ಎಂಬಿಎ ಪದವೀಧರ ಮಾರಾಟ ಮಾಡುವ ಈ ಪಾನ್ ಬೆಲೆ ಬರೋಬ್ಬರಿ 1 ಲಕ್ಷ ರೂ; ಇದರಲ್ಲಿ ಅಂಥದ್ದೇನಿದೆ ನೋಡಿ-viral news most expensive paan mba graduate selling in mumbai costing rupees 1 lakh trending jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎಂಬಿಎ ಪದವೀಧರ ಮಾರಾಟ ಮಾಡುವ ಈ ಪಾನ್ ಬೆಲೆ ಬರೋಬ್ಬರಿ 1 ಲಕ್ಷ ರೂ; ಇದರಲ್ಲಿ ಅಂಥದ್ದೇನಿದೆ ನೋಡಿ

ಎಂಬಿಎ ಪದವೀಧರ ಮಾರಾಟ ಮಾಡುವ ಈ ಪಾನ್ ಬೆಲೆ ಬರೋಬ್ಬರಿ 1 ಲಕ್ಷ ರೂ; ಇದರಲ್ಲಿ ಅಂಥದ್ದೇನಿದೆ ನೋಡಿ

ಬರೋಬ್ಬರಿ 1 ಲಕ್ಷ ರೂಪಾಯಿ ಮೌಲ್ಯದ ಪಾನ್ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇಷ್ಟು ದುಬಾರಿ ಪಾನ್ ಮೊದಲ ಬಾರಿಗೆ ನೋಡುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಪಾನ್ ಮಾರಾಟ ಮಾಡುತ್ತಿರುವವರು ಎಂಬಿಎ ಪದವೀಧರ.

ಎಂಬಿಎ ಪದವೀಧರ ಮಾರಾಟ ಮಾಡುವ ಈ ಪಾನ್ ಬೆಲೆ ಬರೋಬ್ಬರಿ 1 ಲಕ್ಷ ರೂ; ಇದರಲ್ಲಿ ಅಂಥದ್ದೇನಿದೆ ನೋಡಿ
ಎಂಬಿಎ ಪದವೀಧರ ಮಾರಾಟ ಮಾಡುವ ಈ ಪಾನ್ ಬೆಲೆ ಬರೋಬ್ಬರಿ 1 ಲಕ್ಷ ರೂ; ಇದರಲ್ಲಿ ಅಂಥದ್ದೇನಿದೆ ನೋಡಿ

ಆಹಾರಕ್ಕಾಗಿ ದುಬಾರಿ ಬೆಲೆ ತೆರುವವರು ಹಲವು ಮಂದಿ ಇರುತ್ತಾರೆ. ತಿನ್ನುವ ಆಹಾರ ಶುಭ್ರವಾಗಿರಬೇಕು ಮತ್ತು ಆರೋಗ್ಯಕ್ಕೂ ಸಮಸ್ಯೆಯಾಗಬಾರದು ಎಂಬುದು ಜನರ ಕಾಳಜಿ. ಭಾರತದಲ್ಲೇ ಲಕ್ಷಾಂತರ ರೂಪಾಯಿ ಆಹಾರ ತಿನಿಸುಗಳಿವೆ. ಆದರೆ, ನೀವೆಲ್ಲಾದರೂ ಲಕ್ಷ ಬೆಲೆಯ ಪಾನ್‌ ಬಗ್ಗೆ ಕೇಳಿದ್ದೀರಾ?‌ ಬಹುತೇಕರು ಕೇಳಿರಲು ಸಾಧ್ಯವಿಲ್ಲ. ಮುಂಬೈನಲ್ಲಿ ಇದೀಗ 1 ಲಕ್ಷ ರೂಪಾಯಿ ಬೆಲೆಯ ಪಾನ್‌ ಒಂದು ಎಲ್ಲೆಡೆ ಸುದ್ದಿಯಾಗಿದೆ. ಜನರು ಕೂಡಾ ಇದನ್ನು ಖರೀದಿಸುತ್ತಿದ್ದಾರಂತೆ. ಅಷ್ಟಕ್ಕೂ ಈ ಪಾನ್‌ನಲ್ಲಿ ಏನೇನಿದೆ? ಅದಕ್ಕೆ ಇಷ್ಟು ದುಬಾರಿ ಬೆಲೆ ಯಾಕೆ ನಿಗದಿಪಡಿಸಲಾಗಿದೆ ಎಂಬುದನ್ನು ಈ ಸುದ್ದಿಯಲ್ಲಿ ನೋಡಿ.

ಪಾನ್ ಸುದ್ದಿಯೊಂದು ಇಂಟರ್ನೆಟ್‌ನಲ್ಲಿ ತುಂಬಾ ವೈರಲ್ ಆಗುತ್ತಿದೆ. ಹಾಗಂತಾ, ಇದರ ರುಚಿಯಿಂದಾಗಿ ಈ ಪಾನ್ ಸುದ್ದಿಯಲ್ಲಿಲ್ಲ. ಬದಲಾಗಿ ಇದರ ದುಬಾರಿ ಬೆಲೆಗೆ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಇದರ ಬೆಲೆ ಸುಮಾರು ಒಂದು ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಪಾನ್ ಪ್ರಿಯರಿಗೇನೂ ಕೊರತೆಯಿಲ್ಲ. ಬಗೆಬಗೆಯ ಪಾನ್‌ಗಳನ್ನು ಜನರ ಅಭಿರುಚಿಯನುಸಾರ ತಯಾರಿಸಲಾಗುತ್ತದೆ. ಭಾರತೀಯ ಜೀವನಶೈಲಿಯ ಭಾಗವಾಗಿರುವ ಪಾನ್‌ ಅನ್ನು, ಹಬ್ಬ ಮಾತ್ರವಲ್ಲದೆ ದೈನಂದಿನ ಆಹಾರದ ಭಾಗವಾಗಿ ಸೇವಿಸಲಾಗುತ್ತದೆ. ಹೀಗಾಗಿ ಪಾನ್‌ ಕಡೆಗೆ ಜನರು ಆಕರ್ಷಿತರಾಗುವುದು ಬೇಗ.

ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಪಾನ್‌ ಅಂಗಡಿಗಳು ಕಾಣಸಿಗುತ್ತವೆ. ಇವುಗಳಲ್ಲಿ ದಶಕಗಳ ಕಾಲ ಹಳೆಯ ಪಾನ್ ಅಂಗಡಿಗಳೂ ಇವೆ. ಅವುಗಳಲ್ಲಿ ಪಿತ್ರಾರ್ಜಿತವಾಗಿ ಜನರು ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಈ ನಡುವೆ ಈ ಪಾನ್‌ನ ಬೆಲೆ ಜನರ ಗಮನ ಸೆಳೆದಿದೆ.

ಎಂಬಿಎ ಪದವೀಧರನ ಬಿಸ್‌ನೆಸ್

ವಾಣಿಜ್ಯ ನಗರಿ ಮುಂಬೈನ ಮಾಹಿಮ್‌ನಲ್ಲಿರುವ ಪಾನ್ ಅಂಗಡಿಯೊಂದು ಈ ದುಬಾರಿ ಪಾನ್ ಮಾರಾಟ ಮಾಡುತ್ತಿದೆ. ಈ ಪಾನ್ ಎಂಬಿಎ ಪದವೀಧರ ನೌಶಾದ್ ಶೇಖ್ ಅವರ ಒಡೆತನದಲ್ಲಿದೆ. ನೌಶಾದ್ ಅವರು ಎಲ್ಲಾ ಕಾರ್ಪೊರೇಟ್ ಆಫರ್‌ಗಳನ್ನು ತಿರಸ್ಕರಿಸಿ, ತಮ್ಮ ಪೂರ್ವಜರು ಮುಂದುವರೆಸಿಕೊಂಡು ಬಂದ ಪಾನ್ ಅಂಗಡಿಯಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದರು. ಇದೀಗ ಇದೇ ಪಾನ್‌ ಅಂಗಡಿಯಲ್ಲಿ ದುಬಾರಿ ಪಾನ್‌ ಮಾರಾಟ ಮಾಡುತ್ತಿದ್ದಾರೆ.

ಹೆಸರೇ ಭಿನ್ನ

ಈ ದುಬಾರಿ ಪಾನ್‌ ಹೆಸರು ಫ್ರಾಗ್ರೆನ್ಸ್ ಆಫ್ ಲವ್ ಪ್ರೀಮಿಯಂ ಪಾನ್.‌ ಇದು ದುಬಾರಿಯಾಗಿರಲು ಕಾರಣ, ಇದರ ಮೇಲಿರುವ ಚಿನ್ನದ ಫಾಯಿಲ್‌ನ ಅಲಂಕಾರ. ಚಿನ್ನ ದುಬಾರಿಯಾಗಿದ್ದು, ಚಿನ್ನದ ಫಾಯಿಲ್‌ ಮೂಲಕ ಸರ್ವ್‌ ಮಾಡುವ ಕಾರಣದಿಂದ ಪಾನ್‌ ತುಂಬಾ ದುಬಾರಿಯಾಗಿದೆ ಎಂದು ನೌಶಾದ್ ವಿವರಿಸಿದ್ದಾರೆ.

ಸಾಮಾನ್ಯವಾಗಿ ಮದುವೆ ಕಾರ್ಯಕ್ರಮಗಳ ಸಮಯದಲ್ಲಿ ಇಂಥಾ ಪಾನ್‌ಗಳು ಮಾರಾಟವಾಗುತ್ತವೆಯಂತೆ. ವೆಡ್ಡಿಂಗ್‌ ನೈಟ್‌ಗಾಗಿ ವಿಶೇಷವಾಗಿ ತಯಾರಿಸಲಾಗುವ ಈ ವಿಶೇಷ ಪಾನ್ ನವವಿವಾಹಿತರಿಗೆ ತುಂಬಾ ಇಷ್ಟವಾಗುತ್ತದೆ. ಏಕೆಂದರೆ ಈ ಪಾನ್ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಇದರ ಪ್ಯಾಕಿಂಗ್ ಕೂಡ ಜನರನ್ನು ಆಕರ್ಷಿಸುತ್ತದೆ. ವೀಳ್ಯದೆಲೆಗಳನ್ನು ಕೇಸರಿಯ ಸುವಾಸನೆಯ ಎರಡು ವಿಶೇಷ ಪೆಟ್ಟಿಗೆಗಳಲ್ಲಿ ಇಡಲಾಗುತ್ತದೆ. ಖರೀದಿಸುವವರಿಗೆ ಈ ಪಾನ್ ಜೊತೆಗೆ ತಾಜ್ ಮಹಲ್‌ನ ಅಮೃತಶಿಲೆಯ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ. ಹೀಗಾಗಿ ಇದರ ಬೆಲೆ ದುಬಾರಿಯಾಗಿದೆ. ನಿಮಗೂ ಈ ಪಾನ್‌ ಬೇಕು ಅನಿಸಿದ್ರೆ ನೀವು ಕೂಡಾ ಲಕ್ಷ ರೂಪಾಯಿ ರೆಡಿ ಮಾಡಿ ಖರೀದಿಸಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.