ಕನ್ನಡ ಸುದ್ದಿ  /  Nation And-world  /  Viral News Garbage On Mount Everest Goes Viral Plastic Pollution In Mountain Social Media Trending Kannada News Rst

Mount Everest: ಮೌಂಟ್‌ ಎವರೆಸ್ಟ್‌ನಲ್ಲೂ ಕಸವೋ ಕಸ; ವೈರಲ್‌ ಆಯ್ತು ಹಿಮಪರ್ವತದಲ್ಲಿ ತ್ಯಾಜ್ಯ ತುಂಬಿದ ವಿಡಿಯೊ

Garbage on Mount Everest: ಮೌಂಟ್‌ ಎವರೆಸ್ಟ್‌ ಪರ್ವತದಲ್ಲಿ ತ್ಯಾಜ್ಯ ಹಾಗೂ ಕಸದ ರಾಶಿ ತುಂಬಿರುವ ವಿಡಿಯೊವೊಂದು ಸದ್ಯ ವೈರಲ್‌ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೊ ಕ್ಲಿಪ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ.

ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿಯ ದ್ರಶ್ಯ
ಮೌಂಟ್‌ ಎವರೆಸ್ಟ್‌ನಲ್ಲಿ ಕಸದ ರಾಶಿಯ ದ್ರಶ್ಯ

ಜಗತ್ತಿನ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ ಪ್ರವಾಸಿಗರ ಆಕರ್ಷಣೀಯ ಕೇಂದ್ರ. ಎವರೆಸ್ಟ್‌ ಪರ್ವತವನ್ನು ಹತ್ತುವುದು ಹಲವರ ಕನಸು. ಈ ಪರ್ವತದಲ್ಲಿ ಬೇಸ್‌ ಕ್ಯಾಂಪ್‌ ಮಾಡುವ ಉದ್ದೇಶದಿಂದ ಪ್ರತಿವರ್ಷ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇದಲ್ಲದೆ ಎವರೆಸ್ಟ್ ಏರುವ ಹಲವಾರು ಗಮನಾರ್ಹ ಕಥೆಗಳನ್ನು ನಾವು ಕೇಳಿರುತ್ತವೆ, ಅಲ್ಲದೆ ಅವು ನಮಗೆ ಸ್ಫೂರ್ತಿಯೂ ಆಗಿರಬಹುದು. ಆದರೆ ಇತ್ತೀಚಿನ ವಿಡಿಯೊವೊಂದು ಪರ್ವತದ ಮೇಲೆ ಜನರು ಗಬ್ಬೆಬ್ಬಿಸಿರುವುದನ್ನು ಕಾಣಬಹುದಾಗಿದೆ.

ಮುತ್ತು ಹಾಸಿದಂತಿರುವ ಹಿಮರಾಶಿಯ ಮೇಲೆ ಎಲ್ಲಿ ನೋಡಿದರೂ ಕಸವೇ ತುಂಬಿರುವುದನ್ನು ಕಂಡಾಗ ಒಮ್ಮೆ ಎದೆ ಚುರುಕ್‌ ಎನ್ನಿಸುವುದು ಸುಳ್ಳಲ್ಲ.

ಸುಪ್ರಿಯಾ ಸಾಹು ಎಂಬ ಐಎಎಸ್‌ ಅಧಿಕಾರಿಯೊಬ್ಬರು ತನ್ನ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಎವರೆಸ್ಟ್‌ ಮೇಲೆ ಸುತ್ತಲೂ ಟೆಂಟ್‌ಗಳು ಹಾಕಿರುವುದನ್ನು ಕಾಣಬಹುದಾಗಿದೆ. ಈ ಟೆಂಟ್‌ಗಳೊಂದಿಗೆ ಸುತ್ತಲೂ ಕಸದ ರಾಶಿ ತುಂಬಿರುವುದನ್ನು ಈ ವಿಡಿಯೊ ತೋರಿಸುತ್ತದೆ.

