Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮ ಹೇಳಿಕೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮ ಹೇಳಿಕೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ

Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮ ಹೇಳಿಕೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ

Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮವಾಗಿ ಹೇಳಿಕೆ ನೀಡಿ ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಇದೀಗ ಸಾರ್ವಜನಿಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಷಮೆ ಯಾಚಿಸಿದ್ದಾರೆ. "ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ನಾನು ಹಾಗೇ ಹೇಳಬಾರದಿತ್ತು, ಕ್ಷಮಿಸಿ" ಎಂದು ಕ್ಷಮೆ ಯಾಚಿಸಿದ್ದಾರೆ.

Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮ ಹೇಳಿಕೆ, ಕ್ಷಮೆ ಕೇಳಿದ ಯೂಟ್ಯೂಬರ್
Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮ ಹೇಳಿಕೆ, ಕ್ಷಮೆ ಕೇಳಿದ ಯೂಟ್ಯೂಬರ್

Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮವಾಗಿ ಹೇಳಿಕೆ ನೀಡಿ ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಇದೀಗ ಸಾರ್ವಜನಿಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಷಮೆ ಯಾಚಿಸಿದ್ದಾರೆ. "ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ನಾನು ಹಾಗೇ ಹೇಳಬಾರದಿತ್ತು, ಕ್ಷಮಿಸಿ" ಎಂದು ಅವರು ಎಕ್ಸ್‌ನಲ್ಲಿ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ. ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಅವರು ಇತ್ತೀಚೆಗೆ ಸಮಯ್ ರೈನಾ ಅವರ ಯೂಟ್ಯೂಬ್‌ ಶೋ ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ವಿವಾದಿತ ಹೇಳಿಕೆ ನೀಡಿದ್ದರು. ಇದರ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ, ಮೀಮ್ಸ್‌ ಉಂಟಾಗಿತ್ತು. ಇದೀಗ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಈ ಕುರಿತು ಕ್ಷಮೆ ಕೇಳಿದ್ದಾರೆ.

ರಣವೀರ್ ಅಲಹಾಬಾದಿಯಾ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಕ್ಷಮೆ ಕೇಳಿದ್ದಾರೆ. "ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ನಾನು ಹಾಗೇ ಹೇಳಬಾರದಿತ್ತು, ಕ್ಷಮಿಸಿ" ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. "ನನ್ನ ಕಾಮೆಂಟ್ ಸೂಕ್ತವಾಗಿರಲಿಲ್ಲ. ಅದು ತಮಾಷೆಯೂ ಅಲ್ಲ. ಸಾಕಷ್ಟು ಜನರು ನನ್ನ ಯೂಟ್ಯೂಬ್‌ ವೇದಿಕೆಯನ್ನು ಇದೇ ರೀತಿ ಬಳಕೆ ಮಾಡಲು ಬಯಸುತ್ತೀಯಾ ಎಂದು ಕೇಳುತ್ತಿದ್ದಾರೆ. ನಾನು ಈ ರೀತಿ ಬಳಸಲು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವೆ. ಘಟನೆ ಕುರಿತು ಯಾವುದೇ ಸಮರ್ಥನೆ, ತರ್ಕ ಮಾಡಲು ನಾನು ಇಲ್ಲಿ ಬಂದಿಲ್ಲ, ಈ ಕುರಿತು ಕ್ಷಮೆ ಯಾಚಿಸಲು ಬಂದಿದ್ದೇನೆ" ಎಂದು ಅವರು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಈ ಕುರಿತು ನಾನು ವೈಯಕ್ತಿಕವಾಗಿ ನಿರ್ಣಯ ಮಾಡುವಲ್ಲಿ ತಪ್ಪು ಮಾಡಿದ್ದೇನೆ. ಈ ಪಾಡ್‌ಕಾಸ್ಟ್‌ ಅನ್ನು ಎಲ್ಲಾ ವಯಸ್ಸಿನ ಜನರು ವೀಕ್ಷಿಸುತ್ತಿದ್ದರು. ಕುಟುಂಬದ ಕುರಿತು ಎಂದಿಗೂ ಹಗುರವಾಗಿ ಮಾತನಾಡಲು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ. "ಈ ಯೂಟ್ಯೂಬ್‌ ವೇದಿಕೆಯನ್ನು ಅತ್ಯುತ್ತಮವಾಗಿ ಬಳಸಬೇಕಿತ್ತು. ನನ್ನ ಜೀವನದ ಅನುಭವಗಳಿಂದ ಕಲಿಯುತ್ತಿದ್ದೇನೆ. ಭವಿಷ್ಯದಲ್ಲಿ ಈ ರೀತಿ ಆಗದು. ಈ ವಿಡಿಯೋದಲ್ಲಿರುವ ಅಸೂಕ್ಷ್ಮ ಕಂಟೆಂಟ್‌ ಅನ್ನು ತೆಗೆಯುವಂತೆ ವಿಡಿಯೋ ಮೇಕರ್‌ಗಳಿಗೆ ತಿಳಿಸುವೆ" ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ ಎನ್ನುವುದು ಕಾಮಿಡಿ ರಿಯಾಲಿಟಿ ಶೋ. ಯೂಟ್ಯೂಬ್‌ನಲ್ಲಿ ನಡೆಯುವ ಈ ಶೋನಲ್ಲಿ ಸ್ಪರ್ಧಿಯೊಬ್ಬರ ಬಳಿಕ ಪೋಷಕರ ಲೈಂಗಿಕತೆ ಬಗ್ಗೆ ರಣವೀರ್‌ ಪ್ರಶ್ನಿಸಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ರಣವೀರ್‌ ಅವರ ಪಾಡ್‌ಕಾಸ್ಟ್‌ ನಿಷೇಧಿಸುವಂತೆ ಆಗ್ರಹವೂ ಕೇಳಿಬಂದಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಸೇರಿದಂತೆ ಸಾಕಷ್ಟು ಪ್ರಮುಖರು ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹೇಳಿಕೆ ವಿರುದ್ಧ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ರಣವೀರ್‌ ಅಲ್ಲಾಬಾಡಿಯಾ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಷರತ್‌ ಆಗಿ ಕ್ಷಮೆ ಕೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.