Viral photo: ಮಹಾ ಕುಂಭಮೇಳದಲ್ಲಿನ ಹೃದ್ಯ ಸನ್ನಿವೇಶದ ಫೋಟೋ ಮನಮುಟ್ಟಿತು, ಕಣ್ಣು ಮಂಜಾಯಿತು, ಇದನ್ನೇ ಅಲ್ವ ಪ್ರೀತಿ ಅನ್ನೋದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Photo: ಮಹಾ ಕುಂಭಮೇಳದಲ್ಲಿನ ಹೃದ್ಯ ಸನ್ನಿವೇಶದ ಫೋಟೋ ಮನಮುಟ್ಟಿತು, ಕಣ್ಣು ಮಂಜಾಯಿತು, ಇದನ್ನೇ ಅಲ್ವ ಪ್ರೀತಿ ಅನ್ನೋದು

Viral photo: ಮಹಾ ಕುಂಭಮೇಳದಲ್ಲಿನ ಹೃದ್ಯ ಸನ್ನಿವೇಶದ ಫೋಟೋ ಮನಮುಟ್ಟಿತು, ಕಣ್ಣು ಮಂಜಾಯಿತು, ಇದನ್ನೇ ಅಲ್ವ ಪ್ರೀತಿ ಅನ್ನೋದು

Viral photo Maha Kumbh 2025: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭ ಮೇಳ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಹಾ ಕುಂಭ ಮೇಳದಲ್ಲಿನ ಹೃದ್ಯ ಸನ್ನಿವೇಶದ ಫೋಟೋ ಜನರ ಮನಮುಟ್ಟಿತು. ಅನೇಕರ ಕಣ್ಣು ಮಂಜಾಯಿತು. ಇದನ್ನೇ ಅಲ್ವ ಪ್ರೀತಿ ಅನ್ನೋದು. ಇಲ್ಲಿದೆ ವಿವರ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭ ಮೇಳ ಶುರುವಾಗಿದೆ. (ಎಡ ಚಿತ್ರ),. ಮಹಾ ಕುಂಭ ಮೇಳದಲ್ಲಿ ಕಂಡು ಬಂದ ನ ಹೃದ್ಯ ಸನ್ನಿವೇಶದ ಫೋಟೋ ಮನಮುಟ್ಟಿತು. (ಬಲ ಚಿತ್ರ)
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭ ಮೇಳ ಶುರುವಾಗಿದೆ. (ಎಡ ಚಿತ್ರ),. ಮಹಾ ಕುಂಭ ಮೇಳದಲ್ಲಿ ಕಂಡು ಬಂದ ನ ಹೃದ್ಯ ಸನ್ನಿವೇಶದ ಫೋಟೋ ಮನಮುಟ್ಟಿತು. (ಬಲ ಚಿತ್ರ) (AFP / X/@appyynotfizz)

Viral photo Maha Kumbh 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಪ್ರಾರಂಭವಾಗುತ್ತಿದ್ದಂತೆ, ಭಕ್ತದಟ್ಟಣೆ ಹೆಚ್ಚಾಗಿದೆ. ಏಳು ಸುತ್ತಿನ ಭದ್ರತೆಯೊಂದಿಗೆ ಶುರುವಾದ ಮಹಾ ಕುಂಭ ಮೇಳದಲ್ಲಿ 45 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ. ಎಲ್ಲೆಡೆ, ಈ ಮಹಾ ಕುಂಭ ಮೇಳದ ವಿಡಿಯೋ ಮತ್ತು ಫೋಟೋಗಳು ಹರಿದಾಡತೊಡಗಿವೆ. ಜಗತ್ತಿನ ಕೋಟ್ಯಂತರ ಜನರು ಭಾಗವಹಿಸುವಂತಹ ಮಹಾ ಕುಂಭ ಮೇಳದಲ್ಲಿ ಪ್ರತಿ ಕ್ಷಣವೂ ಮನತಟ್ಟುವ, ಹೃದ್ಯ ವಿಚಾರಗಳು ನಡೆಯತ್ತಿರುತ್ತವೆ. ಈ ಪೈಕಿ ಕೆಲವು ಸನ್ನಿವೇಶಗಳು ವೈರಲ್ ಆಗಿಬಿಡುತ್ತದೆ. ಅಂತಹ ಒಂದು ಸನ್ನಿವೇಶ ಇದು. ಸದ್ಯ ವೈರಲ್ ಆಗಿರುವ ಚಿತ್ರ ಇದು. ಮಹಾ ಕುಂಭ ಮೇಳದಲ್ಲಿ ಮನತಟ್ಟಿದ ಫೋಟೋ ಎಂದೂ ಹೇಳಬಹುದು. ಅಸ್ತಂಗತರಾದ ತಾಯಿಯ ಫೋಟೋ ಹಿಡಿದುಕೊಂಡು ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಮಾಡಿದ ಪುತ್ರನ ಚಿತ್ರ ಇದು.

