ಕನ್ನಡ ಸುದ್ದಿ  /  Nation And-world  /  Vijay Mallya Untraceable, Lawyer Requests Sc To Be Relieved From Representing Him

Vjay mallya lawyer: ವಿಜಯ ಮಲ್ಯ ಸಂಪರ್ಕದಲ್ಲಿಲ್ಲ, ಅವರ ಪರವಾಗಿ ವಾದಿಸುವುದಿಲ್ಲ, ಸುಪ್ರೀಂ ಕೋರ್ಟ್‌ಗೆ ವಕೀಲರ ಮನವಿ

ನನಗೆ ಲಭ್ಯವಿರುವ ಮಾಹಿತಿ ಪ್ರಕಾರ ವಿಜಯ್‌ ಮಲ್ಯ ಅವರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಆದರೆ, ಸದ್ಯ ಅವರು ನನ್ನ ಸಂಪರ್ಕದಲ್ಲಿಲ್ಲ. ನನಗೆ ಅವರ ಇಮೇಲ್‌ ವಿಳಾಸ ತಿಳಿದಿದೆ. ಆದರೆ, ನನ್ನ ಜತೆ ಸಂಪರ್ಕದಲ್ಲಿಲ್ಲ. ಭಾರತದಲ್ಲಿಯೂ ಇವರು ಎಲ್ಲೂ ಕಾಣಿಸಿಕೊಂಡಿಲ್ಲ. ಈ ಪ್ರಕರಣದಲ್ಲಿ ನನ್ನನ್ನು ವಕೀಲಿಕೆಯಿಂದ ಕೈ ಬಿಡಬೇಕುʼʼ ಎಂದು ಮಲ್ಯ ಪರ ನ್ಯಾಯವಾದಿ ಕೋರ್ಟ್‌ಗೆ ತಿಳಿಸಿದ್ದಾರೆ.

Vjay mallya lawyer: ವಿಜಯ ಮಲ್ಯ ಸಂಪರ್ಕದಲ್ಲಿಲ್ಲ, ಅವರ ಪರವಾಗಿ ವಾದಿಸುವುದಿಲ್ಲ- ವಕೀಲರು
Vjay mallya lawyer: ವಿಜಯ ಮಲ್ಯ ಸಂಪರ್ಕದಲ್ಲಿಲ್ಲ, ಅವರ ಪರವಾಗಿ ವಾದಿಸುವುದಿಲ್ಲ- ವಕೀಲರು (HT_PRINT)

ನವದೆಹಲಿ: ವಿಜಯ್‌ ಮಲ್ಯ ಅವರ ಭಾರತದ ವಕೀಲರು ಮಲ್ಯ ಪರ ವಕಾಲತ್ತು ನಡೆಸಲು ನಿರಾಕರಿಸಿದ್ದಾರೆ. "ವಿಜಯ್‌ ಮಲ್ಯ ಅವರ ಜತೆ ಯಾವುದೇ ಸಂವಹನ ಇಲ್ಲ, ಅವರು ನನ್ನ ಸಂಪರ್ಕದಲ್ಲಿಲ್ಲ. ಹೀಗಾಗಿ, ಅವರ ಪರ ವಕಾಲತ್ತು ನಡೆಸುವುದರಿಂದ ನನ್ನಿಂದ ಸಾಧ್ಯವಾಗುತ್ತಿಲ್ಲʼ ʼಎಂದು ಮಲ್ಯ ಪರ ವಕೀಲರು ಸುಪ್ರಿಂ ಕೋರ್ಟ್‌ಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಹಿಮಾ ಕೋಹ್ಲಿ ಅವರನ್ನು ಒಳಗೊಂಡ ನ್ಯಾಯ ಪೀಠವು ವಿಜಯ್‌ ಮಲ್ಯ ಅವರ ವಂಚನೆ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮಲ್ಯ ಪರ ನ್ಯಾಯಮೂರ್ತಿಯವರು ವಕಾಲತ್ತು ನಡೆಸಲು ನಿರಾಕರಿಸಿದ್ದಾರೆ.

