ಭುವನೇಶ್ವರದಲ್ಲಿ ಕಫ್ ಸಿರಪ್ ಬಾಟಲಿ ನುಂಗಿ ಕಂಗಲಾದ ನಾಗರ ಹಾವು, ಬಾಟಲಿ ಕಕ್ಕಿಸಿ ಪ್ರಾಣ ಉಳಿಸಿದ ಉರಗ ತಜ್ಞರು- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭುವನೇಶ್ವರದಲ್ಲಿ ಕಫ್ ಸಿರಪ್ ಬಾಟಲಿ ನುಂಗಿ ಕಂಗಲಾದ ನಾಗರ ಹಾವು, ಬಾಟಲಿ ಕಕ್ಕಿಸಿ ಪ್ರಾಣ ಉಳಿಸಿದ ಉರಗ ತಜ್ಞರು- ವೈರಲ್ ವಿಡಿಯೋ

ಭುವನೇಶ್ವರದಲ್ಲಿ ಕಫ್ ಸಿರಪ್ ಬಾಟಲಿ ನುಂಗಿ ಕಂಗಲಾದ ನಾಗರ ಹಾವು, ಬಾಟಲಿ ಕಕ್ಕಿಸಿ ಪ್ರಾಣ ಉಳಿಸಿದ ಉರಗ ತಜ್ಞರು- ವೈರಲ್ ವಿಡಿಯೋ

ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಕಫ್ ಸಿರಪ್ ಬಾಟಲಿ ನುಂಗಿ ಕಂಗಲಾದ ನಾಗರ ಹಾವು ಅದನ್ನು ನುಂಗಲೂ ಆಗದೆ, ಕಕ್ಕಲೂ ಆಗದೆ ಪ್ರಾಣ ಸಂಕಟ ಅನುಭವಿಸಿತ್ತು. ಕೊನೆಗೆ, ಉರಗ ತಜ್ಞರು ಬಾಟಲಿ ಕಕ್ಕಿಸಿ ಅದರ ಪ್ರಾಣ ಉಳಿಸಿದರು. ಇದರ ವೈರಲ್ ವಿಡಿಯೋ ಮತ್ತು ಅದರ ಮಾಹಿತಿ ಇಲ್ಲಿದೆ.

ಭುವನೇಶ್ವರದಲ್ಲಿ ಕಫ್ ಸಿರಪ್ ಬಾಟಲಿ ನುಂಗಿ ಕಂಗಲಾದ ನಾಗರ ಹಾವು, ಬಾಟಲಿ ಕಕ್ಕಿಸಿ ಪ್ರಾಣ ಉಳಿಸಿದ ಉರಗ ತಜ್ಞರು- ವೈರಲ್ ವಿಡಿಯೋದಿಂದ ತೆಗೆದ ಚಿತ್ರ.
ಭುವನೇಶ್ವರದಲ್ಲಿ ಕಫ್ ಸಿರಪ್ ಬಾಟಲಿ ನುಂಗಿ ಕಂಗಲಾದ ನಾಗರ ಹಾವು, ಬಾಟಲಿ ಕಕ್ಕಿಸಿ ಪ್ರಾಣ ಉಳಿಸಿದ ಉರಗ ತಜ್ಞರು- ವೈರಲ್ ವಿಡಿಯೋದಿಂದ ತೆಗೆದ ಚಿತ್ರ. (@susantananda3)

ಭುವನೇಶ್ವರ: ಕಫ್ ಸಿರಪ್ ನುಂಗಲು ಹೊರಟು ಕಂಗಾಲಾದ ನಾಗರಹಾವಿನ ವಿಡಿಯೋ ವೈರಲ್ ಆಗಿದೆ. ಈ ವಿದ್ಯಮಾನ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆದಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಕುವ ವಿಚಾರ ಚರ್ಚೆಗೆ ಒಳಗಾಗಿದೆ.

ಕೆಮ್ಮಿನ ಸಿರಪ್‌ ಬಾಟಲಿಯನ್ನು ಉಗುಳುವುದಕ್ಕಾಗದೇ ಉಸಿರುಗಟ್ಟಿ ಒದ್ದಾಡುತ್ತಿದ್ದ ಹಾವು ಉರಗ ಪ್ರಿಯರ ಗಮನಸೆಳೆದಿದ್ದು, ಅವರು ಅದಕ್ಕೆ ನೆರವಾದ ದೃಶ್ಯ ವೈರಲ್ ವಿಡಿಯೋದಲ್ಲಿದೆ. ಈ ವಿಡಿಯೋ ಎಕ್ಸ್‌ನಲ್ಲಿ ಶೇರ್ ಆಗಿದ್ದು, ಜವಾಬ್ದಾರಿಯುತ ತ್ಯಾಜ್ಯ ವಿಲೇವಾರಿ ಮತ್ತು ಕಸವನ್ನು ಎಸೆಯುವ ಪ್ರವೃತ್ತಿಯ ವಿಚಾರ ಮುನ್ನೆಲೆಗೆ ಬಂದಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದಾ (@susantananda3) ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ.