ಅಮ್ಮನ ಸ್ಮರಣೆಯೊಂದಿಗೆ ಶಾಹಿ ಸ್ನಾನ ಮಾಡಿದ ಪುತ್ರ; ಮಹಾ ಕುಂಭ ಮೇಳದ ಫೋಟೋ ವೈರಲ್‌

ಮಹಾ ಕುಂಭ ಮೇಳದ ಫೋಟೋ ಪ್ರವಾಹದ ನಡುವೆ ಗಮನಸೆಳೆದ ಫೋಟೋ ಇದು. ಮೃತಪಟ್ಟಿರುವ ಅಮ್ಮನ ಫೋಟೋ ಹಿಡಿದು ಬಂದ ಪುತ್ರನೊಬ್ಬ, ಅಮ್ಮನ ಸ್ಮರಣೆಯೊಂದಿಗೆ ಶಾಹಿ ಸ್ನಾನ ಮಾಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ತಾನೇ ನಾವು ಪ್ರೀತಿ ಅನ್ನೋದು ಎಂಬ ಶೀರ್ಷಿಕೆ ಫೋಟೋ ನೋಡುತ್ತಲೇ ಹೃದ್ಯ ಭಾವ ಮೂಡುವಂತೆ ಮಾಡಿದೆ.

ಹೃದ್ಯ ಸನ್ನಿವೇಶದ ಫೋಟೋ ಮನಮುಟ್ಟಿತು, ಕಣ್ಣು ಮಂಜಾಯಿತು, ಇದನ್ನೇ ಅಲ್ವ ಪ್ರೀತಿ ಅನ್ನೋದು

ಈ ಹೃದ್ಯ ಸನ್ನಿವೇಶ ಅನೇಕರನ್ನುಭಾವುಕರನ್ನಾಗಿಸಿತು. ಈ ಪೋಸ್ಟ್‌ಗೆ ಕಾಮೆಂಟ್ ಬರೆಯುತ್ತ ಒಬ್ಬ ಬಳಕೆದಾರ," ನಾನು ನನ್ನ ಅಜ್ಜನಿಗೆ, ಅವರನ್ನು ಬೈಜನಾಥ ಧಾಮಕ್ಕೆ ಕರೆದೊಯ್ಯುತ್ತೇನೆ ಎಂದು ಮಾತುಕೊಟ್ಟಿದ್ದೆ. ಆದರೆ, ಅವರು ವಿಧಿವಶರಾದರು. ಆಗ ನಾನು ಅವರ ಫೋಟೋ ಹಿಡಿದುಕೊಂಡು ಹೋಗಿ ನನ್ನ ಮಾತನ್ನು ಉಳಿಸಲು ಪ್ರಯತ್ನಿಸಿದ್ದೆ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇನ್ನೊಬ್ಬರು, ಅವಿಸ್ಮರಣೀಯ ಕ್ಷಣ ಎಂದು ಹೇಳಿದ್ದರೆ, ಮತ್ತೊಬ್ಬರು, ಪ್ರತಿಯೊಬ್ಬರಿಗೂ ಇಂಥ ಪುತ್ರ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ. ಬಹುತೇಕ ಪ್ರತಿಕ್ರಿಯೆಗಳು ಕೈ ಜೋಡಿಸಿದ ಮತ್ತು ಪ್ರೀತಿಯ ಇಮೋಜಿಗಳಿಂದ ತುಂಬಿಕೊಂಡಿವೆ.

