Viral News: ಪರೀಕ್ಷಾ ಕೇಂದ್ರಕ್ಕೆ ಗುಪ್ತಾಂಗ ಭಾಗದಲ್ಲಿ ಮೊಬೈಲ್‌ ಇರಿಸಿಕೊಂಡು ಬಂದು ಸಿಕ್ಕಿಬಿದ್ದ ಅಭ್ಯರ್ಥಿಗಳು-viral news candidates entered examination hall for enter exams in malda west bengal with mobiles in private parts ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News: ಪರೀಕ್ಷಾ ಕೇಂದ್ರಕ್ಕೆ ಗುಪ್ತಾಂಗ ಭಾಗದಲ್ಲಿ ಮೊಬೈಲ್‌ ಇರಿಸಿಕೊಂಡು ಬಂದು ಸಿಕ್ಕಿಬಿದ್ದ ಅಭ್ಯರ್ಥಿಗಳು

Viral News: ಪರೀಕ್ಷಾ ಕೇಂದ್ರಕ್ಕೆ ಗುಪ್ತಾಂಗ ಭಾಗದಲ್ಲಿ ಮೊಬೈಲ್‌ ಇರಿಸಿಕೊಂಡು ಬಂದು ಸಿಕ್ಕಿಬಿದ್ದ ಅಭ್ಯರ್ಥಿಗಳು

ಪ್ರವೇಶ ಪರೀಕ್ಷೆಗೆ ಮೊಬೈಲ್‌ ಅನ್ನು ಗುಪ್ತಾಂಗದಲ್ಲಿ ಇಟ್ಟುಕೊಂಡು ಬಂದು ವಿದ್ಯಾರ್ಥಿಗಳು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಪರೀಕ್ಷೆ ಬರೆಯಲು ಗುಪ್ತಾಂಗದಲ್ಲಿ ಮೊಬೈಲ್‌ ಇಟ್ಟುಕೊಂಡು ಬಂದು ಸಿಕ್ಕಿಬಿದ್ದ ವಿದ್ಯಾರ್ಥಿಗಳು.
ಪರೀಕ್ಷೆ ಬರೆಯಲು ಗುಪ್ತಾಂಗದಲ್ಲಿ ಮೊಬೈಲ್‌ ಇಟ್ಟುಕೊಂಡು ಬಂದು ಸಿಕ್ಕಿಬಿದ್ದ ವಿದ್ಯಾರ್ಥಿಗಳು.

ಕೋಲ್ಕತ್ತಾ: ಪರೀಕ್ಷೆಗಳಿಗೆ ಎಷ್ಟೇ ಕಟ್ಟು ನಿಟ್ಟಾಗಿ ಮಾಡಿದರೂ ವಿದ್ಯಾರ್ಥಿಗಳು ಅಕ್ರಮಕ್ಕ ಮುಂದಾಗುವುದು ಇನ್ನೂ ನಿಂತಿಲ್ಲ. ಹಿಂದೆಲ್ಲಾ ಚೀಟಿ ಇಟ್ಟುಕೊಂಡು ಬಂದು ಸಿಕ್ಕಿಬಿದ್ದ ಉದಾಹರಣೆಗಳಿವೆ. ಈಗ ಮೊಬೈಲ್‌ ಕಾಲ. ಮೊಬೈಲ್‌ ಎಲ್ಲವನ್ನೂ ಒದಗಿಸುವುದರಿಂದ ಅದನ್ನೂ ಅಕ್ರಮಕ್ಕೆ ಬಳಸುವುದು ಬದಲಾಗಿದೆ. ಆದರೆ ಮೊಬೈಲ್‌ ಅನ್ನು ಎಲ್ಲಿ ಇಟ್ಟುಕೊಂಡು ಬಂದರೂ ಗೊತ್ತಾಗುತ್ತದೆ. ಗುಪ್ತಾಂಗದೊಳಗೆ ಸಿಕ್ಕಿಸಿಕೊಂಡು ಬಂದರೆ ತಿಳಿಯುವುದು ಕಷ್ಟ. ಇದನ್ನೇ ಪಶ್ಚಿಮ ಬಂಗಾಲದಲ್ಲಿ ಮಾಡಿ ಹಲವು ಅಭ್ಯರ್ಥಿಗಳು ಸಿಕ್ಕಿ ಬಿದ್ದಿದ್ದಾರೆ. ಯುವಕರಿಗಿಂತ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್‌ ಅನ್ನು ಗುಪ್ತಾಂಗದಲ್ಲಿ ಇರಿಸಿಕೊಂಡು ಬಂದು ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ಶೂ ಒಳಗೆ ಇಟ್ಟುಕೊಂಡು ಬಂದಿರುವುದು ಕಂಡು ಬಂದಿದೆ. ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಬಾಂಗ್ಲಾ ವರದಿ ಮಾಡಿದೆ.

ಇದು ನಡೆದಿರುವ ಪಶ್ಚಿಮ ಬಂಗಾಲದ ಮಾಲ್ಡಾ ಜಿಲ್ಲೆಯಲ್ಲಿ. ಬೀರ್ಭುಮ್ ನ ಸೂರಿಯ ಬೆನಿಮಾಧಬ್ ಇನ್ಸ್ಟಿಟ್ಯೂಷನ್ ನಲ್ಲಿ ಎಎನ್ಎಂ ಮತ್ತು ಜಿಎನ್ಎಂ ನರ್ಸಿಂಗ್ ಕೋ ರ್ಸ್‌ಗೆ ಪ್ರವೇಶ ಪರೀಕ್ಷೆ ಇತ್ತು. ಮಾಲ್ಡಾದ ಕೆಲವು ವಿದ್ಯಾರ್ಥಿಗಳು ಸೂರಿಯ ಬೆನಿಮಾಧಬ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು.

