ಕನ್ನಡ ಸುದ್ದಿ  /  Nation And-world  /  Uttarkashi Tragedy: 1st Indian Woman To Climb Everest, Makalu Among Those Killed

Uttarkashi tragedy:16 ದಿನದಲ್ಲಿ ಮೌಂಟ್‌ ಎವರೆಸ್ಟ್‌ ಏರಿದ ಭಾರತದ ಮೊದಲ ಮಹಿಳೆ ಉತ್ತರಕಾಶಿ ಹಿಮಪಾತಕ್ಕೆ ಸಿಲುಕಿ ಸಾವು

ಮೌಂಟ್‌ ಎವರೆಸ್ಟ್‌ ಮತ್ತು ಮೌಂಟ್‌ ಮಕಲು ಅನ್ನು ಕೇವಲ ಹದಿನಾರು ದಿನಗಳಲ್ಲಿ ಏರಿದ ಮೊದಲ ಭಾರತೀಯ ಮಹಿಳೆ ಎಂಬ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಸವಿತ ಕನ್ಸವಾಲ್‌ (Savita Kanswal) ಅವರು ನಿನ್ನೆ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

Uttarkashi tragedy:16 ದಿನದಲ್ಲಿ ಮೌಂಟ್‌ ಎವರೆಸ್ಟ್‌ ಏರಿದ ಭಾರತದ ಮೊದಲ ಮಹಿಳೆ ಉತ್ತರಕಾಶಿ ಹಿಮಪಾತಕ್ಕೆ ಸಿಲುಕಿ ಸಾವು (Sourced)
Uttarkashi tragedy:16 ದಿನದಲ್ಲಿ ಮೌಂಟ್‌ ಎವರೆಸ್ಟ್‌ ಏರಿದ ಭಾರತದ ಮೊದಲ ಮಹಿಳೆ ಉತ್ತರಕಾಶಿ ಹಿಮಪಾತಕ್ಕೆ ಸಿಲುಕಿ ಸಾವು (Sourced) (HT_PRINT)

ಉತ್ತರಾಖಂಡ: ಮೌಂಟ್‌ ಎವರೆಸ್ಟ್‌ ಮತ್ತು ಮೌಂಟ್‌ ಮಕಲು ಅನ್ನು ಕೇವಲ ಹದಿನಾರು ದಿನಗಳಲ್ಲಿ ಏರಿದ ಮೊದಲ ಭಾರತೀಯ ಮಹಿಳೆ ಎಂಬ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಸವಿತ ಕನ್ಸವಾಲ್‌ (Savita Kanswal) ಅವರು ನಿನ್ನೆ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಮಂಗಳವಾರ ಹಿಮಪಾತಕ್ಕೆ ನೆಹರೂ ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೇನರಿಂಗ್‌ನ ತರಬೇತಿ ಪಡೆಯುತ್ತಿದ್ದ ಪರ್ವತಾರೋಹಿಗಳು ಮತ್ತು ತರಬೇತುದಾರರು ಮೃತಪಟ್ಟಿದ್ದಾರೆ. ಅವರಲ್ಲಿ ಈ ಸಾಧಕಿಯೂ ಸೇರಿದ್ದಾರೆ. ಇವರು ನೆಹರೂ ಪರ್ವತಾರೋಹಣ ಸಂಸ್ಥೆಯಲ್ಲಿ ತರಬೇತುದಾರರಾಗಿದ್ದರು.

ಮೇ 12ರಂದು ಸವಿತಾ ಕನ್ಸವಾಲ್‌ (26) ಅವರು ಮೌಂಟ್‌ ಎವರೆಸ್ಟ್‌ ಅನ್ನು (8848m) ಅನ್ನು ಹದಿನಾರು ದಿನಗಳಲ್ಲಿ ಏರಿ ದಾಖಲೆ ಬರೆದಿದ್ದರು. ಮೇ 28ರಂದು ಮೌಂಟ್‌ ಮಕಲು (8485m) ಅನ್ನು ಏರಿದ್ದಾರೆ. ಮೌಂಟ್‌ ಮಕಲು ಜಗತ್ತಿನ ಐದನೇ ಅಗ್ರ ಶಿಖರವಾಗಿದೆ.

