ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಂಚಕರ ಜೊತೆಗೆ ರೇಜರ್‌ಪೇ ಚೆಟ್ಟಿ ಅರುಣ್‌ ಚಾಟಿಂಗ್‌; ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ, ವಂಚಕ ನೀಡಿದ ಟಿಪ್ಸ್‌ ಹೀಗಿದೆ ನೋಡಿ

ವಂಚಕರ ಜೊತೆಗೆ ರೇಜರ್‌ಪೇ ಚೆಟ್ಟಿ ಅರುಣ್‌ ಚಾಟಿಂಗ್‌; ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ, ವಂಚಕ ನೀಡಿದ ಟಿಪ್ಸ್‌ ಹೀಗಿದೆ ನೋಡಿ

ವಾಟ್ಸ್‌ಆಪ್‌ನಲ್ಲಿ ಎಪಿಕೆ ಫೈಲ್ ಬಂದರೆ ಓಪನ್ ಮಾಡಿ ಇನ್‌ಸ್ಟಾಲ್ ಮಾಡಿದ್ರೆ ವಂಚಕರ ಹಿಡಿತಕ್ಕೆ ನಿಮ್ಮ ಫೋನ್ ಹೋಗುತ್ತೆ ಎಂಬುದನ್ನು ಕೇಳಿಯೇ ಇರುತ್ತೀರಿ. ಆದರೆ, ವಂಚಕರ ಜೊತೆಗೆ ರೇಜರ್‌ಪೇ ಚೆಟ್ಟಿ ಅರುಣ್‌ ಚಾಟಿಂಗ್‌ ಬಹಿರಂಗವಾದ ಈ ಅಂಶ ಗಮನಿಸಿ. ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ, ಅದನ್ನು ತಡೆಯುವುದಕ್ಕೆ ವಂಚಕ ನೀಡಿದ ಟಿಪ್ಸ್‌ ಹೀಗಿದೆ ನೋಡಿ.

ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ, ವಂಚಕ ನೀಡಿದ ಟಿಪ್ಸ್‌ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)
ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ, ವಂಚಕ ನೀಡಿದ ಟಿಪ್ಸ್‌ ವಿವರ ಈ ವರದಿಯಲ್ಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಮಹಾನಗರಗಳಲ್ಲಿ ಸೈಬರ್ ವಂಚಕರ ಚಾಲಾಕಿತನಕ್ಕ ನಿತ್ಯವೂ ಒಬ್ಬಿಲ್ಲೊಬ್ಬರು ಹಣಕಳೆದುಕೊಳ್ಳುತ್ತಲೇ ಇರುತ್ತಾರೆ. ಈಗ ವಾಟ್ಸ್‌ಆಪ್ ಮೂಲಕವೂ ಸಂಭಾಷಣೆ ನಡೆಸುತ್ತ, ಬ್ಯಾಂಕ್ ಖಾತೆ ಬರಿದಾಗಿಸುವ ತಂತ್ರವನ್ನೂ ವಂಚಕರು ಅನುಸರಿಸುವುದು ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಬೆಂಗಳೂರಿನ ವ್ಯಕ್ತಿಯೊಬ್ಬರು, ತಾವೇ ಸೈಬರ್ ವಂಚಕರ ಜೊತೆಗೆ ಮಾತಿಗಳಿದು, ಅದರ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿ ಗಮನಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೆಜರ್‌ಪೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಚೆಟ್ಟಿ ಅರುಣ್ ಈ ರೀತಿ ಸೈಬರ್ ವಂಚಕರ ಜೊತೆಗೆ ಮಾತಿಗಿಳಿದವರು. ಪದೇಪದೆ ಕರೆಮಾಡಿ ಹಿಂಸೆ ನೀಡುವ ಈ ವಂಚಕನಿಗೆ ಪಾಠ ಕಲಿಸಬೇಕು ಎಂದು ಮಾತಿಗಿಳಿದವರು ಪರಸ್ಪರ ಶುಭಕೋರಿಕೊಂಡ ಚಿತ್ರಣವನ್ನು ಚೆಟ್ಟಿ ಅರುಣ್ ಕಟ್ಟಿಕೊಟ್ಟಿದ್ದಾರೆ.