"ನನಗೆ ಲಭ್ಯವಿರುವ ಮಾಹಿತಿ ಪ್ರಕಾರ ವಿಜಯ್‌ ಮಲ್ಯ ಅವರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಆದರೆ, ಸದ್ಯ ಅವರು ನನ್ನ ಸಂಪರ್ಕದಲ್ಲಿಲ್ಲ. ನನಗೆ ಅವರ ಇಮೇಲ್‌ ವಿಳಾಸ ತಿಳಿದಿದೆ. ಆದರೆ, ನನ್ನ ಜತೆ ಸಂಪರ್ಕದಲ್ಲಿಲ್ಲ. ಭಾರತದಲ್ಲಿಯೂ ಇವರು ಎಲ್ಲೂ ಕಾಣಿಸಿಕೊಂಡಿಲ್ಲ. ಈ ಪ್ರಕರಣದಲ್ಲಿ ನನ್ನನ್ನು ವಕೀಲಿಕೆಯಿಂದ ಕೈ ಬಿಡಬೇಕುʼʼ ಎಂದು ಮಲ್ಯ ಪರ ನ್ಯಾಯವಾದಿ ಇ.ಸಿ. ಅಗರ್ವಾಲ್‌ ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

ಭಾರತದ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹತ್ತು ಸಾವಿರ ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪವನ್ನು ಉದ್ಯಮಿ ವಿಜಯ್‌ ಮಲ್ಯ ಎದುರಿಸುತ್ತಿದ್ದಾರೆ.

ಕಳೆದ ತಿಂಗಳು ವಿಜಯ ಮಲ್ಯ ವಿರುದ್ಧ ಚೆಕ್‌ ಬೌನ್ಸ್‌ ಕೇಸ್‌ ದಾಖಲಿಸಲಾಗಿತ್ತು. ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ರೋಸ್ ಅವೆನ್ಯೂ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ' ಎಂದು ಅಧಿಕಾರಿ ಹೇಳಿದರು.

ಎಫ್‌ಐಆರ್ ಪ್ರಕಾರ, ಮಲ್ಯ ವಿರುದ್ಧ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 174 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಯ ವಿರುದ್ಧ ದೂರುದಾರರು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಿಸಿದ್ದರು.

ಐಪಿಸಿಯ ಸೆಕ್ಷನ್ 174 A ಪ್ರಕಾರ, ಒಬ್ಬ ವ್ಯಕ್ತಿಯು ಹೈಕೋರ್ಟ್‌ನ ಮುಂದೆ ಹಾಜರಾಗಲು ಕಾನೂನುಬದ್ಧವಾಗಿ ಬದ್ಧನಾಗಿರುತ್ತಾನೆ, ಆ ನ್ಯಾಯಾಲಯದಿಂದ ಹೊರಡಿಸಲಾದ ಆದೇಶಕ್ಕೆ ವಿರುದ್ಧವಾಗಿ ಉದ್ದೇಶಪೂರ್ವಕವಾಗಿ ಹಾಜರಾಗದಿದ್ದರೆ, ಆಗ ಅಂತಹ ವ್ಯಕ್ತಿಯು ಈ ಸೆಕ್ಷನ್ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧಕ್ಕೆ ಗುರಿಯಾಗಿರುತ್ತಾನೆ.

ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ Vs ಕಿಂಗ್‌ಫಿಷರ್ ಏರ್‌ಲೈನ್ಸ್ ಎಂಬ ಪ್ರಕರಣದಲ್ಲಿ ಆರೋಪಿ ವಿಜಯ್ ಮಲ್ಯ ವಿರುದ್ಧ ಸೆಕ್ಷನ್ 174 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಮತ್ತು ಎನ್‌ಡಿಒಹೆಚ್ ಮೇಲೆ ಅನುಸರಣೆ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ' ಎಂದು ಎಫ್‌ಐಆರ್‌ನ ಆಯ್ದ ಭಾಗದಲ್ಲಿ ತಿಳಿಸಿದೆ.

66 ವರ್ಷದ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಮಲ್ಯ ಅವರು ಮಾರ್ಚ್ 2016 ರಲ್ಲಿ ಭಾರತದಿಂದ ಪಲಾಯನ ಮಾಡಿದರು. ಅಂದಿನಿಂದ ಅವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿ (ಇಂಗ್ಲೆಂಡ್) ವಾಸಿಸುತ್ತಿದ್ದಾರೆ. 2017ರ ಏಪ್ರಿಲ್‌ನಲ್ಲಿ ಸ್ಕಾಟ್ಲೆಂಡ್ ಯಾರ್ಡ್ ಜಾರಿಗೊಳಿಸಿದ ಹಸ್ತಾಂತರ ವಾರಂಟ್ ಮೇಲೆ ಅವರು ಜಾಮೀನಿನ ಮೇಲೆ ಇದ್ದಾರೆ. ಇದಕ್ಕೂ ಮೊದಲು, ಜುಲೈನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಶಿಕ್ಷೆಯನ್ನು ನೀಡಿತ್ತು.

IPL_Entry_Point