Viral Video; ತಿರುಪತಿಯಲ್ಲಿ ಜನ ಇಂದು ದೇವರನ್ನು ನೋಡೋ ಬದಲು 25 ಕಿಲೋ ಚಿನ್ನಾಭರಣ ಧರಿಸಿ ಬಂದವರನ್ನೇ ನೋಡ್ತಾ ನಿಂತುಬಿಟ್ರು- ವೈರಲ್ ವಿಡಿಯೋ
Tirupati News; ತಿರುಪತಿ ತಿಮ್ಮಪ್ಪನನ್ನು ನೋಡೋದಕ್ಕೆ 25 ಕಿಲೋ ಚಿನ್ನಾಭರಣ ಧರಿಸಿ ಬಂದ್ರು ಈ ಭಕ್ತರು. ಅಲ್ಲಿದ್ದ ಜನ ದೇವರನ್ನು ನೋಡುವ ಬದಲು ಇವರನ್ನು ನೋಡ್ತಾ ನಿಂತಿದ್ದರು!- ಇಲ್ಲಿದೆ ಆ ವೈರಲ್ ವಿಡಿಯೋ.
ತಿರುಪತಿ: ಭಾರತದ ಅತಿಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನದು. ಆ ಭಗವಂತನನ್ನು ನೋಡಲು 25 ಕಿಲೋ ಚಿನ್ನಾಭರಣ ಧರಿಸಿ ಬಂದಿದ್ರು ಈ ಭಕ್ತರು. ತಿರುಪತಿ ದೇವಾಲಯದ ಆವರಣದಲ್ಲಿದ್ದ ಜನ ದೇವರನ್ನು ನೋಡೋದಕ್ಕಿಂತ ಹೆಚ್ಚು ಈ ಭಕ್ತರನ್ನೇ ನೋಡ್ತಾ ನಿಂತಿದ್ದರು. ಶ್ರೀಮಂತಿಕೆ ಅಂದ್ರೆ ಇದುವೇ ಎನ್ನುವಷ್ಟರ ಮಟ್ಟಿಗೆ ಜನ ದಂಗಾಗಿ ಹೋಗಿದ್ದರು.
ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದು (ಆಗಸ್ಟ್ 23) ಬೆಳಗ್ಗೆ ಜನ ಬೆಕ್ಕಸ ಬೆರಗಾಗುವ ಈ ದೃಶ್ಯ ಕಂಡುಬಂತು. ಪಿಟಿಐ ಈ ಸನ್ನಿವೇಶದ ವಿಡಿಯೋವನ್ನು ಶೇರ್ ಮಾಡಿದೆ.
ಕೆಲವು ಭಕ್ತರು 25 ಕೆಜಿ ಚಿನ್ನಾಭರಣಗಳನ್ನು ಧರಿಸಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಆಗಮಿಸಿದರು. ಪುಣೆಯಿಂದ ಬಂದಿದ್ದ ಈ ಭಕ್ತರು ಸಾಂಪ್ರದಾಯಿಕ ಉಡುಪು ಧರಿಸಿದ್ದರು. ವೆಂಕಟೇಶ್ವರನ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗುವಾಗ ಹೊಳೆಯುವ ಚಿನ್ನಾಭರಣ, ಚಿನ್ನದ ಉಡುಪುಗಳನ್ನು ಧರಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಯುವತಿ ಮೈ ತುಂಬಾ ಒಡವೆಗಳಷ್ಟೇ ಅಲ್ಲ, ಚಿನ್ನದ ಸೀರೆಯಲ್ಲಿ ಕಂಗೊಳಿಸಿದರೆ, ಪುಟ್ಟ ಬಾಲಕ ಚಿನ್ನದ ಅಂಗಿ ಧರಿಸಿದ್ದ. ಯುವಕರಿಬ್ಬರು ಬಿಳಿ ಉಡುಪು ಧರಿಸಿ ಕತ್ತು ಮತ್ತು ಕೈಗಳಿಗೆ ಚಿನ್ನದ ಸರಗಳನ್ನು ಸುತ್ತಿಕೊಂಡಿದ್ದರು.
