ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ರವೀಂದ್ರನಾಥ ಠಾಕೂರ್, ಈ ಕುರಿತು ಸಂದೇಹ ಬೇಡ; ಎನ್‌ಎಎಂ ಇಸ್ಮಾಯಿಲ್‌ ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ರವೀಂದ್ರನಾಥ ಠಾಕೂರ್, ಈ ಕುರಿತು ಸಂದೇಹ ಬೇಡ; ಎನ್‌ಎಎಂ ಇಸ್ಮಾಯಿಲ್‌ ಬರಹ

ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ರವೀಂದ್ರನಾಥ ಠಾಕೂರ್, ಈ ಕುರಿತು ಸಂದೇಹ ಬೇಡ; ಎನ್‌ಎಎಂ ಇಸ್ಮಾಯಿಲ್‌ ಬರಹ

ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ರವೀಂದ್ರನಾಥ ಠಾಕೂರ್. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಕಿಪಿಡಿಯಾದಲ್ಲೇ ಸಾಕಷ್ಟು ಮಾಹಿತಿಗಳಿವೆ. ಹಾಗೆಯೇ ಕೆಲ ಕಾಲದ ಹಿಂದೆ ದಿ ವೈರ್ ಜಾಲತಾಣವೂ ಇದರ ಬಗ್ಗೆ ಲೇಖನ ಪ್ರಕಟಿಸಿ ಈ ಸಂಶಯಗಳನ್ನು ನಿವಾರಿಸಲು ಪ್ರಯತ್ನಿಸಿತ್ತು. ರಾಷ್ಟ್ರಗೀತೆಯ ಸಂಗೀತ ಸಂಯೋಜನೆ ವಿಚಾರವಾಗಿ ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್‌ ಅವರ ಬರಹ ಇಲ್ಲಿದೆ.

ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ರವೀಂದ್ರನಾಥ ಠಾಕೂರ್
ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ರವೀಂದ್ರನಾಥ ಠಾಕೂರ್

ನಮ್ಮ ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ಯಾರು ಎಂಬ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಶಾಲಾ ದಿನಗಳಿಂದಲೂ ರವೀಂದ್ರನಾಥ ಠಾಕೂರ್ ಎಂಬ ಉತ್ತರವನ್ನು ಕೇಳುತ್ತಲೇ ಬಂದಿದ್ದರೂ ಕೆಲವು ಕಡೆ ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸಿದ್ದು ಕ್ಯಾಪ್ಟನ್ ರಾಮ್ ಸಿಂಗ್ ಠಾಕೂರಿ ಎಂದು ಮಾಹಿತಿ ಸಿಗುತ್ತದೆ. ಇದು ಹಲವರ ಗೊಂದಲಕ್ಕೆ ಕಾರಣವಾಗಿರುವ ವಿಚಾರವೂ ಹೌದು. ಈ ಬಗ್ಗೆ ಇಂದು ಬೆಳಿಗ್ಗೆ ಲೇಖಕಿ ಮಮತಾ ಅರಿಸೀಕೆರೆ ಫೇಸ್‌ಬುಕ್‌ ಪೋಸ್ಟ್‌ವೊಂದನ್ನು ಪ್ರಕಟಿಸುವ ಮೂಲಕ ಪ್ರಶ್ನೆ ಎತ್ತಿದ್ದರು. ಅವರ ಪ್ರಶ್ನೆಗೆ ಪತ್ರಕರ್ತ ಎನ್‌ಎ ಇಸ್ಮಾಯಿಲ್‌ ಫೇಸ್‌ಬುಕ್‌ ಬರಹದ ಮೂಲಕವೇ ವಿವರವಾಗಿ ಉತ್ತರಿಸಿದ್ದಾರೆ.

