Optical Illusion: ಈ ಅರಣ್ಯದಲ್ಲಿರುವ 2ನೇ ಜಿಂಕೆಯನ್ನ 5 ಸೆಕೆಂಡುಗಳಲ್ಲಿ ಹುಡುಕಿದ್ರೆ ನಿಮ್ಮ ಕಣ್ಣು ಶಾರ್ಪ್ ಎಂದರ್ಥ
ಈ ಚಿತ್ರದಲ್ಲಿ ಹಿಮದಿಂದ ಆವೃತವಾದ ಅರಣ್ಯವಿದೆ. ಮರಗಳ ಮುಂದೆ ಕೋಡು ಇಲ್ಲದ ಜಿಂಕೆ ನಿಂತಿದೆ. ಅದು ನಮ್ಮೆಡೆಯೇ ನೋಡುತ್ತಿದೆ. ಆದರೆ ಇದೇ ಅರಣ್ಯದಲ್ಲಿ ಕಣ್ಣಿಗೆ ಕಾಣದಂತೆ ಮತ್ತೊಂದು ಜಿಂಕೆ ಅಡಗಿದ್ದು, 5 ಸೆಕೆಂಡ್ ಗಳಲ್ಲಿ ಅಡಗಿರುವ ಜಿಂಕೆಯನ್ನು ಪತ್ತೆ ಹಚ್ಚುವುದೇ ಸವಾಲಾಗಿದೆ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಾವು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಜನರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುತ್ತವೆ. ನಿಮ್ಮ ಮೆದುಳನ್ನು ಫೂಲ್ ಮಾಡೋಕೋಸ್ಕರನೇ ಈ ಚಿತ್ರಗಳು ಇರೋದು. ವಾಸ್ತವಿಕತೆ ಮತ್ತು ಗ್ರಹಿಕೆ ಪರಸ್ಪರ ಹೆಣೆದುಕೊಂಡಂತೆ, ನಿಜವಾಗಿಯೂ ಅಲ್ಲಿ ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗಲ್ಲ. ಇದನ್ನ ಕಂಡುಹಿಡಿಯ ಬೇಕಂದ್ರೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಥಟ್ ಅಂತ ಹುಡುಕಿದ್ರೆ ನಿಮ್ಮ ಕಣ್ಣು ತುಂಬಾ ಶಾರ್ಪ್ ಎಂದರ್ಥ.
ಇಲ್ಲಿ ಉತ್ತರವನ್ನ ಪತ್ತೆ ಹಚ್ಚುವುದೇ ಒಂದು ರೀತಿಯಲ್ಲಿ ಮಜಾ ಎನ್ನಿಸುತ್ತದೆ. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಉತ್ತರ ಹುಡುಕುವ ನಿಯಮಿತ ಅಭ್ಯಾಸವು ಏಕಾಗ್ರತೆಯನ್ನು ಸುಧಾರಿಸುತ್ತದೆ. ನಿಮ್ಮ ಬುದ್ಧಮತ್ತೆ ಪರೀಕ್ಷಿಸಲು ಇಲ್ಲೊಂದು ಇಮೇಜ್ ಇದೆ ಗಮನಿಸಿ. ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ ಎಂಬುದನ್ನು ತಿಳಿಯಲು ಈ ಚಿತ್ರದಲ್ಲಿರುವ 2ನೇ ಜಿಂಕೆಯನ್ನು ಪತ್ತೆ ಮಾಡಿ.
ಈ ಚಿತ್ರದಲ್ಲಿ ಹಿಮದಿಂದ ಆವೃತವಾದ ಅರಣ್ಯವಿದೆ. ಮರಗಳ ಮುಂದೆ ಕೋಡು ಇಲ್ಲದ ಜಿಂಕೆ ನಿಂತಿದೆ. ಅದು ನಮ್ಮೆಡೆಯೇ ನೋಡುತ್ತಿದೆ. ಆದರೆ ಇದೇ ಅರಣ್ಯದಲ್ಲಿ ಕಣ್ಣಿಗೆ ಕಾಣದಂತೆ ಮತ್ತೊಂದು ಜಿಂಕೆ ಅಡಗಿದ್ದು, 5 ಸೆಕೆಂಡ್ ಗಳಲ್ಲಿ ಅಡಗಿರುವ ಜಿಂಕೆಯನ್ನು ಪತ್ತೆ ಹಚ್ಚುವುದೇ ಸವಾಲಾಗಿದೆ. ನಿಮ್ಮ ಸಮಯ ಈಗ ಪ್ರಾರಂಭ 5 ಸೆಕೆಂಡ್ಗಳಲ್ಲಿ ಎಡರನೇ ಜಿಂಕೆ ಹುಡುಕಿ.
ಅರೇ, ಇನ್ನೂ 2ನೇ ಜಿಂಕೆ ಸಿಕ್ಕಿಲ್ವಾ? ಮತ್ತೊಮ್ಮೆ ಸೂಕ್ಷ್ಮವಾಗಿ ಚಿತ್ರವನ್ನು ನೋಡಿ. ಒಂದು ಸುಳಿವು ನೀಡಬೇಕೆಂದ್ರೆ 2ನೇ ಜಿಂಕೆಯು ಮೊದಲನೇ ಜಿಂಕೆಗಿಂತಲೂ ದೊಡ್ಡದಾಗಿದೆ. ಯೆಸ್ ಈ ಚಿತ್ರದ ಮಧ್ಯಭಾಗದಲ್ಲಿ ಕೋಡು ಇರುವ ಜಿಂಕೆಯ ಆಕೃತಿ ಕಾಣುತ್ತಿದೆ ನೋಡಿ.
ವಿಭಾಗ