ರೇಜರ್‌ಪೇನಲ್ಲಿ ಕಲ್ಚರ್ ಹೆಡ್ ಆಗಿ ಕೆಲಸ ಮಾಡುತ್ತಿರುವ ಅರುಣ್‌ ಅವರಿಗೆ ವಾಟ್ಸ್‌ಆಪ್ ಮೂಲಕ ಎಪಿಕೆ ಫೈಲ್‌ ರವಾನೆಯಾಗಿದೆ. ಈ ಫೈಲ್ ಡೌನ್‌ಲೋಡ್ ಮಾಡಿದರೆ ಏನಾಗುವುದೆಂಬ ವಿವರವನ್ನು ವಂಚಕನಿಂದಲೇ ಕಲೆಹಾಕಿದ್ದಾರೆ ಅರುಣ್‌. ಎಪಿಕೆ ಫೈಲ್ ಮೂಲಕ ವಂಚಕರು ಸಂತ್ರಸ್ತರ ಸಂದೇಶಗಳನ್ನು ತಮ್ಮ ಮೊಬೈಲ್‌ನಲ್ಲಿ ಪಡೆದು, ಅವರ ಬ್ಯಾಂಕ್ ಖಾತೆ, ಇ ಕಾಮರ್ಸ್‌ ಸೈನ್‌ ಅಪ್‌ ಮುಂತಾದ ಸೂಕ್ಷ್ಮಮಾಹಿತಿ ಪಡೆದು ವಂಚನೆಗೆ ಬಳಸುತ್ತಾರೆ ಎಂಬುದು ಮಾತುಕತೆ ಮೂಲಕ ಬಹಿರಂಗವಾಗಿದೆ.

17 ಸರಣಿ ಟ್ವೀಟ್‌ ಮೂಲಕ ಚೆಟ್ಟಿ ಅರುಣ್‌ ನಿರೂಪಣೆ

ಚೆಟ್ಟಿ ಅರುಣ್ ಅವರು ವಂಚಕನ ಜೊತೆಗಿನ ಮಾತುಕತೆಯನ್ನು ತೆರೆದಿಟ್ಟಿರುವುದು ಹೀಗೆ -

ನಾನು ಇಂದು ಮತ್ತೊಬ್ಬ ವಂಚಕನ ಜೊತೆ ಮಾತನಾಡಿದೆ. ಈ ಮಾತುಕತೆಗೆ ನಿಖರ ಉದ್ದೇಶವೇನೂ ಇರಲಿಲ್ಲ. ಆದರೆ ಕಿರಿಕಿರಿ ಉಂಟುಮಾಡುವ ವಾಟ್ಸ್‌ಆಪ್ ಸಂದೇಶದೊಂದಿಗೆ ಶುರುವಾದ ಈ ಮಾತುಕತೆ, ಪರಸ್ಪರ ಶುಭ ಕೋರುವ ಮೂಲಕ ಕೊನೆಗೊಂಡಿರುವುದು ಸತ್ಯ.

ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ?