ಎನ್‌ಎಎಂ ಇಸ್ಮಾಯಿಲ್‌ ಅವರ ಬರಹ

ಇಂದು ಮುಂಜಾನೆ Mamatha Arsikere ಅವರು ರಾಷ್ಟ್ರಗೀತೆಯ ಸಂಗೀತ ಸಂಯೋಜನೆ ಯಾರದ್ದು ಎಂಬ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದಕ್ಕೆ ಇರುವ ಉತ್ತರ ಒಂದೇ-ರವೀಂದ್ರನಾಥ ಠಾಕೂರ್. ಕ್ಯಾಪ್ಟನ್ ರಾಮ್ ಸಿಂಗ್ ಠಾಕೂರಿಯವರ ಹೆಸರು ಸುಮಾರು 90ರ ದಶಕದಿಂದ ಆಗಾಗ ಕೇಳಿಬರುತ್ತಿದೆ. ಇತ್ತೀಚೆಗೆ ಸ್ವಾತಂತ್ರ್ಯದ 75ರ ಸಂದರ್ಭಕ್ಕೆ ರೂಪಿಸಲಾದ ಕೆಲವು ಟಿ.ವಿ. ಕಾರ್ಯಕ್ರಮಗಳಲ್ಲೂ ಅದರಲ್ಲೂ ವಿಶೇಷವಾಗಿ ದೂರದರ್ಶದ ಕಾರ್ಯಕ್ರಮಗಳಲ್ಲೂ ಠಾಕೂರಿಯವರು ಹೆಸರನ್ನು ರಾಷ್ಟ್ರಗೀತೆಯ ಸಂಗೀತ ಸಂಯೋಜಕರೆಂದು ಹೇಳಿದ್ದು ಎಲ್ಲಾ ಸಂಶಯಗಳಿಗೆ ಕಾರಣವಾಗಿದೆ.

ಲಭ್ಯವಿರುವ ದಾಖಲೆಗಳಂತೆ ಈ ಗೀತೆಯ ಸಂಗೀತ ಸಂಯೋಜನೆ ರವೀಂದ್ರರದ್ದೇ. ಮೊದಲಿಗೆ ಇದನ್ನು ಹಾಡಿದ್ದು 1911ರ ಕಾಂಗ್ರೆಸ್ ಅಧಿವೇಶನದಲ್ಲಿ. 1919ರಲ್ಲಿ ಇದನ್ನು ಮದನಪಲ್ಲಿಯ ಬೆಸೆಂಟ್ ಥಿಯೋಸಫಿಕಲ್ ಕಾಲೇಜಿನಲ್ಲಿ ಹಾಡಿದಾದ ರವೀಂದ್ರರ ಮಾರ್ಗದರ್ಶನದಲ್ಲೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಮಾರ್ಗರೆಟ್ ಕಸಿನ್ಸ್ ಗೀತೆಯ ಸಂಗೀತವನ್ನು western notations ನಲ್ಲಿ ದಾಖಲಿಸಿಟ್ಟಿದ್ದಾರೆ.

ಎನ್‌ಎ ಇಸ್ಮಾಯಿಲ್‌ ಅವರ ಫೇಸ್‌ಬುಕ್‌ ಬರಹದ ಸ್ಕ್ರೀನ್‌ ಶಾಟ್‌ (ಎಡಚಿತ್ರ), ಎನ್‌ಎಎಂ ಇಸ್ಮಾಯಿಲ್‌ (ಬಲಚಿತ್ರ)
ಎನ್‌ಎ ಇಸ್ಮಾಯಿಲ್‌ ಅವರ ಫೇಸ್‌ಬುಕ್‌ ಬರಹದ ಸ್ಕ್ರೀನ್‌ ಶಾಟ್‌ (ಎಡಚಿತ್ರ), ಎನ್‌ಎಎಂ ಇಸ್ಮಾಯಿಲ್‌ (ಬಲಚಿತ್ರ)

