ಅವರ ಸಹೋದರಿ ಬಸಂತಿಬೆನ್ ಮತ್ತು ಸಿಎಂ ಯೋಗಿ ಅವರ ಸಹೋದರಿ ಶಶಿ ಅವರ ಭೇಟಿ ಸರಳತೆ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಾರಕ್ಕೆ ಉದಾಹರಣೆಯಾಗಿದೆ. ಇದು ರಾಜಕೀಯವನ್ನು ಮೀರಿದ ಬಾಂಧವ್ಯ. ಭಾರತದ ಮೌಲ್ಯಗಳನ್ನು ಪ್ರತಿನಿಧಿಸುವ ಈ ಇಬ್ಬರು ಗಮನಾರ್ಹ ವ್ಯಕ್ತಿಗಳ ಬಗ್ಗೆ ನಮಗೆ ಹೆಮ್ಮೆಯಿದೆ" ಎಂದು ಬರೆದಿದ್ದಾರೆ.

ಯೋಗಿ ಆದಿತ್ಯನಾಥ್ ಉತ್ತರಾಖಂಡ್‌ ಮೂಲದವರು ಮತ್ತು ಅವರ ಕುಟುಂಬವು ಪೌರಿ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ಇನ್ನೂ ವಾಸಿಸುತ್ತಿದೆ. ಅವರ ಸಹೋದರಿ ಶಶಿದೇವಿ ಅವರು ‘ಮಾ ಭುವನೇಶ್ವರಿ ಪ್ರಸಾದ್ ಭಂಡಾರ್’ ಎಂಬ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಯನ್ನು ನಡೆಸುತ್ತಿದ್ದಾರೆ. ಅವರ ಪತಿ ‘ಜೈ ಶ್ರೀ ಗುರು ಗೋರಕ್ಷನಾಥ್ ಜೀ’ ಹೆಸರಿನ ಸಣ್ಣ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.