ಸೈಬರ್ ವಂಚನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನ ಮಾಡುವಾಗ ಏನಾಯಿತು ಎಂಬುದನ್ನು ಚೆಟ್ಟಿ ಅರುಣ್ 5ನೇ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಈ ರೀತಿ ಮಾಹಿತಿ ಪಡೆಯಲು ಪ್ರಯತ್ನಿಸುವಾಗ, ಆ ವಂಚಕ ವಿಡಿಯೋ ಕರೆ ಮಾಡಲು ಪ್ರಯತ್ನಿಸಿದ್ದ. ಅದನ್ನು ತಡೆದು ಮೆಸೇಜ್‌ಗಳ ಮೂಲಕ ಸಂವಹನ ಮುಂದುವರಿಸಿದ್ದರು, ಎಪಿಕೆ ಫೈಲ್‌ ಡೌನ್‌ಲೋಡ್ ಮಾಡಬೇಡಿ ಎಂದಿದ್ದಾನೆ. ಬಳಿಕ, ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿದ್ರೆ ಏನಾಗುತ್ತೆ ಎಂದು ಕೇಳಿದಾಗ ಆತ ಹೇಳಿದ್ದು ಇಷ್ಟು -

ಒಂದೊಮ್ಮೆ ಯಾರಾದರೂ ಅಕಸ್ಮಾತ್ ಆಗಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ್ದರೆ, ಅವರ ಮೊಬೈಲ್‌ಗೆ ಬರುವ ಸಂದೇಶಗಳೆಲ್ಲವೂ ವಂಚಕರ ಮೊಬೈಲ್‌ಗೆ ರವಾನೆಯಾಗುತ್ತವೆ. ಅದರಲ್ಲಿ ಒಟಿಪಿಗಳಿಂದ ಹಿಡಿದು ಎಲ್ಲ ಮಾಹಿತಿಗಳೂ ವಂಚಕರ ಕೈ ಸೇರುತ್ತದೆ. ಅವರು ಅದನ್ನು ತಮ್ಮ ಅನುಕೂಲಕ್ಕೆ ಹಣ ವಿತ್‌ಡ್ರಾ ಮಾಡಲು, ಇ ಕಾಮರ್ಸ್ ಸೈಟ್‌ಗಳಲ್ಲಿ ಬಳಸಲು ಉಪಯೋಗಿಸುತ್ತಾರೆ ಎಂದು ವಿವರಿಸಿದ್ದಾನೆ.

ಎಲ್ಲವೂ ಡಿಜಿಟಲ್ ಇಂಡಿಯಾ ಮಹಿಮೆ, ಸೈಬರ್ ಸೆಕ್ಯುರಿಟಿ ಕಡೆಗೆ ಜನ ಗಮನಹರಿಸುವುದೇ ಇಲ್ಲ

ವಂಚಕನ ಜೊತೆಗೆ ಮಾತು ಮುಂದುವರಿಸಿದ ಚೆಟ್ಟಿ ಅರುಣ್ ಅವರು ಕೇಳಿದ್ರು- ನನ್ನ ನಂಬರ್ ಯಾರು ಕೊಟ್ರು ನಿಮಗೆ?

ಅದಕ್ಕೆ ಆ ವಂಚಕ ಹೇಳಿದ್ದು ಹೀಗೆ - ಎಲ್ಲವೂ ಡಿಜಿಟಲ್ ಇಂಡಿಯಾ ಮಹಿಮೆ. ಈಗ ಚಾಟ್ ಮಾಡ್ತಾ ಇರೋ ನಂಬರ್ ನನ್ನದಲ್ಲ. ಇರಿ ಇನ್ನೊಂದು ನಂಬರ್‌ನಿಂದ ಲಾಗಿನ್ ಆಗ್ತೇನೆ ಎನ್ನುತ್ತ ಮತ್ತೊಂದು ನಂಬರ್‌ ಮೂಲಕ ಚಾಟಿಂಗ್ ಶುರುಮಾಡಿದ.

ನಿಮಗೊಂದು ಸ್ಕ್ರೀನ್ ಶಾಟ್ ಕಳುಹಿಸಿದ್ದೇನೆ ನೋಡಿ. ಅಲ್ಲಿರುವ ನಂಬರ್ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದವನದ್ದು. ಕಳೆದ 10 -12 ವರ್ಷಗಳಿಂದ ಇದು ನಡೀತಾ ಇದೆ. ಇದನ್ನು ತಡೆಯೋದು ಸರ್ಕಾರದಿಂದ ಸಾಧ್ಯವಾಗಿಲ್ಲ. ಅಷ್ಟು ಖರಾಬ್ ಆಗಿದೆ ನಮ್ಮ ವ್ಯವಸ್ಥೆ. ನಾನು ಕಳೆದ 15 ದಿನಗಳಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದು ಆತ ಹೇಳಿದ.