ಮಹಾ ಕುಂಭ ಮೇಳ 2025 ಹೀಗಿದೆ

ಬಹುನಿರೀಕ್ಷಿತ ಮಹಾ ಕುಂಭ ಮೇಳ 2025 ಉತ್ತರ ಪ್ರದೇಶ ಪ್ರಯಾಗ್ ರಾಜ್‌ನಲ್ಲಿ ಶುರುವಾಗಿದ್ದು ಫೆ.26ರ ತನಕ ನಡೆಯಲಿದೆ. ಪೌಷ ಹುಣ್ಣಿಮೆ ದಿನ ಮೊದಲ ಶಾಹಿ ಸ್ನಾನ ನೆರವೇರಿದ್ದು, ಮತ್ತು ಮಕರ ಸಂಕ್ರಮಣದ ಪವಿತ್ರ ಸ್ನಾನಕ್ಕೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಸೇರಿದ್ದಾರೆ. ಗಂಗಾ, ಯಮುನಾ ಮತ್ತು ಗುಪ್ತಗಾಮಿನಿಯಾಗಿರುವ ಪೌರಾಣಿಕ ಸರಸ್ವತಿ ನದಿಯ ಸಂಗಮ ಸ್ಥಳದಲ್ಲಿ ಮಹಾ ಕುಂಭ ಮೇಳದ ಶಾಹಿ ಸ್ನಾನಕ್ಕೆ ಅವಕಾಶ ನೀಡಲಾಗಿದೆ. ಈ ಸಂಗಮಕ್ಕೆ ಹೋಗುವ ಎಲ್ಲ ಏಳು ಮಾರ್ಗಗಳಲ್ಲಿ ಸಂಚಾರ ವ್ಯತ್ಯಯವಾಗಿದ್ದು, ವಾಹನ ರಹಿತ ಪ್ರದೇಶವೆಂದು ಘೋಷಿಸಲಾಗಿದೆ.

ಭಕ್ತದಟ್ಟಣೆ ನಿರ್ವಹಿಸುವುದಕ್ಕಾಗಿ ಮತ್ತು ಅವರ ಸುರಕ್ಷೆ, ಸುಗಮ ನಿರ್ವಹಣೆ ಖಚಿತಪಡಿಸಲು ಅಧಿಕಾರಿಗಳು ಮಹಾ ಕುಂಭ ಮೇಳದ ಸ್ಥಳದಲ್ಲಿ 2,751 ಸಿಸಿಟಿವಿ ಕ್ಯಾಮೆರಾ ಸ್ಥಾಪಿಸಿದ್ದಾರೆ. ಈ ಪೈಕಿ 328 ಎಐ ಅಳವಡಿಸಿದ ಕ್ಯಾಮೆರಾಗಳಿವೆ. ಇವುಗಳನ್ನು ಸಂಗಮ ಸ್ಥಳ ಮತ್ತು ಟೆಂಟ್ ಸಿಟಿ ಆಸುಪಾಸಿನಲ್ಲಿ ಅಳವಡಿಸಲಾಗಿದೆ. ಅರೆಸೇನಾ ಪಡೆಗಳು ಮತ್ತು ಉತ್ತರ ಪ್ರದೇಶ ತಾಂತ್ರಿಕ ಸೇವೆಗಳ ತಂಡಗಳು ಸೇರಿದಂತೆ ಸರಿಸುಮಾರು 40,000 ಪೊಲೀಸರನ್ನು ಭದ್ರತೆಯನ್ನು ನಿರ್ವಹಿಸಲು ಮತ್ತು ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಮೇಳ ಪ್ರದೇಶದ ಸುತ್ತಲೂ ನಿಯೋಜಿಸಲಾಗಿದೆ. ಐಜಿ (ಪ್ರಯಾಗರಾಜ್ ) ಪ್ರೇಮ್ ಗೌತಮ್ ಅವರು ವ್ಯಾಪಕ ಭದ್ರತಾ ಕ್ರಮಗಳನ್ನು ದೃಢಪಡಿಸಿದ್ದು, ಮಹಾ ಕುಂಭ ಮೇಳಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸುರಕ್ಷಿತ ಮತ್ತು ಸುಗಮ ಅನುಭವವನ್ನು ಖಾತ್ರಿಪಡಿಸುವ ಪ್ರಯತ್ನಗಳಿಗೆ ಒತ್ತು ನೀಡಿರುವುದಾಗಿ ತಿಳಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.