ಕನ್ನಡ ಸುದ್ದಿ  /  Nation And-world  /  Viral News Old Video Of An Elephant Giving Shoe Back To Baby Is Viral Again Elephant Video Viral Video In Kannada Mgb

Viral Video: ಪ್ರಾಣಿಗಳಿಗೂ ಎಷ್ಟು ಅರ್ಥ ಆಗತ್ತೆ ನೋಡಿ; ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆ

Elephant viral video: ಮೃಗಾಲಯವೊಂದರಲ್ಲಿ ಆಕಸ್ಮಿಕವಾಗಿ ಮಗು ತನ್ನ ಶೂ ಅನ್ನು ಆನೆಗಳ ಆವರಣದಲ್ಲಿ ಬೀಳಿಸಿಕೊಳ್ಳುತ್ತದೆ. ಇದನ್ನು ಕಂಡ ಆನೆ ತನ್ನ ಸೊಂಡಿಲಿನಿಂದ ಶೂ ಎತ್ತಿ ಮಗುವಿನೆಡೆ ಸೊಂಡಿಲು ನುಸುಳಿಸುತ್ತದೆ. ಆ ಮಗು ಕೈಚಾಚಿ ಆನೆಯ ಸೊಂಡಿಲಿಂದ ಶೂ ಪಡೆದುಕೊಳ್ಳುತ್ತದೆ.

 ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಂಡ ಆನೆ
ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಂಡ ಆನೆ

ಮೂಕ ಪ್ರಾಣಿಗಳಿಗೆ ಭಾವನೆಗಳು ಇರುವುದಿಲ್ಲ ಎಂದು ನೀವು ಅಂದುಕೊಂಡರೆ ಅದು ತಪ್ಪು. ಬೆಕ್ಕು, ನಾಯಿ ಸೇರಿದಂತೆ ಪ್ರಾಣಿಗಳನ್ನು ಸಾಕಿದ ಅನೇಕರಿಗೆ ಈ ಬಗ್ಗೆ ತಿಳಿದಿರುತ್ತದೆ. ಆನೆಗಳು-ಮನುಷ್ಯರ ಬಾಂಧವ್ಯದ ಬಗ್ಗೆಯೂ ನೋಡಿರುತ್ತೇವೆ. ಅವುಗಳ ಮುದ್ದುಮುದ್ದು ವಿಡಿಯೋಗಳನ್ನ ನೋಡಿ ನಕ್ಕಿರುತ್ತೇವೆ. ಆನೆಯನ್ನು ನೋಡಿಕೊಳ್ಳುವ ಮಾವುತರು, ಪಾಲರಂತೂ ನಿಜಕ್ಕೂ ಪುಣ್ಯವಂತರು. ಅವರ ಜೊತೆ ಆನೆಗಳ ಬಾಂಧವ್ಯ ಎಲ್ಲೆಗೆ ಮೀರಿದ್ದು. ಇತ್ತೀಚೆಗಷ್ಟೇ ತನ್ನನ್ನು ಬಿಟ್ಟು ಹೋಗುತ್ತಿರುವ ಮಾಲೀಕನನ್ನು ಹುಸಿಕೋಪದಿಂದ ಆನೆಯು ಅಡ್ಡಗಟ್ಟುವ ವಿಡಿಯೋ ವೈರಲ್​ ಆಗಿತ್ತು. ಇದೀಗ ಆನೆಯೊಂದರ ಹಳೆಯ ವಿಡಿಯೋವೊಂದು ಮತ್ತೆ ವೈರಲ್​ ಆಗಿದೆ.

ಚೀನಾದ ಮೃಗಾಲಯವೊಂದರಲ್ಲಿ ಆಕಸ್ಮಿಕವಾಗಿ ಮಗು ತನ್ನ ಶೂ ಅನ್ನು ಆನೆಗಳ ಆವರಣದಲ್ಲಿ ಬೀಳಿಸಿಕೊಳ್ಳುತ್ತದೆ. ಇದನ್ನು ಕಂಡ ಆನೆ ತನ್ನ ಸೊಂಡಿಲಿನಿಂದ ಶೂ ಎತ್ತಿ ಮಗುವಿನೆಡೆ ಸೊಂಡಿಲು ನುಸುಳಿಸುತ್ತದೆ. ಆ ಮಗು ಕೈಚಾಚಿ ಆನೆಯ ಸೊಂಡಿಲಿಂದ ಶೂ ಪಡೆದುಕೊಳ್ಳುತ್ತದೆ.

ಭಾರತೀಯ ಅರಣ್ಯ ಸೇವೆಯ (ಐಎಫ್​ಎಸ್​) ಅಧಿಕಾರಿ ಸುಸಂತ ನಂದಾ ಅವರು X (ಟ್ವಿಟರ್​)ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, "ಅವನು ಸೀಮಿತಕ್ಕೆ ಒಳಗಾಗಿದ್ದಾನೆ, ಆದರೆ ಅವನ ಆತ್ಮ ಮತ್ತು ಸಹಾನುಭೂತಿ ಆಕಸ್ಮಿಕವಾಗಿ ಅದರ ಆವರಣದಲ್ಲಿ ಬಿದ್ದ ಮಗುವಿನ ಶೂ ಅನ್ನು ಹಿಂತಿರುಗಿಸುತ್ತದೆ" ಎಂದು ಕ್ಯಾಪ್ಶನ್​ ನೀಡಿದ್ದಾರೆ. "ಪ್ರಾಣಿಗಳನ್ನು ಪಂಜರದಿಂದ ಮುಕ್ತಗೊಳಿಸಿ" ಎಂದು ಮನವಿ ಮಾಡಿದ್ದಾರೆ.

ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಕೆಲವರು ಆನೆಯನ್ನು ಬುದ್ಧಿವಂತ ಮತ್ತು ಸೂಕ್ಷ್ಮ ಜೀವಿ ಎಂದಿದ್ದಾರೆ. ಈ ಆನೆಯ ಹೃದಯ ಎಂಥಾ ಒಳ್ಳೆಯದು ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ. ತುಂಬಾ ಮುದ್ದಾ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ವಿಭಾಗ