ಎಪಿಕೆ ಫೈಲ್ ಅಕಸ್ಮಾತ್ ಇನ್‌ಸ್ಟಾಲ್ ಆದ್ರೆ ಮುಂದೇನಾಗುತ್ತೆ?

ವಂಚಕ ಒಂದೊಂದಾಗಿ ಮಾಹಿತಿ ಒದಗಿಸುತ್ತಾ, ಎಪಿಕೆ ಫೈಲ್ ಅಕಸ್ಮಾತ್ ಇನ್‌ಸ್ಟಾಲ್ ಆದ್ರೆ ಮುಂದೇನು ನಡೆಯುತ್ತೆ ಎಂಬುದನ್ನೂ ವಿವರಿಸಿದ.

ಎಪಿಕೆ ಫೈಲ್ ಇನ್‌ಸ್ಟಾಲ್ ಆಗಿರುವುದು ಗಮನಕ್ಕೆ ಬಂದರೆ ಕೂಡಲೇ, ವಂಚಕರು ವಾಟ್ಸ್‌ಆಪ್‌ ಅನ್ನು ತಮ್ಮ ಹಿಡಿತಕ್ಕೆ ತಗೊಳ್ತಾರೆ. ನಂತರ, ಫೇಸ್‌ಬುಕ್, ಟ್ವಿಟರ್‌, ಫೋನ್‌ಪೇ, ಪೇಟಿಎಂ ಸೇರಿ ಎಲ್ಲ ಹಣಕಾಸಿನ ಆಪ್‌ಗಳ ಲಾಗಿನ್ ಪಾಸ್‌ವರ್ಡ್‌ ಜೊತೆಗೆ ತಮ್ಮ ಹಿಡಿತಕ್ಕೆ ತಗೊಳ್ತಾರೆ. ಕೊನೆಗೆ ಎಲ್ಲ ಖಾತೆ ಬರಿದು ಮಾಡ್ತಾರೆ ಎಂದು ಆತ ವಿವರಿಸಿದ.

1. ಯಾವುದೇ ಎಪಿಕೆ ಫೈಲ್ ಕ್ಲಿಕ್ ಮಾಡಬೇಡಿ. ವಿಶೇಷವಾಗಿ ಸ್ಮಾರ್ಟ್‌ಫೋನ್ ಬಳಸಲು ಬಾರದವರು, ಹಿರಿಯರು ಇದ್ದರೆ ಅವರನ್ನು ಈ ವಿಚಾರವಾಗಿ ಜಾಗೃತರನ್ನಾಗಿ ಮಾಡಬೇಕು. ವಾಟ್ಸ್‌ಆಪ್ ಮೂಲಕ ಈ ರೀತಿ ಎಪಿಕೆ ಫೈಲ್‌ಗಳ ರವಾನೆಯಾಗುತ್ತಿದ್ದು, ಫಾರ್ವರ್ಡ್ ಸಂದೇಶಗಳನ್ನು ತೆರೆದು ನೋಡದಂತೆ ಜಾಗರೂಕರಾಗಿರಬೇಕು.

2. ಒಂದೊಮ್ಮೆ ಎಪಿಕೆ ಫೈಲ್ ಅಕಸ್ಮಾತ್ ಇನ್‌ಸ್ಟಾಲ್ ಆದರೆ, ಕೂಡಲೇ ಫೋನ್ ರೀಸೆಟ್ ಮಾಡುವುದು ಅಗತ್ಯ.

IPL_Entry_Point