ತಿರುಪತಿ ಸನ್ನಿಧಾನದಲ್ಲಿ 25 ಕಿಲೋ ಚಿನ್ನಾಭರಣ ಧರಿಸಿ ಕಂಗೊಳಿಸಿದ ಭಕ್ತರ ವೈರಲ್ ವಿಡಿಯೋ
ಈ ಚಿನ್ನದ ವಿಡಿಯೋವನ್ನು ಪಿಟಿಐ ಬೆಳಗ್ಗೆ 10.41ಕ್ಕೆ ಶೇರ್ ಮಾಡಿದ್ದು, 37 ಸೆಕೆಂಡ್ ವಿಡಿಯೋ ಈಗಾಗಲೇ ಒಂದೂವರೆ ಲಕ್ಷದಷ್ಟು ವೀಕ್ಷಣೆ ಪಡೆದಿದೆ. 80ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ.
ನಿನ್ನೆ ಚಿರಂಜೀವಿ ದಂಪತಿ ತಿಮ್ಮಪ್ಪನ ದರ್ಶನ ಪಡೆದಿದ್ರು
ತೆಲುಗು ಚಿತ್ರರಂಗದ ಪ್ರಭಾವಿ ನಟ ಚಿರಂಜೀವಿ ತಮ್ಮ 69 ನೇ ಹುಟ್ಟುಹಬ್ಬದಂದು ಪತ್ನಿ ಸುರೇಖಾ ಕೊನಿಡೇಲಾ ಜೊತೆಗೆ ನಿನ್ನೆ (ಆಗಸ್ಟ್ 22 ರ ಗುರುವಾರ) ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಜುಲೈನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಗಡ್ಕರಿ ಅವರು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬಾಲಾಜಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ “ನಮ್ಮ ದೇಶದ ಜನರು ಸಂತೋಷ ಮತ್ತು ಸಮೃದ್ಧಿಯಾಗಿರಲು ನಾನು ದೇವರನ್ನು ಪ್ರಾರ್ಥಿಸಿದೆ. ನಾನು ಸ್ಫೂರ್ತಿ ಪಡೆಯಲು ಮತ್ತು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲು ಆಶೀರ್ವಾದವನ್ನು ಕೋರಿದೆ ಎಂದು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿತ್ತು.
ಜೂನ್‌ನಲ್ಲಿ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಆಶೀರ್ವಾದ ಪಡೆದರು ಎಂದು ಎಎನ್‌ಐ ವರದಿ ಮಾಡಿದೆ.
ಶ್ರೀಲಂಕಾದ ನ್ಯಾಯ, ಜೈಲು ವ್ಯವಹಾರಗಳು ಮತ್ತು ಸಾಂವಿಧಾನಿಕ ಸುಧಾರಣೆಗಳ ಸಚಿವ ವಿಜಯದಾಸ ರಾಜಪಕ್ಷೆ ಮತ್ತು ಅವರ ಕುಟುಂಬ ಕೂಡ ಜೂನ್ ತಿಂಗಳಲ್ಲೇ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿತ್ತು.
ಶ್ರೀ ವೆಂಕಟೇಶ್ವರ ದೇವಸ್ಥಾನವು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲದಲ್ಲಿದೆ. ನಂಬಿಕೆ, ಸಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿರುವ ಈ ದೇವಾಲಯನ್ನು ಏಳುಬೆಟ್ಟದೊಡೆಯನ ಸನ್ನಿಧಾನವಾಗಿ, ತಿಮ್ಮಪ್ಪನ ದೇಗುಲವಾಗಿ ಜನ ಬಹಳ ಭಕ್ತಿ ಶ್ರದ್ಧೆಯಿಂದ ನಂಬಿಕೊಂಡು, ಪೂಜಿಸಿಕೊಂಡು ಬರುತ್ತಿದ್ದಾರೆ.