ಕೆಮ್ಮಿನ ಸಿರಪ್‌ ಬಾಟಲಿಯನ್ನು ಉಗುಳುವುದಕ್ಕಾಗದೇ ಒದ್ದಾಡಿದ ನಾಗರಹಾವು

ಸುಸಾಂತ ನಂದಾ ಅವರು ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿರುವ ಪ್ರಕಾರ, ಈ ಘಟನೆ ಭುವನೇಶ್ವರದಲ್ಲಿ ಸಂಭವಿಸಿದೆ. ಸ್ನೇಕ್ ಹೆಲ್ಪ್‌ಲೈನ್ ಸ್ವಯಂಸೇವಕರಿಗೆ ಸ್ಥಳೀಯರು ಈ ಕುರಿತು ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಹಾವಿಗೆ ನೆರವಾಗಿದ್ದಾರೆ.

ಎಕ್ಸ್ ಖಾತೆಯಲ್ಲಿ ಶೇರ್ ಆಗಿರುವ ಎರಡು ವಿಡಿಯೋಗಳ ಪೈಕಿ ಒಂದರಲ್ಲಿ ನುಂಗಿದ್ದ ಸಿರಪ್ ಬಾಟಲಿಯನ್ನು ನಾಗರಹಾವು ಕಕ್ಕಲು ಪ್ರಯತ್ನಿಸುತ್ತಿರುವ ದೃಶ್ಯವಿದೆ. ಮಳೆಯಿಂದಾಗಿ ನೆಲ ಒದ್ದೆಯಾಗಿರುವುದು ಕೂಡ ಅಲ್ಲಿ ಗಮನಿಸಬಹುದು. ಎರಡನೇ ವಿಡಿಯೋದಲ್ಲಿ ನಾಗರ ಹಾವಿನ ಬಾಯಿಯಿಂದ ಕೆಮ್ಮಿನ ಸಿರಪ್ ಬಾಟಿಯಲ್ಲಿ ಹೊರಕ್ಕೆ ತರಲು ಉರಗ ತಜ್ಞರು ನೆರವಾಗಿದ್ದರು. ಅದು ನಿಧಾನವಾಗಿ ಸಿರಪ್ ಬಾಟಲಿಯನ್ನು ಹೊರಕಕ್ಕಿದ ಬಳಿಕ, ಕೆಲವು ಸೆಕೆಂಡ್‌ಗಳಲ್ಲಿ ಸುಧಾರಿಸಿಕೊಂಡಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಶಿವ ದೇವರಿಗೆ ಜೈಕಾರ ಹಾಕಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

“ಸಾಮಾನ್ಯ ನಾಗರಹಾವು ಭುವನೇಶ್ವರದಲ್ಲಿ ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿ ಅದನ್ನು ಪುನಃ ಚೇತರಿಸಿಕೊಳ್ಳಲು ಹೆಣಗಾಡುತ್ತಿತ್ತು. ಸ್ನೇಕ್ ಹೆಲ್ಪ್‌ಲೈನ್‌ನ ಸ್ವಯಂಸೇವಕರು ಬಾಟಲಿಯನ್ನು ಮುಕ್ತಗೊಳಿಸಲು ಕೆಳಗಿನ ದವಡೆಯನ್ನು ನಿಧಾನವಾಗಿ ಸವರಿದರು. ಆಮೂಲಕ ಅಮೂಲ್ಯವಾದ ಜೀವವನ್ನು ಉಳಿಸಿದರು. ವಂದನೆಗಳು.” ಎಂದು ನಂದಾ ಎಕ್ಸ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ವೈರಲ್ ವಿಡಿಯೋಕ್ಕೆ ಭಾರಿ ಸ್ಪಂದನೆ

ಸುಸಾಂತ ನಂದಾ ಅವರು ಜುಲೈ 3 ರಂದು ಈ ವಿಡಿಯೋವನ್ನು ಶೇರ್ ಮಾಡಿದ್ದು, 2 ಲಕ್ಷದ ಹತ್ತಿರ ವೀಕ್ಷಣೆ ಪಡೆದಿದೆ. 2000ದಷ್ಟು ಲೈಕ್ಸ್ ಮತ್ತು ಹಲವರು ಕಾಮೆಂಟ್ ಮಾಡಿದ್ದಾರೆ.

"ಜನರು ತಮ್ಮ ತ್ಯಾಜ್ಯವನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ಜವಾಬ್ದಾರಿ ನಿಭಾಯಿಸಬೇಕು. ಈ ರೀತಿ ದುರಂತಗಳು ಇನ್ನೆಷ್ಟು ಬಾರಿ ಸಂಭವಿಸಬೇಕು. ಅದಕ್ಕೆ ಎಡೆ ಮಾಡಿಕೊಡಬಾರದು. ವಿಡಿಯೋ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಮತ್ತು ಜಾಗೃತಿ ಮೂಡಿಸಿದ್ದಕ್ಕಾಗಿ ಧನ್ಯವಾದಗಳು ಸುಸಂತಾ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬ ಬಳಕೆದಾರ, “ಇದಕ್ಕಾಗಿಯೇ ವಿಶೇಷವಾಗಿ ರಕ್ಷಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಕಸವನ್ನು ಹಾಕದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಬೇಕು” ಎಂದಿದ್ದಾರೆ.

“ಈ ಭೂಮಿಯ ಮೇಲಿನ ಇತರ ಜೀವಿಗಳಿಗೆ ಮನುಷ್ಯರಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ವಾಸ್ತವವಾಗಿ, ಕೆಲವೇ ಕೆಲವು ಜನರು ಮನುಕುಲಕ್ಕೆ ಬಹುದೊಡ್ಡ ಮತ್ತು ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ" ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.