ಈ ವಿಡಿಯೊ ಪೋಸ್ಟ್‌ ಮಾಡಿರುವ ಸುಪ್ರಿಯಾ ಅವರು ʼಮಾನವರು ಎವರೆಸ್ಟ್‌ ಅನ್ನೂ ಬಿಟ್ಟಿಲ್ಲ, ಇಲ್ಲಿನ ಪರಿಸರವನ್ನೂ ಕಸ ಹಾಗೂ ಪ್ಲಾಸ್ಟಿಕ್‌ ಮಾಲಿನ್ಯದಿಂದ ಗಬ್ಬೆಬ್ಬಿಸಿದ್ದಾರೆ, ಇದು ನಿಜಕ್ಕೂ ಹೃದಯವಿದ್ರಾವಕʼ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊ ಇಂದು ಕೆಲವು ಗಂಟೆಗಳ ಹಿಂದೆಷ್ಟೇ ಶೇರ್‌ ಆಗಿದೆ. ಈ ವಿಡಿಯೊ ಶೇರ್‌ ಆದ ಕ್ಷಣದಿಂದ 30000 ಜನ ನೋಡಿದ್ದಾರೆ. ಇದಕ್ಕೆ 400 ಮಂದಿ ಲೈಕ್ಸ್‌ ಮಾಡಿದ್ದು ಅಲ್ಲದೆ, ಹಲವರು ಕಾಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಅಲ್ಲಿಯೂ ಕಸ ಹಾಕಿ ಸುಂದರ ಪರಿಸರದ ಅಂದ ಗೆಡಿಸಿರುವುದು ನಿಜಕ್ಕೂ ವಿಷಾದನೀಯ, ಇದು ಹೃದಯ ವಿದ್ರಾವಕ ಎಂದು ವಿಡಿಯೊ ನೋಡಿದ ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಪ್ರಕೃತಿಯನ್ನು ಸಂರಕ್ಷಿಸಬೇಕಾದರೆ ಕೆಲವು ಪ್ರದೇಶಗಳನ್ನು ಮನುಷ್ಯರಿಂದ ದೂರವಿಡಬೇಕುʼ ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ʼಅಯ್ಯೋ ಇಲ್ಲ, ಇದು ನಿಜಕ್ಕೂ ದುಃಖದ ವಿಷಯ. ಇದನ್ನು ತಡೆಯಲು ಕಾನೂನು ತರಬೇಕುʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ

Trending: ಮದುವೆಯ ದಿನ ವರನ ಪರಾರಿ ಯತ್ನ; 20 ಕಿಲೋಮೀಟರ್‌ ಓಡಿಸಿಕೊಂಡು ಹೋಗಿ ಮಂಟಪಕ್ಕೆ ಮರಳಿ ಕರೆತಂದ ವಧು

Bride Chases Groom: ಎರಡು ವರ್ಷಗಳ ಕಾಲ ಪ್ರೀತಿಸಿದ್ದ ವ್ಯಕ್ತಿ ಮದುವೆಯ ದಿನದಂದು ಮದುವೆ ನಿರಾಕರಿಸಿ ಓಡಿ ಹೋಗಲು ಯತ್ನಿಸಿದ್ದ. ಈ ವಿಷಯ ತಿಳಿದ ವಧು ಅವನನ್ನು 20 ಕಿಲೋಮೀಟರ್‌ ಓಡಿಸಿಕೊಂಡು ಹೋಗಿ ಮದುವೆಯಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಏನಿದು ಘಟನೆ, ಈ ಸ್ಟೋರಿ ಓದಿ.

ನವದೆಹಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಮದುವೆ ತಪ್ಪಿಸಿಕೊಳ್ಳಲು ಯತ್ನಿಸಿ ಮದುವೆ ಮಂಟಪದಿಂದ ಎಸ್ಕೇಪ್‌ ಆಗಿದ್ದ ವರನನ್ನು ಬೆನ್ನಟ್ಟಿ ಹಿಡಿಯುವ ಘಟನೆಗೆ ವಧು ಸಾಕ್ಷಿಯಾಗಿದ್ದಾಳೆ.

IPL_Entry_Point

ವಿಭಾಗ