ಅದರಂತೆ ಮಹಿಳಾ ಸೆಕ್ಯುರಿಟಿ ಗಾರ್ಡ್ ಗಳು ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಪ್ರತಿ ಅಭ್ಯರ್ಥಿಯ ದೇಹವನ್ನು ಪರಿಶೀಲಿಸಿದ್ದರು. ಕೆಲವರು ತಮ್ಮ ಮೊಬೈಲ್‌ ಹಾಗು ಇತರೆ ವಸ್ತುಗಳನ್ನು ಹೊರಗೆ ಇಟ್ಟು ಹೋಗಿದ್ದರು. ಇನ್ನು ಕೆಲವರು ಇದ್ದರೂ ಇಲ್ಲದಂತೆ ತಪ್ಪಿಸಿಕೊಂಡು ಒಳಗೆ ಹೋಗಿ ಪರೀಕ್ಷೆ ಬರೆಯಲು ಅಣಿಯಾಗುತ್ತಿದ್ದರು.

ಆದರೆ ಪರೀಕ್ಷೆಗಳು ಪ್ರಾರಂಭವಾದ ತಕ್ಷಣ, ಸಭಾಂಗಣದೊಳಗಿನ ಕೆಲವು ಭದ್ರತಾ ಸಿಬ್ಬಂದಿಗಳಿಗೆ ಮೊಬೈಲ್‌ ಬಳಕೆಅನುಮಾನ ಬಂದಿತು. ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಮತ್ತೊಂದು ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿ ತಪಾಸಣೆ ನಡೆಸಲಾಯಿತು.

ಮೆಟಲ್ ಡಿಟೆಕ್ಟರ್‌ ಗಳ ಮೂಲಕ ದೇಹವನ್ನು ಹುಡುಕುತ್ತಿದ್ದಂತೆ, ದೇಹದ ವಿವಿಧ ಭಾಗಗಳಿಂದ ಮೊಬೈಲ್ ಫೋನ್ ಗಳು ಹೊರಬರಲು ಪ್ರಾರಂಭಿಸಿದವು. ಯಾರೋ ಶೂ ಶೂ ಅನ್ನು ಕತ್ತರಿಸಿ ಮೊಬೈಲ್ ಫೋನ್ ಅನ್ನು ಅದರಲ್ಲಿ ಇಟ್ಟುಕೊಂಡು ಬಂದಿದ್ದರು. ಇನ್ನು ಕೆಲ ವಿದ್ಯಾರ್ಥಿನಿಯರು ತಮ್ಮ ಗುಪ್ತಾಂಗದಲ್ಲಿ ಮೊಬೈಲ್‌ ಸಿಕ್ಕಿಸಿಕೊಂಡು ಬಂದಿದ್ದೂ ಪತ್ತೆಯಾಯಿತು. ಕೂಡಲೇ ಹೀಗೆ ಮೊಬೈಲ್‌ ಇಟ್ಟುಕೊಂಡು ಬಂದಿದ್ದವರನ್ನೆಲ್ಲಾ ವಶಕ್ಕೆ ಪಡೆದ ಅಧಿಕಾರಿಗಳು ಅವರನ್ನು ಪರೀಕ್ಷೆಗಳಿಂದ ಡಿಬಾರ್‌ ಮಾಡುವ ಆದೇಶ ಹೊರಡಿಸಿದರು. ಮೊಬೈಲ್‌ಗಳನ್ನೂ ವಶಕ್ಕೆ ಪಡೆದರು. ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲದ ಪರೀಕ್ಷಾ ನಿಯಂತ್ರಕರು ಪರೀಕ್ಷೆಗಳನ್ನು ರದ್ದುಪಡಿಸುವಂತೆ ಶಿಫಾರಸು ಮಾಡಿದ್ದು ಪರೀಕ್ಷೆ ರದ್ದುಪಡಿಸಲಾಗಿದೆ. ಹೊಸ ದಿನಾಂಕವನ್ನು ಪರೀಕ್ಷೆಗೆ ಪ್ರಕಟಿಸುವ ಸಾಧ್ಯತೆಯಿದೆ.

ನಾವು ಪರೀಕ್ಷೆಗೆ ಮೊಬೈಲ್‌ ತರುವುದನ್ನು ಕೇಳಿದ್ದೇವೆ. ಹಲವರು ಮೊಬೈಲ್‌ ಹೊರಗೆ ಇಟ್ಟು ಹೋಗಿದ್ದಾರೆ. ಕೆಲ ವಿದ್ಯಾರ್ಥಿನಿಯರು ಗುಪ್ತಾಂಗದಲ್ಲಿ ಮೊಬೈಲ್‌ ಇಟ್ಟುಕೊಂಡು ಬಂದು ಭದ್ರತಾ ಸಿಬ್ಬಂದಿಗೆ ಇವರ ನಡವಳಿಕೆ ಮೇಲೆ ಅನುಮಾನ ಬಂದು ಮೆಟಲ್‌ ಡಿಟೆಕ್ಟರ್‌ ಬಳಸಿದಾಗ ಇದು ಬಯಲಾಗಿದೆ. ಅವರನ್ನು ಪರೀಕ್ಷೆಗಳಿಂದ ಡಿಬಾರ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.