ಮಾನ್ಯ ಠಾಕೂರಿಯವರು 1997ರಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ 'ಐಎನ್‌ಎ'ಗಾಗಿ ತಾನು ಜನಗಣಮನ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದೆ ಎಂದು ಹೇಳಿದಂದಿನಿಂದ ವಿವಾದ ಆರಂಭವಾಯಿತು. ಅವರು ಮಾಡಿದ ಸಂಗೀತ ಸಂಯೋಜನೆ ಹೇಗಿತ್ತು ಎಂಬುದನ್ನು ಹೇಳುವ ದಾಖಲಾತಿಗಳಿಲ್ಲ. 1911ರಿಂದ 1950ರ ತನಕದ ಅವಧಿಯಲ್ಲಿ ಲಭ್ಯವಿರುವ ಎಲ್ಲಾ ರೆಕಾರ್ಡಿಂಗ್‌ಗಳೂ ರವೀಂದ್ರರ ಸಂಗೀತ ಸಂಯೋಜನೆಯಲ್ಲೇ ಇವೆ. ನಾವೀಗ ಹಾಡುವ ಮಟ್ಟು ಕೂಡಾ ಅದನ್ನೇ ಹೋಲುತ್ತದೆ. ಠಾಕೂರಿಯವರು ಸಂಗೀತ ಸಂಯೋಜನೆ ಮಾಡಿದ್ದರೆ ಅದು ಮತ್ತೊಂದು ಆವೃತ್ತಿಯಾಗಿರಬಹುದೇ ಹೊರತು ಈಗ ನಾವು ಬಳಸುತ್ತಿರುವ ಮಟ್ಟಂತೂ ಅಲ್ಲ.

ಮಮತಾ ಅರಸೀಕೆರೆ ಅವರ ಫೇಸ್‌ಬುಕ್‌ ಪೋಸ್ಟ್‌ ಹೀಗಿತ್ತು:

ಜನಗಣಮನ ಗೀತೆಯನ್ನು ಚಾರ್ಲ್ಸ್ ದೊರೆಗಾಗಿ ರವೀಂದ್ರರು ರಚಿಸಿದರು ಎಂಬ ಅಪಪ್ರಚಾರ ಬಹುಕಾಲ ನಡೆಯುತ್ತಲೇ ಇತ್ತು. ಈಗಲೂ ಅದು ವಾಟ್ಸ್ಆ್ಯಪ್ ಪಂಡಿತರ ಮೂಲಕ ಆಗಾಗ ಪ್ರಸಾರವಾಗುತ್ತಲೇ ಇರುತ್ತದೆ. ಅದೇ ಸಾಲಿಗೆ ಸಂಗೀತ ಸಂಯೋಜನೆಯ ಕ್ರೆಡಿಟ್ ಅನ್ನು ಠಾಕೂರಿಯವರಿಗೆ ಕೊಡುವ ಪ್ರಯತ್ನವೂ ಸೇರುತ್ತದೆ. ಮೊದಲಿನದ್ದು ಸಂಪೂರ್ಣ ಸುಳ್ಳು. ಠಾಕೂರಿಯವರ ಸಂಯೋಜನೆಯ ಸಂಗತಿಯಲ್ಲಿ ಅರ್ಧಸತ್ಯವಿದೆ. ಠಾಕೂರಿಯವರು ಸಂಯೋಜನೆ ಮಾಡಿರಬಹುದು. ಆದರೆ ನಾವು ಹಾಡುತ್ತಿರುವುದು ಆ ಸಂಯೋಜನೆಯಲ್ಲ ಎಂಬುದು ವಾಸ್ತವ. ರಾಷ್ಟ್ರಗೀತೆಯ ಸಂಗೀತ ಸಂಯೋಜನೆಗೆ ಸಂಬಂಧಿಸಿದಂತೆ ವಿಕಿಪಿಡಿಯಾದಲ್ಲೇ ಸಾಕಷ್ಟು ಮಾಹಿತಿಗಳಿವೆ. ಹಾಗೆಯೇ ಕೆಲ ಕಾಲದ ಹಿಂದೆ ದಿ ವೈರ್ ಜಾಲತಾಣವೂ ಇದರ ಬಗ್ಗೆ ಲೇಖನ ಪ್ರಕಟಿಸಿ ಈ ಸಂಶಯಗಳನ್ನು ನಿವಾರಿಸಲು ಪ್ರಯತ್ನಿಸಿತ್ತು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.