ಉತ್ತರಕಾಶಿಯ ಲೊನತ್ರು ಗ್ರಾಮದ ಸವಿತಾ ಕಾನ್ಸವಾಲ್‌ ಅವರು 41 ಪರ್ವತಾರೋಹಿ ಟ್ರೇನಿಗಳ ಭಾಗವಾಗಿದ್ದರು. ಮೌಂಟ್‌ ದ್ರೌಪದಿ ಅಕಾ ದಂಡ-೨ ಮೂಲಕ ಕೆಳಗೆ ಇಳಿಯುತ್ತಿದ್ದ ಸಂದರ್ಭದಲ್ಲಿ ಹಿಮಪಾತವಾಗಿ ಹಿಮದಡಿಗೆ ಸಿಲುಕಿ ಮೃತಪಟ್ಟಿದ್ದರು.

ಉತ್ತರಕಾಶಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ತಿರಂತ್‌ ಪಾಲ್‌ ಸಿಂಗ್‌ ಅವರು ಸವಿತಾ ಕನ್ಸ್‌ವಾಲ್‌ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಹಿಮಪಾತಕ್ಕೆ ಸಿಲುಕಿ ಕನ್ಸ್‌ವಾಲ್‌, ನವುಮಿ ಎಂಬ ತರಬೇತುದಾರರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಎನ್‌ಐಎಂ ಬೇಸ್‌ ಕ್ಯಾಂಪ್‌ನಿಂದ ಕೇವಲ ಹದಿನಾಲ್ಕು ಜನರನ್ನು ಮಾತ್ರ ಸುರಕ್ಷಿತವಾಗಿ ಕರೆ ತರಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಹಿಮಪಾತ ಸಂಭವಿಸುವ ಸಮಯದಲ್ಲಿ 170 ಕ್ಕೂ ಹೆಚ್ಚು ಪರ್ವತಾರೋಹಿಗಳು ತರಬೇತಿ ಪಡೆಯುತ್ತಿದ್ದರು. ಹಿಮಪಾತ ಸಂಭವಿಸಿದ ತಕ್ಷಣ ಡೆಹಡ್ರೂನ್‌ ಹೆಲಿಪ್ಯಾಡ್‌ನಿಂದ ಎಸ್‌ಡಿಆರ್‌ಎಫ್‌ ಪಡೆಯು ಆಗಮಿಸಿದ್ದು, ಹಿಮಪಾತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಈಗಲೂ ಕಾರ್ಯಾಚರಣೆ ಮುಂದುವರೆದಿದೆ. ಭಾರತೀಯ ವಾಯುಪಡೆ, ಐಟಿಬಿಪಿ ಕೂಡ ರಕ್ಷಣೆಯಲ್ಲಿ ತೊಡಗಿದೆ. ಹೀಗಿದ್ದರೂ, ಭೀಕರ ಹಿಮಪಾತವು ಇಲ್ಲಿಯವರೆಗೆ ಹಲವು ಜನರನ್ನು ಬಲಿ ಪಡೆದಿದ್ದು, ಹಿಮದಲ್ಲಿ ಸಿಲುಕಿರುವ ಇತರರ ಹುಡುಕಾಟ ನಡೆಸಲಾಗುತ್ತಿದೆ.

ಘಟನೆಯಲ್ಲಿ ಕೆಲವು ಪರ್ವತಾರೋಹಿಗಳು ಮೃತಪಟ್ಟಿರುವುದಕ್ಕೂ ರಕ್ಷಣಾ ಸಚಿವರು ಖೇದ ವ್ಯಕ್ತಪಡಿಸಿದ್ದಾರೆ. "ಉತ್ತರಕಾಶಿಯಲ್ಲಿ ನೆಹರು ಪರ್ವತಾರೋಹಣ ಸಂಸ್ಥೆ ನಡೆಸಿದ ಪರ್ವತಾರೋಹಣ ಯಾತ್ರೆಯ ಮೇಲೆ ಭೂಕುಸಿತದಿಂದ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳುʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

IPL_Entry_Point

ವಿಭಾಗ